Saturday, May 21, 2011

ಒಳ್ಳೇ ನಾರಿ ಕಂಡೆ

.ಒಳ್ಳೇ ನಾರಿ ಕಂಡೆ
ಒಳ್ಳೇ ನಾರಿ ಕಂಡೆ - ಈಗಲೆ
ಒಳ್ಳೇ ನಾರಿ ಕಂಡೆ,
ಇಳೆಯ ತಳದಿ ತಪದೊಳು ನಿಂತು
ಕಳೆಯ ಋಷಿಗಳ ಮರಳು ಮಾಡುವ



ಕೈಯು ಕಾಲು - ಉಸುರು
ಮೈಯಿ ಮೊದಲೆ ಇಲ್ಲ;
ಚೆಲ್ಲುತ ಪರಮಾನಂದ ಎದಿಯೊಳು
ಎಲ್ಲವ ಬಿಡಿಸಿ ಕರುಣದಿ ಕಾಯುವ

ಮುಟ್ಟಲು ಕೊಲ್ಲುವಳೋ - ಕಾಮನ
ಕಟ್ಟಿ ಆಳುತಿಹಳೊ ;
ಬಟ್ಟಕುಂಚಕ, ಬರೆದಿಟ್ಟ ಕುಪ್ಪಸಕ
ನಟ್ಟು ಮನಸು ನಡೆಗೆಟ್ಟು ನಿಂತಿತೋ.

ಮೀಸಲು ನಗೆಯುವಳು - ಶಿಶುನಾಳಾ
ಧೀಶಗೆ ಸೋತವಳು ;
ವಾಸಿಸಿ ಗುಡಿಪುರದಿ - ಗೋವಿಂದನ
ದಾಸರನ್ನು ತಾ ಸೆಳೆಯುತಲಿಹಳು.

No comments:

Post a Comment

ಸೋದರಿ ನಿವೇದಿತಾ

 ಪಾಶ್ಚಾತ್ಯರಿಗೆ ಶಂಕರಾಚಾರ್ಯರಂಥಹ ವ್ಯಕ್ತಿಯೊಬ್ಬರನ್ನು ಊಹಿಸಿಕೊಳ್ಳಲು ಕೂಡ ಕಷ್ಟ. ನಾವು, ಅಂದರೆ ಪಾಶ್ಚಾತ್ಯರು ಅಸ್ಸಿಸಿಯ ಫ್ರಾನ್ಸಿಸ್ಸನ ದೈವಭಕ್ತಿಯನ್ನು ಆಶ್ಚರ್ಯ ಸ...