ಕನ್ನಡ ಜನಪ್ರಿಯ ಒಗಟುಗಳು

೧. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-ಮಲ್ಲಿಗೆ
೨. ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ-ಆಕಾಶ, ನಕ್ಷತ್ರ
೩. ಸುಟ್ಟ ಹೆಣ ಮತ್ತೆ ಸುಡ್ತಾರೆ-ಇದ್ದಿಲು
೪. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ- ಹಲಸಿನ ಹಣ್ಣು , ಬೀಜ
೫. ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ- ಬಳೆ
೬. ಒಂದು ಹಪ್ಪಳ ಊರಿಗೆಲ್ಲ ಊಟ- ಚಂದ್ರ
೭. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ- ಹುಣಸೇಹಣ್ಣು
೮. ನೀಲಿ ಕೆರೆಯಲಿ ಬಿಳಿ ಮೀನು-ನಕ್ಷತ್ರ
೯. ಒಂದು ತೇಲುತ್ತೆ ,ಒಂದು ಮುಳುಗುತ್ತೆ, ಒಂದು ಕರಗುತ್ತೆ.-ವಾರ,ತಿಂಗಳು,ವರ್ಷ
೧೧. ಬಾ ಅಂದರೆ ಬರೋಲ್ಲ , ಹೋಗು ಅಂದರೆ ಹೋಗೋಲ್ಲ-ಮಳೆ
೧೧. ನಾ ಇರುವಾಗ ಬರುತ್ತೆ , ನಾ ಹೋದ ಮೇಲೂ ಇರುತ್ತೆ-ಕೀರ್ತಿ
೧೨. ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ-ಕಣ್ಣು
೧೩ ಅಕ್ಕನ ಮೇಲೆ ಛತ್ರಿ- ರೆಪ್ಪೆ
೧೪. ತಮ್ಮಂಗೆ ಮೂರು ಕಣ್ಣು ಅಮ್ಮಂಗೆ ಒಂದೇ ಕಣ್ಣು-ತೆಂಗಿನ ಕಾಯಿ
೧೫. ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ-ಕಣ್ಣು
೧೬.ಅಮ್ಮನ ಆಕಾಶವಾಣಿ ನಾನು-ಮಗು
೧೭. ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು-ಈರುಳ್ಳಿ
೧೮. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ- ಬಾಳೆಹಣ್ಣು
೧೯. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತ್ತೆ-ಕಣ್ಣು
೨೦. ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ, ಕುಡಿಕೆಯಲ್ಲಿ ಸಾಗರ-ತೆಂಗಿನ ಕಾಯಿ
೨೧. ನೀನಿಲ್ಲದೆ ಊಟವಿಲ್ಲ- ಉಪ್ಪು
೨೨. ಬಿಳಿ ಸರದಾರನಿಗೆ ಕರಿ ಟೋಪಿ-ಬೆಂಕಿಕಡ್ಡಿ
೨೩. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ - ಸೂಜಿ
೨೪. ಮೂರು ಕಾಸಿನ ಕುದುರೆಗೆ ಮುನ್ನೂರು ರೂಪಾಯಿನ ಹಗ್ಗ-ಹೇನು ಕೂದಲು
೨೫. ಕೆಂಪು ಕುದುರೆಗೆ ಲಗಾಮು, ಓಬ್ಬ ಹತ್ತುತ್ತಾನೆ , ಇನ್ನೊಬ್ಬ ಇಳಿತಾನೇ-ಬೆಂಕಿ,ಬಾಣಲೆ, ದೋಸೆ
೨೬ . ಒಂದು ಮನೆಗೆ ಒಂದೇ ತೊಲೆ-ತಲೆ
೨೭. ಕಂದ ಬಂದ ಕೊಂದ ತಂದ-ಶ್ರೀ ರಾಮ ಚಂದ್ರ
೨೮. ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ-ಭೂಪಟ
೨೯. ಚಿಕ್ಕಕ್ಕನಿಗೆ ಪುಕ್ಕುದ್ದ-ಸೌಟು
೩೦. ಎರಡು ಮನೆಗೆ ಒಂದೇ ದೂಲ-ಮೂಗು


Courtesy : ಕನ್ನಡ ಜನಪ್ರಿಯ ಒಗಟುಗಳು



Comments

  1. ಚಿನ್ನದ ಹಕ್ಕಿ ಬಾಲದಿಂದ ನೀರು ಕೊಡಿಯುತ್ತದೆ ans please

    ReplyDelete
  2. ಅಜ್ಜನ ದುಡ್ಡು ಎಣಿಸೋಕ್ಕೆ ಅಗಲ್ಲ. ಅಜ್ಜಿಯ ಸೀರೆ ಮಡಿಚೋಕ್ಕೆ ಅಗಲ್ಲ
    Ple answer

    ReplyDelete
  3. ಕಟ್ಟೆ ಇಲ್ಲದ ಕೆರೆಯಲ್ಲಿ ತಟ್ಟೆ ತೆಲಿಕೋಂಡು ಬಂತು

    ReplyDelete
  4. ಚಿನ್ನದ ಹಕ್ಕಿ ಬಾಲದಿಂದ ನೀರು ಕುಡಿಯುತ್ತದೆ ಈ ಒಗಟು ಬಿಡಿಸಿ

    ReplyDelete

Post a Comment

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು