Saturday, February 6, 2016

ಹಾಸ್ಯ - ಕೃಪೆ - ವಾಟ್ಸ್ ಆಪ್

ಹೊಸದಾಗಿ ಮದುವೆ ಆಗಿ ಬಂದ ಸೊಸೆ ಏನೂ ಕೆಲಸ ಮಾಡಲ್ಲ ಅಂತ ಮಗನಿಗೆ

ಹೇಳಿ ಪೇಚಾಡಿಕೊಂಡರು ಅಮ್ಮ.

ಆಮೇಲೇ ಅಮ್ಮಾ ಮಗ ಸೇರಿ ಒಂದು plan ಮಾಡಿದರು

ಅಮ್ಮ ಹೇಳಿದ್ರು" ನಾಳೆ ಬೆಳಿಗ್ಗೆ ಕಸ ಗುಡಿಸತಾ ಇರ್ತೀನಿ ಆಗ ನೀನು ಬಿಡಮ್ಮ ನಾ
ಗುಡಸ್ತೀನಿ ಅನ್ನು ಆಗಲಾದ್ರೂ ನಾ ಮಾಡ್ತೀನಿ ಅಂತಾಳಾ ನೋಡೋಣ"

ಅದೇ ಪ್ರಕಾರ ಅಮ್ಮ ಕಸ ಗುಡಸ್ತಾ ಇದ್ದಾಗ ಮಗ "ಬಿಡಮ್ಮ ನಾ ಗುಡಸ್ತೀನಿ"
ಅಂದ

"ಇಲ್ಲ ನಾ ಗುಡಸ್ತೀನಿ"


ಅಮ್ಮ ಮಗ ಕಿತ್ತಾಡೊಕೆ ಶುರು ಮಾಡಿದ್ರು.

ಸೊಸೆ ಬಂದು ಶಾಂತ ರೀತಿಯಿಂದ ಹೇಳಿದಳು"ಅದಕ್ಕೆ ಯಾಕ ಕಿತ್ತಾಡತೀರಿEven

 date ಗೆ ಅಮ್ಮ ಗುಡಸಲಿ,Odd date ಗೆ ಮಗ ಗುಡಸಲಿ" ಅಂತ.

ಸೊಸೆ Rockingಅಮ್ಮ ಮಗ Shocking

ಕೃಪೆ - ವಾಟ್ಸ್ ಆಪ್

ಚುಟುಕುಗಳು - ರಘು ವಿ.

  - 1-
ದಿನಚರಿಯ ಹೊಸಪುಟವ
ರಘು ವಿ.
ಸಂಪಾದಕ, ವಿವೇಕ ಹಂಸ.
ದಿನದ ಮೊದಲ ಕಿರಣದಿಂ
ತೆರೆವ ವಿಧಿಯ ಹಸ್ತವು ನೀನು
ಅಂಜದಳುಕದೆ ಬೆಳಕಿದೆಗೊಟ್ಟು
ನೆಳಲ ಹಿಂದಿಟ್ಟು ಒಲವಿನಿಂ
ಮುನ್ನಡೆವ ಧೀಮಂತಿಕೆಯ
ನೀಡಿ ಹರಸೊ ರವಿಯೇ!

 -2-
 ಜಗದ ದೊಡ್ಡಣ್ಣನುದಯಿಸಿಹ
ಕೃಪೆಯಿಂದ ಇಳೆಯ ಸಲಹಲೆಂದು
ಬೆಳಕ ಬಿತ್ತನೆಗೆ ತೆರೆಯಿರೆದೆಯನು
ನಿತ್ಯ ಜನುಮವು ಅಂತರಂಗದೊಳು
ದೊಡ್ಡಣ್ಣನೀವ ಮೌಲ್ಯಗಳ ಬಿತ್ತಿಹೆವು
ಸಾಧಿಸುವ ಮನ ನೀಡು ಬಾನ ರವಿಯೇ!
-3-
ಒಂಟಿ ಪಯಣಿಗ ನೀನು
ಅದೇನ ಧ್ಯಾನಿಸುವೆಯೊ
ಅದೇನ ಅರಿತಿಹೆಯೊ
ಅನಾದಿಯಿಂದಲೂ ಸತ್ಯ
ಪಾತ್ರೆಯ ಸುವರ್ಣ ಮುಚ್ಚಳ
ನೀನು, ಗುಟ್ಟನೆನಗೆ ಜಗಕೆ
ಉಣಬಡಿಸೊ ರವಿಯೇ! "
-ಕವಿ
( ನಾಳೆ ರವಿಯ ಉತ್ತರ )


-4-
 "ಪಯಣವದೆಲ್ಲ ಒಂಟಿಯೇ
ಲಕ್ಷ ತಾರಾಪಥದಿ ಜತೆಯಿಲ್ಲ
ಎದುರಿಲ್ಲ ಒದರಾಟ ಮೊದಲಿಲ್ಲ
ಸತ್ಯವನಂತ ಯಾತ್ರೆಯದು
ಪಾತ್ರೆ ಮುಚ್ಚಳಗಳಿಲ್ಲ ಬೆಸುಗೆ
ಬಂಧಗಳ ಬಿಡಿಸುವುದೇ ತಪವು
ಗುಟ್ಟು ಗಹ್ವರಗಳಿಲ್ಲ ಇಡು ಹೆಜ್ಜೆ
ಬೆಳಕಾಗುವುದೇ ರಟ್ಟು ನಡೆಯೊ
ಕವಿ ಕತ್ತಲಿಂದ ಬೆಳಕಿನೆಡೆಗೆ!"
-ರವಿ


-5-
"ಹೊತ್ತೊತ್ತಿಗೆ ಚಿತ್ತದಲಿ
ಮೊಳೆವ ಚಿಂತನೆಯಂತೆ
ಅಂದಂದಿನ ದಿನದಾಗಮವ
ಸಾರುವ ರವಿಯೇ,
ನಿನ್ನೊಳಚಿತ್ತದ ಚಿಂತನೆ
ಏನೋ?!"
-ಕವಿ


Tuesday, January 12, 2016

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು

ಮೂಡುವನು ರವಿ ಮೂಡುವನು
ಕತ್ತಲೊಡನೆ ಜಗಳಾಡುವನು
ಪಂಜೆ ಮಂಗೇಶ ರಾಯರು
ಮೂಡಣ ರಂಗಸ್ಥಳದಲಿ ನೆತ್ತರ
ಮಾಡುವನು ಕುಣಿದಾಡುವನು
ಬೆಳಕಿನ ಕಣ್ಣುಗಳಿ೦ದಾ ಸೂರ್ಯನು
ನೋಡುವನು ಬಿಸಿಲೂಡುವನು
ಚಿಲಿಪಿಲಿ ಹಾಡನು ಹಾಡಿಸಿ ಹಕ್ಕಿಯ
ಗೂಡಿನ ಹೊರ ಹೊರ ದೂಡುವನು
ಬಂಗಾರದ ಚೆಲು ಬಿಸಿಲ ಕಿರೀಟದ
ಶೃಂಗಾರದ ತಲೆ ಎತ್ತುವನು
ತೆಂಗಿನ ಕಂಗಿನ ತಾಳೆಯ ಬಾಳೆಯ
ಅಂಗಕೆ ರಂಗನು ಮೆತ್ತುವನು
ಮಾಡಿನ ಹುಲ್ಲಲಿ ಚಿನ್ನದ ಗೆರೆಯನು
ಎಳೆಯುವನು ರವಿ ಹೊಳೆಯುವನು
ಕೂಡಲ ಕೋಣೆಯ ಕತ್ತಲೆ ಕೊಳೆಯನು
ತೊಳೆಯುವನು ರವಿ ಹೊಳೆಯುವನು
ಮಲಗಿದ ಕೂಸಿನ ನಿದ್ದೆಯ ಕಸವನು
ಗುಡಿಸುವನು ಕಣ್ ಬಿಡಿಸುವನು
ಹುಲುಗಿಡ ಹೂವಿಗೆ ಪರಿ ಪರಿ ಬಣ್ಣವ
ತೊಡಿಸುವನು ಹನಿ ತೊಡೆಸುವನು
ಏರುವನು ರವಿ ಏರುವನು
ಬಾನೊಳು ಸಣ್ಣಗೆ ತೋರುವನು
ಏರಿದವನು ಚಿಕ್ಕವನಿರಬೇಕೆಲೆ
ಎಂಬಾ ಮಾತನು ಸಾರುವನು
ಕವಿ : ಪಂಜೆ ಮಂಗೇಶ ರಾಯರು

ನಾನಾ... ನೀನಾ..? ಸಂತೋಷ್ ಕುಮಾರ ಮೆಹೆಂದಳೆ

  ನಾನಾ... ನೀನಾ..? ಎದುರಿಗೆ ಸಹ ನಟನಿರಲಿ, ನಾಯಕನಿರಲಿ, ವಿಲನ್ ಇರಲಿ—ಯಾರನ್ನೂ ಕೇರ್ ಮಾಡದೇ, ತನ್ನದೇ ಮ್ಯಾನರಿಸಮ್‌ನಿಂದ, ತನ್ನದೇ ನಟನೆಯಿಂದ, ಪಾತ್ರವನ್ನು ನೈಜವಾಗಿಸ...