" ಕೇಡುಗಾಲಕ್ಕೆ ಕುದುರೆ ಮೊಟ್ಟೆಯಿಟ್ಟಿತಂತೆ!" ಹಾಗಂತ ಅನ್ನಿಸಿದ್ದು "ಕನ್ನಡ"ದ ಹಡಾಲೆದ್ದು ಹೋದ "ಪ್ರಭೆ"ಯೊಂದರ, ಅಮಾಯಕರನ್ನು ಪತ್ರಿಕೋದ್ಯಮದ ಹೆಸರಿನಲ್ಲಿ ಹೆದರಿಸಿ ದೋಚಿ ಸಂಪಾದಿಸುವ ದಗಲ್ಬಾಜಿ "ಸಂಪಾದಕ"ನ ಸಾಮಾಜಿಕ ತಾಣಗಳಲ್ಲಿನ ಚಿಲ್ಲರೆ ಶೋಕಿಯನ್ನ ನೋಡುವಾಗ ನಗು ಒತ್ತರಿಸಿಕೊಂಡು ಬರುತ್ತಿದೆ. "ನೋಡಿ ನನ್ನ ರಿವಾಲ್ವರ್!" ಎಂದು ದೀಪಾವಳಿ ಪಿಸ್ತೂಲಿನಂತದೊಂದರ ಫೋಟೋ ಹಾಕಿಕೊಂಡು "ಹೆಂಗೆ" ಅನ್ನುವಂತೆ ಹಣಮಂತನ ಮೂತಿ ಮಾಡಿಕೊಂಡು ನಿಂತ ಇವರು ತನ್ನಲ್ಲಿ "ಬಾಣ" ಇಲ್ಲದಿದ್ದರೂ "ಬಿಲ್ವಿದ್ಯೆ"ಯಲ್ಲಿ ಅತಿ ನಿಪುಣರು! ಈ ಕಾರಣಕ್ಕಾಗಿಯೆ ದಿಗ್ವಿ"ವಿಜಯ"ಯಾತ್ರೆಯನ್ನ ಕರ್ನಾಟಕದಾದ್ಯಂತ ನಡೆಸುತ್ತಿದ್ದ ನಂಬರ್ ಒನ್ ಪತ್ರಿಕೆಯಿಂದ "ಹಚ್ಯಾ" ಅಂತ ಉಗಿದಟ್ಟಿಸಿ ಕೊಂಡಿದ್ದರು. ಇದಕ್ಕೆ ಪೂರಕವಾಗಿ ಅಲ್ಲಿಯೂ "ಸಂಪಾದಕ"(?)ರಾಗಿದ್ದ ಸನ್ಮಾನ್ಯರು ಲಿಂಬೆಹುಳಿಯಂತಹ "ಬೆಡ್ ಮೇಟ್"ನ ಜೊತೆ ಒಟ್ಟೊಟ್ಟಿಗೆ ರಾಜಧಾನಿಯಲ್ಲಿ "ರಾತ್ರಿ ಕಾರ್ಯಾಚರಣೆ"ಗೆ ಇಳೀದಿದ್ದೂ ಅಶ್ಯವಾಗಿ ಸುದ್ದಿಯಾದ್ದರಿಂದ "ಇಂಡಿಯಾ"ದ ದೊಡ್ಡ ಪತ್ರಿಕಾ ಸಮೂಹದವರು ಈ ಚೋರಗುರುವನ್ನ ಇವರ ಇನ್ನೆಲ್ಲ ಚಾಂಡಾಳ ಶಿಷ್ಯಂಡಿರೊಂದಿಗೆ ಸಕಲ ಗೌರವಾದಾರಗಳೊಂದಿಗೆ ಚಾಪೆ ಚೊಂಬು ಕೊಟ್ಟು ಬೀಳ್ಕೊಟ್ಟಿತ್ತು.
ಆದರೆ "ಹುಟ್ಟು ಗುಣ ಸುಟ್ಟರೂ ಹೋಗದು" ಎಂಬಂತೆ ಅಂತರ್ಜಾಲ ತಾಣಗಳಲ್ಲಿ ತಮ್ಮ ನಾಲಿಗೆ ತೀಟೆಯನ್ನ ಹಳೆಯ ಅನ್ನದಾತ ಸಂಸ್ಥೆಯ ಮೇಲೆ ವ್ಯಥಾ ವಿಷ ಕಾರುವ ಮೂಲಕ ತೀರಿಸಿಕೊಂಡಿದ್ದರು. ಆಗಲೆ ನಡುವಯಸ್ಸಿನವರಾಗಿದ್ದ ಇವರು "ಅಮೇರಿಕೆಗೆ ಹೋಗುತ್ತೀನಿ" ಅಂತಲೂ, "ಅಲ್ಲಿ ಅದೆನನ್ನೋ ಓದಿ ಗುಡ್ಡೆ ಹಾಕುತ್ತೀನಿ" ಬಹಿರಂಗವಾಗಿ ಊಳಿಟ್ಟರಾದರೂ ಇವರ ಅಸಲಿಯತ್ತನ್ನ ಬಲ್ಲ ಬಲ್ಲಿದರು "ಬಹುಶಃ ರಾತ್ರಿ 'ಕೇಳ್ರಪ್ಪೋ ಕೇಳಿ' ನಡೆಸುವಾಗ ಹೇಗೆ ಸಿಕ್ಕಿಬೀಳದೆ ಬಚಾವಾಗೋದು?" ತರದ ಯಾವುದೊ "ಅಲ್ಪ" ಅವಧಿಯ ಕೋರ್ಸನ್ನ ಅಲ್ಲಿ ಅವರು ಮಾಡಿ "ಪದವಿಧರ"ರಾಗಬಹುದು ಅಂದುಕೊಂಡು ತುಟಿ ಅಂಚಿನಲ್ಲಿಯೆ ವ್ಯಂಗ್ಯದ ನಗೆ ನಕ್ಕು ಸುಮ್ಮನಾದರು.ಆದರೆ ಅಮೇರಿಕೆಯಿರಲಿ ಪಕ್ಕದ ಅಮ್ಮಸಂದ್ರಕ್ಕೂ ವಲಸೆ ಹೋಗದ ಇಲ್ಲದ "ಬಾಣ ಭಟ್ಟ"ರು ಕರುನಾಡ ಕಂಡಕಂಡ ಪತ್ರಿಕಾ ಸಮೂಹಗಳ ಬಾಗಿಲು ತಟ್ಟಿದರೂ ೈವರ "ಸಂಪಾದಕ" ನೈಪುಣ್ಯದ ಅರಿವಿದ್ದ ಎಲ್ಲರೂ ರಾಗವಾಗಿ "ಮುಂದೋಗಪ್ಪಾ....!" ಅಂತ ಸಾಗ ಹಾಕಿ ತೊಲಗಿತು ಶನಿ ಅಂತ ನಿಟ್ಟುಸಿರು ಬಿಟ್ಟರು.
ಆದರೆ "ಕನ್ನಡ" ಪತ್ರಿಕೋದ್ಯಮದಲ್ಲಿ ತನ್ನ "ಪ್ರಭಾ"ವವನ್ನ ದಟ್ಟವಾಗಿ ಬೀರಲೆ ಬೇಕೆಂದು ಪಣ ತೊಟ್ಟಿದ್ದ ಈ ತೊಟ್ಟಿ ಗ್ಯಾಂಗ್ ಗಣಿ ಕಳ್ಳ ರೆಡ್ಡಿಯಿಟ್ಟ ಸ"ಗಣಿ" ತಿಂದು ತನ್ನ ಪತ್ರಿಕೆಯನ್ನ ಬಿಕರಿಗಿಟ್ಟು ಆಗಷ್ಟೆ ಹೊಸ ಗಿರಾಕಿಯನ್ನ ಹುಡುಕಿಕೊಂಡಿದ್ದ ಮನೋಜ ಮಾರ್ವಾಡಿಯೊಬ್ಬನಿಗೆ ಒಂದು ಕೋಟಿಯ ಕಕ್ಕ ತಿನ್ನಿಸಿ ಅಲ್ಲಿಗೆ ಪುನಃ "ಮೈತುಂಬ"(?!) ಸಂಪಾದಿಸಲು ತನ್ನ ಶನಿ ಶಿಷ್ಯಂದಿರೊಂದಿಗೆ ಅಮರಿಕೊಂಡು ಬಿಟ್ಟರು. ಅಲ್ಲಿಯವರೆಗೂ ಕೇಳಿದವರಿಗಿರಲಿ ಕೇಳದವರಿಗೂ ಕರೆಕರೆದು ಕರಕರೆಯಾಗುವ ಹಾಗೆ ಅಮೇರಿಕೆಯ ಕಥೆ ಹೇಳುತ್ತಿದ್ದ ಅಮ್ಮಸಂದ್ರದ ಈ ಅರ್ಜೆಂಟ್ ಗಿರಾಕಿ ಅಲ್ಲಿಗೆ ಬಂದದ್ದೆ ತಡ ಅಲ್ಲಿವರೆಗೂ ಆ ಪತ್ರಿಕೆಗೊಂದು ಕಳೆತಂದು ಕೊಟ್ಟಿದ್ದ ಉತ್ಸಾಹಿ ಸಂಪಾದಕರು "ಶಿವಾ" ಅಂತ ಇವನೊಂದಿಗೆ ಏಗಲಾರೆ ಅಂತ ಇವನ ಮುಖಕ್ಕೆ ರಾಜಿನಾಮೆ ರಾಚಿ ಧೀಮಂತಿಕೆಯಿಂದ ಎದ್ದು ಹೊರ ಬಂದರು. ಹೀಗೆ ಮೊದಲ ದಿನವೆ ಕ್ಯಾಕರಿಸಿ ಉಗಿಸಿ ಕೊಂಡರೂ ಅಭ್ಯಾಸ ಬಲದಿಂದ ಅದನ್ನ ಒರೆಸಿಕೊಂಡ ಈ "ಜಾಣ ಭಟ್ಟ"ರು ಮತ್ತೆ ಮೊದಲಿನ ಜೋಷಿನಿಂದಲೆ "ಎನೇನೆಲ್ಲ ಮಾಡ್ತೀವಿ ನೋಡ್ತಿರಿ!" ಅಂತ ಅಕ್ರಮ "ಸಂಪಾದನೆ"ಯ ಎರಡನೆ ಸುತ್ತಿನ ಕಾರ್ಯಾಚರಣೆಗೆ ಇಳಿದರು.
ಈ ಸಾರಿ "ಇಪ್ಪತ್ನಾಲ್ಕು ಕ್ಯಾರೆಟ್" ರೋಲ್ಡ್'ಗೋಲ್ಡ್ ವಾರ್ತಾವಾಹಿನಿಯೊಂದು ಇವರ ಹಿಡಿತಕ್ಕೆ ಬಂದಿದ್ದರಿಂದ "ನಿತ್ಯ" "ಋಷಿ" ಮೂಲ ಹುಡುಕಿ ತಮ್ಮ ಅಕ್ರಮ ಗಳಿಕೆಯನ್ನ ಈ ಥರ್ಡ್'ರೇಟ್ ಸಂಪಾದಕ ದಿನ ದಿನಕ್ಕೂ ವೃದ್ಧಿಸಿಕೊಳ್ಳ ತೊಡಗಿದ. ತನ್ನ "ನೂರೆಂಟು ಗೂಟ"ಗಳನ್ನ ಹಲುಬಲು ಪತ್ರಿಕೆ, ಈ ಗೂಟದ ಸುಖದ ವ್ಯವಸ್ಥೆಗೆ ಛಾನಲ್! ಅಂದಿನಿಂದ "ಬಾಣ" ಬಿಟ್ಟಲ್ಲೆಲ್ಲ ಭಟ್ಟನ ಲಾಭದ ಒಸರು ಉಕ್ಕುಕ್ಕಿ ಹರಿಯುತ್ತಿದೆ. ಈ ನಡುವೆ "ದುಬಾರಿ ಕಾರು ಕೊಂಡೆ" ಅಂತ ಬೀಗಿದ ಇವ ವಾಸ್ತವವಾಗಿ ಅದನ್ನ ಕೋಟಾ ಜ್ಯೋತಿಷಿಯೊಬ್ಬನಿಂದ ನಯಾಪೈಸೆಯ ಖರ್ಚಿಲ್ಲದೆ ಕಿತ್ತು"ಕೊಂಡಿದ್ದ" ಅನ್ನೋದು ಎಲ್ಲರಿಗೂ ಗೊತ್ತಿತ್ತು. ತನ್ನ ಹೀನಚಾಳಿಗಳನ್ನ ಎಲ್ಲರಂತೆ ತಾವೂ ಹೇಳಿಕೊಂಡು ಕ್ಯಾಕರಿಸಿದರು ಎನ್ನುವ ಏಕೈಕ ಕಾರಣಕ್ಕಾಗಿ ಇನ್ನೊಂದು "ಪಟ್ಟಣ"ದಲ್ಲಿ ಶೆಟ್ಟರಾಗಿದ್ದ ತನ್ನ ವಿದ್ಯಾಗುರುಗಳನ್ನ ವ್ಯಥಾ ತನ್ನ "ನೂರೆಂಟು ಗೂಟ"ದಲ್ಲಿ ಅನ್ಗತ್ಯವಾಗಿ ಹೀನಾಯ ತಿವಿದು ನನ್ನ ಸುದ್ದಿಗೆ ಬಂದವರಿಗೆ ಇದೇ ಗತಿ ಎನ್ನುವ ಬಹಿರಂಗ ಬೆದರಿಕೆಯೊಡ್ಡಿದ. ಇಂತಹ ಪೊಳ್ಳೂ ಬೆದರಿಕೆಗಳಿಗೆ ನಯಾಪೈಸದ ಬೆಲೆ ಕೊಡದ ಪ್ರಜ್ಞಾವಂತರು "ಅದೇನು ಕಿತ್ಕೋಳ್ತೀಯೋ ಕಿತ್ಕೋ ಹೋಗೋಲೇಯ್" ಅಂತ ಇವನ ಊಳನ್ನ ಎಡಗಾಲಲ್ಲಿ ಒದ್ದರು.
ಹಿಂಗಿರೊ ಈ ಕಮಂಗಿ ಮೊನ್ನೆಮೊನ್ನೆ "ಜ್ಞಾನಜ್ಯೋತಿ" ಸಭಾಂಗಣದಲ್ಲಿ ಬಸ್ಸುಗಟ್ಟಲೆ ಮಂದಿಯನ್ನ ವಿಶ್ವವಿದ್ಯಾಲಯದ ಹಾಸ್ಟೆಲ್'ಗಳಿಂದ ತುಂಬಿಕೊಂಡು ಬಂದ ಪಾರ್ಟ್'ಟೈಮ್ ರಾಜಕಾರಣಿ ಹಾಗೂ ಫುಲ್'ಟೈಮ್ ವಿಶ್ವವಿದ್ಯಾಲಯದ ಅಧಿಕಾರಿ ಚುನಾವಣೆಯಲ್ಲಿ ಡೆಪಾಜಿಟ್ ಜಪ್ತಾಗಿದ್ದ "ಮೈಲಾರಿ"ಯ ಜೊತೆ ಸೇರಿ ಮಾಡಿದ ಗಾಂಧಿ ಕುರಿತ ಕಾರ್ಯಕ್ರಮದ ಬಹಿರಂಗ ಶ್ರಾದ್ಧದ ಪ್ರತ್ಯಕ್ಷದರ್ಶಿಗಳಾಗಿದ್ದ ಹಿರಿಯ ಗಾಂಧಿವಾದಿಗಳೊಬ್ಬರು "ಗಾಂಧಿ ಕಾರ್ಯಕ್ರಮದ ವೇದಿಕೆಯಲ್ಲಿ ಈ ಗೂಂಡಾಗಳಿಗೇನು ಕೆಲಸ?" ಅಂತ ವಿಷಾದದಿಂದ ಲೊಚಗುಟ್ಟಿದರು.
ಅಲ್ಲಿನ ವೇದಿಕೆಯಲ್ಲಿ "ನಾನು ಹದಿನೈದು ವರ್ಷದ ಹಿಂದೆ ಇಂಗ್ಲೆಂಡಿಗೆ ಹೋಗಿದ್ದಾಗ ಕನ್ನಡದಲ್ಲಿ ಈ ಮೈಲ್ ಹೊಂದಿದ ಮೊದಲ ಪತರಕರ್ತ ನಾನೆ!" ಅಂತ ತನ್ನ ಎಂದಿನ ಸ್ವಕುಚ ಮರ್ದನದ ಶೈಲಿಯಲ್ಲಿ ಈ ಕಪಿ ಆತ್ಮರತಿಗಿಳಿದಿದ್ದರೆ, ಮೈಲಾರಿಯ ಹಿಂ'ಬಾಲಕ"ರು ತಮ್ಮ ಕೊರಮ ಗುರುವಿನ ಹೆಸರು ಮೈಕಿನಲ್ಲಿ ಮೊಳಗಿದಾಗಲೆಲ್ಲ ಕೂಗಿ-ಕಿರುಚಿ, ಸಿಳ್ಳೆ ಹೊಡೆದು ಯಶಸ್ವಿಯಾಗಿ ಕಾರ್ಯಕ್ರಮದ ಆಶಯವನ್ನ ಹಳ್ಳ ಹಿಡಿಸಿಯೆಬಿಟ್ಟರು. ನಿಜವಾಗಿಯೂ ಕಾರ್ಯಕ್ರಮದ ಕುರಿತ ಆಸಕ್ತಿ ಹೊತ್ತು ಹೋದವರಿಗೆ ಅಂದು ಗತಿಯಾದದ್ದು ಕೇವಲ ನಿಟ್ಟುಸಿರು!. ಹಾಗೆ ನೋಡಿದರೆ ತನ್ನ ಪೂರ್ವಾಶ್ರಮದ ಪತ್ರಿಕೆಯಲ್ಲಿ "ಮೈಲಾರಿ"ಯ ಮಗ್ಗುಲು ಮುರಿಯುತ್ತಿದ್ದ ಈ ಬಾಣಭಟ್ಟ ಈಗ ಅದೆ ಮೈಲಾರಿಯನ್ನ ಅಪ್ಪಿ ಮುದ್ದಾಡುವಲ್ಲಿ ಕೈ ಬದಲಾಗಿರುವ ಮೈಲಿಗೆಯಾಗಿರುವ ಹಡಬೆ ಕಾಂಚಣದ ಝಣಝಣದ ಹಿರಿದಾದ ಪಾತ್ರ ಇರೋದು ಬಹಿರಂಗ ಗುಟ್ಟು. ಅದೆ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳೆ ಹಾಜರಿದ್ದರೂ ಕುಲ ಸಚಿವರಿಗೆ ಮೊದಲ ಮಣೆ ಹಾಕಿದ ಅಪಸವ್ಯಗಳನ್ನೂ ಭಟ್ಟಂಗಿ ಬಾಣಭಟ್ಟ ನಡೆಸಿ ಧನ್ಯನಾದ. ಎಷ್ಟೆಂದರೂ ಬಾಚಿ ತಿಂದ ಕೊಳಕು ಕಾಸಿನ ಋಣ!.
ಇವೆಲ್ಲವನ್ನೂ ಕಡೆಪಕ್ಷ ಇಷ್ಟು ದಿನ ತೆರೆಮರೆಯಲ್ಲಿ ಮಾಡಿ ಸಿಗ ಬೀಳುತ್ತಿದ್ದ ಈ "ಸಂಪಾದಕ" ಕೈಪಾರ್ಟಿಯ 'ವಿಗ್'ನೇಶ್ವರ ವಿದೇಶಾಂಗ ಖಾತೆಯಿಂದ ಮರಳಿ ಮಂಡ್ಯದ ಮಣ್ಣಿಗೆ ಮೊನ್ನೆಮೊನ್ನೆಯಷ್ಟೆ ಬಂದಾಗ "ಇನ್ನು ನನ್ನ ಪುಕ್ಸಟ್ಟೆ ವಿಮಾನದಲ್ಲಿ ಫಾರಿನ್ ಸುತ್ಸವ್ರ್ ಯಾರು?" ಅಂತ ಬಹಿರಂಗವಾಗಿ ರೋಧಿಸಿ ಎಲ್ಲರ ನಗೆಪಾಟಲಿಗೆ ಈಡಾದ. ಈ ಹಿಂದೆ "ಫಾರಿನ್ ಕೃಷ್ಣ" ಮಾಡಿಸಿದ್ದ ಬಿಟ್ಟಿ ಟ್ರಿಪ್ಪಿಗೆ ಮುಂದಿನ ದಿನಗಳಲ್ಲಿ "ಪ್ರ್ಭಭಾ"ವಶಾಲಿ ಭೋಪರಾಕನ್ನ ಕನ್ನಡದ ಕಣ್ಮಣಿಗಳು ಇನ್ನು ಮುಂದೆ ನಿರೀಕ್ಷಿಸಬಹುದು. ಜೊತೆಗೆ ಇಲ್ಲದ ಬಾಣದ ಜಾಗದಲ್ಲಿ ಹೊಸತಾಗಿ ಕೊಂಡುಕೊಂಡ "ದೀಪಾವಳಿ ಪಿಸ್ತೂಲು" ಬೇರೆ! ಈ ಖದೀಮರನ್ನ ಕ್ಯಾಕರಿಸಿ ದೂರವಿರಿಸಲು ಕನ್ನಡಿಗರಿಗೆ ಹೊಸತೊಂದು ಕಾರಣ ಸಿಕ್ಕಂತಾಯಿತು.
Comments
Post a Comment