ವಿರೋಧಿಗಳಿಂದಲ್ಲೇ ಜನಪ್ರೀಯವಾಗುತ್ತಿರುವ ಪ್ರೇಮಿಗಳ ದಿನಾಚರಣೆ - ವಿವೇಕ ಬೆಟ್ಕುಳಿ

ಪ್ರೇಮಿಗಳ ದಿನಾಚರಣೆ 10 ವರ್ಷದ ಹಿಂದೆ ಈ ಬಗ್ಗೆ ಯಾರಿಗೂ ಗೊತ್ತೇ ಇರಲಿಲ್ಲ. ಈ ದಿನಾಚರಣೆಗೆ ಈ ರೀತಿ ಪ್ರಚಾರ ಸಿಗಲು ಮುಖ್ಯಕಾರಣ ನಮ್ಮ ಸಂಸ್ಕೃತಿ ಉಳಿಸಲು ಬೀದಿಗಿಳಿಯುತ್ತಾ ಹೋರಾಟ ಮಾಡುತ್ತಿರುವ ಹಿಂದುತ್ವವಾದಿಗಳು. ನಮ್ಮ ಸಮಾಜದಲ್ಲಿ ಯಾವುದಕ್ಕೆವಿರೋಧ ಇದೆಯೋ ಅದೇ ಹೆಚ್ಚಾಗಿ ಜನಪ್ರೀಯವಾಗುವುದು.

ಮಾಜಿ ಸಚಿವ ಹೆಚ್ ವಿಶ್ವನಾಥ ಅವರ ಆತ್ಮಕಥೆ ಹಳ್ಳಿಹಕ್ಕಿಯ ಹಾಡು ಕೆಲ ಕಾಂಗ್ರೆಸಿಗರ ವಿರೋಧದಿಂದ ಜನಪ್ರಿಯವಾಯಿತು. ಎಸ್ಎಲ್ ಭೈರಪ್ಪ ನವರ ಕೃತಿಗಳು ಪ್ರಗತಿಶೀಲರ ವಿರೋಧದಿಂದ. ಯು ಆರ್ ಆನಂತಮೂತರ್ಿಯವರ ಕೃತಿಗಳು ಹಿಂದುತ್ವವಾದಿಗಳ ವಿರೋಧದಿಂದಾಗಿ ಎಲ್ಲರೂ ಕೊಂಡು ಓದುವಂತಾಗಿ ಅವರವರ ಅಭಿಮಾನ ಬಳಗ ಸೃಷ್ಠಿಯಾಯಿತು. ಪುಸ್ತಕಗಳು, ಸಿನಿಮಾ, ಈ ರೀತಿಯಾದ ನೂರಾರು ಉದಾಹರಣೆಗಳು ವಿರೋಧದಿಂದಾಗಿಯೆ ಪ್ರಚಾರಕ್ಕೆ ಬಂದಿರುವದನ್ನು ಕಾಣಬಹುದಾಗಿದೆ. ತೀರಾ ಇತ್ತಿಚೀನ ಬೆಳವಣಿಗೆ ಎಂದರೆ ಟಿಪ್ಪು 
ಜಯಂತಿಯ ಪರ ವಿರೋಧದಿಂದ ಬೇರೆ ರಾಜ್ಯದಲ್ಲಿಯೂ ಆಚರಣೆ ಪ್ರಾರಂಭವಾಗಿರುವುದು.ಇದೇ ರೀತಿಯಾಗಿ ಪ್ರೇಮಿಗಳ ದಿನಾಚರಣೆಯನ್ನು ಪ್ರತಿ ವರ್ಷ ಹಿಂದೂ ಸಂಸ್ಕೃತಿಗೆ ಮಾರಕ ಎಂಬ ಕಾರಣಕ್ಕಾಗಿ ಒಂದು ಗುಂಪು ವಿರೋಧಿಸುತ್ತಾ ಬಂದಿರುವುದು. ಈ ವಿರೋಧ ಹೆಚ್ಚಾಗುತ್ತಾ ನಿಜವಾಗಿ ಪ್ರೇಮಿಗಳ ದಿನಾಚರಣೆಗೆ ಹೆಚ್ಚು ಹೆಚ್ಚು ಮಹತ್ವ ಸಿಗುತ್ತಿರುವುದು. ಇದು
ಒಂದು ರೀತಿ ಪುಕ್ಕಟೆ ಪ್ರಚಾರ.
ಈ ದಿನಾಚರಣೆಯನ್ನು ಹೇಗೆ ಆಚರಿಸಬೇಕು? ಪ್ರೇಮಿಗಳು ಪರಸ್ಪರ ಯಾವ ಯಾವ ರೀತಿಯ ಉಡುಗೊರೆಗಳನ್ನು ಹಂಚಿಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲಾ ಬಗೆಯ ಮಾದ್ಯಮಗಳಲ್ಲಿ ಹೆಚ್ಚಾಗಿ ಚಚೆ౯ ಆಗುತ್ತಿರುವುದು. ಇದರಿಂದ ಇಂದು ಹಳ್ಳಿ ಹಳ್ಳಿಗಳಲ್ಲಿ ಪ್ರೇಮಿಗಳ ದಿನಾಚರಣೆ ಜನಪ್ರಿಯವಾಗುತ್ತಿರುವುದು. ಅದರಲ್ಲಿಯೂ ಸೋಶಿಯಲ್ ಮಾಧ್ಯಮದಲ್ಲಿಯಂತು ಈ ದಿನಾಚರಣೆಯ ಪ್ರಚಾರ ತುಂಬಾ ಹೆಚ್ಚಾಗಿಯೇ ಆಗುತ್ತಿರುವುದು.

  ಪ್ರೇಮಿಗಳ ದಿನಾಚರಣೆಯನ್ನು ಮಾಡಲು ಬಿಡುವುದಿಲ್ಲ ಎಂದು ಕೆಲ ಗುಂಪು ಈಗಾಗಲೇ ಮಾಧ್ಯಮದ ಮೂಲಕ ವಿರೋಧ
ವ್ಯಕ್ತಪಡಿಸಿದರೆ, ಇನ್ನೂ ಕೆಲವು ಗುಂಪುಗಳು ಆಚರಣೆಯನ್ನು ಅರ್ಥಪೂರ್ಣಗೊಳಿಸಲು ತಮ್ಮದೇ ಆದ ತಯಾರಿ ಮಾಡಿಕೊಳ್ಳುತ್ತಿದೆ. ಒಟ್ಟಾರೆ ಈ ದಿನಾಚರಣೆ ದಿನದಿಂದ ದಿನಕ್ಕೆ ಹೆಚ್ಚು ಜನರನ್ನು ಆಕಷರ್ಿಸುತ್ತಿದೆ.

ವಿವಿಧತೆಯಲ್ಲಿ ಏಕತೆ ಇರುವ ಜಾಗತೀಕರಣ ಗೊಂಡಿರುವ ಈ ದೇಶದಲ್ಲಿ ಯಾವುದೇ ವಿಚಾರವಾಗಿ ಒಂದೇ ಅಭಿಪ್ರಾಯ ಬರಲು ಸಾಧ್ಯವಿಲ್ಲ. ಹೀಗಿರುವಾಗ ದಿನಾಚರಣೆಗಳ ಆಚರಣೆ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಮುಂದೆಯೂ ಇರುವುದರಲ್ಲಿ ಯಾವುದೇಸಂದೇಹವಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ವೈಭವಿಕರಿಸುವಂತಹ ಸ್ಥಿತಿಯಲ್ಲಿ ನಮ್ಮ ದೇಶ ಇರುವುದು. ಇಂತಹ ಸಂದರ್ಭದಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಧರಿಸುವುದನ್ನು  ನಾವಿಂದು ಬಿಡಬೇಕಾಗಿದೆ.  ಆರೋಗ್ಯಯುತವಾದ ಚಚರ್ೆಯನ್ನು ಮಾತ್ರ ನಾವು ಹುಟ್ಟುಹಾಕವ ಅಗತ್ಯವಿದೆ. ಒಂದಂತು ಸತ್ಯ ಎಲ್ಲಿ ವಿರೋಧ ಇದೆಯೋ ಅಲ್ಲಿ ಪ್ರತಿರೋಧ ಎಂದಿಗೂ ಇದ್ದೇ ಇರುವುದು.

ಪ್ರೇಮಿಗಳದಿನಾಚರಣೆಯ ಪರ ವಿರೋಧ ಏನಿದ್ದರೂ ಅದು ಚಚೆ౯ಗೆ ಮಾತ್ರ ಇರಲಿ, ಬದಲಾಗಿ ಅದು ಹಿಂಸೆಗೆ ತಿರುಗಿದರೆ ಅದರಿಂದ ಯಾರಿಗೂ ಸುಖವಿಲ್ಲ. ಈ ಸಂದರ್ಭದಲ್ಲಿ ಈ ದಿನದ ಆಚರಣೆ ಹೇಗೆ ಇರಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟಿದಾಗಿರುವುದು. ಆದರೇ ಈ ರೀತಿ ಪ್ರಚಾರಕ್ಕೆ ಕಾರಣರಾದ ವಿರೋಧಿ-ಪರ ಇಬ್ಬರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.

                                                                                                                                 ವಿವೇಕ ಬೆಟ್ಕುಳಿ                                                                                                                                        vivekpy@gmail.com

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು