ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, April 20, 2011

ಶ್ರೀ ಬಸವೇಶ್ವರ

ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ ಬಸವಣ್ಣನವರು) ಲಿಂಗಾಯತ ಧರ್ಮದ ಸ್ಥಾಪಕರು. ಬಸವಣ್ಣನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬಸವಣ್ಣನವರು ಮತ್ತು ಶಿವಶರಣರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ನೂರಾರು ಶರಣರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು.

ಬಸವಣ್ಣನವರು೧೧೩೪ ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಾಗೇವಾಡಿ ಗ್ರಾಮದಲ್ಲಿ, ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದರು.ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದ ಅವರು ವಿದ್ಯಾಭ್ಯಾಸಕ್ಕಾಗಿ ಕೂಡಲ ಸಂಗಮಕ್ಕೆ ಬಂದರು.

ಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು.ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವಲ್ಲಿದ್ದಾನೆ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನೆಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು,ಪ್ರಾಣಿಬಲಿ ನೀಡುವುದು,ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧ. ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಬಸವಣ್ಣವರು ಸಾರಿದರು. ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದರು. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ,ಭಕ್ತಿ ಭಂಡಾರಿ ಬಸವಣ್ಣ ಎಂದೂ ಕರೆಯಲಾಗುತ್ತದೆ. ಬಸನವನ್ನನವರು ಒಬ್ಬ ಮಹಾನ್ ಮಾನವತವ್ವದಿಯಗಿದ್ದರು ಅವರು ಹನ್ನೆರದನೆಯ ಶತಮನದಲ್ಲಿ ಸಾಮಾಜಿಕ.ಧಾರ್ಮಿಕ.ಕ್ರಾಂತಿಯನ್ನು ಮಾಡೀದ್ದಾರೆ ವಚನಗಳ ಮೂಲಕ ಮೆಲು ಕಿಳು ತಾರತಮ್ಮೆವನ್ನು ಖನಿಸಿದ್ದಾರೆ.ನನು ಹುಕ್ಕೆ

7 comments:

  1. ಸತೀಶ್ ಹಾಗೂ ಸತ್ಯ ನಿಮ್ಮ ಕೆಲಸ ನಿಜಕ್ಕೂ ಖುಷಿ ನೀಡಿದೆ.. ಅದ್ಭುತ ಮಾಹಿತಿಗಳನ್ನು ನೀಡಿದ್ದೀರಿ ನಿಮಗೆ ಧನ್ಯವಾದಗಳು ಒಳ್ಳೆಯ ಬ್ಲಾಗ್ ಹೀಗೆ ಮುಂದುವರಿಸಿ

    ReplyDelete
  2. ಧನ್ಯವಾದಗಳು ಅಕ್ಕ..

    ReplyDelete
  3. ಆತ್ಮೀಯ ಸತೀಶ ಅವರೆ,

    ನಿಮ್ಮ ಬರಹವು ನಮ್ಮೆಲ್ಲರ ಅಭಿನ೦ದನಾರ್ಹವಾಗಿದೆ. ಅ೦ತೇಯೆ ತಾವುಗಳು ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯವರ ವಚನ ಸಾಹಿತ್ಯವನ್ನು ತಮ್ಮ ಈ ತಮ್ಮ ಬ್ಲಾಗ್ನಲ್ಲಿ ಪ್ರಕಟಿಸಿ ಅ೦ತ ವಿನಮ್ರ ವಿನ೦ತಿ.

    ReplyDelete
  4. ಆತ್ಮೀಯ ಪ್ರಕಾಶರವೆರೆ

    ಅಲ್ಲಮಪ್ರಭು ವಚನಗಳು ೨೭/೦೪ ರಂದು ಪ್ರಕಟವಾಗಲ್ಲಿದೆ... ನಂತರ ದಿನಗಳಲ್ಲಿ
    ಶಿಶುನಾಳ ಶರೀಫರ ತತ್ವ ಪದಗಳು , ಅಕ್ಕಮಹಾದೇವಿಯ ವಚನಗಳಉ ಪ್ರಕಟಿಸುವೆ...
    ನಿಮ್ಮ E mail id ನೀಡಿ... ನಿಮ್ಮಗೆ ಇಲ್ಲಿ ಪ್ರಕಟಿಸಲು ಅನುಮಾಡಿ ಕೋಡುವೆ

    ReplyDelete
  5. uttama mahiti... adare ondu dhukha vishaya andare Basavannanavaru jati paddatiya virudda horadidavaru.. adare ondu dodda samjika duranta vendare avara anuyayigalu ondu jaati agi hodiddu... indu avara hesaralli jaatiyalle mulugi elutiruvaru...

    ReplyDelete
  6. True Tharun, avaru jaate meridavaru...
    Ondu vale avara hesarenalli jaate eradedadare, basava jayanti eratha irutirrale- basavannanathe - sarvaGyna.. . Sarvagyna nege jathi illa - basavvana nege siguva manaythe Sarvagyna sighutilla :(

    ReplyDelete