ಶ್ರದ್ದಾಂಜಲಿ
Krupe : Kannada Prabha ವರ್ತಮಾನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಬಹುದೊಡ್ಡ ಹೆಸರು ಆರ್.ಕೆ. ಶ್ರೀಕಂಠನ್ ಅವರದ್ದು. ಸಾಹಿತ್ಯ ಶುದ್ಧ, ಶ್ರುತಿ ಶುದ್ದ, ಸ್ವರ ಶುದ್ದ ಸಂಗೀತ ಪರಂಪರೆಯಲ್ಲಿ 94 ವರ್ಷಗಳ ತುಂಬು ಜೀವನವನ್ನು ನಡೆಸಿದವರು, ಅವರು. ಆರ್.ಕೆ. ಶ್ರೀಕಂಠನ್ ಅವರು ಹುಟ್ಟಿದ್ದು ಹಾಸನ ಜಿಲೆಯ ರುದ್ರಪಟ್ಟಣಂ ಎಂಬ ಸಂಗೀತವೇ ಉಸಿರಾದ ಊರಿನಲ್ಲಿ 14 ನೇ ಜನವರಿ 1920ರಲ್ಲಿ. ಇವರ ತಂದೆ ಕೃಷ್ಣ ಶಾಸ್ತ್ರಿಗಳು ಒಳ್ಳೆಯ ಗಮಕಿಗಳು. ಕವಿಗಳು, ನಾಟಕಾಗಾರರು ಆಗಿದ್ದರು.. ತಾಯಿ ಸಣ್ಣಮ್ಮನವರು ಕೂಡ ಒಳ್ಳೆಯ ಗಾಯಕಿ ಆಗಿದ್ದರು ಆದರೆ ದುರದೃಷ್ಟವಶಾತ್ ಆರ್.ಕೆ. ಶ್ರೀಕಂಠನ್ ಅವರು 2 ವರ್ಷ ಚಿಕ್ಕವರಾಗಿದ್ದಾಗಲೇ ತಾಯಿ ತೀರಿಕೊಂಡರು. ಇವರ ತಾತ ವೀಣೆ ನಾರಾಯಣ ಸ್ವಾಮಿಯವರು.. ವೀಣೆ ಶೇಷಣ್ಣ & ವೀಣೆ ಸುಬ್ಬಣ್ಣನವರ ಸಮಕಾಲೀನರು. ಶ್ರೀಯುತರು ತಮ್ಮ ಪ್ರಾಥಮಿಕ & ಪ್ರೌಢ ಶಿಕ್ಷಣವನ್ನು ಕ್ರಮವಾಗಿ ಮೈಸೂರಿನ ಸದ್ವಿದ್ಯಾ ಪಾಠ ಶಾಲಾ ಹಾಗೂ ಡಿ. ಬನುಮಯ್ಯ ಪ್ರೌಢ ಶಾಲೆಗಳಲ್ಲೂ, ಬಿ.ಎ. ಪದವಿಯನ್ನು ಮಹಾರಾಜ ಕಾಲೇಜಿನಲ್ಲೂ ಪಡೆದುಕೊಂಡರು. ಸಂಗೀತವಂತೂ ಮನೆತನದಲ್ಲೇ ಇದ್ದುದರಿಂದ ತಂದೆಯೇ ಅವರಿಗೆ ಮೊದಲ ಗುರುವಾಗಿದ್ದರು. ನಂತರದಲ್ಲಿ ವೀಣೆ ಸುಬ್ಬಣ್ಣ & ಪಿಟೀಲು ಚೌಡಯ್ಯನವರಲ್ಲಿ ಸಂಗೀತ ಅಭ್ಯಾಸ ಮಾಡಿದ್ದ ಅವರ ಸೋದರ ಆರ್.ಕೆ. ವೆಂಕಟರಮಣ ಶಾಸ್ತ್ರಿಯವರಲ್ಲಿ ಸಂಗೀತ ಅಭ್ಯಾಸ ಮುಂದುವರಿಸಿದರು.ಇವರು ಸಂತ ತ್ಯಾಗರಾ...