ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, February 14, 2014

ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?


ಅನಾದಿ ಕಾಲದಿಂದ ಇಂದಿನವರೆಗೂ ಪ್ರೀತಿ ಎಂಬ ವಿಷಯ ಚಚೆ೯ ಆಗುತ್ತಲೇ ಇರುವುದು. ಮುಂದೆಯೂ ಸಹಾ ಆಗುತ್ತಾ ಇರುವುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
 ಹಾಗಾದರೇ ಪ್ರೀತಿ ಎಂದರೇನು? ಈ ಪ್ರಶ್ನೆಗೆ ಹಲವಾರು ಉತ್ತರಗಳು ಇದೆ. ಆದರೇ ಉತ್ತರ ಒಂದೇ ಪ್ರೀತಿ ಎಂದರೇ ಪ್ರೀತಿ ಅಷ್ಟೇ. ಈ ಬಗ್ಗೆ ಉತ್ತರಿಸುವ ಎಲ್ಲರೂ  ಅವರವರು ನೋಡಿದ, ಅನುಭವಿಸಿದ ಘಟನೆಗಳನ್ನು ಆಧಾರವಾಗಿಟ್ಟುಕೊಂಡೆ ಪ್ರೀತಿಯನ್ನು ವ್ಯಾಖ್ಯಾನಿಸುವರೇ ವಿನಹ: ಅದಕ್ಕೆ ಸ್ಪಷ್ಟವಾದ ಉತ್ತರ ಎಂಬುದು ಇಲ್ಲ.  ಪ್ರೀತಿಯಲ್ಲಿ ವಿವಿಧ ಬಗೆಗಳಿವೆ. ಆದರೇ ಎಲ್ಲ ಬಗೆಯ ಪ್ರೀತಿಯೂ ಅಪೇಕ್ಷೆಯ ಕಾರಣಕ್ಕಾಗಿಯೇ ದುಖ:ದಲ್ಲಿ ಅಂತ್ಯವಾಗುವುದು.
ತಂದೆ ತಾಯಿ - ಮಕ್ಕಳ ಪ್ರೀತಿ : ಅಪ್ಪ ಅಮ್ಮನಿಗೆ ತನ್ನ ಮಗ/ಮಗಳು ತಾನು ಹೇಳಿದಂತೆ ಕೇಳಬೇಕು. ಚಿಕ್ಕವರಿದಾಗ ದಿನಾಲು ಶಾಲೆಗೆ ಹೋಗಿ ಬರಬೇಕು, ಚೆನ್ನಾಗಿ ಓದಬೇಕು, ಉತ್ತಮ ಮಾಕ್ಸ೯ ತೆಗೆಯಬೇಕೆಂಬ ಅಪೇಕ್ಷೆ, ದೊಡ್ಡವರಾದಾಗ ಎಲ್ಲಾ ವಿಚಾರವನ್ನು ಚಚಿ೯ಸಬೇಕು. ದುಡಿದು ತಂದು ಹಣವನ್ನು ನೀಡಬೇಕು. ತಾವು ಹೇಳಿದವರಿಗೆ ಮದುವೆಯಾಗಬೇಕು. ತಾವು ಹೇಳಿದವರೊಂದಿಗೆ ಸಹವಾಸ ಇರಬೇಕು. ತಾವು ಹೇಳಿದಲ್ಲೇ ಕೆಲಸ ಮಾಡಬೇಕು. ಮನೆಯಿಂದ ದೂರವಿದ್ದರೆ ತಮಗೆ ದಿನಾಲು ಪೋನ ಮಾಡಬೇಕು. ಒಟ್ಟಾರೆ ಮಕ್ಕಳು ತಮ್ಮ ಇಷ್ಟದಂತೆ ಇರಬೇಕು ಎಂದು ಅಪೇಕ್ಷೆ. ಮಕ್ಕಳಿಗೆ ಅಪ್ಪ ಅಮ್ಮ ಸ್ನೇಹಿತರಂತೆ ಇರಬೇಕು. ನನ್ನ ಎಲ್ಲಾ ಕಾರ್ಯಕ್ಕೂ ಸಹಕಾರ ನೀಡಬೇಕು. ಸಂಬಂಳದ ಬಗ್ಗೆ ಮಾತನಾಡಬಾರದು, ಕೆಲಸದ ಬಗ್ಗೆ ವಿಚಾರಿಸಬಾರದು, ಮದುವೆ ಎಂಬುದರಲ್ಲಿ ನನ್ನ ನಿಧಾ೯ರದಲ್ಲಿ ತಲೆ ಹಾಕಬಾರದು.  ಅಪ್ಪ ಅಮ್ಮ ನಾನೇ ಏನೇ ತೀಮಾ೯ನ ಕೈಗೊಂಡರು ನನಗೆ ಸಪೋರ್ಟ ಮಾಡಬೇಕು. ನನಗೆ ಅವರ ಸಲಹೆ ಅಗತ್ಯ, ಮಾರ್ಗದರ್ಶನ ಅಗತ್ಯ  ಎಂಬುದು ಮಕ್ಕಳ ಅಪೇಕ್ಷೇ
ಈ ರೀತಿಯ ಪರಸ್ಪರ ಅಪೇಕ್ಷೆಗಳು ಹೊಂದಾಣಿಕೆ ಆಗದೇ ಇರುವಾಗ ಮನಸ್ಥಾಪ, ಜಗಳ, ಬೇರೆ ಮನೆ, ಬೇರೆ ಅಡುಗೆ ಇವು ಸ್ವಾಭಾವಿಕವಾಗಿ ಹುಡುಕಿಕೊಂಡು ಬರುವುದು.
ಹುಡುಗ-ಹುಡುಗಿ ಪ್ರೀತಿ : ನಾನು ಇಷ್ಟಪಡುವ ಹುಡುಗ/ಹುಡುಗಿ ಯಾವ ಹುಡಿಗಿ/ಹುಡುಗರೊಂದಿಗೂ ಮಾತನಾಡಬಾರದು, ಅವನ/ಆಕೆಯ ಬಟ್ಟೆಯ ಬಣ್ಣ, ಹಾಕುವ ಚಪ್ಪಲಿ ಇವುಗಳ ಬಗ್ಗೆ ಅಪೇಕ್ಷೆ ಆತನ/ಆಕೆಯ ಊಟ, ತಿಂಡಿ, ಇತರೆ  ಹವ್ಯಾಸಗಳ ಬಗ್ಗೆ ಒಂದು ಪೂರಕವಾಗಿ ಇಲ್ಲಾ ನಕಾರಾತ್ಮಕವಾದ ಅಪೇಕ್ಷೆ ಪರಸ್ಪರ ಇಬ್ಬರಲ್ಲಿಯೂ ಇರುವುದು. ಅಪೇಕ್ಷೆ ಹೆಚ್ಚಾಗಿ ಅದು ಆಗದೇ ಇದ್ದಾಗ ಬೇಸರ, ಬೇಸರ ಕಳೆಯಲು ಸಿಗರೇಟು, ಸರಾಯಿ, ಅಳು, ದುಖ: ಡಿಪ್ರೆಸನ್ ಇತ್ಯಾದಿ.... ಇಬ್ಬರು ಪಶ್ಚಾತಾಪ ಪಟ್ಟು ಪುನ: ಸೇರಿದಾಗ ಪಶ್ಚಾತಾಪ... ನಂತರ ಪ್ರೀತಿಯ ಹೆಸರಿನಲ್ಲಿ ಸಿನಿಮಾ, ಸುತ್ತಾಟ, ದೈಹಿಕ ಸಂಪರ್ಕ........ ಪುನ: ದುಖ: ಪಶ್ಚಾತಾಪ.......ಇದಕ್ಕೆ ಕೊನೆ ಎಂಬುದು ಇಲ್ಲವಾಗಿದೆ.
ಗಂಡ ಹೆಂಡತಿ ಪ್ರೀತಿ - ತಾನು ಕೆಲಸ ಮುಗಿಸಿ ಬಂದ ಮೇಲೆ ತನಗೆ ಟೀ ನಿಡಬೇಕು. ಮಾತನಾಡಬೇಕು, ಉತ್ತಮ ಅಡುಗೆ ಮಾಡಿ ಬಡಿಸಬೇಕು. ರಾತ್ರಿ ತನ್ನ ಆಕಾಂಕ್ಷೆಯನ್ನು ಈಡೇರಿಸಬೇಕು,ತನ್ನನ್ನು ಅರ್ಥಮಾಡಿಕೊಳ್ಳಬೇಕು ಎಂಬ ಅಪೇಕ್ಷೆ ಗಂಡಿನದಾದರೆ,  ನನ್ನನ್ನು ಬೇರೆ ಬೇರೆ ಕಡೆ ತಿರುಗಾಡಲು ಕರೆದುಕೊಂಡು ಹೋಗಬೇಕು. ಆಭರಣ ಖರೀದಿಸಬೇಕು. ಆಗಾಗ  ಉಡುಗೊರೆ ನೀಡಬೇಕು, ಮನೆಗೆ ಹಲವಾರು ರೀತಿಯ ಸಾಮಾನನ್ನು ತರಬೇಕು, ಜಾಗ ಖರೀದಿಸಬೇಕು, ಮನೆ ಕಟ್ಟಬೇಕು ಇತ್ಯಾದಿ, ಇತ್ಯಾದಿ ಅಪೇಕ್ಷೆಗಳು... ಎಲ್ಲಿ ಹೊಂದಾಣಿಕೆ ಇದೆಯೋ, ಅಥವಾ ಯಾರಾದೂ ಒಬ್ಬರು ಸೋಲಲ್ಲು ಇಷ್ಟಪಡುವರೋ ಅಲ್ಲಿ ಎಲ್ಲವೂ ಒಳ್ಳೆಯದು. ಎಲ್ಲಿ ಭಿನ್ನಾಭಿಪ್ರಾಯ ಇದೆಯೋ ಅಲ್ಲಿ ಮೂರನೇ ವ್ಯಕ್ತಿ ಅಂದರೆ ಹಿರಿಯರ ಪ್ರವೇಶ ಬುದ್ದಿಮಾತು, ಕೋರ್ಟ ವಿಚ್ಛೇಧನ ಇತ್ಯಾದಿ...
ಹೌದು ಎಲ್ಲಾ ಪ್ರೀತಿನೇ ಇವೆಲ್ಲ ಇದ್ದರೆ ಮಾತ್ರ ಜೀವನದಲ್ಲಿ ಮಜಾ ಇದು ಪ್ರೀತಿಯ ಸುಳಿಯಲ್ಲಿ ಸಿಕ್ಕವರ ಹೇಳಿಕೆಯಾದರೆ, ಇನ್ನೊಮ್ಮೆ ನಾನು ಪ್ರೀತಿಯ ಹುಚ್ಚಿನಲ್ಲಿ ಬೀಳುವುದಿಲ್ಲ ಎಂಬುದು ಅಸಹಾಯಕರ ಹೇಳಿಕಯಾಗಿರುವುದು. ಒಟ್ಟಾರೆ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಪ್ರೀತಿಯ ಮಕ್ಕಳೆ ಆಗಿರುವರು. ಪ್ರೀತಿಯ ಬಗೆ ಬೇರೆ ಬೇರೆ ಆಗಿರಬಹುದು ಆದರೇ ಪ್ರೀತಿ ಇಲ್ಲದ ವ್ಯಕ್ತಿ ಇರಲು ಸಾಧ್ಯವೇ ಎಂದು ಹೇಳಬಹುದಾಗಿದೆ.
ಹಾಗಾದರೇ...........
ಅಪೇಕ್ಷೆ ರಹಿತ ಪ್ರೀತಿ ಸಾಧ್ಯವೇ?  ಪ್ರೀತಿ ಎಂದರೇನೇ ಅಪೇಕ್ಷೇ ಎಂಬುದು ಒಂದು ವಾದ,  ಆದರೇ ಅಪೇಕ್ಷ ರಹಿತವಾದ ಪ್ರೀತಿ ಎಂದರೇ ಅದೊಂದು ಆಧ್ಯಾತ್ಮ ತಪ್ಪಸ್ಸು ಆಗಿರುವುದು. ಆದರೇ ಪ್ರಾಪಂಚಿಕ ಬದುಕಿನಲ್ಲಿ ಬದುಕುವಾದ ಅಪೇಕ್ಷ ರಹಿತವಾದ ಪ್ರೀತಿಯನ್ನು ಕಲ್ಪಿಸುವುದು ಅಸಾಧ್ಯವಾದ ಮಾತಾಗಿರುವುದು.
ತಂದೆ ತಾಯಿ, ಅಣ್ಣ-ತಮ್ಮ, ಅಕ್ಕ-ತಮ್ಮ, ಸಂಭಂದಿಕರುಗಳು, ಸ್ನೇಹಿತರು, ಪ್ರೇಯಸಿ, ಹೆಂಡತಿ, ಮಕ್ಕಳು, ಶಿಕ್ಷಕರು, ಗುರು, ಸಹಪಾಠಿ, ಇವರುಗಳಲೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಪರಸ್ಪರ ಅಪೇಕ್ಷೆಯಿಂದಲ್ಲೇ ಪ್ರೀತಿಯ ಸುಳಿಯಲ್ಲಿ ಸಿಕ್ಕಿರುವರು. ಎಲ್ಲರಿಗೂ ತಾವು ತಾವು ಕಂಡು ಕೊಂಡ ಜೀವನವೇ ಮುಖ್ಯ ಅದನ್ನೇ ಎಲ್ಲರೂ ಅನುಸರಿಸಬೇಕು ಎಂಬ ಅಪೇಕ್ಷೆ ಯಾರಿಗೂ ಎದುರಿಗಿನ ವ್ಯಕ್ತಿಯ ಭಾವನೆ ಬಗ್ಗೆ ಬೆಲೆ ಇಲ್ಲ.  ಹುದ್ದೆ, ಸಂಪತ್ತು, ಸೌಂಧರ್ಯ, ಜ್ಞಾನ, ಇವುಗಳು ಮುಖ್ಯವಾಗಿ ಪ್ರೀತಿಯ ಮೇಲೆ ಪ್ರಭಾವ ಬೀರುವುದನ್ನು ನಾವು ಕಾಣುತ್ತಿರುವೆವು.
ದಾರಿಯಲ್ಲಿ ಹೋಗುವಾಗ ರಸ್ತೆಯಲ್ಲಿರುವ ಬೀದಿ ಮಕ್ಕಳು, ಹುಚ್ಚ, ಕುಡುಕ, ಮಹಿಳೆ ಬಗ್ಗೆ ನಮಗೆ ಕೇವಲ ಕನಿಕರ ಇರುವುದು ಹೊರತು ನಮ್ಮಿಂದ ಯಾವುದೇ ಸಹಾಯ ಮಾಡುವುದಕ್ಕೆ ಧೈರ್ಯ ಬರುವುದಿಲ್ಲ.  ಹೆಚ್ಚೆಂದರೆ 10 ರೂಪಾಯಿ ನೀಡಿ ಅಲ್ಲಿಂದ ಕಾಲನ್ನು ಕೀಳುವೆವು. ಕಾರಣ ಅವರ ಬಗ್ಗೆ ನಮಗೆ ಪ್ರೀತಿ ಇಲ್ಲ. ಅಂದರೆ ಅವರ ಬಗ್ಗೆ ಅಪೇಕ್ಷೆಯೂ ಇಲ್ಲ. ಆದರೇ ಅವರಿಗೆ ಸಹಾಯ ಮಾಡುವ ಬಗ್ಗೆ ಮಾತನಾಡಲು ನಮಗೆ ಇಷ್ಟ. ಅಂದರೆ ನಮಗೆ ಅಪೇಕ್ಷೆ  ರಹಿತವಾದ ಪ್ರೀತಿ ಎಂಬುದು ಇಷ್ಟ ಆದರೇ ಅದನ್ನು ಅನುಸರಿಸಲು ಕಷ್ಟ.
ನಾ ಪ್ರೀತಿಸುವ ಎಲ್ಲಾ ವ್ಯಕ್ತಿಗಳ ಬಗ್ಗೆಯೂ ನನಗೆ ಅಪಾರವಾದ ಅಪೇಕ್ಷೆ ಇರುವುದು. ಆದರೇ ಅವರು ನನ್ನ ಬಗ್ಗೆ ಏನಾದರೂ ಅಪೇಕ್ಷೆ ಇರಿಸಿಕೊಂಡರೆ ಅದು ಕಷ್ಟವಾಗಿ ಪರಿಗಣಿಸುವುದು. ಇದು ಇಂದಿನ ಪ್ರಂಪಚದಲ್ಲಿ ಸಾಮಾನ್ಯವಾಗಿ ನಡೆಯುತ್ತಿರುವ ವಿಧ್ಯಮಾನವಾಗಿರುವುದು.
ನನ್ನ ಮಗ ಮೊದಲಿನಂತೆ ಇಲ್ಲ. ನಮ್ಮ ಅಪ್ಪ ಅಮ್ಮ ಮೊದಲಿನಂತೆ ಇಲ್ಲ. ಮದುವೆಯಾದ ಅಕ್ಕ ಮೊದಲಿನಂತೆ ಇಲ್ಲ, ಮನೆಯಿಂದ ಹೊರಗಡೆ ಇರುವ ಅಣ್ಣ ಮೊದಲಿನಂತೆ ಇಲ್ಲ ಈ ಎಲ್ಲಾ ಮೊದಲಿನಂತೆ ಇಲ್ಲಾ ಎಂಬ ಪ್ರಶ್ನೆಗಳು ಬರುವುದು ಯಾಕೆ? ಒಂದು ವ್ಯಕ್ತಿಯ ಬಗ್ಗೆ ಇವರು ಹೀಗೇನೇ ಎಂದು ನಾವು ನಮ್ಮಲ್ಲಿಯೇ ನಿರ್ಧರಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಯಾರೊಬ್ಬರ ಬಗ್ಗೆ ಈ ರೀತಿಯಾದ ಅಪೇಕ್ಷೆ ಇರಿಸಿಕೊಂಡು ಅದು ಆಗದೇ ಇದ್ದಾಗ ದುಖ: ಪಡುವುದು ಯಾಕೆ? ಪ್ರೀತಿ ಎಂಬುದು ಒಂದು ರೀತಿಯಲ್ಲಿ ಕೈಗೆ ಸಿಗದ ವಸ್ತು. ಅದು ತನ್ನದು ತಾನು ಹೇಳಿದ ಹಾಗೇ ಕೇಳುವುದು ಎಂಬ ಭ್ರಮೆ ಬೇಡ ಯಾಕೆಂದರೆ ನಾವು ಪ್ರೀತಿಯನ್ನು ಕಾಣುತ್ತಿರುವುದು ಬರೀ ಮನುಷ್ಯ ಜೀವಿಗಳಲ್ಲಿ ಮಾತ್ರ.
ಪ್ರೀತಿಯ ಹುಚ್ಚು ಚಟ
ಮಾತೆವೊಲೊ ಪಿತನವೊಲೊ ಪತಿಯವಲೊ ಸತಿಯವೊಲೊ
ಭ್ರಾತಸುತಸಖರವೊಲೊ ಪಾತ್ರವೊಂದಕ್ಕೆ ತಾಂ
ಕಾತರಿಸುತಿಹುದು ತನ್ನೆಲ್ಲವನು ಮುಡುಪುಕುಡೆ
ಪ್ರೀತಿಯ ಹುಚ್ಚು ಚಟ- ಮಂಕುತಿಮ್ಮ .
(ಮನುಷ್ಯ ತನ್ನದನ್ನು ಪರರಿಗೆ ಕೊಡಲು ಮತ್ತು ಪರರಿಂದ ಏನಾದರೂ ಪಡೆಯಲು  ಪ್ರೀತಿ ಪ್ರೇಮಗಳ ಸಹಾಯವನ್ನು ಪಡೆದುಕೊಳ್ಳುತ್ತಾನೆ. ಹಾಗೆ ಹಾಗೆಕೊಡಲು ಅಥವಾ ಪಡೆದುಕೊಳ್ಳಲು ಅವನು ತಾಯಿಯ, ತಂದೆಯ, ಪತಿಯ ಪತ್ನಿಯ,ಸ್ನೇಹಿತನ ಅಣ್ಣ-ತಮ್ಮಂದಿರ ಅಥವಾ ಅಕ್ಕ ತಂಗಿಯರ ಪಾತ್ರವನ್ನು ವಹಿಸುತ್ತಾನೆ(ಳೆ). ಪ್ರೀತಿ ತೋರುವುದು ಮನಿಷ್ಯನಿಗೊಂದು ಚಟ)
                                                                                                              ವಿವೇಕ ಬೆಟ್ಕುಳಿ  vivekpy@gmail.com


No comments:

Post a Comment