* ಈ ಸೃಷ್ಟಿಯ ಎಲ್ಲಾ ವಿದ್ಯೆಗಳು ಧರ್ಮವನ್ನ ಉಳಿಸಲು, ಬೆಳೆಸಲು ಮತ್ತು ದೈವತ್ವವನ್ನ ಎತ್ತಿ ಹಿಡಿಯಲೇ ರೂಪುಗೊಂಡಿವೆ. ಅವುಗಳನ್ನ ಕೆಡುಕಿಗೆ, ಅಧರ್ಮಕ್ಕೆ ಬಳಸಿದರೆ, ಆ ಮಹಾಕಾಲ ಎಲ್ಲವನ್ನು ಲಯಮಾಡುತ್ತಲೇ ಇರುತ್ತಾನೆ. ಅಧರ್ಮ ಎಷ್ಟೇ ಮೆರೆದರೂ ಕೊನೆಗೆ ಉಳಿಯುವುದು ಧರ್ಮ ಮಾತ್ರ.
* ಹಲವಷ್ಟು ಬಾರಿ ನಾವು ಏನಾಗಬೇಕೆನ್ನುವುದನ್ನ ನಾವಲ್ಲ ನಿರ್ಧರಿಸುವುದು, ನಮ್ಮ ಹುಟ್ಟೇ ಅದನ್ನ ನಿರ್ಧರಿಸಿರುತ್ತದೆ. ಮುಂದುವರಿದು ಹೇಳಬೇಕೆಂದರೆ ಕೆಲವರು ಹುಟ್ಟುವುದೇ, ವಿಧಿಯ ಯಾವುದೋ ಒಂದು ಕಾರ್ಯವನ್ನ ಮುಗಿಸಲು. ಜಗತ್ತು ನಡೆಯುವುದೇ ಹಾಗೆ.
✍🏻 ಅರ್ಜುನ್ ದೇವಾಲದಕೆರೆ
{'ಅಭೀರ' ಕಾದಂಬರಿ}
ಕೃಪೆ : ಪ್ರಶಾಂತ ಸಾಗರ
No comments:
Post a Comment