ಖಾಲಿ ಕಂಗಳಲ್ಲಿ ಕಂಬನಿಯ ಕೊನೆ ಹನಿ ಇನ್ನೂ ಇದೆ
ಎದೆಯಾಳದಲ್ಲಿ ನೋವಿನ ಕಡೇ ಹನಿ ಉಳಿದಿರುವ ತನಕ....
ಮನದೊಳಗೆ ನಿರೀಕ್ಷೆ ಜೀವಂತ,
ಕಿರಣ ತಬ್ಬಿದ ನೆಲದ ಬತ್ತಲೆ ಮ
ನಸುಕಿನಲ್ಲೂ ನವಿರಾಗಿ ಬೆವರಿದಾಗ....
ನನ್ನೊಳಗೆ ಹುಟ್ಟಿದ ಹೊಸ ಕನಸೆ ನೀನು/
ನಿನ್ನ ಕನಸುಗಳು ಸೆರೆಯಾದ ನನ್ನ ಕಣ್ಣುಗಳಲ್ಲಿ
ಸಿರಿ ತುಂಬಿ ತುಳುಕಿತು...
ನಿನ್ನೊಲವಿನ ಜಹಗೀರಿನಲ್ಲಿ ನೆಲೆಯಾದ ನನ್ನ ಮನ
ದೋಚಲಾರದಷ್ಟು ದೊಡ್ಡ ಖಜಾನೆಯಾಯಿತು,
ಮುಂಬೆಳಗಿನ ಬೀಸೊ ಗಾಳಿ ಇಷ್ಟು ತಂಪೆನಿಸೋಕೆ...
.ಅದರಲ್ಲಿ ತೇಲಿ ಬರುತ್ತಿರೊ ನಿನ್ನ ನೆನಪೂ ಕಾರಣ//
ಹಿಮದ ಹಲಗೆಯ ಮೇಲೆ ನಿನ್ನ ಹೆಸರನ್ನ ಪ್ರಾರ್ಥನೆ ಅಂತ ಬರೆದೆ
ಕಲ್ಲಿನ ಎದೆಯ ಮೇಲೆ ನಿನ್ನ ಉಸಿರನ್ನ ವರ ಅಂತ ಕೊರೆದೆ...
ತಪ್ಪಿಲ್ಲವಲ್ಲ ಇದರಲ್ಲಿ?,
ಸಂಜೆ ನೀನೆ
ಮರಳಿ ಬರುವ ಮುಂಜಾನೆಯೂ....
ಮನಸ ಅಂಚಿನಲ್ಲಿ ಹಾಕಿದ ಚಂದದ ಚಿತ್ತಾರವೂ ನೀನೇನೆ/
ಬರುವ ಕ್ಷಣಗಳೆಲ್ಲ ಹೋಗಲೇ ಬೇಕಿದೆ
ಮನದೊಳಗೆ ಅರಳುವ ಕನಸಿನ ಸುಮಗಳೂ.....
ಎಂದಾದರೊಮ್ಮೆ ಮುದುಡಲೇ ಬೇಕಿದೆ,
ನನ್ನೆದೆಯ ಪೊಟರೆಯಲ್ಲಿ ಹಾಡುವ ಕೋಗಿಲೆಯ ಗುಂಜನವನ್ನ
ಹಾಗೆ ಕಾಯ್ದಿರಿಸಿದ್ದೇನೆ....
ಕೇಳುವ ನಿನ್ನ ಕಿವಿಯ ನಿರೀಕ್ಷೆಯಷ್ಟೆ ಇನ್ನಿರೋದು//
ಗೋಳ ಭೂಮಿಯಾಚೆ ನೀನಿದ್ದರೂ
ನಿನ್ನ ನೆನಪಿನ ತಲ್ಲಣದ ಕಂಪನ ನಿತ್ಯ ನನ್ನೆದೆಯಲ್ಲಿ ಏಳಿಸುತ್ತಿದ್ದೀಯ....
ಗಾಬರಿ ಇಲ್ಲ ಭೂಮಿ ಕಂಪಿಸಿದರೆ
ಪಾಪ ಅದಕ್ಕೂ ಅದ್ಯಾರದೋ ಕನಸಿನ ಕನವರಿಕೆ ಆವರಿಸಿದ್ದಿರಬಹುದು,
ನಾನೇನು ಬಯಸಿರಲಿಲ್ಲ
ನೀನೆ ಇಷ್ಟಪಟ್ಟು ಕೂಡಿಸಿದ್ದು ನಮ್ಮಿಬ್ಬರ ಜೀವದ ನಡುವೆ ಬಂಧದ ಕೊಂಡಿ....
ನೀನೇನೆ ಈಗ ಎಲ್ಲಾ ಅಲಿಖಿತ ಒಪ್ಪಂದಗಳನ್ನ
ಏಕಪಕ್ಷೀಯವಾಗಿ ಮುರಿದು ಹಾದಿ ಬದಲಿಸಿಕೊಂಡೆ ನಿನ್ನ ಬಾಳಿನ ಬಂಡಿ....
ಉಳಿದದ್ದು ನನ್ನ ಪಾಲಿಗೆ ನೆನಪಿನ ನೋವು ಮಾತ್ರ....ಇದನ್ನೂ ನಾನು ಬಯಸಿರಲಿಲ್ಲ!/
ನಾನು ಬಯಸಿದ್ದ ಜೀವದ್ದು ಇಷ್ಟೊಂದು ಕಲ್ಲು ಮನಸ?
ನನ್ನನ್ನದು ಆವರಿಸಿ ಒಂದೊಮ್ಮೆ ಮುದಗೊಳಿಸಿದ್ದು ಕೇವಲ ಕನಸ?
ಪಡುವಣಕ್ಕೂ ರಂಗು ರಂಗಾಗುವ ಹಕ್ಕಿದೆ......
ಅದರ ಒಳ ಮನಸಲ್ಲಿ
ಸಂಜೆಯಲ್ಲಾದರೂ ಸರಿ ರವಿ ತನ್ನನ್ನೂ ಅಪ್ಪುತ್ತಾನೆ ಅನ್ನುವ ಸೊಕ್ಕಿದೆ,
ನಸು ಇರುಳ ಮಬ್ಬು ಬೆಳಕಿನಲ್ಲಿ ನಿನ್ನ ಬಿಂಬ ಕಂಡಂತಾದ ನನ್ನ ಕನಸು......
ಎಂದಾದರೊಮ್ಮೆ ಕನಿಷ್ಠ ಕನಸಲ್ಲಾದರೂ(?) ನನಸಾದೀತ ನೀನೆ ಹೇಳು?//
ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Subscribe to:
Post Comments (Atom)
“ಇಗೋ, ಬೆಂಗಳೂರು ಹೀಗಿತ್ತು”ಜಿ. ವೆಂಕಟಸುಬ್ಬಯ್ಯ -
“ ಇಗೋ , ಬೆಂಗಳೂರು ಹೀಗಿತ್ತು ” ಜಿ . ವೆಂಕಟಸುಬ್ಬಯ್ಯ ಅರವತ್ತು ವರ್ಷಗಳ ಹಿಂದೆ ಬೆಂಗಳೂರು ಇಷ್ಟು ದೊಡ್ಡದಾಗಿರಲಿಲ್ಲ . ಆಗ ಎರಡು ಬೆಂಗಳೂರು ಇತ್ತು ...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು ಸ್ವಾಮೀ ನನ್ನಯ್ಯ ರಥವೇರಿ ಬರುವಾಗ ನಾವೆದ್ದು ಕೈಯ್ಯ ಮುಗುದೇವು ಮಕ್ಕಳಾಟವು ಚಂದ ಮತ್ತೆ ಯೌವನ ಚಂದ ಮುಪ್ಪಿನಲಿ ಚಂದ ನರೆಗಡ...
-
Krupe : http://azsmarane.blogspot.in/2012/01/blog-post_21.html ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾ...
No comments:
Post a Comment