ಪ್ರೀತಿಯ ಗೆಳತಿ,,,,,,,,, ನನಗೆ ಗೊತ್ತು ಕಣೆ ನಿನಗೆ ಈ ದಿನ ನಾನು ಕೆಂಪು ಗುಲಾಬಿ ಕೊಟ್ಟರೆ ತುಂಬಾ ಸಂತೋಷವಾಗುವುದು ಎಂದು. ಆದರೇ ಏನು ಮಾಡಲಿ, ನನ್ನ ಕುಟುಂಬದ ಬಗ್ಗೆ ಗೊತ್ತಲ್ಲ ನಿಜವಾಗಿ ನನ್ನ ಅಪ್ಪ ತುಂಬಾ ಲಿಬರಲ್ ಜಾತ್ಯಾತೀತ, ಆದರೇ ಅನಿವಾರ್ಯವಾಗಿ ಕಟ್ಟಾ ಹಿಂದುತ್ವವನ್ನು ಪ್ರದಶಿ౯ಸುತ್ತಿರುವರು. ಅದರಿಂದಾಗಿಯೇ ಇಂದು ನಮ್ಮ ಅಪ್ಪ ರಾಜಕೀಯದಲ್ಲಿ ಜಿಲ್ಲೆಯಲ್ಲಿ ಹೆಸರು ಪಡೆದಿರುವರು. ನನಗೂ ಹಿಂದುತ್ವದ ಹೆಸರಿನಲ್ಲಿ ಭಾವನೆಗಳನ್ನು ಅದುಮಿಕೊಳ್ಳಲು ಇಷ್ಟವಿಲ್ಲ ಗೆಳತಿ, ಆದರೂ ಅಪ್ಪನ ಪ್ರೆಸ್ಟಿಜ್, ರಾಜಕೀಯ ಭವಿಷ್ಯ ಎಲ್ಲವೂ ಇದರ ಜೊತೆ ಸೇರಿಕೊಂಡಿದೆ. ಅಕಸ್ಮಾತ ಆಗಿ ನಾನು ಪ್ರೇಮಿಗಳ ದಿನಾಚರಣೆಯಲ್ಲಿ ಭಾಗವಹಿಸಿ ನಿನೊಂದಿಗೆ ಕಾಲಕಳೆದರೆ ಖಂಡಿತಾ ನಮ್ಮ ಅಪ್ಪನಿಗೆ ಮುಂದಿನ ಬಾರಿ ಚುನಾವಣೆಗೆ ಟಿಕೇಟ್ ಸಿಗದು, ಉಳಿದ ಪಕ್ಷದವರಿಗೆ ನಾನೇ ಒಂದು ವಿಷಯವಾಗಿ ಬಿಡುವೆನು. ದಯವಿಟ್ಟು ಕ್ಷಮಿಸು ಗೆಳತಿ. ಜನವರಿ 1 ಹೊಸ ವರ್ಷಕ್ಕೂ ನಾನು ಬರಲಿಲ್ಲ. ಹೊಸವರ್ಷ ಆಚರಣೆಯಂದು ನಾನು ಮನೆಯಲ್ಲಿಯೇ ಇದ್ದೇ ಬರುವ ಮನಸ್ಸಿದರೂ ಆ ದಿನವೂ ಇದೇ ಸ್ಥಿತಿ. ಏನು ಮಾಡಲಿ ಒಂದಡೇ ಸಮಾಜ, ಮನೆ, ಅಪ್ಪ, ಅಮ್ಮ ಇನ್ನೊಂದಡೆ ನೀನು ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ? ನಾನು ತುಂಬಾ ದ್ವಂದದಲ್ಲಿ ಇರುವೆನು. ಆದರೇ ಒಂದಂತು ಸತ್ಯ ಗೆಳತಿ ಬರುವ ಯುಗಾದಿಯಂದು ನಾನು ನಿನ ಜೊತೆ ಖಂಡಿತಾ ಕಾಲ ಕಳೆಯುವೆನು. ಆ ದಿನ ನಮ್ಮ ಹಿಂದುಗ...