ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Monday, February 15, 2016
Sunday, February 14, 2016
ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪ್ರೇಮ ಪತ್ರ - ವಿವೇಕ ಬೆಟ್ಕುಳಿ
ಪ್ರೀತಿಯ ಗೆಳತಿ,,,,,,,,,
ನನಗೆ ಗೊತ್ತು ಕಣೆ ನಿನಗೆ ಈ ದಿನ ನಾನು ಕೆಂಪು ಗುಲಾಬಿ ಕೊಟ್ಟರೆ ತುಂಬಾ ಸಂತೋಷವಾಗುವುದು ಎಂದು. ಆದರೇ ಏನು ಮಾಡಲಿ, ನನ್ನ ಕುಟುಂಬದ ಬಗ್ಗೆ ಗೊತ್ತಲ್ಲ ನಿಜವಾಗಿ ನನ್ನ ಅಪ್ಪ ತುಂಬಾ ಲಿಬರಲ್ ಜಾತ್ಯಾತೀತ, ಆದರೇ ಅನಿವಾರ್ಯವಾಗಿ ಕಟ್ಟಾ ಹಿಂದುತ್ವವನ್ನು ಪ್ರದಶಿ౯ಸುತ್ತಿರುವರು. ಅದರಿಂದಾಗಿಯೇ ಇಂದು ನಮ್ಮ ಅಪ್ಪ ರಾಜಕೀಯದಲ್ಲಿ ಜಿಲ್ಲೆಯಲ್ಲಿ ಹೆಸರು ಪಡೆದಿರುವರು. ನನಗೂ ಹಿಂದುತ್ವದ ಹೆಸರಿನಲ್ಲಿ ಭಾವನೆಗಳನ್ನು ಅದುಮಿಕೊಳ್ಳಲು ಇಷ್ಟವಿಲ್ಲ ಗೆಳತಿ, ಆದರೂ ಅಪ್ಪನ ಪ್ರೆಸ್ಟಿಜ್, ರಾಜಕೀಯ ಭವಿಷ್ಯ ಎಲ್ಲವೂ ಇದರ ಜೊತೆ ಸೇರಿಕೊಂಡಿದೆ. ಅಕಸ್ಮಾತ ಆಗಿ ನಾನು ಪ್ರೇಮಿಗಳ ದಿನಾಚರಣೆಯಲ್ಲಿ ಭಾಗವಹಿಸಿ ನಿನೊಂದಿಗೆ ಕಾಲಕಳೆದರೆ ಖಂಡಿತಾ ನಮ್ಮ ಅಪ್ಪನಿಗೆ ಮುಂದಿನ ಬಾರಿ ಚುನಾವಣೆಗೆ ಟಿಕೇಟ್ ಸಿಗದು, ಉಳಿದ ಪಕ್ಷದವರಿಗೆ ನಾನೇ ಒಂದು ವಿಷಯವಾಗಿ ಬಿಡುವೆನು. ದಯವಿಟ್ಟು ಕ್ಷಮಿಸು ಗೆಳತಿ. ಜನವರಿ 1 ಹೊಸ ವರ್ಷಕ್ಕೂ ನಾನು ಬರಲಿಲ್ಲ. ಹೊಸವರ್ಷ ಆಚರಣೆಯಂದು ನಾನು ಮನೆಯಲ್ಲಿಯೇ ಇದ್ದೇ ಬರುವ ಮನಸ್ಸಿದರೂ ಆ ದಿನವೂ ಇದೇ ಸ್ಥಿತಿ. ಏನು ಮಾಡಲಿ ಒಂದಡೇ ಸಮಾಜ, ಮನೆ, ಅಪ್ಪ, ಅಮ್ಮ ಇನ್ನೊಂದಡೆ ನೀನು ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ? ನಾನು ತುಂಬಾ ದ್ವಂದದಲ್ಲಿ ಇರುವೆನು. ಆದರೇ ಒಂದಂತು ಸತ್ಯ ಗೆಳತಿ ಬರುವ ಯುಗಾದಿಯಂದು ನಾನು ನಿನ ಜೊತೆ ಖಂಡಿತಾ ಕಾಲ ಕಳೆಯುವೆನು. ಆ ದಿನ ನಮ್ಮ ಹಿಂದುಗಳಿಗೆ ನವ ವಷಾ౯ಚರಣೆಯ ಸಂದರ್ಭ ಮನೆಯಲ್ಲಿ ಸಹಾ ಯಾವುದೇ ಅನುಮಾನ ಬರದು. ಆ ದಿನಕ್ಕಾಗಿ ಕಾಯುತ್ತಿರುವೆ.. . ಇಂದು ಪ್ರೇಮಿಗಳ ದಿನಾರಣೆ ನಾನು ಖುದ್ದಾಗಿ ನಿನ್ನ ಜೊತೆ ಇದ್ದು ಕಾಲಕಳೆಯಲು ಆಗುತ್ತಿಲ್ಲ. ಈ ದಿನ ನಮ್ಮ ಅಪ್ಪನ ಜೊತೆ ದಿನಾಚರಣೆಯನ್ನು ವಿರೋಧಿಸಿ ಧರಣಿ ಮಾಡಬೇಕಾಗಿದೆ. ಅರ್ಥ ಮಾಡಿಕೊಳ್ಳುವೆ ಎಂಬ ನಂಬಿಕೆ ನನಗಿದೆ. ಏನೇ ಇರಲಿ ಚಿನ್ನಾ ಪ್ರೇಮಿಗಳ ದಿನಾಚರಣೆಯ ಈ ಸಂದರ್ಭದಲ್ಲಿ ನಿನ್ನ ಪ್ರೇಮಿಯ ಕಡೆಯಿಂದ ಮನಸ್ಸಿನಾಳದ ಶುಭಾಶಯಗಳು.........
ಇಂತಿ ನಿನ್ನ ಕನಸಿನ ಗೆಳೆಯ
ಕಟ್ಟಾ ಹಿಂದುತ್ವವಾದಿ ಯುವಕ
ನಲ್ಮೇಯ ಗೆಳೆಯಾ,,,,,,,,,,,,,,,
ಕಳೆದ ಮೂರು ವರ್ಷದಿಂದ ನಾನು ನೋಡುತ್ತಿರುವೆನು. ನಿನಗೆ ನಿನ್ನ ಅಪ್ಪನನ್ನು ಎದುರಿಸುವ ಧೈರ್ಯ ಬರುವುದು. ಒಂದಾದರೂ ದಿನ ನಾವು ಜಾಲಿಯಾಗಿ ಪ್ರೇಮಿಗಳಾಗಿ ಓಡಾಡಬಹುದು ಎಂದು, ಆದರೇ ನಿನ್ನ ಪುಕ್ಕಲುತನ ನೋಡಿದರೆ ಅದು ಸಾಧ್ಯವಿಲ್ಲ ಅನಿಸುತಿದೆ. ನಿನಗೆ ನನಗಿಂತ, ನಿನ್ನ ಅಪ್ಪನ ಡೋಂಗಿ ರಾಜಕೀಯದ ಬಗ್ಗೆಯೇ ಹೆಚ್ಚು ಕಾಳಜಿ. ಯಾಕಾಗಿ ಅಪ್ಪ ಮಗ ಮನಸ್ಸಿನಲ್ಲಿ ಒಂದು ಇರಿಸಿಕೊಂಡು ಹೊರ ಜಗತ್ತಿಗೆ ಬೇರೆ ರೀತಿಯಾಗಿ ಕಾಣಿಸಿಕೊಳ್ಳುವಿರಿ. ಸದಾ ಕಾಲ ನೀನು ನನ್ನೊಂದಿಗೆ ಕಾಲ ಕಳೆಯಲು ಒಂದಲ್ಲ ಒಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿರುವೆ.
ನಾನು ರಾಜಕೀಯ ಕುಟುಂಬದಿಂದ ಬಂದವಳು ಗೆಳೆಯಾ ನನಗೆ ನಿನ್ನ ಸ್ಥಿತಿ ಅರ್ಥವಾಗುವುದು. ನಮ್ಮ ಅಪ್ಪ ಸಹಾ ಶುದ್ದ ಸಂಪ್ರದಾಯವಾದಿ, ಆದರೇ ರಾಜಕೀಯವಾಗಿ ಜಾತ್ಯಾತೀತ ಆದ ಕಾರಣಕ್ಕೆ ನಾನು ಹೊಸವರ್ಷ, ಪ್ರೇಮಿಗಳ ದಿನಾಚರಣೆಯಂದು ಎಲ್ಲಿ ಬೇಕಾದರೂ ಹೋಗಬಹುದು, ಅದಕ್ಕಾಗಿ ಯಾವುದೇ ಅಡೆತಡೆ ಇಲ್ಲ. ಆದರೇ ನೀನು ಹೇಳಿದಂತೆ ಯುಗಾದಿ ಹಬ್ಬದ ದಿನ ನನಗೆ ಮನೆ ಬಿಟ್ಟು ಬರಲು ಕಷ್ಟ ಆ ದಿನ ಪೂಜೆ ಪನಸ್ಕಾರ ಎಂದು ತುಂಬಾ ಕೆಲಸ ಇರುವುದು. ನಮ್ಮ ಅಪ್ಪ ತೋರಿಸಿಕೊಳ್ಳಲು ಮಾತ್ರ ಜಾತ್ಯಾತೀತ, ಆದರೇ ಮನೆಯಲ್ಲಿ ತುಂಬಾ ಸಂಪ್ರದಾಯ ಕಣೋ. ನಮ್ಮ ಅಪ್ಪ ಸಹಾ ಒಂದು ರೀತಿಯ ಡೋಂಗಿ ರಾಜಕಾರಣೀಯೆ ಆಗಿರುವರು.
ಗೆಳೆಯಾ ನನ್ನ ನಿನ್ನ ಕುಟುಂಬದವರು ಈ ರೀತಿಯ ಡೋಂಗಿ ರಾಜಕೀಯದ ನಡುವೆ ನಮ್ಮ ಪ್ರೀತಿ ಕಣ್ಮರೆಯಾಗುವುದು ಬೇಕಾಗಿಲ್ಲ. ಇಂದೇ ನಿರ್ಧರಿಸು, ಒಂದು ಮನೆಯವರನ್ನು ಎದುರು ಹಾಕಿಕೊಂಡು ಮದುವೆ ಆಗಿ ಬದುಕಿ ತೋರಿಸುವುದು. ಇಲ್ಲಾ ಒಂದು ಮನೆಯರನ್ನು ಒಪ್ಪಿಸಿ ಮದುವೆಯಾಗಿ ಆ ನಂತರ ಕಮ್ಯೂನಿಷ್ಟರಾಗಿ ನಾವು ನಮ್ಮ ಕುಟುಂಬವನ್ನು ಬೆಳೆಸುವುದು. ನಿನ್ನ ಉತ್ತರವನ್ನು ಇದೇ 14 ರ೦ದು ತಿಳಿಸು. ನೀನ್ನ ಉತ್ತರದ ನಂತರ ನಾನು ನನ್ನ ಭವಿಷ್ಯದ ಬಗ್ಗೆ 23 ರ೦ದು ತೀಮಾ౯ನ ತೆಗೆದುಕೊಳ್ಳುವೆನು.
ಇಂತಿ ನಿನ್ನ ಮನದಾಳದ ಗೆಳತಿ
ಅಪ್ಪಟ ಜಾತ್ಯಾತೀತ ಯುವತಿ
ಆತ್ಮೀಯ ಪ್ರೇಮಿಗಳೇ ಚುನಾವಣಾ ಸಮಯವಾದ್ದರಿಂದ ಈ ರೀತಿಯ ಪತ್ರ ಬರೆಯಬೇಕು ಎನಿಸಿತು. ದಯವಿಟ್ಟು ನಿಮ್ಮ ಜಾತಿ, ಧರ್ಮ, ಪ್ರಸ್ಟೆಜ್, ಸಮಾಜ ಈ ಎಲ್ಲದಕ್ಕೂ ಹೆದರಿ ನಿಮ್ಮತನವನ್ನು ಬಿಟ್ಟು ಹೆಡಿಯಾಗಿ ಬದುಕದಿರಿ. ಡೋಂಗಿ ಜ್ಯಾತ್ಯಾತೀತತೆ, ಹಿಂದುತ್ವ ಧಾಮಿ౯ಕ ಅಂದತ್ವ ಈ ಎಲ್ಲವನ್ನು ಮೀರಿ ನಿಮ್ಮ ಪ್ರೇಮ ಅಮರವಾಗಲಿ. ಎಲ್ಲರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.
ವಿವೇಕ ಬೆಟ್ಕುಳಿ.
Saturday, February 13, 2016
ಕನ್ನಡ ಕನ್ನಡಿಗ ಕರ್ನಾಟಕ: ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾ...
ಕನ್ನಡ ಕನ್ನಡಿಗ ಕರ್ನಾಟಕ: ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾ...: ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್..! ಸ್ನೇಹಿತರ ಸೋಗಿನಲ್ಲಿ ಬರುತ್ತವೆ ಲಿಂಕ್'ಗಳು ವಿಶ್ವದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ವಾಟ್ಸಾಪ್ ಈಗ ವಂಚಕರ ಟಾರ್ಗ...
ವಿರೋಧಿಗಳಿಂದಲ್ಲೇ ಜನಪ್ರೀಯವಾಗುತ್ತಿರುವ ಪ್ರೇಮಿಗಳ ದಿನಾಚರಣೆ - ವಿವೇಕ ಬೆಟ್ಕುಳಿ
ಪ್ರೇಮಿಗಳ ದಿನಾಚರಣೆ 10 ವರ್ಷದ ಹಿಂದೆ ಈ ಬಗ್ಗೆ ಯಾರಿಗೂ ಗೊತ್ತೇ ಇರಲಿಲ್ಲ. ಈ ದಿನಾಚರಣೆಗೆ ಈ ರೀತಿ ಪ್ರಚಾರ ಸಿಗಲು ಮುಖ್ಯಕಾರಣ ನಮ್ಮ ಸಂಸ್ಕೃತಿ ಉಳಿಸಲು ಬೀದಿಗಿಳಿಯುತ್ತಾ ಹೋರಾಟ ಮಾಡುತ್ತಿರುವ ಹಿಂದುತ್ವವಾದಿಗಳು. ನಮ್ಮ ಸಮಾಜದಲ್ಲಿ ಯಾವುದಕ್ಕೆವಿರೋಧ ಇದೆಯೋ ಅದೇ ಹೆಚ್ಚಾಗಿ ಜನಪ್ರೀಯವಾಗುವುದು.
ಮಾಜಿ ಸಚಿವ ಹೆಚ್ ವಿಶ್ವನಾಥ ಅವರ ಆತ್ಮಕಥೆ ಹಳ್ಳಿಹಕ್ಕಿಯ ಹಾಡು ಕೆಲ ಕಾಂಗ್ರೆಸಿಗರ ವಿರೋಧದಿಂದ ಜನಪ್ರಿಯವಾಯಿತು. ಎಸ್ಎಲ್ ಭೈರಪ್ಪ ನವರ ಕೃತಿಗಳು ಪ್ರಗತಿಶೀಲರ ವಿರೋಧದಿಂದ. ಯು ಆರ್ ಆನಂತಮೂತರ್ಿಯವರ ಕೃತಿಗಳು ಹಿಂದುತ್ವವಾದಿಗಳ ವಿರೋಧದಿಂದಾಗಿ ಎಲ್ಲರೂ ಕೊಂಡು ಓದುವಂತಾಗಿ ಅವರವರ ಅಭಿಮಾನ ಬಳಗ ಸೃಷ್ಠಿಯಾಯಿತು. ಪುಸ್ತಕಗಳು, ಸಿನಿಮಾ, ಈ ರೀತಿಯಾದ ನೂರಾರು ಉದಾಹರಣೆಗಳು ವಿರೋಧದಿಂದಾಗಿಯೆ ಪ್ರಚಾರಕ್ಕೆ ಬಂದಿರುವದನ್ನು ಕಾಣಬಹುದಾಗಿದೆ. ತೀರಾ ಇತ್ತಿಚೀನ ಬೆಳವಣಿಗೆ ಎಂದರೆ ಟಿಪ್ಪು
ಜಯಂತಿಯ ಪರ ವಿರೋಧದಿಂದ ಬೇರೆ ರಾಜ್ಯದಲ್ಲಿಯೂ ಆಚರಣೆ ಪ್ರಾರಂಭವಾಗಿರುವುದು.ಇದೇ ರೀತಿಯಾಗಿ ಪ್ರೇಮಿಗಳ ದಿನಾಚರಣೆಯನ್ನು ಪ್ರತಿ ವರ್ಷ ಹಿಂದೂ ಸಂಸ್ಕೃತಿಗೆ ಮಾರಕ ಎಂಬ ಕಾರಣಕ್ಕಾಗಿ ಒಂದು ಗುಂಪು ವಿರೋಧಿಸುತ್ತಾ ಬಂದಿರುವುದು. ಈ ವಿರೋಧ ಹೆಚ್ಚಾಗುತ್ತಾ ನಿಜವಾಗಿ ಪ್ರೇಮಿಗಳ ದಿನಾಚರಣೆಗೆ ಹೆಚ್ಚು ಹೆಚ್ಚು ಮಹತ್ವ ಸಿಗುತ್ತಿರುವುದು. ಇದು
ಒಂದು ರೀತಿ ಪುಕ್ಕಟೆ ಪ್ರಚಾರ.
ಈ ದಿನಾಚರಣೆಯನ್ನು ಹೇಗೆ ಆಚರಿಸಬೇಕು? ಪ್ರೇಮಿಗಳು ಪರಸ್ಪರ ಯಾವ ಯಾವ ರೀತಿಯ ಉಡುಗೊರೆಗಳನ್ನು ಹಂಚಿಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲಾ ಬಗೆಯ ಮಾದ್ಯಮಗಳಲ್ಲಿ ಹೆಚ್ಚಾಗಿ ಚಚೆ౯ ಆಗುತ್ತಿರುವುದು. ಇದರಿಂದ ಇಂದು ಹಳ್ಳಿ ಹಳ್ಳಿಗಳಲ್ಲಿ ಪ್ರೇಮಿಗಳ ದಿನಾಚರಣೆ ಜನಪ್ರಿಯವಾಗುತ್ತಿರುವುದು. ಅದರಲ್ಲಿಯೂ ಸೋಶಿಯಲ್ ಮಾಧ್ಯಮದಲ್ಲಿಯಂತು ಈ ದಿನಾಚರಣೆಯ ಪ್ರಚಾರ ತುಂಬಾ ಹೆಚ್ಚಾಗಿಯೇ ಆಗುತ್ತಿರುವುದು.
ಪ್ರೇಮಿಗಳ ದಿನಾಚರಣೆಯನ್ನು ಮಾಡಲು ಬಿಡುವುದಿಲ್ಲ ಎಂದು ಕೆಲ ಗುಂಪು ಈಗಾಗಲೇ ಮಾಧ್ಯಮದ ಮೂಲಕ ವಿರೋಧ
ವ್ಯಕ್ತಪಡಿಸಿದರೆ, ಇನ್ನೂ ಕೆಲವು ಗುಂಪುಗಳು ಆಚರಣೆಯನ್ನು ಅರ್ಥಪೂರ್ಣಗೊಳಿಸಲು ತಮ್ಮದೇ ಆದ ತಯಾರಿ ಮಾಡಿಕೊಳ್ಳುತ್ತಿದೆ. ಒಟ್ಟಾರೆ ಈ ದಿನಾಚರಣೆ ದಿನದಿಂದ ದಿನಕ್ಕೆ ಹೆಚ್ಚು ಜನರನ್ನು ಆಕಷರ್ಿಸುತ್ತಿದೆ.
ವಿವಿಧತೆಯಲ್ಲಿ ಏಕತೆ ಇರುವ ಜಾಗತೀಕರಣ ಗೊಂಡಿರುವ ಈ ದೇಶದಲ್ಲಿ ಯಾವುದೇ ವಿಚಾರವಾಗಿ ಒಂದೇ ಅಭಿಪ್ರಾಯ ಬರಲು ಸಾಧ್ಯವಿಲ್ಲ. ಹೀಗಿರುವಾಗ ದಿನಾಚರಣೆಗಳ ಆಚರಣೆ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಮುಂದೆಯೂ ಇರುವುದರಲ್ಲಿ ಯಾವುದೇಸಂದೇಹವಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ವೈಭವಿಕರಿಸುವಂತಹ ಸ್ಥಿತಿಯಲ್ಲಿ ನಮ್ಮ ದೇಶ ಇರುವುದು. ಇಂತಹ ಸಂದರ್ಭದಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಧರಿಸುವುದನ್ನು ನಾವಿಂದು ಬಿಡಬೇಕಾಗಿದೆ. ಆರೋಗ್ಯಯುತವಾದ ಚಚರ್ೆಯನ್ನು ಮಾತ್ರ ನಾವು ಹುಟ್ಟುಹಾಕವ ಅಗತ್ಯವಿದೆ. ಒಂದಂತು ಸತ್ಯ ಎಲ್ಲಿ ವಿರೋಧ ಇದೆಯೋ ಅಲ್ಲಿ ಪ್ರತಿರೋಧ ಎಂದಿಗೂ ಇದ್ದೇ ಇರುವುದು.
ಪ್ರೇಮಿಗಳದಿನಾಚರಣೆಯ ಪರ ವಿರೋಧ ಏನಿದ್ದರೂ ಅದು ಚಚೆ౯ಗೆ ಮಾತ್ರ ಇರಲಿ, ಬದಲಾಗಿ ಅದು ಹಿಂಸೆಗೆ ತಿರುಗಿದರೆ ಅದರಿಂದ ಯಾರಿಗೂ ಸುಖವಿಲ್ಲ. ಈ ಸಂದರ್ಭದಲ್ಲಿ ಈ ದಿನದ ಆಚರಣೆ ಹೇಗೆ ಇರಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟಿದಾಗಿರುವುದು. ಆದರೇ ಈ ರೀತಿ ಪ್ರಚಾರಕ್ಕೆ ಕಾರಣರಾದ ವಿರೋಧಿ-ಪರ ಇಬ್ಬರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.
ವಿವೇಕ ಬೆಟ್ಕುಳಿ vivekpy@gmail.com

Monday, February 8, 2016
ಇನ್‌ಬಾಕ್ಸ್ ಗೆಳೆಯನಿಗೆ ಬಹಿರಂಗ ಪತ್ರ - ಫಾತಿಮಾ
ಇನ್‌ಬಾಕ್ಸ್ ಗೆಳೆಯನಿಗೆ ಬಹಿರಂಗ ಪತ್ರ ::
ಇನ್‌ಬಾಕ್ಸ್ ಗೆಳೆಯ
ನೀನು ಕೇಳಿದೆ...
ನೀನು ಸುನ್ನಿನಾ? ಶಿಯಾನಾ?
ನೀನು ಸಲಾಫಿಯಾ? ಹನಾಫಿಯಾ..?
ನಾವು ಯಾರಾದರೇನು ?
ನಾವೆಲ್ಲಾ ಒಂದೇ ಕಾರವಾನ್‌ನ
ಸಹಚರರು
ಸತ್ಯ ಮಾರ್ಗದ ಅನ್ವೇಷಿಗರು
ಅಂದು ಕೊಂಡಿದ್ದೆ
ನಾವೆಲ್ಲಾ ಇಷ್ಟು ಬೇರೆ ಬೇರೆ ಅಂತ
ಅರಿವಿರಲಿಲ್ಲ.
ಕಣ್ಣು ತೆರೆಸಿದೆ ಧನ್ಯವಾದ
...........
ಬುರ್ಖಾ ಹಾಕೋಲ್ವಾ?
ಅಬಯಾ ತೊಡೊಲ್ವಾ ?
ವೇಲು ಸುತ್ತಿಕೊಳ್ಳೋಲ್ವಾ?
ಅಂತ ಹೆದರಿಸಿದೆ ನೀನು ನನ್ನ
ನಿನ್ನ ಕಣ್ಣ ಬೆಂಕಿಗೆ
ಸುಟ್ಟು ಹೋಗುವ ಕಾಗೆ ನಾನಲ್ಲ
ಮೊದಲು ನಿನ್ನ ಮನಕೆ ಬೇಕು
ಸಭ್ಯತೆಯ ತಂಪು ಕನ್ನಡಕ
ಅರಿವಾಗಲಿ ನಿನಗೆ ಬೇಗ.
...........
ನೀ ಕೇಳಿದೆ
’ನಿನ್ನ ವಾಲ್ ಮೇಲೆ
ಪವಿತ್ರ ಸ್ಥಳದ ಚಿತ್ರ ಏಕಿಲ್ಲ ? ’
ಚಿತ್ರ ಹಾಕಿದರೆ ಮಾತ್ರ
ಪ್ರೊಫ಼ೈಲ್ ಪವಿತ್ರವಾಗುವುದೆಂದು
ನನಗೆ ಗೊತ್ತಿರಲಿಲ್ಲ.
ಗೊತ್ತಿದ್ದರೆ ಪವಿತ್ರ ಸ್ಥಳದ ಚಿತ್ರ
ನಿನ್ನ ಎದೆಗೂ ಅಂಟಿಸುತ್ತಿದ್ದೆ
ಖಂಡಿತಾ ಬಿಡುತ್ತಿರುಲಿಲ್ಲ.
.............
ಅದಿರಲಿ
ನೀನೇಕೆ ತ್ವಾಬ್ ತೊಟ್ಟಿಲ್ಲ?
ನಿನ್ನ ವಾಲ್ ಮೇಲೇಕೆ
ಪಾರಿವಾಳ ಬಿಳಿಗುಲಾಬಿ ಚಿತ್ರಗಳಿಲ್ಲ?
ಗುಂಡಿ ತೆರೆದ ಅಂಗಿ - ಬರ್ಬುಡಾ ಚಡ್ದಿ
ಚಿತ್ರಗಳು ಸರಿಯಲ್ಲ.
ರೇಸ್ ಬೈಕಿನ ಚಿತ್ರವೇಕೆ?
ನಿನಗೆ ಮಾಡಲು ಬೇರೆ ಕೆಲಸವಿಲ್ಲ ?
ನಿನ್ನ ಮದುವೆ ಆಗುವ ಹುಡುಗಿಗೆ ಯಾಕೆ ಮುಖವಿಲ್ಲ ?
ಅವಳ ಪ್ರೊಫ಼ೈಲ್ನಲ್ಲಿ ಯಾಕೆ ನಗುತ್ತಿದ್ದಾರೆ
ಬುರ್ಖಾ ಧರಿಸದ
ಜೆನೆಲಿಯಾ ಡಿಸೋಜಾ
ಭೂಮಿಕಾ ಚಾವ್ಲಾ..
ಫಾತಿಮಾ ಬೆಳವಾಡಿ

ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾರ
ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್..! ಸ್ನೇಹಿತರ ಸೋಗಿನಲ್ಲಿ ಬರುತ್ತವೆ ಲಿಂಕ್'ಗಳು
ವಿಶ್ವದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ವಾಟ್ಸಾಪ್ ಈಗ ವಂಚಕರ ಟಾರ್ಗೆಟ್ ಆಗಿದೆ. ವಾಟ್ಸಾಪ್ ಅಪ್ಡೇಟ್ ಎಂಬ ನಕಲಿ ಸಂದೇಶ ಕಳುಹಿಸಿ ಜನರ ಮೊಬೈಲ್'ಗಳಲ್ಲಿರುವ ಮಾಹಿತಿಯನ್ನು ವಂಚಕರು ಕದಿಯುತ್ತಿದ್ದಾರೆಂದು ಕಳೆದ ತಿಂಗಳು ಭದ್ರತಾ ತಜ್ಞರು ಎಚ್ಚರಿಸಿದ್ದರು. ಈಗ ಮತ್ತೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ವಾಟ್ಸಾಪ್ ಬಳಕೆದಾರರನ್ನು ಮೋಸ ಮಾಡುವ ಹೊಸ ಸ್ಕ್ಯಾಮ್ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
ಏನಿದು ಹೊಸ ಸ್ಕ್ಯಾಮ್..?
ನಿಮ್ಮ ವಾಟ್ಸಾಪ್'ನಲ್ಲಿ ನಿಮ್ಮ ಸ್ನೇಹಿತರ ಹೆಸರಿನಲ್ಲಿ ಲಿಂಕ್'ಗಳು ಕಾಣಿಸುತ್ತವೆ. ಗೆಳೆಯರು ಕಳುಹಿಸಿದ್ದಿರಬಹುದೆಂದು ನೀವೇನಾದರೂ ಆ ಲಿಂಕ್ ಕ್ಲಿಕ್ ಮಾಡಿದರೆ ವಂಚಕ ವೆಬ್'ಸೈಟ್'ವೊಂದಕ್ಕೆ ಹೋಗುತ್ತದೆ. ಅದರಲ್ಲಿ ಅನೇಕ ರೀತಿಯ ಆಫರ್, ಡಿಸ್ಕೌಂಟ್'ಗಳನ್ನು ನಿಮಗೆ ತೋರಿಸಿ ನಂಬಿಸಲಾಗುತ್ತದೆ.
ನಂತರ, ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ. ಅದಾದ ನಂತರ ನಿಮ್ಮ ಫೋನ್'ಗೆ ಮಾಲ್ವೇರ್ ಅಂಟಿಕೊಳ್ಳುತ್ತದೆ. ಈ ಮಾಲ್ವೇರ್ ಮೂಲಕ ಫೋನ್'ನಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನೆಲ್ಲಾ ವಂಚಕರು ಸುಲಭವಾಗಿ ಸಂಗ್ರಹಿಸುತ್ತಾರೆ.
ಈ ವಾಟ್ಸಾಪ್ ವಂಚಕರು ಕೆಲ ಕಾಲದಿಂದ ಬಹಳ ಸಕ್ರಿಯರಾಗಿದ್ದಾರಂತೆ. ಆತಂಕದ ವಿಷಯವೆಂದರೆ, ಈ ವಂಚಕರು ಇಂಗ್ಲೀಷ್ ಒಂದಷ್ಟೇ ಅಲ್ಲ ಅನೇಕ ಭಾರತೀಯ ಭಾಷೆಗಳಲ್ಲಿ ಮೋಸದ ಸಂದೇಶಗಳನ್ನು ಕಳುಹಿಸಬಲ್ಲರು. ಅಲ್ಲದೇ, ನೀವು ಮೋಸಗೊಂಡಿದ್ದಲ್ಲದೇ ನಿಮ್ಮೊಂದಿಗೆ ಇನ್ನೂ 10 ಜನರಿಗೆ ನಿಮ್ಮಿಂದಲೇ ಹಳ್ಳ ತೋಡಿಸುತ್ತಾರೆ. ನಿಮಗೆ ಕಳುಹಿಸಿದ ಸಂದೇಶವನ್ನು ನಿಮ್ಮ ಹತ್ತು ಸ್ನೇಹಿತರಿಗೆ ಫಾರ್ವರ್ಡ್ ಮಾಡಿದರೆ ಆ ಹೋಟೆಲ್'ನಲ್ಲಿ ಇಷ್ಟು ಡಿಸ್ಕೌಂಟ್ ಸಿಗುತ್ತದೆ, ಗಿಫ್ಟ್ ಕಾರ್ಡ್ ಸಿಗುತ್ತದೆ ಎಂದೆಲ್ಲಾ ಪ್ರಲೋಭನೆಗೊಳಪಡಿಸುತ್ತಾರೆ ಎಂದು ಆಯಂಟಿ-ವೈರಸ್ ಸಾಫ್ಟ್'ವೇರ್ ಕಂಪನಿ ಕಾಸ್ಪೆರ್'ಸ್ಕಿ ಲ್ಯಾಬ್'ನ ಪ್ರಧಾನ ಭದ್ರತಾ ಸಂಶೋಧಕ ಡೇವಿಡ್ ಎಮ್ ತಿಳಿಸುತ್ತಾರೆ.
http://www.suvarnanews.tv/Technology/gadgets/beware-of-new-whatsapp-scam-19294?cf=article-bottom

Subscribe to:
Posts (Atom)
ನಾನಾ... ನೀನಾ..? ಸಂತೋಷ್ ಕುಮಾರ ಮೆಹೆಂದಳೆ
ನಾನಾ... ನೀನಾ..? ಎದುರಿಗೆ ಸಹ ನಟನಿರಲಿ, ನಾಯಕನಿರಲಿ, ವಿಲನ್ ಇರಲಿ—ಯಾರನ್ನೂ ಕೇರ್ ಮಾಡದೇ, ತನ್ನದೇ ಮ್ಯಾನರಿಸಮ್‌ನಿಂದ, ತನ್ನದೇ ನಟನೆಯಿಂದ, ಪಾತ್ರವನ್ನು ನೈಜವಾಗಿಸ...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
Krupe : http://azsmarane.blogspot.in/2012/01/blog-post_21.html ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾ...
-
ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು ಸ್ವಾಮೀ ನನ್ನಯ್ಯ ರಥವೇರಿ ಬರುವಾಗ ನಾವೆದ್ದು ಕೈಯ್ಯ ಮುಗುದೇವು ಮಕ್ಕಳಾಟವು ಚಂದ ಮತ್ತೆ ಯೌವನ ಚಂದ ಮುಪ್ಪಿನಲಿ ಚಂದ ನರೆಗಡ...