ಜಾತಿಯೆಂಬ ಪೀಡೆ.....
ಪಂಪನೂ ಅಂದಿದ್ದ "ಮಾನವ ಜಾತಿ ತಾನೊಂದೆ ವಲಂ" ಅಂತ. ಅಲ್ಲಿಗೆ ಆದಿಕವಿಯ ಕಾಲಕ್ಕೂ ಆದಿಯಲ್ಲೇ ಜಾತಿ ಸಮಸ್ಯೆ ಗಾಢವಾಗಿತ್ತು ಎನ್ನೋದು ಸ್ಪಷ್ಟ. ಭಾರತ ಉಪಖಂಡದ ಹಿಂದೂ ಧರ್ಮಕ್ಕಂಟಿದ ಪಿಡುಗು ಮಾತ್ರ ಎನ್ನುವಂತೆ ಬಿಂಬಿಸಲಾಗುವ ಈ ಜಾತಿಯ ಪೆಡಂಭೂತ ವಿಶ್ವ ಭ್ರಾತ್ವತ್ವ ಸಾರುವ ಇಸ್ಲಾಂ, ಕ್ರೈಸ್ತಗಳಂತಹ ಸೆಮಟಿಕ್'ಧರ್ಮಗಳನ್ನೂ ಬಿಟ್ಟಿಲ್ಲ. ಅಸ್ಪರ್ಶ್ಯತೆಯ ಅನಿಷ್ಟ ಇಲ್ಲಿ ಕೆಳ ಜಾತಿಯೆಂದು ಪರಿಗಣಿತವಾದ ವರ್ಗಕ್ಕೆ ಶಾಪವಾಗಿ ಅಂಟಿದ್ದರೆ ಅಲ್ಲದು ಸುನ್ನಿ-ಶಿಯಾ-ವಹಾಬಿ-ಕುರ್ದ್-ನವಾಯತ್, ಅರ್ಮೇನಿಯನ್-ಕ್ಯಾಥೊಲಿಕ್-ಪ್ರಾಟೆಂಟೆಸ್ಟ್ -ಸಿರಿಯನ್ ಹೀಗೆ ಪಂಗಡ, ಭಾಷೆ ಹಾಗೂ ಬುಡಕಟ್ಟುಗಳ ಆಚರಣೆಗೆ ಅನುಗುಣವಾಗಿ ಪರಸ್ಪರರನ್ನು ಅಸ್ಪರ್ಶ್ಯರನ್ನಾಗಿಯೂ , ಬದ್ಧದ್ವೇಷಿಗಳನ್ನಾಗಿಯೂ ಮಾಡಿದೆ. ಇಂದಿಗೂ ಜಾತಿಯ ನಿರ್ಧಾರ ವ್ಯಕ್ತಿಯ ಹುಟ್ಟಿನೊಂದಿಗೆ ಆಗುತ್ತದೆ ಅನ್ನುವ ಸುರಳೀತ ತತ್ವಕ್ಕೆ ಜೋತು ಬಿದ್ದಿರುವ ನಮ್ಮ ಸಮಾಜದ ಹೀನ ಮನಸ್ಥಿತಿಗೆ ಮದ್ದಿಲ್ಲ. ಜಾತಿಯಲ್ಲಿ ಕೀಳೆಂದು ಪರಿಗಣಿತವಾದ ವರ್ಗ ತಮ್ಮ ಸಾಮಾಜಿಕ ಆಚರಣೆಗಳಲ್ಲಿ ಮೇಲ್ವರ್ಗದ ಮಂದಿಯಂತೆ ಬಹಿರಂಗ ಆಡಂಬರಕ್ಕೆ ಒತ್ತು ಕೊಟ್ಟರೆ ಒಳಗೊಳಗೇ ಕುದಿಯುವ ರೋಗಗ್ರಸ್ತ ಮನಸ್ಥಿತಿ, ಕೆಲವರ್ಗದವನೊಬ್ಬ ವಿದ್ಯಾವಂತನಾಗಿ ಉನ್ನತ ಹುದ್ದೆಗೇರಿದ ಕೂಡಲೆ ತನ್ನವರನ್ನೇ ಅಸ್ಪರ್ಶ್ಯವಾಗಿಸುವ ವಿಕೃತ ನವ ಬ್ರಾಮ್ಹಣನಾಗುವ ವ್ಯಂಗ್ಯ, ಜಾತಿಯ ಗುರಾಣಿ ಯನ್ನ ತಾವೆಸಗುವ ಅನಾಚಾರಕ್ಕೆಲ್ಲ ಪರವಾನ...