ಕನವರಿಕೆಗಳು ಅವೇಳೆ ಮಳೆ ಮುಗಿಲಿಂದು ಮಲೆನಾಡ ಕರಿಬಸುರಿ ದೊಡ್ಡ ಕಣ್ಣಿನ,ಚೆಂದ ನಗುವಿನ, ಕಪ್ಪು ಬಣ್ಣದ ಮಳೆಯ ತಾಯಿ ಹಿಂಗಾರ ನೆನೆಪು ನಿನ್ನ ನೆನಪು ಹಿಂಗಾರ ಉದುರು ಮಳೆ ಜೋರಾಗಿ ಸುರಿಯದೆ, ನಿಂತೂ ನಿಲ್ಲದೆ, ಕಾಡಿಸಿ ಕೊಲ್ಲುತ್ತದೆ ಹಂಬಲ ಸಿಹಿನೀರ ತಿಳಿಗೊಳಕೆ ಕಲ್ಲು ಬಿದ್ದು ಮೇಲೆದ್ದ ಕೆಸರಿಗೂ ಮುಂದೆ ಕಮಲದ ತಾಯಾಗುವ ಹಂಬಲ ಬಿಸಿಲ ಕೋಲು ಸ್ಪಷ್ಟ ಬಿಸಿಲಿನ ಮುದ್ದು ಬೆಳಗು, ಕಿಟಕಿ ಪಕ್ಕದ ಮಲ್ಲಿಗೆ ಬಳ್ಳಿ ನಡುನಡುವೆ ನಿನ್ನ ನೆನಪು, ಮನೆಯ ಒಳಗಡೆ ಬಿಸಿಲ ಕೋಲುಗಳು ನಿನ್ನ ಕಣ್ಣುಗಳು ನಿನ್ನ ಕಣ್ಣು ಗಳೆಷ್ಟು ಚೆನ್ನ, ನಕ್ಕಾಗ ಮುದ್ದಾಗಿ ಹೊಳೆಯುತ್ತವೆ ತುಳಸಿ ಕಟ್ಟೆಯೆದುರು, ಸಂಜೆ ಹಚ್ಚಿಟ್ಟ ನಂದಾದೀಪ ಅಡವಿ ನೀನು ದಟ್ಟಡವಿಯ ಮುಂಜಾವಿನಂಥವನು ಬಿಸಿಲಿಗೆ ಕರಗಿ, ಎಲೆಗಳ ಮೇಲೆಲ್ಲಾ ಹರಡಿಕೊಳ್ಳುತ್ತೀ. (ಅಡವಿ- ಮೆಹಜಬೀನ್ ಎಂಬ ತೆಲುಗು ಕವಿಯಿತ್ರಿಯೊಬ್ಬರ ಕವಿತೆಯಿಂದ ಪ್ರಭಾವಿತ) BY- Karthik Zen