Thursday, July 14, 2011

ಇರುಳ ಸಮಯ

ಇರುಳ ಸಮಯ ಸುರಿಮಳೆಯೊಳಗೆ
ದೋಣಿಗಳಿಳಿದಿವೆ ಹೊಳೆಯೊಳಗೆ

ಶ್ಯಾಮಲ ಸಾಗರವೇ ಗುರಿಯೆನ್ನುತ
ಸಾಗಿವೆ ಸಾವಿರ ದೋಣಿಗಳು |
ಸೆರಗೇ ಹಾಯಿ ! ಹೃದಯವೆ ಹುಟ್ಟು !
ದೋಣಿ ಹಿಂದೆ ಜಲವೇಣಿಗಳು ||

ಏರಿಳಿಯುವ ಅಲೆ! ಮುಂದೆ ಇದಿರು ಹೊಳೆ !
ಜಗ್ಗುವುವೇ ಈ ಹಾಯಿಗಳು ?
ಎದೆಯನೆ ಸೀಳುವ ಹೋಳು ಬಂಡೆಗಳು
ಆ ಎನ್ನುವ ಸುಳಿಬಾಯಿಗಳು ||

ಮುಳುಗಿಸೊ ಅಥವಾ ತೇಲಿಸೊ ರಥವ
ಧೃತಿಯೊಂದೇ ಗತಿ ಹಾಡುತಿವೆ |
ಮುಳುಗುವ ಹೊರತೂ ತೇಲದು ದೋಣಿ
ಹಾಯಿ ವಿದಾಯವ ಹೇಳುತಿವೆ ||

-ಹೆಚ್. ಎಸ್. ವೆಂಕವೇಶಮೂರ್ತಿ

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...