ಬಹುತೇಕ ಎಲ್ಲಾ ಪುರಾಣಾಗಳಲ್ಲೂ ಜಗತ್ ಸೃಷ್ಟಿಯ ಕಥೆ ಬರುತ್ತದೆ. ಪುರಾಣದ ಕಥೆಗಳ ಪ್ರಕಾರ ಕಶ್ಯಪ ಹಾಗು ದಿತಿಯರ ಎರಡನೆಯ ಮಗ ಹಿರಣ್ಯಾಕ್ಷ ಭೂಮಿಯನ್ನು ಚಾಪೆಯಂತೆ ಸುರುಳಿ ಸುತ್ತಿ ಸಮುದ್ರದಡಿಯಲ್ಲಿ ಬಚ್ಚಿಟ್ಟ. ಆಗ ವಿಷ್ಣು ವರಾಹ (ಕಾಡು ಹಂದಿ) ರೂಪವನ್ನು ತಾಳಿ ನೀರಿಗಿಳಿದು ಹಿರಣ್ಯಾಕ್ಷನನ್ನು ಎಡಗಾಲಿಂದ ಒದ್ದು ಸಂಹರಿಸಿ ಕೋರೆದಾಡೆಗಳ ಮೂಲಕ ಭೂಮಿಯನ್ನು ಮೇಲೆತ್ತಿ ಮೊದಲಿದ್ದಂತೆ ನೀರಿನ ಮೇಲೆ ಪ್ರತಿಷ್ಠಾಪಿಸಿದ. ಬ್ರಹ್ಮ ವರಾಹನನ್ನೆ ಸೃಷ್ಟಿಯಜ್ಞದ ಪಶುವನ್ನಾಗಿಸಿ ತನ್ನ ಕಾರ್ಯವನ್ನು ಪ್ರಾರಂಭ ಮಾಡಿದನು. ಆ ಯಜ್ಞ ಸ್ವರೂಪಿ ವರಾಹನನ್ನು ಈ ರೀತಿ ಬಣ್ಣಿಸಲಾಗುತ್ತದೆ. ನಾಲ್ಕು ವೇದಗಳೇ ಅವನ ಕಾಲುಗಳು, ಯೂಪ ಸ್ತಂಭವೇ ಅವನ ಕೋರೆಹಲ್ಲುಗಳು, ಯಾಗಗಳೆಲ್ಲಾ ಅವನ ದಂತಗಳು, ಚಯನವೇ ( ಅಗ್ನಿವೇದಿಕೆ ) ಮುಖ, ಅಗ್ನಿಯೇ ನಾಲಗೆ, ದರ್ಭೆಗಳೆ ರೋಮಗಳು, ಬೆವರಹನಿಗಳೇ ತಿಲ(ಎಳ್ಳು), ರಾತ್ರಿ-ಹಗಲುಗಳೇ ಇವನ ಕಣ್ಣುಗಳು, ಆಕಾಶವೇ ಒಡಲು, ಗುಡುಗಿನ ಶಬ್ಧಗಳೇ ವಾದ್ಯಗಳು, ಸಾಮಗಾನವೇ ಅವನ ಸ್ವರ, ಅವನ ಮೂತಿಯೇ ಸೃಕ್ -ಸ್ರುವಗಳು (ತುಪ್ಪಹೊಯ್ಯುವ ಚಮಚಗಳು ), ರಕ್ತವೇ ಆಜ್ಯ(ತುಪ್ಪ), ಅಸ್ಥಿಗಳೇ ಸಮಿತ್ತ್ತು(ಕಟ್ಟಿಗೆ), ಗುಪ್ತರ ಕಾಲದಲ್ಲಿ ನಾಲ್ಕುಕಾಲಿನ ಪಶುರೂಪಿ ವರಾಹನ ಮೂರ್ತಿಗಳೇ ಪ್ರಚಲಿತವಾಗಿದ್ದವು, ಪಲ್ಲವ, ಚಾಳುಕ್ಯ ಕಾಲದಿಂದ ನೃವರಾಹ (ಮನುಷ್ಯ ದೇಹ ಕಾಡುಹಂದಿಯ ತಲೆ) ರೂಪದಿಂದ ಅವನ ವಿಗ್ರಹಗಳ ಕೆತ್ತನೆ ಪ್ರಾರಂಭವಾಯ್ತು. ಮೊದಲನೇ ಚಿತ್...