Saturday, May 14, 2011

ಅಗ್ಗದ ಅರಿವಿ ತಂದು

ಅಗ್ಗದ ಅರಿವಿ ತಂದು
ಹಿಗ್ಗಿ ಹೊಲಿಸಿದೆ ಅಂಗಿ
ಹೆಗ್ಗಣ ಒಯ್ತವ್ವ ತಂಗಿ ಈ ಅಂಗಿ.

ಅಗಣಿತ ವಿಷಯದ
ಆರುಗೇಣೀನ ಕವಚ
ಬಗಲಿನ ಬೆವರನು ಕುಡಿದು
ಸಿಗದೆ ಹೋಯಿತವ್ವ ತಂಗಿ ಈ ಅಂಗಿ.

ಬುದ್ದಿಗೇಡಿಗಳಾಗಿ
ನಿದ್ದಿ ಕೆಡಿಸಿಕೊಂಡು
ಎದ್ದು ನೋಡಲು ಕರ್ಮದ
ಗುದ್ದಿನೊಳಡಗಿತ್ತವ್ವ ತಂಗಿ ಈ ಅಂಗಿ.

ಕಳೆದೆನೀಪರಿ ರಾತ್ರಿ
ಬೆಳಗಾಗೋ ಸಮಯದಿ
ಚೆಲುವ ಶಿಶುನಾಳಾಧೀಶನು
ಉಳುವಿ ಕೊಟ್ಯಾನವ್ವ ತಂಗಿ ಈ ಅಂಗಿ.

No comments:

Post a Comment

ನುಡಿಮುತ್ತು

 ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು