ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾರ

ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್..! ಸ್ನೇಹಿತರ ಸೋಗಿನಲ್ಲಿ ಬರುತ್ತವೆ ಲಿಂಕ್'ಗಳು
ವಿಶ್ವದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ವಾಟ್ಸಾಪ್ ಈಗ ವಂಚಕರ ಟಾರ್ಗೆಟ್ ಆಗಿದೆ. ವಾಟ್ಸಾಪ್ ಅಪ್ಡೇಟ್ ಎಂಬ ನಕಲಿ ಸಂದೇಶ ಕಳುಹಿಸಿ ಜನರ ಮೊಬೈಲ್'ಗಳಲ್ಲಿರುವ ಮಾಹಿತಿಯನ್ನು ವಂಚಕರು ಕದಿಯುತ್ತಿದ್ದಾರೆಂದು ಕಳೆದ ತಿಂಗಳು ಭದ್ರತಾ ತಜ್ಞರು ಎಚ್ಚರಿಸಿದ್ದರು. ಈಗ ಮತ್ತೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ವಾಟ್ಸಾಪ್ ಬಳಕೆದಾರರನ್ನು ಮೋಸ ಮಾಡುವ ಹೊಸ ಸ್ಕ್ಯಾಮ್ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
ಏನಿದು ಹೊಸ ಸ್ಕ್ಯಾಮ್..?
ನಿಮ್ಮ ವಾಟ್ಸಾಪ್'ನಲ್ಲಿ ನಿಮ್ಮ ಸ್ನೇಹಿತರ ಹೆಸರಿನಲ್ಲಿ ಲಿಂಕ್'ಗಳು ಕಾಣಿಸುತ್ತವೆ. ಗೆಳೆಯರು ಕಳುಹಿಸಿದ್ದಿರಬಹುದೆಂದು ನೀವೇನಾದರೂ ಆ ಲಿಂಕ್ ಕ್ಲಿಕ್ ಮಾಡಿದರೆ ವಂಚಕ ವೆಬ್'ಸೈಟ್'ವೊಂದಕ್ಕೆ ಹೋಗುತ್ತದೆ. ಅದರಲ್ಲಿ ಅನೇಕ ರೀತಿಯ ಆಫರ್, ಡಿಸ್ಕೌಂಟ್'ಗಳನ್ನು ನಿಮಗೆ ತೋರಿಸಿ ನಂಬಿಸಲಾಗುತ್ತದೆ.
ನಂತರ, ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ. ಅದಾದ ನಂತರ ನಿಮ್ಮ ಫೋನ್'ಗೆ ಮಾಲ್ವೇರ್ ಅಂಟಿಕೊಳ್ಳುತ್ತದೆ. ಈ ಮಾಲ್ವೇರ್ ಮೂಲಕ ಫೋನ್'ನಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನೆಲ್ಲಾ ವಂಚಕರು ಸುಲಭವಾಗಿ ಸಂಗ್ರಹಿಸುತ್ತಾರೆ.
ಈ ವಾಟ್ಸಾಪ್ ವಂಚಕರು ಕೆಲ ಕಾಲದಿಂದ ಬಹಳ ಸಕ್ರಿಯರಾಗಿದ್ದಾರಂತೆ. ಆತಂಕದ ವಿಷಯವೆಂದರೆ, ಈ ವಂಚಕರು ಇಂಗ್ಲೀಷ್ ಒಂದಷ್ಟೇ ಅಲ್ಲ ಅನೇಕ ಭಾರತೀಯ ಭಾಷೆಗಳಲ್ಲಿ ಮೋಸದ ಸಂದೇಶಗಳನ್ನು ಕಳುಹಿಸಬಲ್ಲರು. ಅಲ್ಲದೇ, ನೀವು ಮೋಸಗೊಂಡಿದ್ದಲ್ಲದೇ ನಿಮ್ಮೊಂದಿಗೆ ಇನ್ನೂ 10 ಜನರಿಗೆ ನಿಮ್ಮಿಂದಲೇ ಹಳ್ಳ ತೋಡಿಸುತ್ತಾರೆ. ನಿಮಗೆ ಕಳುಹಿಸಿದ ಸಂದೇಶವನ್ನು ನಿಮ್ಮ ಹತ್ತು ಸ್ನೇಹಿತರಿಗೆ ಫಾರ್ವರ್ಡ್ ಮಾಡಿದರೆ ಆ ಹೋಟೆಲ್'ನಲ್ಲಿ ಇಷ್ಟು ಡಿಸ್ಕೌಂಟ್ ಸಿಗುತ್ತದೆ, ಗಿಫ್ಟ್ ಕಾರ್ಡ್ ಸಿಗುತ್ತದೆ ಎಂದೆಲ್ಲಾ ಪ್ರಲೋಭನೆಗೊಳಪಡಿಸುತ್ತಾರೆ ಎಂದು ಆಯಂಟಿ-ವೈರಸ್ ಸಾಫ್ಟ್'ವೇರ್ ಕಂಪನಿ ಕಾಸ್ಪೆರ್'ಸ್ಕಿ ಲ್ಯಾಬ್'ನ ಪ್ರಧಾನ ಭದ್ರತಾ ಸಂಶೋಧಕ ಡೇವಿಡ್ ಎಮ್ ತಿಳಿಸುತ್ತಾರೆ.

http://www.suvarnanews.tv/Technology/gadgets/beware-of-new-whatsapp-scam-19294?cf=article-bottom

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು