ಮಂತ್ರ ಮಾಂಗಲ್ಯ : ಕುವೆಂಪು
ಓಂ ಭೂಹೂಃ, ಓಂ ಭುವಹ. ಓಂ ಸುವಹ. ಓಂ ಮಹಹ.
ಓಂ ಜನಹ, ಓಂ ತಪಹ. ಓಗುಂ ಸತ್ಯಂ. ಓಂ ತತ್ಸವಿತುರ್ವರೇಣ್ಯಂ.
ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್ ||
ಓಮಾಪೋ ಜ್ಯೋತೀ ರಸೋsಮೃತಂ ಬ್ರಹ್ಮ ಭೂರ್ಭ ವಸ್ಸುವರೋಂ ||
- ಗಾಯತ್ರೀ ಮಂತ್ರ. ಋಗ್ವೇದ

ಓಂ ಭೂಲೋಕ, ಭುವಲೋಕ, ಓಂ ಸುವರ್ಲೋಕ ಮಹರ್ಲೋಕ
ಓಂ ಜನೋಲೋಕ ತಪೋಲೋಕ ಸತ್ಯಲೋಕಗಳೆಲ್ಲ
ಪರಬ್ರಹ್ಮ ರೂಪಗಳೇ ಎಂದೆಂದಿಗೂ.
ಎಲ್ಲಕ್ಕೂ ಪ್ರೇರಕನಾದ ಆ ಭಗವಂತನ ಶ್ರೀತೇಜವನ್ನು
ನಾವು ಧ್ಯಾನಿಸುವೆವು.
ಪ್ರೇರಿಸಲಾತನು ನಮ್ಮ ಬುದ್ಧಿಯ
ತತ್ವಜ್ಞಾನದ ಕಡೆಗೆ.

ಓಂ ಜಲ ಜ್ಯೋತಿ ರಸ ಅಮೃತಗಳೆಲ್ಲವು
ಪ್ರಣವಾತ್ಮಕ ಪರಬ್ರಹ್ಮವೆ.
ಭೂರ್ಭುವ ಸುವರ್ಲೋಕಗಳೆಲ್ಲವು
ಪ್ರಣವಾತ್ಮಕ ಪರಬ್ರಹ್ಮವೇ.
ಪ್ರಣವಾತ್ಮಕ ಪರಬ್ರಹ್ಮವೆ.
ಭೂರ್ಭುವ ಸುವರ್ಲೋಕಗಳೆಲ್ಲವು
ಪ್ರಣವಾತ್ಮಕ ಪರಬ್ರಹ್ಮವೇ.
ಓಂ ಅಸತೋ ಮಾ ಸದ್ಗಮಯ |
ತಮಸೋ ಮಾ ಜ್ಯೋತಿರ್ಗಮಯ |
ಮೃತ್ಯೋರ್ಮಾsಮೃತಂ ಗಮಯ ||
ಓಂ ಶಾತಿಃ ಶಾತಿಃ ಶಾತಿಃ
- ಬೃಹಾದಾರಣ್ಯಕ ಉಪನಿಷದ್
ತಮಸೋ ಮಾ ಜ್ಯೋತಿರ್ಗಮಯ |
ಮೃತ್ಯೋರ್ಮಾsಮೃತಂ ಗಮಯ ||
ಓಂ ಶಾತಿಃ ಶಾತಿಃ ಶಾತಿಃ
- ಬೃಹಾದಾರಣ್ಯಕ ಉಪನಿಷದ್
ಓಂ ಅಸತ್ಯದಿಂದ ಸತ್ಯದೆಡೆಗೆ
ಕತ್ತಲಿಂದ ಬೆಳಕಿನೆಡೆಗೆ
ಸಾವಿನಿಂದ ಅಮೃತದೆಡೆಗೆ ಒಯ್ಯಿ ನನ್ನನು.
ಕತ್ತಲಿಂದ ಬೆಳಕಿನೆಡೆಗೆ
ಸಾವಿನಿಂದ ಅಮೃತದೆಡೆಗೆ ಒಯ್ಯಿ ನನ್ನನು.
ತೇಜೋsಸಿ ತೇಜೋ ಮಯಿ ಧೇಹಿ |
ವೀರ್ಯಮಸಿ ವೀರ್ಯಂ ಮಯಿ ಧೇಹಿ |
ಬಲಮಸಿ ಬಲಂ ಮಯಿ ಧೇಹಿ |
ಓಜೋsಸಿ ಓಜೋ ಮಯಿ ಧೇಹೀ |
ಮನ್ಯುರಸಿ ಮನ್ಯುಂ ಮಯಿ ಧೇಹೀ |
ಸಹೋಸಿ ಸಹೋ ಮಯಿ ಧೇಹಿ ||
- ಶುಕ್ಲಯಜುರ್ವೇದ ಸಂಹಿತಾ
ವೀರ್ಯಮಸಿ ವೀರ್ಯಂ ಮಯಿ ಧೇಹಿ |
ಬಲಮಸಿ ಬಲಂ ಮಯಿ ಧೇಹಿ |
ಓಜೋsಸಿ ಓಜೋ ಮಯಿ ಧೇಹೀ |
ಮನ್ಯುರಸಿ ಮನ್ಯುಂ ಮಯಿ ಧೇಹೀ |
ಸಹೋಸಿ ಸಹೋ ಮಯಿ ಧೇಹಿ ||
- ಶುಕ್ಲಯಜುರ್ವೇದ ಸಂಹಿತಾ
ಓಂ ಭಗವನ್,
ನೀನೆ ತೇಜಸ್ಸು, ಅದನ್ನು ನಮ್ಮಲ್ಲೂ ತುಂಬು
ನೀನೆ ವೀರ್ಯವು, ಅದನ್ನು ನಮ್ಮಲ್ಲೂ ತುಂಬು
ನೀನೆ ಬಲವು, ತುಂಬು ನಮ್ಮಲ್ಲೂ ಬಲವ
ನೀನೆ ಓಜವು, ತುಂಬು ನಮ್ಮಲ್ಲೂ ಓಜವ
ನೀನೆ ಸಾಹಸ, ತುಂಬು ನಮ್ಮಲ್ಲೂ ಸಾಹಸ
ನೀನೆ ಧೈರ್ಯ, ತುಂಬು ನಮ್ಮಲ್ಲೂ ಧ್ಯೇರ್ಯವ
ನೀನೆ ತೇಜಸ್ಸು, ಅದನ್ನು ನಮ್ಮಲ್ಲೂ ತುಂಬು
ನೀನೆ ವೀರ್ಯವು, ಅದನ್ನು ನಮ್ಮಲ್ಲೂ ತುಂಬು
ನೀನೆ ಬಲವು, ತುಂಬು ನಮ್ಮಲ್ಲೂ ಬಲವ
ನೀನೆ ಓಜವು, ತುಂಬು ನಮ್ಮಲ್ಲೂ ಓಜವ
ನೀನೆ ಸಾಹಸ, ತುಂಬು ನಮ್ಮಲ್ಲೂ ಸಾಹಸ
ನೀನೆ ಧೈರ್ಯ, ತುಂಬು ನಮ್ಮಲ್ಲೂ ಧ್ಯೇರ್ಯವ
ದೇವೀಸ್ತುತಿ
ಯಾ ದೇವೀ ಸರ್ವಭೂತೇಷು ವಿಷ್ಣುಮಾಯೇತಿ ಶಬ್ದಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ವಿಷ್ಣು ಮಾಯೆಯೆಂದು ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.

ಯಾ ದೇವೀ ಸರ್ವಭೂತೇಷು ಚೇತನೇತ್ಯಭಿಧೀಯತೇ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಚೈತನ್ಯದ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಚೈತನ್ಯದ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಶಕ್ತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಶಕ್ತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಶಾಂತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಶಾಂತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಶಾಂತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಶ್ರದ್ಧಾ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಶ್ರದ್ಧೆಯ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಶ್ರದ್ಧೆಯ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಕಾಂತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವೀ ಕಾಂತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವೀ ಕಾಂತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ದಯಾ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ದಯೆಯ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ದಯೆಯ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಮಾತೃ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಮಾತೃ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಸರ್ವಮಂಗಲ ಮಾಂಗಲ್ಯೆ ಶಿವೇ ಸರ್ವಾರ್ಥಸಾಧಿಕೆ |
ಶರಣ್ಯೆ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ ||
ಸರ್ವಮಂಗಲಮಯೀ ಶಿವೇ ಸಕಲಾಭಿಷ್ಟ ಸಾಧಿಕೇ
ಆತ್ರಯದಾತೆಯೆ, ತ್ರಿಯಂಬಕೆ, ಗೌರಿ, ನಾರಾಯಣಿ ನಿನಗಿದೋ ನಮ್ಮ ನಮಸ್ಕಾರ.

ಸೃಷ್ಟಿಸ್ಥಿತಿ ವಿನಾಶಾನಾಂ ಶಕ್ತಿಭೂತೇ ಸನಾತನೀ |
ಗುಣಾಶ್ರಯೇsಗಣಮಯೇ ನಾರಾಯಣಿ ನಮೋಸ್ತು ತೇ ||
ಸೃಷ್ಟಿಸ್ಥಿತಿ ವಿನಾಶಕಾರಣಿ, ಶಕ್ತಿಮಯೀ ದೇವಿ.
ತ್ರಿಗುಣಾತ್ಮಕೆಯಾಗಿಯೂ ಅದನ್ನು ಮೀರಿಹೆ, ನಿನಗಿದೋ ನಮ್ಮ ನಮಸ್ಕಾರ.

ಶರಣಾಗತದೀನಾರ್ತ ಪರಿತ್ರಾಣ ಪರಾಯಣೇ |
ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಸ್ತು ತೇ ||
ಶರಣು ಬಂದ ದೀನರಿಗೂ ಆರ್ತರಿಗೂ ನೀನೆ ಶರಣು ದೇವಿ
ಎಲ್ಲ ಜೀವಿಗಳ ಎಲ್ಲ ದಃಖವನ್ನೂ ಪರಿಹರಿಪ ನಿನಗಿದೋ ನಮ್ಮ ನಮಸ್ಕಾರ.

ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಸ್ತು ತೇ ||
ಎಲ್ಲ ಶಕ್ತಿಗಳ ಪಡೆದಿರುವಾಕೆಯೆ, ಎಲ್ಲಕ್ಕೂ ಒಡತಿಯೆ,
ಎಲ್ಲವೂ ನೀನೆ ಆಗಿರುವೆ
ಓ ದುರ್ಗೆಯೆ, ಓ ದೇವಿಯೆ ಭಯವನ್ನು ತಪ್ಪಿಸು.
ನಿನಗಿದೋ ನಮ್ಮ ನಮಸ್ಕಾರ.

ದೇವೀ ಮಹಾತ್ಮ್ಯ
ಶ್ರೀಸೀತಾರಾಮಸ್ತವನ
ವರ್ಣಾನಾಮರ್ಥಸಂಘಾನಾಂ ರಸಾನಾಂ ಛಂದಸಾಮಪಿ |
ಮಂಗಲಾನಾಂ ಚ ಕರ್ತಾರೌ ವಂದೇ ವಾಣೀವಿನಾಯಕೌ ||
ವರ್ಣಕ್ಕೆ ಅರ್ಥ, ಸಮೂಹಕ್ಕೆ ರಸಛಂದಗೆಲ್ಲಕೆ
ಮಂಗಲವ ನೀಡುವ ವಾಣೀಗಣೇಶರಿಗೆ ತಲೆ ಬಾಗುತ್ತೇವೆ.

ಭವಾನೀಶಂಕರೌ ವಂದೇ ಶ್ರದ್ಧಾವಿಶ್ವಾಸರೂಪಿಣೌ |
ಯಾಭ್ಯಾಂ ವಿನಾ ನ ಪಶ್ಯಂತಿ ಸಿದ್ಧಾಹ ಸ್ವಾಂತಸ್ಥಮೀಶ್ವರಮ್ ||
ಯಾರ ಕೃಪೆಯಿಲ್ಲದೆಯೆ ಸಿದ್ಧರು
ಹೃದಯದಲ್ಲಿರುವ ಶಿವನ ಕಾಣಲಾರರೊ
ಅಂಥ ಶ್ರದ್ಧೆ, ವಿಶ್ವಾಸ ರೂಪರಿಗೆ
ಶಿವ ಶಿವೆಯರಿಗೆ ನಮಸ್ಕಾರ.

ಸೀತಾರಾಮ ಗುಣಗ್ರಾಮ ಪುಣ್ಯಾರಣ್ಯ ವಿಹಾರಿಣೌ |
ವಂದೇ ವಿಶುದ್ಧ ವಿಜ್ಞಾನೌ ಕವೀಶ್ವರ ಕಪೀಶ್ವರೌ ||
ಸುಗುಣ ಸಮೂಹನೆ ಸೀತಾರಾಮನೆ ಪುಣ್ಯಕಾನನ ಸಂಚಾರೀ
ಹೇ ಕವೀಶ್ವರನೇ, ಹೇ ಕಪೀಶ್ವರನೆ, ವಿಜ್ಞಾನಾತ್ಮಕಾ ನಿನಗಿದೋ ನಮ್ಮ ನಮಸ್ಕಾರ.

ಉದ್ಭವಸ್ಥಿತಿ ಸಂಹಾರಕಾರಿಣೀಂ ಕ್ಲೇಶಹಾರಿಣೀಮ್ |
ಸರ್ವಶ್ರೇಯಸ್ಕರೀಂ ಸೀತಾಂ ನತೋsಹಂ ರಾಮವಲ್ಲಭಾಮ್ ||
ಸೃಷ್ಟಿಸ್ಥಿತಿ ಸಂಹಾರ ಕಾರಿಣಿಯೆ, ಸಕಲ ಕ್ಲೇಶ ಪರಿಹಾರಿಣಿಯೆ
ಸಕಲ ಸುಮಂಗಲ ಕಾರಣಿ ಸೀತೆಯೆ, ನಮಿಸುತ್ತೇವೆ ಶ್ರೀರಾಮಪ್ರಿಯೆ.

ವಾಣೀಸ್ತವನ
ಬ್ರಹ್ಮಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ |
ಸರ್ವ ವಿದ್ಯಾಧಿದೇವೀ ಯಾ ತಸ್ಮೈ ವಾಣ್ಯೈ ನಮೋ ನಮಃ ||
ಬ್ರಹ್ಮಸ್ವರೂಪೀಣಿಯೆ ಪರಮ ಜ್ಯೋತಿರೂಪಿಣಿಯೆ ಸನಾತನಿಯೆ ತಾಯೆ
ಎಲ್ಲ ವಿದ್ಯೆಗಳ ಮೂಲ ದೇವಿಯೇ, ತಾಯಿ ಶಾರದೆಯೇ ನಮಸ್ಕಾರ.

ಯಯಾ ವಿನಾ ಜಗತ್ಸರ್ವಂ ತತ್ವಜ್ಜೀವನ್ಮೃತಂ ಭವೇತ್ |
ಜ್ಞಾನಾಧಿದೇವೀ ಯಾ ತಸ್ಮೈ ಸರಸ್ವತ್ಯೈ ನಮೋ ನಮಃ ||
ಯಾರಿಲ್ಲದೆ ಜಗವೆಲ್ಲವೂ ಬದುಕಿಯೂ ಸತ್ತಂತೆಯೆ ತೋರುವುದೋ
ಆ ಜ್ಞಾನಾಧಿದೇವಿಗೆ, ಆ ತಾಯಿ ಸರಸ್ವತಿಗೆ ಇದೋ ನಮ್ಮ ನಮಸ್ಕಾರ.

ಯಯಾ ವಿನಾ ಜಗತ್ಸರ್ವಂ ಮೂಕಮುನ್ಮತ್ತವತ್ಸದಾ |
ಯಾ ದೇವೀ ವಾಗಧೀಷ್ಠಾತ್ರೀ ತಸ್ಮೈ ವಾಣ್ಯೈ ನಮೋ ನಮಃ ||
ಯಾರಿಲ್ಲದೆ ಜಗವೆಲ್ಲವೂ ಮೂಕನ ತರ ತೋರುತ್ತದೋ
ಉನ್ಮತ್ತನ ತರ ಇರುತ್ತದೋ
ಆ ಮಾತಿನ ಅಧಿದೇವಿಗೆ ಶಾರದೆಗೆ ಇದೋ ನಮ್ಮ ನಮಸ್ಕಾರ.

ಮಹಾಲಕ್ಷ್ಮೀಸ್ತುತಿ
ಮಾತರ್ಮಾತರ್ ನಮಸ್ತೇ
ದಹ ದಹ ಜಡತಾಂ
ದೇಹಿ ಬುದ್ಧಿಂ ಪ್ರಶಾಂತಾಮ್ ||
ನಮೋ ತಾಯೆ ನಮೋ ಮಾತೆ
ದಹಿಸು ನಮ್ಮ ಜಡತೆಯ
ನೀಡು ಬುದ್ಧಿ ಶಾಂತಿಯ.
ದಹ ದಹ ಜಡತಾಂ
ದೇಹಿ ಬುದ್ಧಿಂ ಪ್ರಶಾಂತಾಮ್ ||
ನಮೋ ತಾಯೆ ನಮೋ ಮಾತೆ
ದಹಿಸು ನಮ್ಮ ಜಡತೆಯ
ನೀಡು ಬುದ್ಧಿ ಶಾಂತಿಯ.
ಸರ್ವಜ್ಞೇ ಸರ್ವವರದೇ ಸರ್ವದುಷ್ಟಭಯಂಕರೀ |
ಸರ್ವದುಃಖಹರೇ ದೇವಿ ಮಹಾಲಕ್ಷ್ಮಿ ನಮೋsಸ್ತು ತೇ ||
ಸರ್ವಜ್ಞೆಯೇ ವರದಾಯಿನೀ, ಎಲ್ಲ ದುಷ್ಟರಿಗೂ ಭಯಕಾರೀ
ಎಲ್ಲ ದುಃಖಗಳ ಪರಿಹರಿಪಾಕೆಯೆ ತಾಯಿ ಲಕ್ಷ್ಮಿಯೇ ಇದೊ ನಮನ.

ಸಿದ್ಧಿಬುದ್ಧಿಪ್ರದೇ ದೇವಿ ಭುಕ್ತಿಮುಕ್ತಿಪ್ರದಾಯಿನಿ |
ಮಂತ್ರಮೂರ್ತೇ ಸದಾದೇವೀ ಮಹಾಲಕ್ಷ್ಮಿ ನಮೋsಸ್ತು ತೇ ||
ಸಿದ್ಧಿ ಬುದ್ಧಿಗಳ ನೀಡುವಾಕೆಯೇ ಭುಕ್ತಿ ಮುಕ್ತಿಗಳ ಕರುಣಿಪಾಕೆಯೇ
ಮಂತ್ರಮೂರ್ತಿಯೇ ಮಹಾಲಕ್ಷ್ಮಿಯೇ ನಿನಗಿದೋ ನಮ್ಮ ನಮನ.

ಆದ್ಯಂತರಹಿತೇ ದೇವಿ ಆದ್ಯಶಕ್ತೇ ಮಹೇಶ್ವರೀ |
ಯೋಗಜೇ ಯೋಗಸಂಭೂತೇ ಮಹಾಲಕ್ಷ್ಮಿ ನಮೋsಸ್ತು ತೇ ||
ಆದಿರಹಿತೆಯೇ ಅಂತ್ಯರಹಿತಯೇ ಆದಿಶಕ್ತಿಯೇ ಮಹೇಶ್ವರೀ
ಯೋಗ ಸಂಭವೆಯೆ ಯೋಗದಾಯಿನಿಯೆ ಮಹಾಲಕ್ಷ್ಮಿಯೇ ಇದೊ ನಮಸ್ಕಾರ.

ಸ್ಥೂಲಸೂಕ್ಷ್ಮೇ ಮಹಾರೌದ್ರೇ ಮಹಾಶಕ್ತೇ ಮಹೋದರೇ |
ಮಹಾಪಾಪಹರೇ ದೇವಿ ಮಹಾಲಕ್ಷ್ಮಿ ನಮೋsಸ್ತು ತೇ ||
ಸ್ಥೂಲೆಯೆ ಸೂಕ್ಷ್ಮೆಯೆ, ಅತಿ ಭಯಂಕರಿಯೆ, ಮಹಾಶಕ್ತಿಯೇ ಮಹಾ ಕಾಯೆಯೇ ತಾಯಿ
ಎಲ್ಲ ಪಾಪಗಳ ಪರಿಹರಿಪಾಕೆಯೆ ಮಹಾಲಕ್ಷ್ಮಿಯೇ ಇದೋ ನಮಸ್ಕಾರ.

ಗುರುಸ್ತುತಿ
ಗುರುಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುರೇವ ಪರಂ ಬ್ರಹ್ಮ ತಸ್ಮೈ ಶ್ರೀಗುರುವೇ ನಮಃ ||
ಗುರುವೆ ಬ್ರಹ್ಮನು, ಗುರುವೆ ವಿಷ್ಣುವು, ಗುರುವೆ ಈಶ್ವರನು
ಗುರುವೆ ಪರಬ್ರಹ್ಮ ಆ ಶ್ರೀ ಗರುವಿಗಿದೊ ನಮಸ್ಕಾರ.

ಅಜ್ಞಾನ ತಿವಿರಾಂಧಸ್ಯ ಜ್ಞಾನಾಂಜನ ತಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರುವೇ ನಮಃ ||
ಅಜ್ಞಾನದ ಕತ್ತಲೆಯಿಂ ಕುರುಡಾಗಿರುವೆನಗೆ
ಸುಜ್ಞಾನದ ಅಂಜನದಿಂ ಕಣ್ದೆರೆಸಿದಾತನೇ, ಶ್ರೀ ಗುರುವೆ, ನಿನಗಿದೊ ನಮ್ಮ ನಮನ.

ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರುವೇ ನಮಃ ||
ಚರ ಅಚರಗಳೆಲ್ಲವನ್ನೂ ಎಡೆಬಿಡದೆ ತುಂಬಿರುವಾತನ ಶ್ರೀ ಚರಣವನ್ನು
ತೋರಿದ ಶ್ರೀ ಗುರುವೆ, ನಿನಗಿದೊ ನಮ್ಮ ನಮಸ್ಕಾರ.

ಅನೇಕ ಜನ್ಮಸಂಪ್ರಾಪ್ತ ಕರ್ಮ ಬಂಧ ವಿದಾಹಿನೇ |
ಆತ್ಮಜ್ಞಾನ ಪ್ರದಾನೇನ ತಸ್ಮೈ ಶ್ರೀಗುರುವೇ ನಮಃ ||
ಆತ್ಮಜ್ಞಾನವನಿತ್ತು ಬಹು ಜನ್ಮಗಳ ಕರ್ಮ-
ಬಂಧವನು ಕಿತ್ತೊಗೆದ ಶ್ರೀ ಗುರುವೆ, ನಿನಗಿದೊ ನಮ್ಮ ನಮಸ್ಕಾರ.

ಶ್ರೀರಾಮಕೃಷ್ಣಸ್ತೋತ್ರ
ಓಂ ಹ್ರೀಂ ಋತಂ ತ್ವಮಚಲೋ ಗುಣಜಿದ್ಗುಣೇಡ್ಯಃ
ನಕ್ತಂ ದಿವಂ ಸಕರುಣಂ ತವ ಪಾದಪದ್ಮಮ್ |
ಮೋಹಂಕಷಂ ಬಹುಕೃತಂ ನ ಭಜೇ ಯತೋsಹಂ
ತಸ್ಮಾತ್ತ್ವಮೇವ ತರಣಂ ಮಮ ದೀನಬಂಧೋ ||೧||
ಓಂ. ಹ್ರೀಂ. ನೀನು ಸತ್ಯಸ್ವರೂಪನು. ಅಚಲನು, ತ್ರಿಗುಣಗಳನ್ನು ಜಯಸಿದವನು ಮತ್ತು ಕಲ್ಯಾಣ ಗುಣಗಳ ಮೂಲಕ ಪ್ರಶಂಸನೀಯನು. ಮೋಹನಾಶಕವೂ. ಪೂಜನೀಯವೂ ಆದ ನಿನ್ನ ಅಡಿದಾವರೆಗಳನ್ನು ನಾನು ಹಗಲೂ ರಾತ್ರಿಯೂ ಭಜಿಸಲಿಲ್ಲ. ಆದುದರಿಂದ ಹೆ, ದೀನಬಂಧು, ನೀನೇ ನನಗೆ ಶರಣು.

ಭಕ್ತಿರ್ಭಗಶ್ಚ ಭಜನಂ ಭವಭೇದಕಾರಿ
ಗಚ್ಛಂತ್ಯಲಂ ಸುವಪುಲಂ ಗಮನಾಯ ತತ್ವಮ್ |
ವಕ್ತ್ರೋ ಧ್ರತೋsಪಿ ಹೃದಯೇ ನ ವಿಭಾತಿ ಕಿಂಚಿತ್
ತಸ್ಮಾತ್ ತ್ತ್ವಮೇವಶರಣಂ ಮಮ ದೀನಬಂಧೋ ||೨||
ಸಂಸಾರನಾಶಕವಾದ ಭಕ್ತಿಜ್ಞಾನೈಶ್ವರ್ಯಾದಿಗಳು ಮತ್ತು ಭಜನೆ ಇವು ಮಹಾತತ್ತ್ವವನ್ನು ಹೊಂದಲುಸಾಕು: ಆದರೆ ಇದು ನನ್ನ ಬರಿಯ ಮಾತಾಗಿ ಹೃದಯದಲ್ಲಿ ಸ್ವಲ್ಪವೂ ಹೊಳೆಯದೆ ಇರುವುದರಿಂದ ಧೀನಬಂಧು, ನೀನೇ ನನಗೆ ಶರಣು.

ತೇಜಸ್ತರಂತಿ ತರಸಾ ತ್ವಯಿ ತೃಪ್ತತೃಷ್ಣಾಃ
ರಾಗೇ ಕೃತೇ ಋತಪಥೇ ತ್ವಯಿ ರಾಮಕೃಷ್ಣೇ |
ಮರ್ತ್ಯಾಮೃತಂ ಶವ ಪದಂ ಮರಣೋರ್ಮಿನಾಶಂ
ತಸ್ಮಾತ್ ತ್ವಮೇವಶರಣಂ ಮಮ ದೀನಬಂಧೋ ||೩||
ಹೇ ರಾಮಕೃಷ್ಣ ಋತಪಥನಾದ ನಿನ್ನಲ್ಲಿ ಅನುರಾಗವು ಉಂಟಾದರೆ ಮನುಷ್ಯರು ನಿನ್ನನ್ನು ಹೊಂದಿ ಪೂರ್ಣಕಾಮರಾಗಿ ಶೀಘ್ರವಾಗಿ ರಜೋ ಗುಣವನ್ನೂ ದಾಟುವರು: ಮರಣವೆಂಬ ಅಲೆಗಳನ್ನು ನಾಶಮಾಡುವ ನಿನ್ನ ಚರಣಗಳು ಮರ್ತ್ಯಲೋಕದಲ್ಲಿ ಅಮೃತವಾಗಿರುವುವು. ಆದುದರಿಂದ ಹೇ ದೀನಬಂಧು. ನೀನೆ ನನಗೆ ಶರಣು.

ಕೃತ್ಯಂ ಕರೋತಿ ಕಲುಷಂ ಕುಹಕಾಂತಕಾರಿ
ಷ್ಣಾಂತಂ ಶಿವಂ ಸುವಿಮಲಂ ತವ ನಾಮ ನಾಥ |
ಯಸ್ಮಾದಹಂ ತ್ವತರಣೋ ಜಗದೇಕಗಮ್ಯ
ತಸ್ವಾತ್ ತ್ವಮೇವಶರಣಂ ಮಮ ದೀನಬಂಧೋ ||೪||
ಹೇ ನಾಥ, ಮಾಯೆಯನ್ನು ನಾಶಮಾಡುವುದೂ, ಮಂಗಳವೂ, ವಿಮಲವೂ ‘ಷ್ಣ’ ಎಂಬ ಅಕ್ಷರದಿಂದ ಅಂತ್ಯವಾಗಿರುವುದ ಅದು ನಿನ್ನ ಹೆಸರು ಪಾಪವನ್ನು ಕೂಡ ಪುಣ್ಯವನ್ನಾಗಿ ಮಾಡುವುದು. ಜಗತ್ತಿಗೆ ಏಕಮಾತ್ರ ಗುರಿಯಾದ ದೀನಬಂಧು, ನನಗೆ ಯಾವ ಆಶ್ರಯವೂ ಇಲ್ಲದಿರುವುದರಿಂದ ನೀನೆ ನನಗೆ ಶರಣು.

ಓಂ ಸ್ಥಾಪಕಾಯ ಚ ಧರ್ಮಸ್ಯ ಸರ್ವಧರ್ಮ ಸ್ವರೂಪಿಣೀ |
ಅವತಾರವರಿಷ್ಠಾಯ ರಾಮಕೃಷ್ಣಾಯ ತೇ ನಮಃ ||೫||
ಧರ್ಮಸಂಸ್ಥಾಪಕನೂ, ಸರ್ವಧರ್ಮಸ್ವರೂಪಿಯೂ, ಅವತಾರ ಶ್ರೇಷ್ಠನೂ ಆದ ಶ್ರೀರಾಮಕೃಷ್ಣನಿಗೆ ನಮಸ್ಕಾರಗಳು.

ಶ್ರೀಶಾರದಾದೇವೀಸ್ತೋತ್ರ
ಪ್ರಕೃತಿಂ ಪರಮಾಮಭಯಾಂ ವರದಾಂ
ನರರೂಪಧರಾಂ ಜನತಾಪಹರಾಮ್
ಶರಣಾಗತಸೇವಕತೋಷಕರೀಂ
ಪ್ರಣಮಾಮಿ ಪರಾಂ ಜನನೀಂ ಜಗತಾಮ್
ಪರಮಪ್ರಕೃತಿಸ್ವರೂಪಳೂ, ಅಭಯವನ್ನು ನೀಡುವವಳೂ, ವರಗಳನ್ನು ಕೊಡುವವಳೂ, ನರರೂಪವನ್ನು ಧರಿಸಿರುವವಳೂ, ಜನರ ದಃಖವನ್ನು ಪರಿಹರಿಸುವವಳೂ, ಶರಣಾಗತರಾದ ಭಕ್ತರನ್ನು ಸಂತೋಷಪಡಿಸುವವಳೂ ಆಗಿರುವ ಜಗಜ್ಜನನಿಯನ್ನು ನಮಿಸುತ್ತೇನೆ.

ಗುಣಹೀನಸುತಾನಪರಾಧಯುತಾನ್
ಕೃಪಯಾsದ್ಯ ಸಮುದ್ಧರ ಮೋಹಗತಾನ್ |
ತರಣೀಂ ಭವಸಾಗರಪಾರಕರೀಂ
ಪ್ರಣಮಾಮಿ ಪರಾಂ ಜನನೀಂ ಜಗತಾಮ್
ಗುಣಹೀನರು, ಅಪರಾಧಿಗಳೂ, ಮೋಹವಶರೂ ಆದ (ನಿನ್ನ) ಮಕ್ಕಳನ್ನು, ಇಂದೇ ಕೃಪೆಮಾಡಿ, ಉದ್ಧರಿಸು; ಸಂಸಾರಸಾಗರವನ್ನು ದಾಟಿಸುವ ನಾವೆಯಂತಿರುವ ಜಗಜ್ಜನನಿಯನ್ನು ನಮಿಸುತ್ತೇನೆ.

ವಿಷಯಂ ಕುಸುಮಂ ಪರಿಹೃತ್ಯ ಸದಾ
ಚರಣಾಂಬುರುಹಾಮೃತಶಾಂತಿಸುಧಾಮ್
ಪಿಬ ಭೃಂಗಮನೋ ಭವರೋಗಹರಾಂ
ಪ್ರಣಮಾಮಿ ಪರಾಂ ಜನನೀಂ ಜಗತಾಮ್
ಎಲೈ ಮನಸ್ಸೆಂಬ ದುಂಬಿಯೆ, ವಿಷಯವೆಂಬ ಹೂವನ್ನು ಸರ್ವದಾ ತ್ಯಜಿಸಿ. ಭವರೋಗವನ್ನು ನಿವಾರಿಸುವ, ಶ್ರೀಮಾತೆಯ ಚರಣಕಮಲಗಳೆಂಬ ಅಮರವಾದ ಶಾಂತಿ-ಸುಧೆಯನ್ನು ಸೇವಿಸು; ಜಗಜ್ಜನನಿಯನ್ನು ನಾನು ನಮಿಸುತ್ತೇನೆ.

ಕೃಪಾಂ ಕುರು ಮಹಾದೇವಿ ಸುತೇಷು ಪ್ರಣತೇಷು ಚ
ಚರಣಾಶ್ರಯದಾನೇನ ಕೃಪಾಮಯಿ ನಮೋsಸ್ತು ತೇ
ಹೇ ಮಹಾದೇವಿ. ನಿನ್ನನ್ನು ನಮಸ್ಕರಿಸುವ ಮಕ್ಕಳಿಗೆ ನಿನ್ನ ಚರಣಗಳಲ್ಲಿ ಆಶ್ರಯಕೊಟ್ಟು ಕೃಪೆಮಾಡು: ಹೇ ಕೃಪಾಮಯಿ, ನಿನಗೆ ನಮಸ್ಕಾರ.

ಲಜ್ಜಾಪಟಾವೃತೇ ನಿತ್ಯಂ ಶಾರದೇ ಜ್ಞಾನದಾಯಿಕೇ
ಪಾಪೇಭ್ಯೋ ನಃ ಸದಾ ರಕ್ಷ ಕೃಪಾಮಯಿ ನಮೋsಸ್ತು ತೇ
ಲಜ್ಜಾಸ್ವಭಾವವುಳ್ಳವಳೂ, ಜ್ಞಾನವನ್ನು ಕೊಡುವವಳೂ ಆದ ಶ್ರೀ ಶಾರದೆ, ನಮ್ಮನ್ನು ಪಾಪಗಳಿಂದ ಯಾವಾಗಲೂ ರಕ್ಷಿಸು; ಹೇ ಕೃಪಾಮಯಿ, ನಿನಗೆ ನಮಸ್ಕಾರ.

ರಾಮಕೃಷ್ಣಗತಪ್ರಾಣಾಂ ತನ್ನಾಮಶ್ರವಣಪ್ರಿಯಾಮ್
ತದ್ಭಾವ ರಂಜಿತಾಕಾರಾಂ ಪ್ರಣಮಾಮಿ ಮುಹುರ್ಮುಹುಃ
ಶ್ರೀರಾಮಕೃಷ್ಣರಲ್ಲಿ ಯಾರ ಪ್ರಾಣವು ಸೇರಿರುವುದೋ, ಶ್ರೀರಾಮಕೃಷ್ಣರ ನಾಮಶ್ರವಣವು ಯಾರಿಗೆ ಪ್ರಿಯವಾದುದೋ, ಶ್ರೀರಾಮಕೃಷ್ಣರ ದಿವ್ಯಭಾವಗಳಿಂದ ಯಾರ ರೂಪಪು ರಂಜಿಸುವುದೋ, ಆ ಜಗಜ್ಜನನಿಯನ್ನು ಪುನಃ ಪುನಃ ನಮಸ್ಕರಿಸುತ್ತೇನೆ.

ಪವಿತ್ರಂ ಚರಿತಂ ಯಸ್ಸಾಃ ಪವಿತ್ರಂ ಜೀವನಂ ತಥಾ
ಪವಿತ್ರತಾಸ್ವರೂಪಿಣ್ಯೈ ತಸ್ಮೈ ಕುರ್ಮೋ ನಮೊ ನಮಃ
ಯಾರ ಶೀಲವು ಪವಿತ್ರವಾದುದೊ, ಹಾಗೆಯೇ ಯಾರ ಜೀವನವು (ಕೂಡ) ಪವಿತ್ರವಾದುದೊ. ಪವಿತ್ರತೆಯ ಸ್ವರೂಪಿಣಿಯಾದ ಆ ಶ್ರೀ ಶಾರದೆಗೆ ಪುನಃ ಪುನಃ ನಮಸ್ಕರಿಸುತ್ತೇನೆ.

ದೇವೀಂ ಪ್ರಸನ್ನಾಂ ಪ್ರಣತಾರ್ತಿಹಂತ್ರೀಂ
ಯೋಗೀಂದ್ರಪೂಜ್ಯಾಂ ಯುಗಧರ್ಮಪಾತ್ರೀಮ್
ತಾಂ ಶಾರದಾಂ ಭಕ್ರಿವಿಜ್ಞಾನದಾತ್ರೀಂ
ದಯಾಸ್ವರೂಪಾಂ ಪ್ರಣಮಾಮಿ ನಿತ್ಯಮ್
ಪ್ರಸನ್ನಳೂ, ಶರಣಾಗತರಾದವರ ದುಃಖವನ್ನು ನಾಶ ಮಾಡುವವಳೂ, ಯೋಗೀಂದ್ರರಿಂದ ಪೂಜಿಸಲ್ಪಡುವವಳೂ, ಯುಗಧರ್ಮವನ್ನು ರಕ್ಷಿಸುವವಳೂ, ಭಕ್ತಿ ವಿಜ್ಞಾನಗಳನ್ನು ಕೊಡುವವಳೂ, ದಯಾಸ್ವರೂಪಳೂ ಆಗಿರುವ ಅ ಶ್ರೀ ಶಾರದಾದೇವಿಯನ್ನು ನಿತ್ಯವೂ ನಮಿಸುತ್ತೇನೆ.

ಸ್ನೇಹೇನ ಬಧ್ನಾಸಿ ಮನೋsಸ್ಮದೀಯಂ
ದೋಷಾನಶೇಷಾನ್ ಸಗುಣೀ ಕರೋಷಿ
ಅಹೇತುನಾ ನೋ ದಯಸೇ ಸದೋಷಾನ್
ಸ್ವಾಂಕೇ ಗೃಹೀತ್ವಾ ಯದಿದಂ ವಿಚಿತ್ರಮ್
ನಮ್ಮ ಮನಸ್ಸನ್ನು ಪ್ರೀತಿಯಿಂದ ಬಂಧಿಸಿರುವೆ; ನಮ್ಮ ದೋಷಗಳನ್ನು ನಿಶ್ಯೇಷವಾಗಿ ನಿರ್ಮೂಲಮಾಡಿ ನಮ್ಮನ್ನು ಗುಣವಂತರನ್ನಾಗಿ ಮಾಡಿರುವೆ; ದೋಷವಂತರಾದ ನಮಗೆ ನಿನ್ನ ಮಡಿಲಲ್ಲಿ ಆಶ್ರಯ ಕೊಟ್ಟು ಆಹೇತು ದಯೆಯನ್ನು ತೋರಿಸಿದ್ದೀಯೆ. ಇದು ವಿಚಿತ್ರ!

ಪ್ರಸೀದ ಮಾತರ್ವಿನಯೇನ ಯಾಚೇ
ನಿತ್ಯಂ ಭವ ಸ್ನೇಹವತೀ ಸುತೇಷು
ಪ್ರೇಮೈಕ ಬಿಂದುಂ ಚಿರದಗ್ಧ ಚಿತ್ತೇ
ವಿಷಿಂಚ ಚಿತ್ತಂ ಕುರು ನಃ ಸುಶಾಂತಮ್
ಎಲೈ ತಾಯಿಯೇ, ನಮ್ಮ ಮೇಲೆ ಪ್ರಸನ್ನಳಾಗು ಎಂದು ವಿನಯ ಪೂರ್ವಕವಾಗಿ ಬೇಡುತ್ತೇನೆ; ಮಕ್ಕಳ ಮೇಲೆ ಯಾವಾಗಲೂ ಸ್ನೆಹವುಳ್ಳವಳಾಗು; ಚಿರಕಾಲದಿಂದ ಬೆಂದು ಬಳಲಿದ ನಮ್ಮ ಚಿತ್ತದಲ್ಲಿ ಒಂದು ಪ್ರೇಮ ಬಿಂದುವನ್ನು ಚಿಮುಕಿಸಿ. ನಮ್ಮ ಚಿತ್ತವನ್ನು ಶಾಂತಗೊಳಿಸು.

ಜನನೀಂ ಶಾರದಾಂ ದೇವೀಂ ರಾಮಕೃಷ್ಣಂ ಜಗದ್ಗುರುಮ್
ಪಾದಪದ್ಮೇ ತಯೋಃ ಶ್ರೀತ್ವಾ ಪ್ರಣಮಾಮಿ ಮುಹುರ್ಮುಹುಃ
ಜನನಿಯಾದ ಶ್ರೀಶಾರದಾದೇವಿ ಮತ್ತು ಜಗದ್ಗುರುವಾದ ಶ್ರೀರಾಮಕೃಷ್ಣ – ಇವರ ಚರಣಕಮಲಗಳನ್ನು ಆಶ್ರಯಿಸಿ, ಪುನಃ ಪುನಃ ನಮಸ್ಕರಿಸುತ್ತೇನೆ.

ಸಮಾನೋ ಮಂತ್ರಸ್ಸಮಿತಿಸ್ಸಮಾನೀ
ಸಮಾನಂ ಮನಸ್ಸಹ ಚಿತ್ತಮೇಷಾಮ್ ||
ಸಮಾನೀ ವ ಆಕೂತಿಸ್ಸಮಾನಾ ಹೃದಯಾನಿ ವಃ |
ಸಮಾನಮಸ್ತು ವೋ ಮನೋ ಯಥಾ ವಸ್ಸುಸಹಾಸತಿ ||
- ಋಗ್ವೇದ
ಸಮಾನಂ ಮನಸ್ಸಹ ಚಿತ್ತಮೇಷಾಮ್ ||
ಸಮಾನೀ ವ ಆಕೂತಿಸ್ಸಮಾನಾ ಹೃದಯಾನಿ ವಃ |
ಸಮಾನಮಸ್ತು ವೋ ಮನೋ ಯಥಾ ವಸ್ಸುಸಹಾಸತಿ ||
- ಋಗ್ವೇದ
ಸಮಾನವಾಗಲಿ ನಿಮ್ಮ ಪ್ರಾರ್ಥನೆ
ಸಮಾನವಾಗಲಿ ನಿಮ್ಮ ಧ್ಯೇಯ
ಸಮಾನವಾಗಲಿ ಉದ್ದೇಶ.
ಸಮಾನವಾಗಲಿ ಕೆಲಸ ಕಾರ್ಯ
ಸಮಾನವಾಗಲಿ ಆಶೋತ್ತರಗಳು.
ಒಂದೇ ಆಗಲಿ ನಿಮ್ಮ ಹೃದಯ
ಒಂದೇ ಆಗಲಿ ನಿಮ್ಮ ಗುರಿ ಗತಿ
ಮತ್ತೆ
ಪೂರ್ಣವಾಗಲಿ ನಿಮ್ಮ ಈ ಶುಭದೈಕ್ಯ.
ಸಮಾನವಾಗಲಿ ನಿಮ್ಮ ಧ್ಯೇಯ
ಸಮಾನವಾಗಲಿ ಉದ್ದೇಶ.
ಸಮಾನವಾಗಲಿ ಕೆಲಸ ಕಾರ್ಯ
ಸಮಾನವಾಗಲಿ ಆಶೋತ್ತರಗಳು.
ಒಂದೇ ಆಗಲಿ ನಿಮ್ಮ ಹೃದಯ
ಒಂದೇ ಆಗಲಿ ನಿಮ್ಮ ಗುರಿ ಗತಿ
ಮತ್ತೆ
ಪೂರ್ಣವಾಗಲಿ ನಿಮ್ಮ ಈ ಶುಭದೈಕ್ಯ.
Courtesy _ Karthik Zen
Comments
Post a Comment