ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Wednesday, March 21, 2018
ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಗೆ ಪುಸ್ತಕ ಆಹ್ವಾನ
ಕುಂದಾಪುರ: ಮಣಿಪಾಲ ಅಕಾಡೆಮಿ
ಆಡಳಿತಾಧಿಕಾರಿಯಾದ ಡಾ.ಹೆಚ್. ಶಾಂತಾರಾಮ್ ಅವರ
ಹೆಸರಿನಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು
ದತ್ತಿನಿಧಿ ಸ್ಥಾಪಿಸಿ 2010 ರಿಂದ ಕನ್ನಡದ ಅತ್ಯುತ್ತಮ
ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ವರ್ಷ
ಕಾದಂಬರಿಯನ್ನು ಮಾತ್ರ ಪರಿಗಣಿಸಲಿದ್ದು, ಜನವರಿ
2016 ರಿಂದ ಡಿಸೆಂಬರ್ 2017ರ ನಡುವೆ (ಎರಡು ವರ್ಷಗಳ
ಅವಧಿಯಲ್ಲಿ) ಮೊದಲ ಆವೃತ್ತಿಯಾಗಿ ಪ್ರಕಟಗೊಂಡ
ಕೃತಿಗಳನ್ನು ಆಹ್ವಾನಿಸಲಾಗಿದೆ. ಕಾದಂಬರಿಗಳ ನಾಲ್ಕು
ಪ್ರತಿಗಳನ್ನು 30 ಎಪ್ರಿಲ್ 2018 ರೊಳಗೆ ಡಾ.ಹೆಚ್.
ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್
ಕಾಲೇಜು ಆವರಣ, ಕುಂದಾಪುರ 576201 ಈ ವಿಳಾಸಕ್ಕೆ
ಕಳುಹಿಸಿಕೊಡುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ
ದೂರವಾಣಿ ಸಂಖ್ಯೆ 08254 – 230369 ಇದನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ತಿಂಗಳಿನಲ್ಲಿ
ನಡೆಯಲ್ಲಿದ್ದು, ಹದಿನೈದು ಸಾವಿರ
ರೂಪಾಯಿಯೊಂದಿಗೆ ಬೆಳ್ಳಿ ಫಲಕ ನೀಡಲಾಗುವುದು
ಎಂದು ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ
ಪ್ರಕಟಣೆಯಲ್ಲಿ ತಿಳಿಸಲಾಗಿದೆ.
-ಪ್ರಕಟಣೆಯ ಕೃಪೆಗಾಗಿ-
ಈ ಪತ್ರಿಕಾ ಪ್ರಕಟಣೆಯನ್ನು ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ಪ್ರಕಟಿಸಬೇಕಾಗಿ ವಿನಂತಿ.
ಅಲ್ಲದೇ ತಮ್ಮ ಪ್ರತಿಷ್ಠಿತ ಪತ್ರಿಕೆಯಿಂದ ರಾಜ್ಯಾದ್ಯಂತ ಮಾಹಿತಿ
ದೊರೆತಂತಾಗುತ್ತದೆ ಎಂಬುದು ಕಳಕಳಿಯ ವಿನಂತಿ.
Thursday, March 8, 2018
ಮಹಿಳಾ ಸಮಾನತೆ ಎಂಬ ಉತ್ತಮ ಚಚಾ೯ ವಿಷಯ.
ಮಾರ್ಚ 8 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ನಮ್ಮ ದೇಶದಲ್ಲಿಯೂ ಆಚರಿಸಲಾಗುವುದು. ಈ ದಿನದಂದು ಮಹಿಳೆಯರ ಬಗ್ಗೆ ಅವರ ಸಾಧನೆ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುವುದು. ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಸನ್ಮಾನವನ್ನು ಮಾಡಲಾಗುವುದು. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮ ಹೆಚ್ಚಾಗುತ್ತಾ ಇರುವುದು.. ಸ್ವತಂತ್ರ ಭಾರತದ ನಂತರದ ಏಳ್ಗೆಯಲ್ಲಿ ಮಹಿಳೆಯರ ಕೊಡುಗೆ ಬಹು ಅತ್ಯಮೂಲ್ಯವಾದದ್ದು ಆಗಿರುವುದು.
ಆಳುವ ಸಕರ್ಾರಗಳು ಕಾಲ ಕಾಲಕ್ಕೆ ಹಲವಾರು ಯೋಜನೆಯನ್ನು ಜಾರಿಗೊಳಿಸಿ ಮಹಿಳೆಯರ ಸಬಲೀಕರಣಕ್ಕೆ ಪ್ರಯತ್ನವನ್ನು ಮಾಡಿರುವುದು. ಅದರ ಪರಿಣಾಮವೇ ಇಂದು ವಿವಿಧ ಕ್ಷೇತ್ರದಲ್ಲಿ ಎಲ್ಲಾ ಹಂತದಲ್ಲಿ ಮಹಿಳಾ ಉದ್ಯೋಗಿಗಳು ಸಿಗುವರು. ಇವೆಲ್ಲವು ಸಹಾ ಮಹಿಳಾ ಸಬಲೀಕರಣದ ಪ್ರಮುಖ ಮೈಲಿಗಲ್ಲೆಂದು ಗುರುತಿಸಬಹುದಾಗಿದೆ.
ಇಂದಿಗೂ ಮನೆಯಲ್ಲಿ ಅಡುಗೆ ಕಾರ್ಯ ಮಹಿಳೆಯರ ತಲೆ ಮೇಲೆ ಇರುವುದು. ಗಂಡ, ಅತ್ತೆ, ಮಾವ, ಮಕ್ಕಳು ಈ ಭಾವನಾತ್ಮಕ ಸಂಬಂಧದ ಸುಳಿಯಲ್ಲಿ ಸಿಕ್ಕಿ ಅದರಿಂದ ಹೊರಗು ಬರಲಾಗದೇ ತಮ್ಮಜೀವನದ ಅತಿ ಹೆಚ್ಚು ಸಮಯವನ್ನು ಅಡುಗೆ ಮನೆಯಲ್ಲಿ, ಮನೆಗೆಲಸದಲ್ಲಿ ಕಳೆಯುವವರ ಸಂಖ್ಯೆ ಕಡಿಮೆಯಾಗಿಲ್ಲ.
ಅಡುಗೆಯ ಜೊತೆಗೆ ಮನೆಯ ಎಲ್ಲರ ಬಟ್ಟೆಯನ್ನು ಸ್ವಚ್ಛಗೊಳಿಸುವುದು, ಮನೆಯನ್ನು ಸ್ವಚ್ಛಮಾಡುವುದು, ಈ ಎಲ್ಲಾ ಕಾರ್ಯಗಳು ಮಹಿಳೆಯರದ್ದೇ ಆಗಿದೆ. ಇವೆಲ್ಲ ಅವರ ಮೂಲಭೂತ ಕಾರ್ಯಗಳು ಎಂಬಂತೆ ಗಂಡಸರು ವತರ್ಿಸುವುದು ಇರುವುದು. ಬಹುತೇಕ ಎಲ್ಲಾ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮೊದಲು ಗಂಡಸರ ಊಟ ನಂತರದಲ್ಲಿ ಹೆಂಗಸರು ಊಟ ಮಾಡುವುದು ಸಾಮಾನ್ಯವಾಗಿದೆ. ಗಂಡಿನಷ್ಠೆ ಸಂಪಾದನೆ ಮಾಡುವ ಹೆಂಗಸರು ಸಹಾ ಮನೆಗೆ ಬಂದು ತನ್ನ ಮಹಿಳಾ ಕಾರ್ಯವನ್ನು ಮಾಡಲೆಬೇಕಾದ ಅನಿವಾರ್ಯತೆ ಇರುವುದು.
ಮಹಿಳೆಯ ಮೇಲೆ ಈ ರೀತಿಯ ದೌರ್ಜನ ನಡೆಸುವವರಲ್ಲಿ ಅಕ್ಷರಸ್ಥ ಪುರುಷರು, ಅದರಲ್ಲಿಯೂ ಸಮಾಜವನ್ನು ಬದಲಿಸುವ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಸಮಾಜ ಸೇವಿಗಳು, ರಾಜಕಾರಣಗಳು ಎಲ್ಲರೂ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ ಆದರೇ ಅವರವರ ಮನೆಯಲ್ಲಿ ನಡೆದುಕೊಂಡು ಬಂದ ಯಾವದೇ ಸಂಪ್ರದಾಯವನ್ನು ಬದಲಿಸಲು ಧೈರ್ಯ ತೋರಿಸುವುದಿಲ್ಲ. ಒಟ್ಟಾರೆ ಉತ್ತಮ ಭಾಷಣಕಾರರಾಗಿ, ವಿಚಾರವಾದಿಗಳಾಗಿ ವೇದಿಕೆಯಲ್ಲಿ ಮಾತನಾಡುವರು.
ನನ್ನ ಮನೆ ಮತ್ತು ಸುತ್ತಮುತ್ತಲಿನ ಸಮಾಜವನ್ನು ಗಮನಿಸಿದರೆ ಇಂದಿಗೂ ಮಹಿಳೆಗೆ ಸಮಾನ ಅವಕಾಶಗಳು ಸಿಗುತ್ತಾ ಇಲ್ಲ. ಕೆಲವೊಂದು ಕಾರ್ಯಕ್ಕೆ ಮಾತ್ರ ಮಹಿಳೆ ಸೀಮಿತವಾಗಿರುವಳು. ಬದಲಾವಣೆ ಬಯಸುವ ವ್ಯಕ್ತಿಗಳು, ಅದಕ್ಕೆ ಬದಲಾಗಲು ತಯಾರಾಗುವ ಮಹಿಳೆಯರು ತಾವಾಗಿಯೇ ತಮ್ಮ ತಮ್ಮ ಸ್ವತಂತ್ಯ, ಸಮಾನತೆ ಬಗ್ಗೆ ಧ್ವನಿ ಎತ್ತ ಬೇಕಾಗಿದೆ. ಇಲ್ಲವಾದರೇ ನಾವೆಲ್ಲ ಯೋಚಿಸುವ ಮಹಿಳಾ ಸಬಲೀಕರಣ ಕೇವಲ ಕನಸು ಮಾತ್ರ ಆಗಿರುವುದು.
ಪುರಾಣದ ಕಾಲದಿಂದ ಇಂದಿನ ಕಾಲಘಟ್ಟದ ವರೆಗೆ ಮಹಿಳೆ ನಡೆದ ದಾರಿಯನ್ನು ಅವಲೋಕಿಸುತ್ತಾ, ಇಂದಿಗೂ ಕೆಟ್ಟ ಸಂಪ್ರದಾಯವನ್ನು ಪಾಲಿಸುವ ಪ್ರಮುಖ ಸಂಘಟನೆಗಳ, ರಾಜಕೀಯ ವಿಚಾರಧಾರೆಗಳ ಬಗ್ಗೆ ಎಚ್ಚರಿಕೆಯಿಂದ ಇದ್ದು, ಅವಶ್ಯ ಇರುವಡೆ ಪ್ರತಿರೋಧವನ್ನು ಮಾಡುತ್ತಾ ಮಹಿಳೆಯರು ಮುಂದೆ ಬರಬೇಕಾಗಿದೆ. ಅದಕ್ಕೆ ತಕ್ಕದಾದ ವಾತಾವರಣವನ್ನು ಸೃಷ್ಠಿಸುವ ಜವಬ್ದಾರಿ ಪ್ರತಿಯೊಬ್ಬರದ್ದು ಆಗಿರುವುದು.
ವಿವೇಕ ಬೆಟ್ಕುಳಿ
vivekpy@gmail.com
8722954123
Monday, November 13, 2017
ಪ್ರದ್ಯುಮ್ನನ ಕೊಲೆಯಂಥ ಘಟನೆಗಳಿಗೆ ಕೊನೆ ಎಂದು?
“ಶೈಕ್ಷಣಿಕ ವ್ಯವಸ್ಥೆಯ ಲೋಪಕ್ಕೆ ಇನ್ನೊಂದು ಬಲಿ- ಪ್ರದ್ಯುಮ್ನನ ಕೊಲೆ”
ದೇಶದ
ಆಡಳಿತದ ಕೇಂದ್ರ ಸ್ಥಾನ ದೆಹೆಲಿಯ
ಸಮೀಪದಲ್ಲೇ ಗುಗಾ೯೦ವ (ಗುರುಗ್ರಾಮ) ಇರುವುದು.
ಇಲ್ಲಿನ ರೆಯಾನ
ಇಂಟರ ನ್ಯಾಷ್ಯನಲ್ ಸ್ಕೂಲ್ ನಲ್ಲಿ 7 ವರ್ಷದ
ಬಾಲಕ ಪ್ರದ್ಯುಮನ ಕೊಲೆ ನಡೆದು
2 ತಿಂಗಳು ಗತಿಸಿರುವುದು. ಶಾಲೆಯಲ್ಲಿ ನಡೆದ ಬಾಲಕನ ಕೊಲೆ
ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪಾಲಕರಲ್ಲಿ
ಆತಂಕವನ್ನು ಸ್ವೃಷ್ಠಿ ಮಾಡಿರುವುದು.
7 ವರ್ಷದ ಬಾಲಕನನ್ನು ಕೊಲೆ
ಮಾಡಿದವರಾರು? ಪ್ರಾರಂಭದಲ್ಲಿ ಶಾಲೆಯ
ಬಸ್ ಕಂಡಕ್ಟರ್ ಅಶೋಕನ
ಮೇಲೆ ಆಪಾದನೆ, ಬಂಧನ ಆಯ್ತು,
ಸಿಬಿಐ ತನಿಖೆಯ ನಂತರ ಅದೇ
ಶಾಲೆಯ 11 ನೇತರಗತಿಯ ವಿದ್ಯಾಥಿ೯ಯೇ ಕೊಲೆಗಾರ ಎಂದು
ತಿಳಿದು ಬಂದಿರುವುದು. ಕೊಲೆಗೆ ಕಾರಣ ಪರೀಕ್ಷೆಯನ್ನು
ಮುಂದುಡುವುದೇ ಆಗಿರುವುದು. ಚಿಕ್ಕ
ಕಾರಣಕ್ಕಾಗಿ ಕೊಲೆಯ ಅಗತ್ಯ ಏನಿತ್ತು?
ಅದೂ 7 ವರ್ಷದ ಮುಗ್ದ ಬಾಲಕನನ್ನು
ಕೊಲೆ ಮಾಡುವ ಅಗತ್ಯವಿತ್ತೇ? ಕೊಲೆ
ಮಾಡಿದ ವಿದ್ಯಾಥಿ೯ ಮಾನಸಿಕವಾಗಿ
ಖಿನ್ನನ್ನಾಗಿದ್ದನೆ? ಕೊಲೆಗಾರನನ್ನು
ಬಾಲ ಅಪರಾಧಿ ಎಂದು ಪರಿಗಣಿಸದೇ
ಜೀವಾವಧಿ ಶಿಕ್ಷೆ ನೀಡಬೇಕೆಂಬ ಆಗ್ರಹ,
ಶಾಲೆಯ ಆಡಳಿತವನ್ನು ಕೆಲವು ದಿನ ತಾವೇ
ತೆಗೆದುಕೊಳ್ಳುವೆವು ಎಂಬ ಸಕಾ೯ರದ
ನಿಧಾ೯ರ, ಈ ರೀತಿಯಾಗಿ
ಹತ್ತು ಹಲವಾರು ರೀತಿಯಲ್ಲಿ ಚಚೆ೯ಗಳು ಸದ್ಯದಲ್ಲಿ ಚಾಲ್ತಿಯಲ್ಲಿರುವುದು.
ಆದರೇ ಯಾವ ಕಾರಣಕ್ಕಾಗಿ
ಮಗುವಿನ ಕೊಲೆಯಾಯಿತು? ಪರೀಕ್ಷೆ ಎಂಬ ಭಯ
ಮಕ್ಕಳನ್ನು ಕೊಲೆ ಮಾಡುವಂತಹ ಕೃತ್ಯಕ್ಕೂ
ಉತ್ತೇಜನ ನೀಡುವುದು ಎಂದಾದರೇ ಅಂತಹ ಮೌಲ್ಯಮಾಪನದ
ಅಗತ್ಯ ಇದೇಯಾ? ತನ್ನದೇ ಶಾಲೆಯಲ್ಲಿ
ಓದುತ್ತಿರುವ ಮಗುವನ್ನು ಕೊಂದಾದರೂ ಕೆಲವು ದಿನ ಪರೀಕ್ಷೆಯ
ಭಯದಿಂದ ದೂರ ವಿರಬಹುದು ಎಂದು
ಒಬ್ಬ ಬಾಲಕ ಆಲೋಚಿಸುವನು ಎಂದಾದರೇ, ಈ ಬಗ್ಗೆ ಗಂಭೀರವಾಗಿ
ಆಲೋಚನೆ ಮಾಡುವ ಅಗತ್ಯವಿದೆ.
ಶಿಕ್ಷಣ
ನೈತಿಕತೆಯನ್ನು ಕಲಿಸುವುದು, ಉತ್ತಮ ನಾಗರಿಕನನ್ನಾಗಿ ರೂಪಿಸುವುದು,
ಶಿಕ್ಷಣ ಇಲ್ಲದ ಮನುಷ್ಯ ಪಶುವಿಗೆ
ಸಮಾನ ಈ ಎಲ್ಲಾ ಶಿಕ್ಷಣಕ್ಕೆ
ಸಂಭದಿಸಿದ ವಾಕ್ಯಗಳನ್ನು ಹೇಳುತ್ತಾ ನಾವು ಶಾಲೆಯಲ್ಲಿ ಏನು ಕಲಿಸುತ್ತಿರುವೆವು? ನಿಜವಾಗಿ ಶಾಲೆ ಉತ್ತಮ
ಪ್ರಜೆಯನ್ನು ತಯಾರಿಸುತ್ತಾಇದೆಯಾ?
ಮಕ್ಕಳು ಶಾಲೆಗೆ ಹೋಗುವಾಗ, ಪರೀಕ್ಷೆ
ಬರೆಯುವಾಗ ಭಯ ಪಡುವುದು ಯಾಕೆ? ಶಿಕ್ಷಕರ ಮೇಲೆ ಉತ್ತಮ ಫಲಿತಾಂಶದ
ಒತ್ತಡ ಎಲ್ಲಿಂದ ಬರುತ್ತಿದೆ? ಸಾಮಾಜಿಕ ಸೇವೆಯಲ್ಲಿ ಒಂದಾದ
ಶಿಕ್ಷಣ ಕ್ಷೇತ್ರ ಇಂದು ವ್ಯಾಪ್ಯಾರಿ
ಕ್ಷೇತ್ರವಾಗಿ ಪರಿವರ್ತನೆ ಆಗಲು ಕಾರಣವೇನು?
ಈ ಎಲ್ಲಾ ಪ್ರಶ್ನೆಗಳಿಗೆ
ನಾವು ಉತ್ತರವನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನ
ಮಾಡಬೇಕಾಗಿದೆ. ಇಂತಹ ಪ್ರಯತ್ನಗಳನ್ನು ಆಂದೋಲನದ
ರೀತಿಯಲ್ಲಿ ಮಾಡಿ ನಮ್ಮ ಶೈಕ್ಷಣಿಕ
ವ್ಯವಸ್ಥೆಯನ್ನೇ ವಿಮಶೆ೯ಗೆ ಒಳಪಡಿಸಿ ಪರಿಹಾರ
ಕಂಡುಕೊಳ್ಳುವ ಅಗತ್ಯವಿದೆ.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು,
ಪಾಲಕರು, ಶಿಕ್ಷಕರು ಆಡಳಿತ ಮಂಡಳಿಯವರು ಎಲ್ಲರ
ಒಂದೇ ಗುರಿ 100% ಉತ್ತಮ ಫಲಿತಾಂಶ ಬರಬೇಕು. ಈ
ಕಾರಣಕ್ಕಾಗಿಯೇ ಒಬ್ಬರು ಇನ್ನೊಬ್ಬರ ಮೇಲೆ
ಒತ್ತಡ ಹಾಕುತ್ತಾ ಇರುವರು. ಈ ಎಲ್ಲದಕ್ಕೂ
ಮೂಲ sಕಾರಣ ನಮ್ಮ ಮೌಲ್ಯಮಾಪನ
ಪದ್ದತಿಯೇ ಆಗಿರುವುದು. ದುರಾದೃಷ್ಠವಶಾತ್
ನಮ್ಮ ಸಮಾಜದಲ್ಲಿ ಈ ಮೌಲ್ಯಮಾಪನ ಪದ್ದತಿಯ
ಮೇಲೆ ಹೆಚ್ಚಿನ ವ್ಯವಸ್ಥೆ ರೂಪುಗೊಂಡಿರುವುದು.
ಮೌಲ್ಯಮಾಪನ ಪದ್ದತಿಯನ್ನು ಬದಲಾಯಿಸದೇ, ಸಿಲೆಬಸ್ ಬದಲಾವಣೆ, ಶಿಕ್ಷಕರಿಗೆ
ತರಬೇತಿ ನೀಡುವುದು, ಮಕ್ಕಳಿಗೆ
ಒಂದು ವಿಷಯವಾಗಿ ನೈತಿಕ ಶಿಕ್ಷಣ ಹೇಳುವುದು,
ಮಹಾನ ವ್ಯಕ್ತಿಗಳ ಚರಿತ್ರೆ ತಿಳಿಸುವುದು,
ಈ ಎಲ್ಲಾ ಕ್ರಮಗಳು
ಶಿಕ್ಷಣ ವ್ಯವಸ್ಥೆಯಲ್ಲಿ ಕಾಣುತ್ತಿರುವ ಮೇಲನೋಟದ
ಲಕ್ಷಣಗಳಿಗೆ ಪರಿಹಾರವಾಗಿರುವದು ವಿನಃ ಶಾಶ್ವತ ಪರಿಹಾರ
ಆಗಲಾರದು. ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆಗಾಗಿ ನಾವು ಶಿಕ್ಷಣವನ್ನು ನೋಡುವ
ದೃಷ್ಠಿಯೇ ಬದಲಾಗಬೇಕಾಗಿದೆ.
ಈ ಹಿನ್ನೆಲೆಯಲ್ಲಿ ದೇಶದ
ಪ್ರಥಮ ಪ್ರಧಾನಿ ನೆಹರು ಅವರ
ಜನ್ಮ ದಿನವಾದ (ನವಂಬರ್ 14) ಇಂದು
ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿರವೆವು, ಇಂದು
ನಮ್ಮೊಂದಿಗೆ ಕುಣಿದು ಕುಪ್ಪಳಿಸಬೇಕಾದ ಪ್ರದ್ಯುಮ್ನ
ಜೊತೆಗಿಲ್ಲ, 11 ತರಗತಿಯ ಸೊಹ್ನಾ ಅಪರಾಥಿಯಾಗಿ
ಪೋಲಿಸ ವಶದಲ್ಲಿ ಇರುವವನು. ಆ
ಇಬ್ಬರ ಮಕ್ಕಳ ಪಾಲಕರ ಮನಸ್ಥಿತಿಯನ್ನು
ವ್ಯಕ್ತಪಡಿಸಲು ಸಾಧ್ಯವೇ ಇಲ್ಲ. ಅವರ
ದುಖ:ವನ್ನು ಸಹಿಸುವ ಶಕ್ತಿ
ಬರಲಿ.
ಪ್ರದ್ಯುಮ್ನನೇ ಕೊನೆ ಮತ್ತೇ ಇಂತಹ
ಘಟನೆ ಮರುಕಳಿಸಬಾರದು ಆ ದಿಶೆಯಲ್ಲಿ ಗಟ್ಟಿ
ನಿಧಾ೯ರಗಳನ್ನು ತೆಗೆದುಕೊಳ್ಳಬಹುದಾದ ಇಂದಿನ
ನಮ್ಮ ಪ್ರಧಾನಿಯವರು, ತುಂಬಾ ತಳ ಹಂತದಿಂದ
ಮೇಲೆ ಬಂದಿರುವ ನಮ್ಮ ಮುಖ್ಯಮಂತ್ರಿಗಳ ಶೈಕ್ಷಣಿಕ
ವ್ಯವಸ್ಥೆಯ ಬದಲಾವಣೆಗಾಗಿ ಮುನ್ನುಡಿ ಬರೆಯುವ ಚಚೆ೯ ಮುಂದುವರೆಸಲಿ
ಎಂದು ಆಶಿಸೋಣ.
ವಿವೇಕ ಬೆಟ್ಕುಳಿ
8722954123
Tuesday, September 26, 2017
Monday, July 24, 2017
ಕೃಪೆ ವಾಟ್ಸಪ್
ನವಯುಗದ ಸೊಸೆಯ ಹೊಸಾ ಒಪ್ಪಂದ !
ತಾನು ಶಾಪಿಂಗ್ ಗೆ ಅಥವಾ ವಿಹಾರಕ್ಕೆ ಹೋದಾಗ ನನ್ನ ಮಗುವನ್ನು ಅತ್ತೆ ನೋಡಿಕೊಳ್ಳಲಿ. ಅವರ ಮಗುವನ್ನು ನಾನು ನೋಡಿಕೊಳ್ತೇನೇ....
*****
ಗಂಡ ಹೆಂಡತಿ ಸೀರೆ ಶಾಪಿಂಗ್ ಹೋದರು. ಹೆಂಡತಿ ಹೆಚ್ಚೂಕಮ್ಮಿ ನೂರು ಸೀರೆ ತೆಗೆದು, ಅದರಲ್ಲಿ 25 ಶಾರ್ಟ್ಲಿಸ್ಟ್ ಮಾಡಿ, ಗಂಡನಿಗೆ ಅದರಿಂದ ಐದು ಸೀರೆ ಆರಿಸಲು ಹೇಳಿ. ಕಡೆಯಲ್ಲಿ ಒಂದು ಸೀರೆ ಆರಿಸ್ತಾಳೆ.
ಉಫ್ ಅಂತ ಉಸಿರುಬಿಟ್ಟ ಗಂಡ ಹೇಳಿದ:
"ಹಿಂದಿನ ಕಾಲದಲ್ಲಿ ಸೀರೆ ಇರಲಿಲ್ಲ ನೋಡು. ಬರೀ ಎಲೆಗಳಿಂದ ಮೈ ಮುಚ್ಕೊಳ್ತಾ ಇದ್ರಂತೆ. ಅವನೇ ಪುಣ್ಯವಂತ"
ಹೆಂಡತಿ ತಣ್ಣಗೆ ಉತ್ತರಿಸಿದಳು.
"ಯಾರಿಗೊತ್ತು? ಈ ಎಲೆ ಬೇಡ, ಆ ಎಲೆ ಬೇಕು, ಈ ಮರದ್ದು ಬೇಡ, ಆ ಮರದ್ದು ತಗೊಂಬಾ, ಈ ಕಲರ್ ಚೆನ್ನಾಗಿಲ್ಲ ಅಂತ ಅವನ್ನ ಎಷ್ಟು ಮರ ಹತ್ತಿ ಇಳಿಸಿದ್ಲೋ ನೀವೇನು ನೋಡಿದ್ರಾ?"
ನೀತಿ: ಶಾಪಿಂಗ್ ಮಾಡುವಾಗ ಹೆಣ್ಣುಮಕ್ಕಳ ಜೊತೆ ವಾದಿಸಬಾರದು.
*****
ಗಂಡ : ಏನೇ ಇದು! ನನಗೆ ಬೆಂಡೇಕಾಯಿ ಆಗದು ಅಂತ ಗೊತ್ತಿದ್ದೂ ಬೆಂಡೆಕಾಯಿಯದ್ದೇ ಎಂಟ್ಹತ್ತು ಐಟಂ ಮಾಡಿದೀ? ನಾನು ಊಟ ಮಾಡೋದು ಬೇಡವಾ??
ಹೆಂಡತಿ : ಆಹಾಹಾ...ಬೆಂಡೆಕಾಯಿ ಆಗದಾ? ಮತ್ತ್ಯಾಕೋ ಅವಳು ಯಾರೋ ಮಿಟುಕಲಾಡಿ ಎಫ್ಬಿಯಲ್ಲಿ ಬೆಂಡೆಕಾಯಿ ಪಲ್ಯದ ಫೋಟೋ ಹಾಕಿದ್ರೆ "ವಾವ್...ಬಾಯಿಯಲ್ಲಿ ನೀರು ಬರ್ತಾ ಇದೆ. ನಿಮ್ಮಡುಗೆ ಅಂದ್ರೆ ಕೇಳ್ಬೇಕಾ? ಊಟಕ್ಕೆ ಬರಲಾ.." ಎಂದು ಕಾಮೆಂಟ್ ಮಾಡಿದ್ದು!! ಇಲ್ಲಿ ತಿನ್ರಿ ಈಗ...ನಾನೂ ನೋಡ್ತೀನಿ...!!

ಹೆಂಡತಿ:-ಎಲ್ಲಿಗೆ ಹೋಗಿ ಬರ್ತ ಇದೀರಿ
ಗಂಡ:-ಕಾಲು ನೋವು ಕಣೆ ಅದಕ್ಕೆ ಹಾಸ್ಪಿಟಲ್ಗೆ ಹೋಗಿ ಬರ್ತ ಇದೀನಿ
ಹೆಂಡತಿ:-ಅಯ್ಯೊ ಒಬ್ರೆ ಹೋಗಿದಿರಾ ನನ್ನ ಕರ್ದ್ರಿದ್ರೆ ಬರ್ತ ಇರ್ಲಿಲ್ವಾ
ಗಂಡ:-ಅಲ್ರೆಡಿ ಕಾಲ್ ನೋವು ಇದೆ ಅದರ ಜೊತೆಗೆ ತಲೆನೋವು ಯಾಕೆ ಅಂತ ಕರಿಲಿಲ್ಲ ಕಣೆ ಅಷ್ಟೇ😔😫😏
ಹೆಂಡತಿ:-ರೀ
*****
ಬೇರೆಯವರು ನಮ್ಮನ್ನು ಪ್ರೀತಿಸುವಂತೆ ಮಾಡಲು ಸಾಧ್ಯವಿಲ್ಲದಿರಬಹುದು ಆದರೆ ಎಲ್ಲರೂ ಇಷ್ಟಪಡಬಹುದಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲೆ ಇದೆ...
ಪ್ರೀತಿಸುವುದು, ದ್ವೇಷಿಸುವುದು ಪರರಿಗೆ ಬಿಟ್ಟಿದ್ದು......
*****
ಬದುಕಿದ್ದಾಗ ನಮಸ್ಕಾರ ಮಾಡದ ಜನ
ಸತ್ತಾಗ
ಪಾದ ಮುಟ್ಟಿ ಕೈ ಮುಗಿದರು.
•••
ಉಸಿರಿರುವಾಗ
ನೀ ಸತ್ತಿದ್ದರೇ ಚೆನ್ನಾಗಿರುತಿತ್ತು ಎಂದವರು
ಸತ್ತಾಗ
ಬದುಕಿರಬೇಕಿತ್ತೆಂದರು.
•••
ಬದುಕಿದ್ದಾಗ ಪಾಪಿಯೆಂದರು
ಸತ್ತಾಗ ಪಾಪ ಎಂದರು.
•••
ಹೊಟ್ಟೆಗಾಗಿ ಬೇಡುವಾಗ
ಕುತ್ತಿಗೆಹಿಡಿದು ತಳ್ಳಿದರು
ಸತ್ತಾಗ ಅತ್ತು ಹೆಗಲಾದರು.
ಇದೆ ನಮ್ಮ ಜೀವನ
ಜೀವನ ಅರಿತು ನೀ ಬಾಳು

Monday, July 17, 2017
ಅಧಿಕ ತೂಕ, ಹೊಟ್ಟೆ ಸುತ್ತದ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..?
ಅಧಿಕ ತೂಕ, ಹೊಟ್ಟೆ ಸುತ್ತದ ಕೊಬ್ಬನ್ನು ಅರಿಶಿಣ, ನಿಂಬೆರಸದಿಂದ ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..?
ಅರಿಶಿಣ ನಾವು ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಪದಾರ್ಥ. ಇದರಿಂದ ಅಡುಗೆಗೆ ಒಳ್ಳೆಯ ರುಚಿ ಬರುತ್ತದೆ. ಅಷ್ಟೇ ಅಲ್ಲದೆ, ಅರಿಶಿಣವನ್ನು ನಮ್ಮ ಹಿರಿಯರು ಆಂಟಿ ಸೆಪ್ಟಿಕ್ ಆಗಿ, ಗಾಯಗಳು ವಾಸಿಯಾಗಲು ಸಹ ಬಳಸುತ್ತಿದ್ದರು. ಇನ್ನು ನಿಂಬೆರಸ. ಇದನ್ನೂ ಅಷ್ಟೇ ನಾವು ಅಡುಗೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತೇವೆ. ಮುಖ್ಯವಾಗಿ ನಿಂಬೆರಸ, ಸಕ್ಕರೆಯನ್ನು ನೀರಿನಲ್ಲಿ ಬೆರೆಸಿಕೊಂಡು ಶರಬತ್ ತರಹ ಕುಡಿದರೆ ದೇಹ ತಂಪಾಗುತ್ತದೆ. ಆದರೆ ಅರಿಶಿಣ, ನಿಂಬೆರಸಗಳನ್ನು ಉಪಯೋಗಿಸಿ ತೂಕ ಕಡಿಮೆ ಮಾಡಿಕೊಳ್ಳುವ ಸಂಗತಿ ಗೊತ್ತೇ..? ತೂಕವಷ್ಟೇ ಅಲ್ಲ, ಹೊಟ್ಟೆ ಬಳಿ ಸಂಗ್ರಹವಾಗಿರುವ ಕೊಬ್ಬು ಸಹ ಕರಗುತ್ತದೆ. ಅದೇಗೆ ಎಂದು ಈಗ ನೋಡೋಣ.
1. ಒಂದು ಗ್ಲಾಸು ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆರಸವನ್ನು, 1/4 ಟೀಸ್ಫೂನ್ ಅರಿಶಿಣವನ್ನು ಮಿಕ್ಸ್ ಮಾಡಬೇಕು. ಎರಡೂ ಮಿಕ್ಸ್ ಮಾಡಿದ ಬಳಿಕ ಬೇಕೆಂದರೆ ಅದರಲ್ಲಿ ಸ್ವಲ್ಪ ಜೇನು ಬೆರೆಸಬಹುದು. ಆ ರೀತಿ ಮೂರನ್ನೂ ಬೆರೆಸಿ ಆ ನೀರನ್ನು ಉಗುರುಬೆಚ್ಚಗೆ ಇದ್ದಾಗಲೇ ಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ನಿತ್ಯ ಎರಡು ಬಾರಿ ಈ ಮಿಶ್ರಣವನ್ನು ಕುಡಿದರೆ ವಾರದಲ್ಲಿ ಫಲಿತಾಂಶ ಸಿಗುತ್ತದೆ. ತೂಕ ಕಡಿಮೆಯಾಗುವವರೆಗೂ ಅಥವಾ ಹೊಟ್ಟೆ ಸುತ್ತ ಸಂಗ್ರಹವಾಗಿರುವ ಕೊಬ್ಬು ಕರಗುವವರೆಗೂ ಇದನ್ನು ಕುಡಿಯಬಹುದು.
2. ಒಂದು ನಿಂಬೆಹಣ್ಣನ್ನು ಸಂಪೂರ್ಣವಾಗಿ ಹಿಂಡಿ ಅದರಲ್ಲಿನ ರಸವನ್ನು ತೆಗೆಯಬೇಕು. ಅದಕ್ಕೆ ಅರ್ಧ ಟೀಸ್ಫೂನ್ ಅರಿಶಿಣ, 1/4 ಟೀಸ್ಪೂನ್ ಕಪ್ಪು ಮೆಣಸಿನ ಪುಡಿ. 1/4 ಟೀಸ್ಫೂನ್ ಆಲೀವ್ ಆಯಿಲ್ ಬೆರೆಸಬೇಕು. ಚೆನ್ನಾಗಿ ಮಿಶ್ರಣ ಮಾಡಿದ ಮೇಲೆ 1 ಅಥವಾ 2 ಟೀಸ್ಫೂನ್ ಪ್ರಮಾಣದಲ್ಲಿ 3 ಹೊತ್ತು ಊಟದ ಬಳಿಕ ತೆಗೆದುಕೊಳ್ಳಬೇಕು. ಇದರಿಂದ ಕೊಬ್ಬು ಬೇಗ ಕರಗುತ್ತದೆ. ಹೊಟ್ಟೆ ಸಮಸ್ಯೆಯೂ ಬರಲ್ಲ.
3. ಸಣ್ಣ ಉರಿಯ ಮೇಲೆ ಒಂದು ಕಪ್ ಹಾಲನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು. ಬಳಿಕ ಅದರಲ್ಲಿ ಅರ್ಧ ಟೀ ಸ್ಫೂನ್ ನಿಂಬೆರಸ, ಅರ್ಧ ಟೀಸ್ಫೂನ್ ಜೇನು ಮಿಕ್ಸ್ ಮಾಡಿಕೊಳ್ಳಬೇಕು. ಇದರ ಜತೆಗೆ ವೆನೀಲಾ ಎಕ್ಸ್‌ಟ್ರಾಕ್ಟನ್ನು ಸಹ ಬೆರೆಸಬೇಕು. ಆ ಬಳಿಕ ಆ ಮಿಶ್ರಣಕ್ಕೆ ಅರ್ಧ ಟೀಸ್ಫೂನ್ ಅರಿಶಿಣ ಹಾಕಿ, ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಬಳಿಕ ಕೆಳಗಿಳಿಸಿ ಶೋಧಿಸಿ ಉಗುರು ಬೆಚ್ಚಗೆ ಬಿಸಿ ಮಾಡಿಕೊಂಡು ಕುಡಿಯಬೇಕು. ಈ ಪಾನೀಯವನ್ನು ಒಂದು ವಾರ ಕಾಲ ಕುಡಿದರೆ ಫಲಿತಾಂಶ ನಿಮಗೇ ಗೊತ್ತಾಗುತ್ತದೆ. ಇದನ್ನು ಊಟಕ್ಕೂ ಮುನ್ನ ಅಥವಾ ಬಳಿಕ ತೆಗೆದುಕೊಳ್ಳಬಹುದು.

Courtesy whatsapp group: ಶಾಶ್ವತ ಆನಂದ ಯೋಗ _ Balaji Naidu Santhosh Seenu
ವಯಸ್ಸಾದ ತಂದೆಯನ್ನು ಮಗ ಊರಿನ ಪ್ರಸಿದ್ಧ ಹೋಟೆಲಿಗೆ... -ಕೃಪೆ ವಾಟ್ಸಪ್,
ವಯಸ್ಸಾದ ತಂದೆಯನ್ನು ಮಗ ಊರಿನ ಪ್ರಸಿದ್ಧ ಹೋಟೆಲಿಗೆ ಊಟಕ್ಕೆಂದು ಕರೆದೊಯ್ದಿದ್ದ. ಹೋಟೆಲ್ ಜನಸಂದಣಿಯಿಂದ ತುಂಬಿತ್ತು. ಮಗ ಹೇಗೂ ಜಾಗ ಗಿಟ್ಟಿಸಿದ. ಇವರ ಟೇಬಲ್ಲಿನ ಮತ್ತೊಂದು ಭಾಗದಲ್ಲಿ ನವದಂಪತಿಗಳು ಕುಳಿತಿದ್ದರು. ಊಟ ಪ್ರಾರಂಭವಾಯಿತು. ಈ ವ್ಯಕ್ತಿಯ ತಂದೆ ತುತ್ತನ್ನು ಬಾಯಿಗೆ ಇಡುವಾಗ ಕೈ ನಡುಗಿ ಬಿಳಿ ಅಂಗಿಯ ಮೇಲೆ ಚೆಲ್ಲಿ ಹೋಯಿತು. ಎದುರಿಗೆ ಕುಳಿತಿದ್ದ ಯುವಕ,
"'ಛೆ! ಇಷ್ಟು ವಯಸ್ಸಾದವರನ್ನು ಯಾಕಾದರೂ ಇಂತಹ ಹೋಟೆಲಿಗೆ ಕರೆದುಕೊಂಡು ಬರಬೇಕು..? ಅಂಗಿಯೆಲ್ಲಾ ಕೊಳೆ ಮಾಡಿಕೊಂಡರು ನೋಡಿ. ಹೊರಗೆ ಹೇಗೆ ಕರೆದುಕೊಂಡು ಹೋಗ್ತೀರಿ'"
ಎಂದು ಕೇಳಿದ. ಆದರೆ ಈ ಮಾತುಗಳು 'ಕೇಳಿಯೋ ಇಲ್ಲವೇನೋ 'ಎಂಬಂತೆ ಆ ವ್ಯಕ್ತಿ ತಾನೇ ತುತ್ತು ಮಾಡಿ ಉಣ್ಣಿಸಿದ. ನಂತರ ವಾಷ್ ರೂಮಿನಲ್ಲಿ ತಂದೆಯ ಅಂಗಿಯ ಕಲೆಯನ್ನು ತಿಕ್ಕಿ ತೊಳೆದು ತನ್ನ ಅಂಗಿಯನ್ನು ತಂದೆಗೆ ಹಾಕಿ, ಆತನ ಅಂಗಿಯನ್ನು ತಾನು ಹಾಕಿಕೊಂಡು ಮೇಲೆ ಕೋಟು ಕೋಟುಹಾಕಿಕೊಂಡ. ತಂದೆಯ ಕೆದರಿದ ಕೂದಲನ್ನು ಸರಿಪಡಿಸಿ ಬೆವರಿದ ಮುಖ ಒರೆಸಿ ಬಿಲ್ ಪಾವತಿಸಿ ಹೊರಡುವಷ್ಟರಲ್ಲಿ ರೆಸ್ಟೊರೆಂಟ್ ಗದ್ದಲ ಸ್ವಲ್ಪ ಕಡಿಮೆಯಾಗಿತ್ತು. ಇನ್ನೇನು ಹೊರ ನಡೆಯಬೇಕೆನ್ನುವಾಗ ಆ ಘಟನೆಯನ್ನು ವೀಕ್ಷಿಸಿದ್ದ ಪಕ್ಕದ ಟೇಬಲಿನಲ್ಲಿದ್ದ ಓರ್ವ ವ್ಯಕ್ತಿ
"'ಹಲೋ ಜಂಟಲ್ ಮ್ಯಾನ್ ನೀವೇನೋ ಬಿಟ್ಟು ಹೊರಟಿದ್ದೀರಿ'"
ಎಂದು ಜೋರಾಗಿ ಕೂಗಿದ. ಆ ಮಾತು ಕೇಳಿ ಹೋಟೆಲಲ್ಲಿದ್ದವರ ಚಿತ್ತ ಇವರತ್ತ ನೆಟ್ಟಿತು. 'ಇಲ್ಲ ನಾನೇನು ಬಿಟ್ಟು ಹೋಗಿಲ್ಲವಲ್ಲ' ಎಂದ ಮಗ. ಅದಕ್ಕೆ ಆ ವ್ಯಕ್ತಿ
'ಮಗನಾದವನು ತನ್ನ ವಯಸ್ಸಾದ ತಂದೆಯನ್ನು ಹೇಗೆ ನೋಡಿಕೊಳ್ಳಬೇಕೆಂಬ ಅಮೂಲ್ಯ ಪಾಠವನ್ನು ನಮಗೆ ಬಿಟ್ಟು ಹೊರಟಿದ್ದೀರಿ'
ಎಂದ, ಮುಂಚೆ ಕೊಂಕು ನುಡದಿದ್ದ
ಆ ಯುವ ದಂಪತಿಗೆ ನಾಚಿಕೆಯಾಗಿ ಕ್ಷಮೆ ಕೇಳಿದರು.
"ನಾನು ಸಣ್ಣವನಿರುವಾಗ ಅಪ್ಪನನ್ನು ಅದೆಷ್ಟು ಗೋಳು ಹೊಯ್ದುಕೊಂಡಿರಲಿಲ್ಲ. ಆಗೆಲ್ಲಾ ಆತ ಕೋಪಿಸಿಕೊಳ್ಳದೆ ನನ್ನನ್ನು ಮುದ್ದು ಮಾಡಿರಲಿಲ್ವ..? ಈಗ ಅವನು ಮಗು ನಾನು ತಂದೆ"
ಎಂದು ಹೇಳಿದ. ಅಲ್ಲಿದ್ದವರ ಕಣ್ಣಾಲಿ ತುಂಬಿತು. ಮಗ ತಂದೆಯ ಕೈ ಹಿಡಿದುಕೊಂಡು ಮೆಲ್ಲನೆ ಕಾರಿನತ್ತ ಕರೆದೊಯ್ದ.
ಹೌದು,
ವಯಸ್ಸಾದ ಮೇಲೆ ಮನುಷ್ಯ ಮಗುವಿನಂತಾಗುತ್ತಾನೆ. ಮೊದಲು ತನ್ನ ಮಕ್ಕಳನ್ನು ಕೈ ಹಿಡಿದು ಬೆಳೆಸಿದ ಆತನಿಗೆ/ಳಿಗೆ
ನಾವೆಲ್ಲ ಅವರನ್ನು ಮಕ್ಕಳಂತೆ ನೋಡಿಕೊಂಡಾಗ ಬದುಕಿಗೆ ಒಂದು ಅರ್ಥ...

Subscribe to:
Posts (Atom)
“ಇಗೋ, ಬೆಂಗಳೂರು ಹೀಗಿತ್ತು”ಜಿ. ವೆಂಕಟಸುಬ್ಬಯ್ಯ -
“ ಇಗೋ , ಬೆಂಗಳೂರು ಹೀಗಿತ್ತು ” ಜಿ . ವೆಂಕಟಸುಬ್ಬಯ್ಯ ಅರವತ್ತು ವರ್ಷಗಳ ಹಿಂದೆ ಬೆಂಗಳೂರು ಇಷ್ಟು ದೊಡ್ಡದಾಗಿರಲಿಲ್ಲ . ಆಗ ಎರಡು ಬೆಂಗಳೂರು ಇತ್ತು ...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು ಸ್ವಾಮೀ ನನ್ನಯ್ಯ ರಥವೇರಿ ಬರುವಾಗ ನಾವೆದ್ದು ಕೈಯ್ಯ ಮುಗುದೇವು ಮಕ್ಕಳಾಟವು ಚಂದ ಮತ್ತೆ ಯೌವನ ಚಂದ ಮುಪ್ಪಿನಲಿ ಚಂದ ನರೆಗಡ...
-
Krupe : http://azsmarane.blogspot.in/2012/01/blog-post_21.html ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾ...