Monday, October 7, 2013

ವಚನ (231 - 235) - ಬೇಲೂರು ರಘುನಂದನ್


ವಚನ - 231
ಕಟ್ಟು - ೩

ಅಂತರವೆಂದರೆ ಇಬ್ಬರ ನಡುವೆ,
ಬಬ್ಬೆ ಹೊಡೆದು ಬಾಳನ್ನು ಮಬ್ಬು ಮಾಡುವುದಲ್ಲ.
ಸಿಡುಕು ಒಡಕು ಮುನಿಸೆಂದರೆ,
ಒಳಗೊಳಗೇ ಕಸಿದು ಕತ್ತರಿಸಲು ಮಸೆಯುವುದೂ ಅಲ್ಲ.
ಜಗಳವೆಂದರೆ ನುಸಿ ಹತ್ತಿಸಿ ಇಷ್ಟಿಷ್ಟಕ್ಕೂ,
ಪುಕ್ಸಟ್ಟೆ ಸರಕೆಂದು ಮಾತನ್ನು ಸುಖಾಸುಮ್ಮನೆ ಎಸೆಯುವುದಲ್ಲ.
ಸರ್ವ ಅರ್ಥಗಳ ಸಾಧಿಸಿಕೊಂಡು,
ಅವನಿಗೆ ನಾನು, ನನಗೆ ಅವನು,
ವಿಶ್ವಾಸದ ದೋಣಿ ಏರಿ ಮುಳುಗದಂತೆ ಪಯಣಿಸುವುದೇ,
ಬದುಕು ಅಲ್ಲವೇ ಶ್ವೇತಪ್ರಿಯ ಗುರುವೆ?

-ಬೇಲೂರು ರಘುನಂದನ್
5.10.2013



ವಚನ - 232
ಕಟ್ಟು - ೩

ಮೂರು ಗಂಟು ಹಾಕಿಸಿಕೊಂಡು ಸಾಂಗತ್ಯ ಸ್ಥಾಪಿಸದ ಮೇಲೆ ಅದು,
ಎಲ್ಲವೂ ಸರಿಯಿದ್ದ ಸಾಕಾರಕ್ಕೆ ಮಣ್ಣು ಸೇರುವವರೆಗೂ ಸ್ಥಾವರ.
ಸಂಗಾತಿ ಎಂದು ಪ್ರೇಮ ಪ್ರೀತಿ ಮನಸು ದುಡಿಮೆಯ ಬೆವರು ಕೊನೆಗೆ ಮಯ್ಯಿ
ಎಲ್ಲವೂ ಕೊಟ್ಟು ಮೇಲೂ ಅವನ ಸರ್ವೋತ್ಪನ್ನಕ್ಕೆ ಖಾರಕಾನೆಯಂತೆ ನಾ.
ಸಂಗಾತಿ ಸಿಕ್ಕನೆಂದು ಹಿಂದಿದ್ದ ಎಲ್ಲ ಸ್ನೇಹಗಳ ಮಣ್ಣು ಮುಚ್ಚಿ ಮರೆತುಬಿಡು ಅಂದರೆ,
ಹಳದಿಯ ಕಣ್ಣಿಗೆ ಒಗರು ಹತ್ತಿ ಕಂಡಿದ್ದೆಲ್ಲಾ ಚುಚ್ಚುಗಳ್ಳಿ ಅಲ್ಲವೇ ಗುರುವೆ ?
ಮರ ಬಳ್ಳಿ ನಾವಾದ ಮೇಲೆ ಬರುವ ಹಕ್ಕಿಗಳೆಲ್ಲಾ ಬಳ್ಳಿಯ ಹೂವ ರಮಿಸಲು ಬರುತ್ತವೆ,
ಅನ್ನುವ ಸುಳ್ಳು ಕಣ್ಣಿಗೆ ಸಾಂಗತ್ಯ ಸ್ನೇಹ ದೋಣಿಯ ಬೇರೆ ಬೇರೆ ತುದಿಗಳೆಂದು ನೀನೆ ಹೇಳಯ್ಯ
ಶ್ವೇತಪ್ರಿಯ ಗುರುವೆ.

-ಬೇಲೂರು ರಘುನಂದನ್
6.10.2013


ವಚನ - 233
ಕಟ್ಟು - ೩

ಸೊಸೆ ಬಂದು ತಾಯಿಯ ತಿಂದಳು.
ಮಗಳು ಹೋಗಿ ನಾದಿನಿಯ ಜರಿದಳು.
ಗೆಳತಿ ಮಡದಿಯ ಮೆಟ್ಟಿ ನಿಂತಳು.
ಅಕ್ಕ ತಂಗಿಯರು ಸೊಕ್ಕಿ ಹಟಕ್ಕೆ ಬಿದ್ದರು.
ಹೊಸ ಸವತಿಯು ಒಡತಿಯಾದಳು.
ಬೀಗ ಬೀಗತಿಯರು ಬಾಗದೆ ಬಿದ್ದರು.
ಮಗಳು ಮೊಮ್ಮಗಳು ಹೊಸ ನೀರು ಕುಡಿದರು.
ಹಠದ ಮಾರಿಗೆ ಅಹಮಿನ ಮೆರವಣಿಗೆ ಕೂಡಿ,
ಹೆಣ್ಣೆಂದರೆ ಭುವಿಯಂತ ಸಹನೆ ಸರಿ,
ಹೆಣ್ಣೆಂದರೆ ಹಠಮಾರಿಯೆನ್ನುವುದೂ ಸತ್ಯವೇ
ಅಲ್ಲವೇ ಶ್ವೇತಪ್ರಿಯ ಗುರುವೆ ?

-ಬೇಲೂರು ರಘುನಂದನ್
6.10.2013


ವಚನ - 234

ಕಟ್ಟು - ೩


ಸೌಟು ಹಿಡಿವ ಕೈ ನೇಗಿಲ ಹಿಡಿದು,
ಅನ್ನ ಮೂಲದ ಆಧಾರಕ್ಕೆ ಅಂಗೈ ಬಯಲಾಗಬಲ್ಲುದು.
ಮಗುವ ಮೀಯಿಸುವ ಕೈ ದೇಗುಲದ,
ಶಿಲೆ ದೇವನ ತೊಳೆದು ಹೊಳೆವಂತೆ ಮಾಡಬಲ್ಲುದು.
ರುಚಿ ಲೆಖ್ಖಾಚಾರ ಗೊತ್ತಿರುವ ಕೈಗೆ,
ಕೂಡಿ ಕಳೆದು ಹೂಡಿಕೆಯಿತ್ತು ಸಂಕಲಿಸಿ ಎಣಿಸಿ ಗುಣಿಸಬಲ್ಲುದು.
ಬಳೆ ತೊಟ್ಟ ಕೈಗೆ ಹೊಳೆಯಂತಾ ಶಕ್ತಿ ಇರುವಾಗ,
ಕೈಲಾಗದ ಕೊಳೆ ಕೈ ಅಂದರೆ ಇನ್ನು ಸುಮ್ಮನಿರಲಾಗದು ಎಂದು,
ನೀನೇ ಹೇಳು ಶ್ವೇತಪ್ರಿಯ ಗುರುವೆ.

-ಬೇಲೂರು ರಘುನಂದನ್
7.10.2013


ವಚನ - 235
ಕಟ್ಟು - ೩

ಮೈ ತುಂಬಾ ಮೃದು ಮಾಂಸವಿರುವಾಗ,
ಜೋಡಿ ರುಚಿದ್ವಾರ,ಜೋಡಿ ಹಾಲು ಬಿಂದಿಗೆ ,
ಜೀವಕ್ಕಾಗಿ ದುಡಿಯೋ ಪುಷ್ಪ ದ್ವಾರಕ್ಕೆ ಏಕೆ ಬೇಡಿಕೆ?
ಕುಶಿ ಕೊಡುವ ಮಜಬೂತಿನ ಅಂಗಗಳೇನೋ ಸರಿ,
ಬೇಲೂರು ರಘುನಂದನ
ಇಷ್ಟ ಉನ್ಮತ್ತವಾದರೆ ಚಟಕ್ಕೆ ಹಠ ಬರುತ್ತದೆಯಲ್ಲವೇ?
ಮಾಂಸವನೇ ಸದಾ ತಿನ್ನಬೇಕೆಂದರೆ ಕಾಯಿಲೆ ಹತ್ತಿ,
ಮನಸು ಶಿಕಾರಿ ಆಗಿ ಹಾರಿ ಹೋಗುವುದು ಅಲ್ಲವೇ
ಶ್ವೇತಪ್ರಿಯ ಗುರುವೆ?

-ಬೇಲೂರು ರಘುನಂದನ್
7.10.2013

ಮೊದಲ ಮುಂಗಾರ - ರಾಜೇಂದ್ರ ಪ್ರಸಾದ್,



ಮೊದಲ ಮುಂಗಾರ
ಮಳೆಗೆ ಮೈಯೊಡ್ಡಿ
ನಿಂತ ಭೂತಾಯ
ದೇಹ ಘಮ್ ಎಂದಾಗ
ನನ್ನ ಮಾತು ಮಥಿಸಿ,
ಕಾವ್ಯ ಕಾರಣವಾಗುತ್ತದೆ.

ರಗರಗನೆ ಉರಿವ
ಸೂರ್ಯನ ಬೆಳಕು
ಚಂದ್ರನಿಗೆ ನೆರಳಾಗಿ
ಬೆಳದಿಂಗಳಾದಾಗ
ನನ್ನ ಭಾವ ಬಸಿದು
ಜೀವ ಚಿಲುಮೆಯಾಗುತ್ತದೆ.
ರಾಜೇಂದ್ರ ಪ್ರಸಾದ್

ಕೆಂಡದ ಬಣ್ಣದ
ಮಲ್ಲಿಗ ಮೈ..ಮುಖದ
ಅವಳ ಒಲವಿನ ನಗು
ಶಬ್ದತೀರದಲೆ ಚುಂಬಿಸಿದಾಗ
ಹೃದಯ ಹೂಬನವಾಗುತ್ತದೆ.

ಭೂಮಿಗೀತ ಬ್ಲಾಗಿಂದ, 

ತಳುಕಿನ ವೆ೦ಕಣ್ಣಯ್ಯ

ತಳುಕಿನ ವೆ೦ಕಣ್ಣಯ್ಯ (1885-1936)
ಅವರು ಕನ್ನಡ ಸಾಹಿತ್ಯ ಲೋಕದ ಆದ್ಯ ಪ್ರವರ್ತಕರಲ್ಲಿ ಒಬ್ಬರು.  ಇವರನ್ನು ಆಧುನಿಕ ಕನ್ನಡ ಸಾಹಿತ್ಯದ ಅಶ್ವಿನಿಕುಮಾರರೆಂದು ಕರೆಯಲಾಗುತ್ತದೆ. ಇವರು ಪ್ರಾರಂಭಿಸಿದ ಕನ್ನಡ ಎಂ.ಎ. ತರಗತಿಯ ಪ್ರಥಮ ಬ್ಯಾಚಿನಲ್ಲಿದ್ದವರುಗಳಲ್ಲಿ ಒಬ್ಬರು ಕುವೆಂಪುರವರು. ಪುಟ್ಟಪ್ಪನವರು ತಮ್ಮ ಗುರುಗಳನ್ನು ದೇವರೆಂದೇ ತಿಳಿದಿದ್ದರಂತೆ.  ನೋಡಲು ಎತ್ತರದ ಆಳು, ಟಿ.ಎಸ್.ವಿಯವರು. ಬಿ.ಎ. ಮುಗಿಸಿದ ತರುವಾಯ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕನ್ನಡ ವಿಷಯದಲ್ಲಿ ಎಂ.ಎ. ಮಾಡಿ ಮುಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ತಮ್ಮ ಶಿಷ್ಯರೆಲ್ಲರನ್ನೂ ತಮ್ಮ ಮಕ್ಕಳಂತೆ ಕಂಡು, ಕೈಲಾಗದವರಿಗೆ ಊಟ ವಸತಿಗಳನ್ನೂ ಕೊಟ್ಟು ಪಾಠ ಹೇಳಿಕೊಟ್ಟರು. ಕನ್ನಡ ಎಂ.ಎ.ನ ಮೊದಲನೆಯ ಬ್ಯಾಚಿನಲ್ಲಿ ಕುವೆ೦ಪು  ಸೇರಿದಂತೆ ಹಲವರಿದ್ದರು. ಎಲ್ಲರನ್ನೂ ತಮ್ಮ ಮನೆಗೆ ಕರೆದೊಯ್ದು ಊಟ ಹಾಕಿ, ಪಾಠ ಹೇಳಿಕೊಟ್ಟವರು. ಅವರಂತೆಯೇ ಅಷ್ಟೇ ಎತ್ತರಕ್ಕೇರಿದವರು ಅವರ ತಮ್ಮಂದಿರಲ್ಲೊಬ್ಬರಾದ ತ.ಸು.ಶಾಮರಾಯರು. ಅವರಲ್ಲೂ ಇದೇ ಗುಣವನ್ನು ಕಂಡು, ಅವರ ಶಿಷ್ಯರಾಗಿದ್ದ ಜಿ.ಎಸ್.ಶಿವರುದ್ರಪ್ಪ ನವರು ಅವರ ಬಗ್ಗೆ ಒಂದು ಕವನವನ್ನೇ ರಚಿಸಿದ್ದರು. ಅದು ಬಹಳ ಜನಪ್ರಿಯವೂ ಹೌದು. ಅದೇ - ಎದೆ ತುಂಬಿ ಹಾಡಿದೆನು ಅಂದು ನಾನು ...   ಕುವೆ೦ಪು ಅವರಿಗೂ ಗುರುಗಳಾಗಿದ್ದ ವೆ೦ಕಣ್ಣಯ್ಯ ನವರು ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರು.

ವೆ೦ಕಣ್ಣಯ್ಯನವರ ಮನೆಯಲ್ಲಿ ನಿತ್ಯ ಸಾಹಿತ್ಯ ದಾಸೋಹ. ಅಲ್ಲಿ ಪ್ರತಿನಿತ್ಯ ಸಾಹಿತ್ಯ ಗೋಷ್ಠಿ ನಡೆಯುತ್ತಿತ್ತು. ಅದರಲ್ಲಿ ಪಾಲ್ಗೊಳ್ಳುತ್ತಿದ್ದವರಲ್ಲಿ ಬಿ.ಎಂ.ಶ್ರೀ, ತೀನ೦ ಶ್ರೀ  ಎ.ಆರ್.ಕೃ ಮುಂತಾದವರನ್ನು ಹೆಸರಿಸಬಹುದು.ಡಿ.ವಿ.ಗು೦ಡಪ್ಪ  ನವರು ಮಂಕುತಿಮ್ಮನ ಕಗ್ಗದ ಮುಖಪುಟದಲ್ಲಿ ಟಿ.ಎಸ್.ವಿ, ಎ.ಆರ್.ಕೃ ಮತ್ತು ಮೋಕ್ಷಗುಂಡಂ ಕೃಷ್ಣಮೂರ್ತಿಗಳನ್ನು  (ಮೋಕ್ಷ ಗು೦ಡ೦ ವಿಶ್ವೇಶ್ವರಯ್ಯ ನವರ ಸಾಕು ಮಗ) ಮೂವರು ಮೇರು ಪರ್ವಗಳೆಂದು ಹೆಸರಿಸಿದ್ದಾರೆ. ತಮ್ಮ ಮನೆಯಲ್ಲಿ ನಡೆಯುತ್ತಿದ್ದ ಸಾಹಿತ್ಯ ಗೋಷ್ಠಿಯಲ್ಲಿ ಟಿ.ಎಸ್.ವಿ.ಯವರು ಎಷ್ಟರ ಮಟ್ಟಿಗೆ ತಲ್ಲೀನರಾಗುತ್ತಿದ್ದರೆಂದರೆ, ಒಮ್ಮೆ ಅವರ ನವಜಾತ ಕೂಸು ಮರಣ ಹೊಂದಿ ಮನೆಯವರೆಲ್ಲರೂ ಗೊಳೋ ಎಂದು ಅಳುತ್ತಿದ್ದರೆ, ಒಳಗೆ ಹೋಗಿ ಮತ್ತೆ ಬಂದು ಸಾಹಿತ್ಯ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರಂತೆ. ಅದಕ್ಕೆ ಅಲ್ಲಿದ್ದ ಒಬ್ಬರು ‍ಯಾರೋ ಹೇಳಿದ್ದರಂತೆ, 'ಒಳಗೆ ಅಳುತ್ತಿದ್ದಾರೆ, ಏನೋ ಅಚಾತುರ್ಯವಾಗಿದೆ, ನೀವು ನೋಡುವುದಿಲ್ಲವೇ'. ಅದಕ್ಕಿವರು ಎಲ್ಲ ದೈವನಿಯಾಮಕ - ನಡೆಯುವುದೆಲ್ಲವೂ ನಡೆಯುತ್ತಲೇ ಇರುತ್ತದೆ ಎಂದಿದ್ದರಂತೆ. ಎಂದಿಗೂ ಹೆಚ್ಚಿನ ಸಂತೋಷ ಅಥವಾ ದು:ಖ ವ್ಯಕ್ತಪಡಿಸದ ಸ್ಥಿತಪ್ರಜ್ಞ  ವ್ಯಕ್ತಿತ್ವ ಅವರದ್ದು.  ಎತ್ತರದ ಆಳ್ತನ ಹೊ೦ದಿದ್ದ ವೆ೦ಕಣ್ಣಯ್ಯನವರ ಬಳಿ ತಮಾಷೆಯಾಗಿ ಕೈಲಾಸ೦ ಅವರು ಹೀಗೆ ಹೇಳುತ್ತಿದ್ದರ೦ತೆ - ಸಾರ್ ಅಲ್ಲೇ ಮೇಲೆ ಸ್ವರ್ಗದಲ್ಲಿ ನನ್ನ ಪೂರ್ವಜರು ಕ್ಷೇಮವೇ ಸ್ವಲ್ಪ ನೋಡಿಬಿಡಿ',

ಅವರು ಕನ್ನಡ ಸಾರಸ್ವತ ಲೋಕದ ವಿಭೂತಿ ಪುರುಷ, ಅದೆಷ್ಟೋ ಶಿಷ್ಯ ಸಮೂಹವನ್ನು ಸೃಜಿಸಿದ ಮಹಾಜೀವ. ಅವರು ಕನ್ನಡದ ಉದ್ದಾಮ ಸಾಹಿತಿಗಳ ಗುರುಗಳು. ಪ್ರಾತಃ ಸ್ಮರಣೀಯರು. 
Krupe:  http://nirpars.blogspot.com/2011/08/blog-post.html 

Saturday, October 5, 2013

ಜಗತ್ತೆಂದರೆ ನನಗೆ ನಿಲುಕಿದ್ದು, - ಪ್ರವರ ಕೊಟ್ಟೂರು

ಜಗತ್ತೆಂದರೆ ನನಗೆ ನಿಲುಕಿದ್ದು,
ನನ್ನ ನೋಟದ ಪರಿಥಿಗೆ ಸಿಲುಕಿದ್ದು 
ನಿಲುಕದ್ದು ಅನೂಹ್ಯವೋ, ಕೌತುಕವೋ
ಇನ್ನೇನೋ ಆಗಿರುತ್ತದೆ

ಗಡಿಯಾರದಲ್ಲಿ ಮುಳ್ಳುಗಳೇ
ಇರುವುದಿಲ್ಲ
ಹರಿದ ಇತಿಹಾಸದ ಕರಾಳ ಪುಟಗಳಿರುತ್ತವೆ
ಗುಂಡು ಹೊಕ್ಕಿದ ಗೋಡೆಗಳ ಒಡಲಲ್ಲಿ
ಮೊಳೆಗಳ ನೆತ್ತಿಗೆ ಫೋಟೊಗಳು
ಸೀಳಿಟ್ಟ ಎದೆಗಳೂ ಇರಬಹುದು

ವಿಷದಂಗಡಿಯಲ್ಲಿ ಕುಂತಿದ್ದ ಹಿಟ್ಲರ್ರನ ಮೀಸೆಯನ್ನು
ಚಾಪ್ಲೀನು ಕೊಂಡುಕೊಂಡಿದ್ದಾನೆ

ರಣಹದ್ದುಗಳೀಗ ಲೋಹದ ಹಕ್ಕಿಗಳಾಗಿವೆ
ಬೆಂಕಿ ಕುಲುಮೆಯಲ್ಲಿ ರೆಕ್ಕೆಗಳ ಗರ್ಭ,
ನೆಲಕ್ಕೂ ಆಕಾಶಕ್ಕೂ ಇಟ್ಟ ನಿಚ್ಚಣಿಕೆ
ಇದ್ದಿಲಾಗಿದೆ,
ಏರಲೆಂದು ಹೊರಟವರ ಬೂದಿ
ಗಾಳಿಯಲ್ಲಿ

ಸೋಮಾಲಿಯಾದ ಮಗು ಗನ್ನು
ಹಿಡಿಯುತ್ತದೆ,
ತುಂಡು ರೊಟ್ಟಿಗೆ, ಮುಚ್ಚಲಾರದ ಹಸಿವಿಗೆ
ಹಲ್ಲು ಕಿರಿಯುತ್ತಲೇ
ಮನಸೋ ಇಚ್ಚೆ ಗುಂಡು ಹಾರಿಸುತ್ತದೆ
ಅಲ್ಯಾವ ಸೇಡು ಇರಲಿಲ್ಲ!!!
ಅದೆಷ್ಟೋ ಶತಮಾನಗಳ ಹಸಿವು
ತೊಳಲಾಟ

ಜೇನು ತುಂಬಿದ ಜಗತ್ತಿಗೆ
ಕರೆದೊಯ್ದ ಏಸುವನ್ನು
ಶಿಲುಬೆಗೇರಿಸಿ ಮೊಳೆ ಬಡಿದಿದ್ದಾರೆ,
ನೆತ್ತಿಯಲ್ಲಿ ಮುಳ್ಳಿನ ಸಿಂಬೆ ಇನ್ನೂ ಇದೆ
ಗೋಪುರದ ಗಂಟೆಯನ್ನು ದಿನವೂ
ಬಾರಿಸುತಿದ್ದಾರೆ,
ಬಾಸುಂಡೆಗಳು ದಿನ ದಿನಕ್ಕೂ
ಮೂಡುತ್ತಲೇ ಇವೆ
ತುಂಡು ಬಟ್ಟೆ ಕಳಚುತ್ತಲೇ ಇದೆ

ಲಕ್ಷಾಂತರ ಜೀವಗಳ ರಕ್ತ ಕುಡಿದ
ಯುದ್ಧದ ನಂತರವೇ
ರಾಜನೊಬ್ಬ ಜೋಳಿಗೆ ಹಿಡಿದು ಬಿಕ್ಷುವಾಗಿದ್ದಾನೆ
ಕೊನೆಗೂ ಅರಿತಿದ್ದಾನೆ
ಜಗತ್ತನ್ನು, ಬದುಕನ್ನು, ಬೆಳಕು-ಕತ್ತಲನ್ನೂ
ಆತನ ಕಣ್ಣುಗಳೀಗ ನಿಂತ ನದಿಯಾಗಿವೆ

ದೇಶ-ಕಾಲಗಳ ಯಾರು ಮೀರಿರಬಹುದು?
ಲೆಕ್ಕ ಹಾಕಿದೆ, ಕೈಬೆರಳುಗಳು ಸಾಕಾದವು

ಗಾಂಧಿಯ ಚರಕದಲ್ಲಿ ಜೇಡ ನೂಲಿನ
ಪ್ರವರ ಕೊಟ್ಟೂರು, 
ಜಾಗವನ್ನು ಆಕ್ರಮಿಸಿಕೊಂಡಿದೆ,
ರಾಟೆಯನ್ನು ಇನ್ಯಾರೋ ತಿರುವುತಿದ್ದಾರೆ
ರಾಟೆಯಲ್ಲಿದ್ದ ಜೇಡ
ಜಗತ್ತನ್ನೇ ಉಂಡೆ ಕಟ್ಟುತ್ತಿದೆ,
ಮೇಲಿದ್ದವರು ಕೆಳಗೆ; ಕೆಳಗಿದ್ದವು ಮೇಲೆ
ರಾಟೆ ತಿರುಗುತ್ತಲೇ ಹೋಗುತ್ತದೆ

ಈ ನಾಣ್ಯದಲಿನ ಮುಖ
ವಿಕಾರವಾಗಿದೆ,
ಇತಿಹಾಸಕ್ಕೆ ದೇಹ ಮಾತ್ರ
ಮುಖವಿಲ್ಲ
ಮುಖವಾಡಗಳ ಬೇಕಿದ್ದಲಿ
ತೊಡಿಸಿಕೊಳ್ಳಬಹುದು

ಇದೆಲ್ಲವೂ ನನ್ನದೇ ಪ್ರಪಂಚವೇ?
ನಾನು ಬದುಕುತ್ತಿರುವುದು ವರ್ತಮಾನದಲ್ಲೆಂಬುದಕ್ಕೆ
ಸಬೂಬು ಬೇಕು!
ನಿಲುಕಿದ್ದೋ ನಿಲುಕದ್ದೋ ಎಂಬುದಕ್ಕೂ
ಸಬೂಬು ಬೇಕು!

ನೀತಿ ಮಾತು


Sunday, September 29, 2013

ಉಮಾಶ್ರೀ ಸಿನಿಮೋತ್ಸವ - ಕಾಜಾಣ ಪ್ರಕಟಣೆ


ಒಂದು ಉತ್ತಮ ಮಾಹಿತಿ
ಕುಪ್ಪಳಿಯಲ್ಲಿ ಉಮಾಶ್ರೀ ಸಿನಿಮೋತ್ಸವ ನವೆಂಬರ್ 8, 9, 10 ಇದೆ 
ಬರೀ 50ಜನ ಭಾಗವಹಿಸಲು ಮಾತ್ರ ಅವಕಾಶ ಇದೆ
ಉಮಾಶ್ರೀ ಅವರೊಂದಿಗೆ ಇನ್ನೂ ಅನೇಕರು ನಮ್ಮೊಂದಿಗೆ ಇರುತ್ತಾರೆ. ಈಗಾಗಲೇ ಸಾಕಷ್ಟು ಅರ್ಜಿಗಳು ಬಂದಿದ್ದು selectionsಮಾಡಿಕೊಳ್ಳುತ್ತಿದ್ದೇವೆ. Facebookನ ಆಸಕ್ತರಿಗಾಗಿ ಇಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. 
ಆಸಕ್ತರು ನನ್ನನ್ನು ಅಥವಾ ಪ್ರವರ ಕೊಟ್ಟೂರ್ ರನ್ನು ಸಂಪರ್ಕ ಮಾಡಬಹುದು.


ಈ ಭೂಮಿಯಲ್ಲಿ ಸಾಯಲೆಂದೇ ಹುಟ್ಟಿದವರು ಜಾಸ್ತಿ - ಶಿವ ಪ್ರಸಾದ

ಈ ಭೂಮಿಯಲ್ಲಿ ಸಾಯಲೆಂದೇ ಹುಟ್ಟಿದವರು ಜಾಸ್ತಿ 
ಇನ್ನಿವರುಗಳ ಮದ್ಯೆ ಜಾತಿ ಒಂದೇ ಬದುಕುತ್ತಿದೆ.
ಇನ್ನು
ಶ್ರೀ ಶಿವ ಪ್ರಸಾದ
ಅಮಲು ಈಗ ಜನಿವಾರದಲ್ಲೂ ಏರಿದೆ
ಕೀಳೆಂದು ಕರೆಸಿಕೊಂಡವರು
ಸತ್ಯನಾರಾಯಣನ ಪೂಜೆಗೆ ಅಣಿಮಾಡುತಿದ್ದಾರೆ.
ಮಡಿ ಮೈಲಿಗೆಯನ್ನು ಕೆತ್ತಿಸಿಕೊಂಡು
ಪೂಜಿಸುತಿದ್ದಾರೆ.

ಇನ್ನು ಸಾಹಿತ್ಯವೋ ಅದೂ ವ್ಯಾಪಾರ
ಹರಾಜಿಗಿದೆ ಎಂದರೆ
ಪಾಪ ನೋಟಿಗೂ ನಾಚಿಕೆಯಾಗಿ
ನಗುತ್ತಿತ್ತಂತೆ..

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......