ಕಾವ್ಯ ಕಮ್ಮಟ





ವತ್ತಿನ ಹೊಸ ತಲೆಮಾರಿನ ಯುವಸಮುದಾಯ ತನ್ನೆಲ್ಲ ತುಡಿತಗಳನ್ನು ಕಾವ್ಯದ ಮೂಲಕ ಹೊರಹಾಕಲು ಯತ್ನಿಸುತ್ತಿದೆ.. ತನ್ಮೂಲಕ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತಾ ಸಾಹಿತ್ಯ-ಕಾವ್ಯವನ್ನು ಕಟ್ಟುವ ಕೆಲಸ ಮಾಡುತ್ತಿದೆ. ಇದೇ ಸಮಯದಲ್ಲಿ ಈ ರೀತಿಯ ಹೊಸಪೀಳಿಗೆಯ ಕಾವ್ಯದ ಕಲಿಕೆಯಲ್ಲಿ ಆಸಕ್ತರಾದ ನಾವು ಕೆಲವರು ಸೇರಿಕೊಂಡು 'ಕಾವ್ಯ ಕಮ್ಮಟ' ಒಂದನ್ನು ಕುಪ್ಪಳಿ ಕವಿಮನೆ ಬಳಿಯ 'ಶತಮಾನೋತ್ಸವ ಭವನ'ದಲ್ಲಿ ಏರ್ಪಡಿಸಿದ್ದೇವೆ. ಜನವರಿ 31, ಪೆಬ್ರವರಿ 1 & 2 ರವರೆಗೆ 3 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಭಾಷಣಗಳ ಬದಲು ಹಿರಿಯ-ಸಮಕಾಲೀನ ಕವಿ-ಕವಯಿತ್ರಿಯರೊಂದಿಗೆ ಸಂವಾದಗಳ ಮೂಲಕ ಕಾವ್ಯದ ಕುರಿತಾದ ಚರ್ಚೆ, ಪರಿಚಯಗಳನ್ನು ಸಾದರಪಡಿಸುವ ಆಶಯ ಇಟ್ಟುಕೊಂಡಿದ್ದೇವೆ.


ಆಸಕ್ತರ ಗಮನಕ್ಕೆ:

* 50 ಮಂದಿ ಹೊಸ ಪೀಳಿಗೆಯ ಬರಹಗಾರರಿಗೆ ಮೊದಲ ಆದ್ಯತೆ
* ಕಾವ್ಯಾಸಕ್ತ ಇತರರಿಗೂ ಸೀಮಿತ ಅವಕಾಶ
* ಸರಳ ಊಟ & ವಸತಿ ವ್ಯವಸ್ಥೆ ಕಲ್ಪಿಸಲಾಗುವುದು
* ಪ್ರವೇಶ ದರ ರೂ. 500/-
* ಜನವರಿ 10 ರೊಳಗೆ ನೊಂದಾಯಿಸಿಕೊಳ್ಳಬೇಕು.

ವಿವರಗಳಿಗೆ:


ಸತೀಶ್ 
Ph 9035611068 

E mail: info.kaajana@gmail.com

ಆಯೋಜನೆ: ಕಾಜಾಣ ಬಳಗ

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು