ತಾಳ ತಪ್ಪಿದ ನನ್ನೆದೆಯ ಘಜಲ್...!

ತಾಳ ತಪ್ಪಿದ
ನನ್ನೆದೆಯ ಘಜಲ್...!

ನನ್ನೆದೆಯ ಘಜಲ್
ಒಂದು ಅರ್ಥವಿರುತಿತ್ತು
ಅವಳ ಅಂದದ ಗೆಜ್ಜೆಗಳು
ಮೈದುಂಬಿ ಚೆಂದದಿ ಕುಣಿದಿದ್ದರೆ ಮಾತ್ರ

ಆದರೆ,
ಬರೆದಿಟ್ಟ ಸಾವಿರ ಸಾಲುಗಳಿಗೆ
ಸಾಹುಕಾರಳಾಗಲೊಲ್ಲದೆ
ಎಸಳಾಗಿ ನೆಲೆ ನಿಂತ
ಹುಸಿ-ಹಸಿರ ಮೇಲಿನ ಮಂಜಿನಂತೆ
ಪದೇ-ಪದೇ ಕರಗಿ ನೀರಾಗುತ್ತಾಳವಳು!

ನೀರಾಗಿ ಹರಿವ ಮಂಜಿನ ಸೋನೆ
ನಯನದೂರ ಕನಸುಗಳಿಗೆ ಸೋಂಕು ತಗುಲಿಸಿ
ಕೋಥ ಹೊಡೆಯುತ್ತದೆ!

ಕ್ಷಿತಿಜದೆಡೆಗೆ ತಲುಪಿ
ಮುಗಿಲಿಗೆ ಮುತ್ತಿಕ್ಕ ಬಯಸುವ
ದಿಗಂತ ಕನಸುಗಳು
ಅವಳಿರದ ನೋವು ಕಂಡು
ಕ್ಷಾಮಕ್ಕೊಳಗಾದ ಎದೆಗೆ
ನೋವಿನ ನಿದ್ದೆಯ ಹಾದಿ ತೋರಿಸುತ್ತವೆ.

ಭಾವಗಳ ಬೆಸುಗೆಯಲಿ ಹಾಡಾಗಬೇಕಿದ್ದ  
ನನ್ನೆದೆಯ ಘಜಲ್ ತಾಳತಪ್ಪಿ
ಅರ್ಥವಿಲ್ಲದ ಬರಿಯ ಖಂಡ ಕಾವ್ಯವಾಗುತ್ತದೆ

-ಚೇತನ್ ಸೊಲಗಿ, ಮುಂಡರಗಿ

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು