ಕತ್ತಲಲ್ಲಿ ಕಲೆತ ಮನಸಿನ ಭಾವಗಳು ಕಿರುಬೆಳಕಿನ ತಲಾಶಿನಲ್ಲಿದ್ದಾಗ
ನೀನು ಕಂಡಿದ್ದೆ....
ಕೈ ಸಿಗುವ ಮುನ್ನವೆ ಆರಿ ಹೋದ ಮರುಕ್ಷಣ
ಆ ಮಧುರಭಾವಗಳನ್ನ ನೀನೇನೆ ನಿರ್ದಾಕ್ಷಿಣ್ಯವಾಗಿ ಕೊಂದಿದ್ದೆ,
ಒಲವಿನ ದಿನಗೂಲಿ ಸಿಕ್ಕರೂ ಸಾಕಿತ್ತು
ಬಾಳಿಡಿ ಕನಸಿನ ಜೀತ ಮಾಡಿಕೊಂಡು ನಿನ್ನೆದೆಯ ಮೂಲೆಯಲ್ಲೆ ಬಿದ್ದಿರಲು....
ನನ್ನ ಮನಸು ಕೊನೆಯುಸಿರಿನವರೆಗೂ ಸದಾ ತಯಾರು/
ಮನದ ಬರಡಿನಲ್ಲಿ ಚಿಗುರಿದ ನಿರೀಕ್ಷೆಯ ಬಳ್ಳಿಯಲ್ಲಿ
ಅರಳಿದ ಆಕಾಂಕ್ಷೆಯ ಹೂವನ್ನ....
ನನ್ನೆದೆಯ ತೊಟ್ಟಿನಿಂದ ನಿನ್ನ ಬೆರಳುಗಳೆ ಮೃದುವಾಗಿ ಬಿಡಿಸಲಿ,
ನನ್ನ ಮನಃಪಟಲದಲ್ಲೂ ನಿನ್ನ ಕಣ್ ಎರಚಿದ ರಂಗುಗಳೆಲ್ಲ....
ನಿನ್ನ ಚಿತ್ರವನ್ನೆ ಸೊಗಸಾಗಿ ಬಿಡಿಸಲಿ//
ಸಂತಸದ ಹನಿಗಳೆಲ್ಲ ನೋವಿನ ಮೋಡಗಳಾಗಿ
ಕಾಣದ ಊರಿಗೆ ತೇಲಿ ಹೋದ ಮೇಲೆ....
ನನ್ನ ಕಣ್ಣಂಚಲಿ ಉಳಿದದ್ದು ಸಂಕಟದ ನಾಲ್ಕು ಹನಿಗಳಷ್ಟೆ,
ಮನಸಿನ ಕೇರಿಯ ಕೊನೆಯ ತಿರುವಿನಲ್ಲಿ ಕಂಡ ಬಿಂಬ ಕೇವಲ ನಿನ್ನದಾ?
ಇಲ್ಲಾ ನೋವಲಿ ನರಳಿ ಕಾಲೆಳೆದುಕೊಂಡು ಸಾಗಿದ ನನ್ನದಾ?/
ಮೂಕ ಮನದ ಮೌನ ರಾಗದಲ್ಲಿ ಅದೇನೂ ವಿಷಾದದ ಕಿರುಛಾಯೆ
ಕಲಕಿರುವ ಎದೆಯ ಕೊಳದಲ್ಲಿ ನಿನ್ನ ಬಿಂಬವೂ ಕಲಕಿ ಹೋದಂತ ಅನುಭವ...
ಸಾಗದ ದೋಣಿಯ ತಳ ತೂತಾಗಿರುವ ವಾಸ್ತವಕ್ಕೆ,
ವಿಮುಖವಾಗಿರುವ ಮನಸಿನ ತುಂಬಾ ಮತ್ತೆ
ಸುಖಸಾಗರದಲ್ಲಿ ತೇಲುತಾ ಸಾಗುವ ಹಗಲು ಕನಸಿನ ಕಲರವಗಳದ್ದೆ ಸದ್ದು//
ಮೂಕ ಮನದ ಮೌನ ರಾಗದಲ್ಲಿ ಅದೇನೂ ವಿಷಾದದ ಕಿರುಛಾಯೆ
ಕಲಕಿರುವ ಎದೆಯ ಕೊಳದಲ್ಲಿ ನಿನ್ನ ಬಿಂಬವೂ ಕಲಕಿ ಹೋದಂತ ಅನುಭವ...
ಸಾಗದ ದೋಣಿಯ ತಳ ತೂತಾಗಿರುವ ವಾಸ್ತವಕ್ಕೆ
ವಿಮುಖವಾಗಿರುವ ಮನಸಿನ ತುಂಬಾ,
ಮತ್ತೆ ಸುಖಸಾಗರದಲ್ಲಿ ತೇಲುತಾ ಸಾಗುವ ಹಗಲು ಕನಸಿನ ಕಲರವಗಳದ್ದೆ ಸದ್ದು/
ಒಲವ ಗಲ್ಲಿಗಲ್ಲಿ ಸುತ್ತಿ, ನಿರೀಕ್ಷೆಯ ಕೊಡಚಾದ್ರಿ ಹತ್ತಿ
ಕಡೆಗೆ ಈ ನಿರಾಕರಣೆಯ ಕಡಲತೀರದಲ್ಲಿ....
ನನ್ನದೂ ಕೆಲವು ಕಣ್ಣೀರ ಹನಿಗಳನ್ನ ಅದಕ್ಕೆ ಸೇರಿಸುತ್ತಾ ಮೌನವಾಗಿ ನಿಂತಿದ್ದೇನೆ,
ತೆಂಕಣ ಸುಳಿಗಾಳಿಗೆ ತೇಲಿ ಬಂದ ತುಣುಕು ಮೋಡವೊಂದು....
ಇಲ್ಲೂ ನಿರೀಕ್ಷೆಯ ಹನಿಯೊಂದರ ಆಸೆ ಹುಟ್ಟಿಸಿ ಹಾಗೆ ಬಾನಂಚಿನಲ್ಲಿ ತೇಲುತಿದೆ//
ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Subscribe to:
Post Comments (Atom)
"RSS ಮತ್ತು DSS - ಒಂದು ತೌಲನಿಕ ಅಧ್ಯಯನ"- ಪ್ರವೀಣಕುಮಾರ M
RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ತನ್ನ 100 ನೇ ವರ್ಷದ ಸಂಭ್ರಮವನ್ನು ದೇಶದಾದ್ಯಂತ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷವನ್ನು ಬೆಂಬಲಿಸುವ ...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರ, ಕೋರಿಕೆಗೆ ಕೋರಿಕೆ! ಅಂದರೆ, ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" ಪ್ರಕ...
-
ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು ಪಂಜೆ ಮಂಗೇಶ ರಾಯರು ಮೂಡಣ ರಂಗಸ್ಥಳದಲಿ ನೆತ್ತರ ಮಾಡುವನು ಕುಣಿದಾಡುವನು ಬೆಳಕಿನ ಕಣ್ಣುಗಳಿ೦ದಾ ಸೂರ್ಯನು ನೋಡ...
No comments:
Post a Comment