Friday, May 20, 2011

ಮೋಹದ ಹೆಂಡತಿ ಸತ್ತ ಬಳಿಕ

ಮೋಹದ ಹೆಂಡತಿ ಸತ್ತ ಬಳಿಕ
ಮಾವನ ಮನೆಯ ಹಂಗಿನ್ನ್ಯಾಕೋ ||ಪಲ್ಲ||
ಸಾವು ನೋವಿಗೆ ತರುವ ಬೀಗನ
ಮಾತಿನ ಹಂಗೊಂದೆನಗ್ಯಾಕೋ ||ಅನುಪಲ್ಲ||

ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವದು ಭಯವ್ಯಾಕೋ
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾಡುವದ್ಯಾಕೋ ||೧||

ತಂದೆ ಗುರುಗೋವಿಂದನ ಸೇವಕ
ಕುಂದಗೋಳಕೆ ಬಂದು ನಿಂತಾನ್ಯಾಕೋ
ಬಂಧುರ ಶಿಶುನಾಳಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನಗಳ್ಯಾಕೋ ||೨||

No comments:

Post a Comment

ಸೋದರಿ ನಿವೇದಿತಾ

 ಪಾಶ್ಚಾತ್ಯರಿಗೆ ಶಂಕರಾಚಾರ್ಯರಂಥಹ ವ್ಯಕ್ತಿಯೊಬ್ಬರನ್ನು ಊಹಿಸಿಕೊಳ್ಳಲು ಕೂಡ ಕಷ್ಟ. ನಾವು, ಅಂದರೆ ಪಾಶ್ಚಾತ್ಯರು ಅಸ್ಸಿಸಿಯ ಫ್ರಾನ್ಸಿಸ್ಸನ ದೈವಭಕ್ತಿಯನ್ನು ಆಶ್ಚರ್ಯ ಸ...