ನಮ್ಮ ದೇಶದಲ್ಲಿ ಅನೇಕ ದಾನಿಗಳು ಆಗಿ ಹೋಗಿದ್ದಾರೆ. ಅವರ ದಾನದ ಕಥೆಗಳು ಅನೇಕರಿಗೆ ಸ್ಫೂರ್ತಿ ನೀಡಿವೆ. ಆದರೆ ಕೆಲವೊಂದು ಪ್ರಸಂಗಗಳು ಹೆಚ್ಚು ಪ್ರಸಿದ್ಧಿಯನ್ನು ಪಡೆದಿಲ್ಲ. ಅಂಥ ಹೆಚ್ಚು ಪ್ರಚಾರ ಪಡೆಯದ ಒಬ್ಬ ದಾನಿ ಉಶೀನರ. ಈ ಕಥೆ ಮಹಾಭಾರತದ ವನಪರ್ವದಲ್ಲಿ ಬಂದಿದೆ.
ಉಶೀನರ ಭೋಜನಗರದಲ್ಲಿ ಒಂದು ಕಾಲದಲ್ಲಿ ಮಹಾಪ್ರತಾಪಶಾಲಿಯಾದ ರಾಜನಾಗಿದ್ದ. ಆತ ತುಂಬ ಉದಾರಿಯೆಂತಲೂ, ಪರೋಪಕಾರಿ ಹಾಗೂ ಮಹಾದಾನಿ ಎಂತಲೂ ಪ್ರಸಿದ್ಧನಾಗಿದ್ದ.
ಇವನ ದಾನಶೀಲತೆಯ ಕೀರ್ತಿ ಮೂರು ಲೋಕಗಳಲ್ಲೂ ಹರಡಿತ್ತು. ಈ ವಿಷಯ ದೇವತೆಗಳ ನಾಯಕನಾದ ದೇವೇಂದ್ರನನ್ನು ಮುಟ್ಟಿತು. ಬಹುಶಃ ಮಾನವರ ಸಾಧನೆಗಳು ದೇವತೆಗಳಲ್ಲೂ ಅಸೂಯೆಯನ್ನು ಉಂಟುಮಾಡುತ್ತಿದ್ದವೆಂದು ತೋರುತ್ತದೆ.
ಇಂದ್ರನಿಗೆ ಉಶೀನರನ ದಾನ ಮಾಡುವ ಮನಸ್ಸು ಯಾವ ಮಟ್ಟದವರೆಗೂ ಹೋಗಬಲ್ಲುದು ಎಂಬುದನ್ನು ಪರೀಕ್ಷಿಸುವ ಮನಸ್ಸಾಯಿತು. ಈ ಪರೀಕ್ಷೆ ನಡೆಸುವುದಕ್ಕಾಗಿ ಆತ ಇತರ ದೇವತೆಗಳ ಸಹಾಯ ಕೇಳಿದ.
ಅಗ್ನಿಯನ್ನು ಕರೆದು ಒಂದು ಪಾರಿವಾಳದ ರೂಪವನ್ನು ಪಡೆಯಲು ಹೇಳಿದ. ತಕ್ಷಣ ಪಾರಿವಾಳದ ರೂಪದಲ್ಲಿ ಅಗ್ನಿ ನಿಂತ. ಇಂದ್ರ ಸ್ವತಃ ತಾನೇ ನಾಯಿಯ ರೂಪ ತಾಳಿ ಪಾರಿವಾಳವನ್ನು ಹಿಡಿಯಲು ಬೆನ್ನು ಹತ್ತಿದ.
ಗಾಬರಿಯಾದ ಪಾರಿವಾಳ ಹಾರುತ್ತ ಹಾರುತ್ತ ಉಶೀನರನ ಬಳಿಗೆ ಬಂದಿತು. ರಾಜ ತುಂಬ ದಯಾಳುವಲ್ಲವೇ? ಅದಕ್ಕೆ ಶರಣಾಗತಿಯನ್ನು ನೀಡಿದ. ಅದರ ಹಿಂದೆಯೇ ನಾಯಿಯೂ ಓಡಿ ಬಂತು. ತನಗೆ ಆಹಾರವಾಗಬೇಕಿದ್ದ ಪಾರಿವಾಳದ ಕಡೆಗೆ ನುಗ್ಗಲು ನೋಡಿತು. ಅದನ್ನು ಉಶೀನರ ತಡೆದು ನಿಲ್ಲಿಸಿದ.
ಆಗ ನಾಯಿ ಹೇಳಿತು, `ರಾಜಾ, ನೀನು ಮಾಡುವುದು ಅನ್ಯಾಯ. ಅದು ನನ್ನ ಆಹಾರ. ಅಲ್ಲಿಂದ ಇಲ್ಲಿಯವರೆಗೂ ಅದನ್ನು ಅಟ್ಟಿಸಿಕೊಂಡು ಬಂದಿದ್ದೇನೆ. ನನಗೆ ಬೆಳಿಗ್ಗಿನಿಂದ ಯಾವ ಆಹಾರವೂ ದೊರೆತಿಲ್ಲ.
ಈ ಪಾರಿವಾಳವೇ ನನ್ನ ಇಡೀ ಮನೆಮಂದಿಗೆಲ್ಲ ಆಹಾರ. ಇದು ಸಿಗದಿದ್ದರೆ ನನ್ನ ಹೆಂಡತಿ, ಮಕ್ಕಳು ಮತ್ತು ನಾನು ಉಪವಾಸದಿಂದ ಸಾಯಬೇಕಾಗುತ್ತದೆ. ಆದ್ದರಿಂದ ಪಾರಿವಾಳವನ್ನು ನನಗೆ ಕೊಟ್ಟು ಬಿಡು.`
ರಾಜ ಈಗಾಗಲೇ ಪಾರಿವಾಳಕ್ಕೆ ರಕ್ಷಣೆಯ ಅಭಯವನ್ನು ನೀಡಿದ್ದಾಗಿದೆ. ಅದನ್ನು ನಾಯಿಗೆ ಒಪ್ಪಿಸುವುದು ಸಾಧ್ಯವಿಲ್ಲ. ಆದರೆ ನಾಯಿಯ ವಾದವೂ ಸರಿಯಾದದ್ದೇ. ಅದಕ್ಕೆ ತನ್ನ ಆಹಾರವನ್ನು ಪಡೆದುಕೊಳ್ಳುವ ಅಧಿಕಾರವಿದೆ.
ಪಾರಿವಾಳವನ್ನು ಅದಕ್ಕೆ ಕೊಡದಿದ್ದರೆ ನಾಯಿಗೆ ಅಪಚಾರ ಮಾಡಿದಂತಾಗುತ್ತದೆ. ಹೀಗೆ ಯೋಚಿಸಿ ಉಶೀನರ ನಾಯಿಗೆ ಹೇಳಿದ, `ಪಾರಿವಾಳಕ್ಕೆ ನಾನು ರಕ್ಷಣೆ ನೀಡಿದ್ದರಿಂದ ಅದನ್ನು ನಿನಗೆ ಕೊಡಲಾರೆ.
ಆದರೆ ನೀನೂ ಉಪವಾಸ ಬೀಳಬಾರದು. ಅದಕ್ಕೆ ಪಾರಿವಾಳದ ತೂಕದ ಮಾಂಸವನ್ನು ನನ್ನ ದೇಹದಿಂದ ಕೊಡುತ್ತೇನೆ` ಎಂದು ಹೇಳಿ ತಕ್ಕಡಿಯನ್ನು ತರಿಸಿ ಅದರ ಒಂದು ತಟ್ಟೆಯಲ್ಲಿ ಪಾರಿವಾಳವನ್ನಿಟ್ಟು ಮತ್ತೊಂದರಲ್ಲಿ ತನ್ನ ದೇಹದ ಭಾಗಗಳನ್ನು ಕತ್ತರಿಸಿ ಹಾಕುತ್ತ ಬಂದ.
ಅದೆಷ್ಟು ಮಾಂಸವನ್ನು ಹಾಕಿದರೂ ಪಾರಿವಾಳದ ತಟ್ಟೆ ಮೇಲಕ್ಕೇರುತ್ತಲೇ ಇಲ್ಲ! ಕೊನೆಗೆ ತಾನೇ ತಟ್ಟೆಯಲ್ಲಿ ಕುಳಿತು ತನ್ನ ಇಡೀ ದೇಹವನ್ನೇ ಸಮರ್ಪಿಸಿಕೊಂಡ. ಈ ಸರ್ವಾರ್ಪಣ ಭಾವವನ್ನು ಕಂಡು ಇಂದ್ರ, ಅಗ್ನಿ ತೃಪ್ತರಾಗಿ, ಪ್ರತ್ಯಕ್ಷವಾಗಿ ಅವನು ಮತ್ತೆ ಮೊದಲಿನಂತಾಗುವಂತೆ ವರ ನೀಡಿದರು. ಅವನ ಖ್ಯಾತಿ ಮತ್ತಷ್ಟು ಹೆಚ್ಚಿತು.
ಘನವಾದ ತತ್ವವೊಂದಕ್ಕೆ ದಿನರಾತ್ರಿ ಮನಸೋತು, ಬೇರೆ ಏನನ್ನೂ ಚಿಂತಿಸದೇ ಸದಾ ಅದೇ ತತ್ವಕ್ಕೇ ತನ್ನನ್ನು ತೆತ್ತುಕೊಂಡು ಜೀವಭಾರವನ್ನು ಮರೆತ ಇಂಥ ಮಹಾನುಭಾವರ ಜೀವನ ಅಸಾಮಾನ್ಯವಾದದ್ದು
Krupe: : Prajavani - July 15, 2011
http://www.prajavani.net/web/include/story.php?news=1649§ion=136&menuid=14
ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Monday, July 25, 2011
Sunday, July 24, 2011
ವಿಚಿತ್ರ ತೀರ್ಮಾನ
ಅವನೊಬ್ಬ ಹತ್ತಿಯ ವ್ಯಾಪಾರಿ. ತಾನು ರೈತರಿಂದ ಹತ್ತಿಯನ್ನು ಕೊಂಡು, ಅದನ್ನು ಬಿಗಿಯಾಗಿ ಹಗ್ಗದಿಂದ ಕಟ್ಟಿ ದಿಂಡುಗಳನ್ನು ಮಾಡಿ ಪಟ್ಟಣಕ್ಕೆ ಒಯ್ದು ಹೆಚ್ಚಿನ ಹಣಕ್ಕೆ ಮಾರಿ ಬರುತ್ತಿದ್ದ. ಅವನ ಜೀವನ ಸುಖವಾಗಿ ಸಾಗುತ್ತಿತ್ತು.
ಒಂದು ದಿನ ಹೀಗೆ ಐವತ್ತು ಹತ್ತಿಯ ದಿಂಡುಗಳನ್ನು ಬಂಡಿಯಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಊಟಕ್ಕೆಂದು ಮರದ ಕೆಳಗೆ ಕುಳಿತ. ಊಟವಾದ ಮೇಲೆ ವಿಶ್ರಾಂತಿ ಪಡೆಯಲು ಮಲಗಿದ. ಆ ಮರದ ಕೆಳಗೆ ಒಂದು ಸುಂದರವಾದ ಬುದ್ಧನ ವಿಗ್ರಹ. ಅದರ ಮುಂದೆಯೇ ಮಲಗಿದ. ಎಚ್ಚರವಾದ ಮೇಲೆ ನೋಡುತ್ತಾನೆ,
ತನ್ನ ಬಂಡಿ ಪೂರ್ತಿ ಖಾಲಿಯಾಗಿದೆ. ಎಲ್ಲ ಹತ್ತಿಯ ದಿಂಡುಗಳನ್ನು ಯಾರೋ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ! ಯಾರನ್ನಾದರೂ ಕೇಳೋಣವೆಂದರೆ ಬುದ್ಧನ ವಿಗ್ರಹದ ಹೊರತು ಯಾರೂ ಅಲ್ಲಿ ಇಲ್ಲ. ಅವನು ತಕ್ಷಣವೇ ಹೋಗಿ ನ್ಯಾಯಾಧಿಕಾರಿಗೆ ದೂರು ಒಪ್ಪಿಸಿದ.
ಆ ನ್ಯಾಯಾಧೀಶ ಎಲ್ಲ ವಿಷಯವನ್ನು ಕೇಳಿ ತಿಳಿದುಕೊಂಡು ಒಂದು ತೀರ್ಮಾನಕ್ಕೆ ಬಂದ. ಆ ಹತ್ತಿಯ ದಿಂಡುಗಳನ್ನು ಬುದ್ಧನ ವಿನಾ ಇನ್ನಾರೂ ಕದ್ದಿರುವುದಕ್ಕೆ ಸಾಧ್ಯವಿಲ್ಲ, ಯಾಕೆಂದರೆ ಅಲ್ಲಿ ಮತ್ತಾರೂ ಇರಲಿಲ್ಲ. ಆದ್ದರಿಂದ ಬುದ್ಧನನ್ನು ನ್ಯಾಯಾಲಯಕ್ಕೆ ಕರೆತರುವಂತೆ ಅಪ್ಪಣೆ ಮಾಡಿದ. ಅಧಿಕಾರಿಗಳು ಕಷ್ಟಪಟ್ಟು ವಿಗ್ರಹವನ್ನು ಹೊತ್ತು ತಂದರು.
ನ್ಯಾಯಾಲಯದಲ್ಲಿ ಜನಸಂದಣಿ. ಇದೆಂಥ ವಿಚಾರಣೆ? ಬುದ್ಧನ ವಿಗ್ರಹ ಹತ್ತಿಯ ದಿಂಡುಗಳನ್ನು ಕಳವು ಮಾಡುವುದುಂಟೇ? ಒಂದು ವೇಳೆ ಬುದ್ಧನೇ ಕಳವು ಮಾಡಿದ್ದು ನಿಜವೆಂದು ತೀರ್ಮಾನವಾದರೆ ದಿಂಡುಗಳನ್ನು ವ್ಯಾಪಾರಿಗೆ ಯಾರು ಕೊಡುವವರು?
ನ್ಯಾಯಾಧೀಶ ಗಂಭೀರವಾಗಿ ಬಂದು ತನ್ನ ಆಸನದಲ್ಲಿ ಕುಳಿತ. ಎಲ್ಲರೂ ಕುತೂಹಲದಿಂದ ಕಲಾಪವನ್ನು ಗಮನಿಸುತ್ತಿದ್ದರು. ನ್ಯಾಯಾಧೀಶ ವ್ಯಾಪಾರಿಗೆ ಮತ್ತೊಮ್ಮೆ ತನ್ನ ತಕರಾರನ್ನು ವಿವರಿಸಲು ಹೇಳಿದ. ಆತ ಚಾಚೂ ತಪ್ಪದಂತೆ ಎಲ್ಲವನ್ನೂ ವಿವರಿಸಿ. ತನ್ನ ಕಳವಾದ ಮಾಲನ್ನು ಹೇಗಾದರೂ ಹುಡುಕಿಕೊಡುವಂತೆ ಬೇಡಿಕೊಂಡ. ನ್ಯಾಯಾಧೀಶ ಅದೇ ಗಂಭೀರತೆಯಿಂದ ನ್ಯಾಯಾಲಯದಲ್ಲಿ ಇಡಲಾಗಿದ್ದ ಬುದ್ಧನ ವಿಗ್ರಹಕ್ಕೆ ಕೇಳಿದ, `ಈ ತಕರಾರಿನ ಬಗ್ಗೆ ನಿನಗೇನಾದರೂ ಹೇಳುವುದು ಇದೆಯೇ?` ಜನರೆಲ್ಲ ಗೊಳ್ಳೆಂದು ನಕ್ಕರು. ವಿಗ್ರಹ ಮಾತನಾಡುವುದುಂಟೇ? ನ್ಯಾಯಾಧೀಶ ಮೇಜು ಕುಟ್ಟಿ ಹೇಳಿದ, `ಸದ್ದು, ನ್ಯಾಯಾಲಯದಲ್ಲಿ ಈ ರೀತಿಯ ಗಲಾಟೆ ಆಗಕೂಡದು`. ಜನ ಸ್ತಬ್ಧರಾದರು.
ಮತ್ತೆ ನ್ಯಾಯಾಧೀಶ ಬುದ್ಧನ ವಿಗ್ರಹದ ಕಡೆಗೆ ನೋಡಿ ಹೇಳಿದ, `ನಿನಗೆ ಹೇಳುವುದು ಏನೂ ಇಲ್ಲದಿದ್ದರೆ ನಾನು ತೀರ್ಪು ನೀಡಬೇಕಾಗುತ್ತದೆ ಮತ್ತು ನಾನು ನೀಡುವ ತೀರ್ಪಿಗೆ ನೀನು ಬದ್ಧನಾಗಬೇಕಾಗುತ್ತದೆ.` ವಿಗ್ರಹ ಏನು ಹೇಳೀತು?
ನಿಧಾನವಾಗಿ ನ್ಯಾಯಾಧೀಶ ತೀರ್ಪು ಕೊಟ್ಟ. `ಅಪರಾಧಿ ಬುದ್ಧನೇ. ಅವನೇ ಹತ್ತಿಯ ದಿಂಡುಗಳನ್ನು ಕದ್ದು ಬೇರೆಯವರಿಗೆ ಮಾರಿದ್ದಾನೆ. ಯಾಕೆಂದರೆ ಅಪರಾಧ ನಡೆದಾಗ ಅವನ ವಿನಾ ಮತ್ತಾರೂ ಇರಲೇ ಇಲ್ಲ. ಆದ್ದರಿಂದ ಮೂರು ದಿನದ ಒಳಗಾಗಿ ಆತ ಕದ್ದ ಮಾಲನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು.` ಜನಕ್ಕೆ ನಗು ತಡೆಯಲಾಗಲಿಲ್ಲ. ಈ ನ್ಯಾಯಾಧೀಶನ ಮೂರ್ಖತನಕ್ಕೆ ಅವರು ಕೈ ತಟ್ಟಿ ಜೋರಾಗಿ ನಕ್ಕರು.
ನ್ಯಾಯಾಲಯ ಗದ್ದಲಮಯವಾಯಿತು. ತಕ್ಷಣ ನ್ಯಾಯಾಧೀಶ ಹೇಳಿದ, `ನಾನು ಆಗಲೇ ನಿಮಗೆ ತಾಕೀತು ಮಾಡಿದ್ದೆ, ನ್ಯಾಯಾಲಯದ ಗೌರವಕ್ಕೆ ಕುಂದುಬರದ ಹಾಗೆ ನಡೆದುಕೊಳ್ಳಬೇಕು ಎಂದು. ನೀವು ಅದಕ್ಕೆ ಭಂಗ ತಂದಿದ್ದೀರಿ. ಆದ್ದರಿಂದ ನಿಮಗೆಲ್ಲ ಶಿಕ್ಷೆ ನೀಡಲೇಬೇಕು. ಅಧಿಕಾರಿಗಳು ಇಲ್ಲಿರುವ ಎಲ್ಲರ ಹೆಸರು, ವಿಳಾಸಗಳನ್ನು ಬರೆದುಕೊಳ್ಳಬೇಕು. ಮತ್ತು ಪ್ರತಿಯೊಬ್ಬರೂ ಇನ್ನು ನಾಲ್ಕು ತಾಸಿನಲ್ಲಿ ಮೂರು ಮೂರು ಹತ್ತಿಯ ದಿಂಡುಗಳನ್ನು ದಂಡವಾಗಿ ತಂದು ನ್ಯಾಯಾಲಯಕ್ಕೆ ಒಪ್ಪಿಸಬೇಕು.`
ಅನಿವಾರ್ಯವಾಗಿ ಎಲ್ಲರೂ ಮೂರು ದಿಂಡುಗಳನ್ನು ತಂದಿಟ್ಟರು. ಮೂಟೆಗಳನ್ನು ಕಳೆದುಕೊಂಡ ವ್ಯಾಪಾರಿ ಈ ರಾಶಿಗಳೊಳಗೆ ತನ್ನ ದಿಂಡುಗಳನ್ನು ಗುರುತಿಸಿದ. ಯಾಕೆಂದರೆ ಅವನು ತನ್ನ ದಿಂಡುಗಳ ಮೇಲೆ ನೀಲಿ ಬಣ್ಣದ ಗುರುತು ಮಾಡಿದ್ದ. ನ್ಯಾಯಾಧೀಶನ ಬುದ್ಧಿವಂತಿಕೆಯಿಂದ ನಿಜವಾದ ಕಳ್ಳರು ಸಿಕ್ಕಿಬಿದ್ದರು.
ಕೆಲವೊಂದು ಬಾರಿ ಕೆಲವು ವಿಚಾರಗಳು ಮೇಲ್ನೋಟಕ್ಕೆ ವಿಚಿತ್ರ, ಅಸಂಬದ್ಧ ಎನ್ನಿಸಿದರೂ ಆಳದಲ್ಲಿ ನೋಡಿದಾಗ ಚಿಂತನೆ ಕಂಡುಬರುತ್ತದೆ. ಆದ್ದರಿಂದ ಯಾವುದೇ ಚಿಂತನೆ, ನಮ್ಮ ಮನಸ್ಸಿಗೆ ಸರಿ ತೋರಲಿಲ್ಲವೆಂದಾಗ ಅದನ್ನು ಅಪ್ರಸ್ತುತ, ಅಪ್ರಯೋಜಕ ಎಂದು ತಳ್ಳಿಹಾಕುವುದು ಬುದ್ಧಿವಂತಿಕೆಯ ಲಕ್ಷಣವಲ್ಲ. 22- July 11

Saturday, July 23, 2011
ಆರ್ಥರ್ ಆಶ್
ಆರ್ಥರ್ ಆಶ್ ಟೆನಿಸ್ ಇತಿಹಾಸದಲ್ಲಿ ಬಹುದೊಡ್ಡ ಹೆಸರು. ಅದು ಬರೀ ಟೆನಿಸ್ ನಲ್ಲಿ ಮಾತ್ರ ದೊಡ್ಡ ಹೆಸರಲ್ಲ. ಆಶಾವಾದಕ್ಕೆ, ಸಮಾಜ ಸುಧಾರಣೆಗೆ, ಅಸಮಾನತೆಯ ನಿವಾರಣೆಗೆ ತನ್ನನ್ನು ಆಳವಾಗಿ ತೊಡಗಿಸಿಕೊಂಡ ಹೆಸರು ಆರ್ಥರ್ ಆಶ್.
ಆರ್ಥರ್ ಆಶ್ ಹುಟ್ಟಿದ್ದು ಜುಲೈ 10, 1948 ರಂದು ಅಮೆರಿಕೆಯ ವರ್ಜಿನಿಯಾದ ರಿಚ್ಮಂಡ್ನಲ್ಲಿ. ತಂದೆ ಬ್ರೂಕ್ಫೀಲ್ಡ್ ಆಟದ ಮೈದಾನದ ಹೊರಗಿದ್ದ ಕಾರುಗಳನ್ನು ನಿಲ್ಲಿಸುವ ಸ್ಥಳದ ವಿಶೇಷ ಪೋಲೀಸ್ ಆಗಿದ್ದರು. ಮಗನನ್ನು ತುಂಬ ಪ್ರೀತಿಯಿಂದ ಆದರೆ ಶಿಸ್ತಿನಿಂದ ಬೆಳೆಸಿದರು. ಈ ಹುಡುಗ ಬೆಳೆದದ್ದೇ ಟೆನಿಸ್ ಮೈದಾನಗಳಲ್ಲಿ. ಮೈ ತುಂಬಿಕೊಳ್ಳದೇ ಕಡ್ಡಿಯ ಹಾಗೆ ಆರಡಿ ಒಂದು ಇಂಚು ಎತ್ತರಕ್ಕೆ ಬೆಳೆದ.
ತನ್ನ ಏಳನೇ ವಯಸ್ಸಿಗೆ ಟೆನಿಸ್ ಆಡಲು ಪ್ರಾರಂಬಿಸಿದ ಆಶ್, ಹದಿನೇಳನೇ ವಯಸ್ಸಿಗೆ ರಾಷ್ಟ್ರೀಯ ಜ್ಯೂನಿಯರ್ ಚಾಂಪಿಯನ್ ಆದ. ಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ವಿದ್ಯಾರ್ಥಿವೇತನ ಪಡೆದು ಹೋದ. ವರ್ಣಭೇದ ನೀತಿ ಹೆಚ್ಚಾಗಿದ್ದ ಕಾಲದಲ್ಲಿ ಈ ಕಪ್ಪು ಹುಡುಗ ಮುಂದೆ ಬೆಳೆಯುವುದು ತುಂಬ ಕಷ್ಟವಿತ್ತು. ಎಷ್ಟೋ ಟೆನಿಸ್ ಮೈದಾನಗಳಲ್ಲಿ ಈತನಿಗೆ ಪ್ರವೇಶ ದೊರೆಯುತ್ತಿರಲಿಲ್ಲ. ಆದರೆ ಅವನ ಏಕಾಗ್ರ ಚಿತ್ತ ಮತ್ತು ಸತತ ಪ್ರಯತ್ನ ಯಾವುದನ್ನೂ ಲೆಕ್ಕಿಸದೇ ಮುಂದೆ ನಡೆಸುತ್ತಿತ್ತು.
1966 ರಲ್ಲಿ ಆತ ಅಮೆರಿಕೆಯ ಡೆವಿಸ್ ಕಪ್ ತಂಡಕ್ಕೆ ಆಯ್ಕೆಯಾಗಿದ್ದ ಮೊದಲ ಕಪ್ಪು ವ್ಯಕ್ತಿಯಾಗಿದ್ದ. 1968 ರಲ್ಲಿ ಅಮೆರಿಕೆಯ ಓಪನ್ ಟೆನಿಸ್ನ ಚಾಂಪಿಯನ್ನಾಗಿ ಜಗತ್ತನ್ನು ಬೆರಗುಗೊಳಿಸಿದ. ಮುಂದೆ 1970 ರಲ್ಲಿ ಆಸ್ಟ್ರೇಲಿಯನ್ ಓಪನ್ ಟೆನಿಸ್ನ ಚಾಂಪಿಯನ್ ಆದ. 1975 ರಲ್ಲಿ ಪ್ರಪಂಚದ ಅತ್ಯಂತ ಶ್ರೇಷ್ಠ ಹಾಗೂ ಪ್ರತಿಷ್ಠೆಯ ಇಂಗ್ಲೆಂಡಿನ ವಿಂಬಲ್ಡನ್ ಪ್ರಶಸ್ತಿಯನ್ನು ಆಗಿನ ಚಾಂಪಿಯನ್ ಆಗಿದ್ದ ಜಿಮ್ಮಿ ಕಾನರ್ಸನನ್ನು ಸೋಲಿಸಿ ಗೆದ್ದ. ಹಾಗೆ ಪ್ರಶಸ್ತಿ ಪಡೆದ ಮೊದಲ ಕರಿಯ ವ್ಯಕ್ತಿ ಎಂದು ಮನ್ನಣೆ ಪಡೆದ, ಪ್ರಪಂಚದ ನಂಬರ್ ಒಂದನೇ ಆಟಗಾರನಾದ.
ಇದಿಷ್ಟೇ ಆಗಿದ್ದರೆ ಅದೊಂದು ಕ್ರೀಡಾಪಟುವಿನ ಸಾಧನೆಯ ಕಥೆಯಾಗುತ್ತಿತ್ತು. ಆದರೆ ಆತ ವರ್ಣಭೇದ ನೀತಿಯ ವಿರುದ್ಧ ಹೊರಾಡಿದ್ದೂ ಒಂದು ವಿಶೇಷ ಗಾಥೆ.
ಬಹಿಷ್ಕಾರವಿದ್ದರೂ ಆಗ ದಕ್ಷಿಣ ಆಫ್ರಿಕೆಗೆ ಹೋಗಿ ನೆದರ್ಲೆಂಡಿನ ಬಿಳಿಯ ಆಟಗಾರ ಆಕರ್ನೊಡನೆ ಸೇರಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ. ಅಷ್ಟೇ ಅಲ್ಲ ಅಲ್ಲಿಯ ಜನರ ಮನಸ್ಸನ್ನು ಗೆದ್ದ. ಅವರು ಆತನಿಗೊಂದು ವಿಶೇಷ ಹೆಸರು ನೀಡಿದರು - ಸಿಫೋ . ಝುಲು ಭಾಷೆಯಲ್ಲಿ ಸಿಫೋ ಎಂದರೆ ಭಗವಂತ ನೀಡಿದ ಕಾಣಿಕೆ .
1979 ರಲ್ಲಿ ಅವನಿಗೆ ಹೃದಯಘಾತವಾಗಿ ನಾಲ್ಕು ರಕ್ತನಾಳಗಳ ಬದಲಾವಣೆಯಂತಹ ಭಾರೀ ಶಸ್ತ್ರಚಿಕಿತ್ಸೆಯಾದರೂ ಪಾರಾಗಿ ಬದುಕಿದ. ಅಷ್ಟಾದರೂ ಅಮೆರಿಕೆಯ ತಂಡಕ್ಕೆ ತರಬೇತುದಾರನಾಗಿ ಮುಂದುವರೆದ. 1983 ರಲ್ಲಿ ಮತ್ತೊಮ್ಮೆ ಹೃದಯಘಾತವಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ. ಇದಕ್ಕಿಂತ ಹೆಚ್ಚಿನ ಆಘಾತವೆಂದರೆ 1988 ರಲ್ಲಿ ಅವನಿಗೆ ಭಯಂಕರವಾದ ಏಡ್ಸ್ ರೋಗ ತಗುಲಿದೆ ಎಂದು ಗೊತ್ತಾಯಿತು. ಬಹುಶಃ ಎರಡು ಬಾರಿ ಶಸ್ತ್ರಚಿಕಿತ್ಸೆಯಾದಾಗ ನೀಡಿದ ಯಾವುದೋ ರಕ್ತದಲ್ಲಿ ಬಂದ ಸೋಂಕು ಅದು. ಮುಂದೆ ಆರು ವರ್ಷ ಅದರೊಡನೆ ಹೋರಾಟ. ಏಡ್ಸ್ ರೋಗದ ವಿರುದ್ಧ ನಡೆದ ಹೋರಾಟಗಳಿಗೆಲ್ಲ ನೇತಾರನಾದ. ಇದರೊಂದಿಗೆ ತನ್ನ ಜೀವನ ಚರಿತ್ರೆ ಬರೆದ. ಅವನ ಗ್ರಂಥ, `ಯಶಸ್ಸಿನೆಡೆಗೆ ಕಠಿಣ ದಾರಿ` (ಎ ಹಾರ್ಡ್ ರೋಡ್ ಟು ಗ್ಲೋರಿ) 1,600 ಪುಟಗಳ ಬೃಹತ್ ಗ್ರಂಥ. ಇದು ಎಷ್ಟು ಮೆಚ್ಚಿಗೆ ಪಡೆಯಿತೆಂದರೆ ಅವನಿಗೆ ಅಮೆರಿಕೆಯ ಅನೇಕ ವಿಶ್ವವಿದ್ಯಾಲಯಗಳ ಡಾಕ್ಟರೇಟ್ ನೀಡಲಾಯಿತು.
ಅವನಿಗಾದ ನೋವನ್ನು ಕಂಡು ಅಭಿಮಾನಿಯೊಬ್ಬ ಕೇಳಿದ, `ಭಗವಂತ ನೀನೇಕೆ ಹೀಗೆ ಮಾಡಿದೆ ಎಂದು ಕೇಳಬಾರದೇ?` ಅದಕ್ಕೆ ಆಶ್ ಕೊಟ್ಟ ಉತ್ತರ ಅಸಾಮಾನ್ಯ. ಅತ ಹೇಳಿದ, `ಪ್ರಪಂಚದಲ್ಲಿ ಐದಾರು ಕೋಟಿ ಹುಡುಗರು ಟೆನಿಸ್ ಆಡಲು ಪ್ರಾರಂಭಿಸಿರಬೇಕು. ಅದರಲ್ಲಿ ಒಂದು ಐದಾರು ಲಕ್ಷ ತರುಣರು ರಾಜ್ಯ ಮಟ್ಟದಲ್ಲಿ, ಐದು ಸಾವಿರ ತರುಣರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಿರಬಹುದು. ಅವರಲ್ಲಿ ಕೇವಲ ಐವತ್ತು ಜನ ವಿಂಬಲ್ಡನ್ನ ಪ್ರಾಥಮಿಕ ಹಂತಕ್ಕೆ ಆಯ್ಕೆಯಾಗುತ್ತಾರೆ. ಕೇವಲ ಎಂಟು ಜನ ಕ್ವಾರ್ಟರ್ ಫೈನಲ್ಲಿಗೆ, ನಾಲ್ಕು ಜನ ಸೆಮಿ ಫೈನಲ್ಲಿಗೆ ಮತ್ತು ಕೊನೆಗೆ ಇಬ್ಬರು ಫೈನಲ್ಲಿಗೆ ತಲುಪುತ್ತಾರೆ. ಅವರಲ್ಲೊಬ್ಬ ಮಾತ್ರ ಚಾಂಪಿಯನ್ ಎನ್ನಿಸಿಕೊಳ್ಳುತ್ತಾನೆ. ಅಂತಹ ಒಬ್ಬ ಅದೃಷ್ಟಶಾಲಿ ನಾನಾಗಿದ್ದೆ. ಆ ವಿಂಬಲ್ಡನ್ ಪಾರಿತೋಷಕವನ್ನು ಕೈಯಲ್ಲಿ ಹಿಡಿದು ಸಂತೋಷದಲ್ಲಿ ತೇಲಾಡುತ್ತಿರುವಾಗ ನಾನು ಆಕಾಶದ ಕಡೆಗೆ ನೋಡಿ, ಭಗವಂತಾ ನನಗೇಕೆ ಇಂಥ ಸಂತೋಷ ಕೊಟ್ಟೆ, ಎಂದು ಕೇಳಿದೆನೇ? ಈಗ ಏಕೆ ಈ ಪ್ರಶ್ನೆ ಕೇಳಲಿ?` ಇಂಥ ಸಮತೋಲನ ಮನಃಸ್ಥಿತಿ ಹೊಂದಿದ್ದವನು ಆಶ್. ಅವನು 1993 ರ ಫೆಬ್ರವರಿ 6ರಂದು ಆತ ದೇಹ ಬಿಟ್ಟ. ಆದರೆ ಜನರ ಮನಸ್ಸಿನಲ್ಲಿ ಉಳಿದುಬಿಟ್ಟ. ಎಲ್ಲಿಂದ ಎಲ್ಲಿಗೆ ಜೀವನದ ಪಯಣ? ಸಾಧನೆಗೆ ಮಿತಿಗಳಿಲ್ಲ. ನಮ್ಮ ಮನಸ್ಸಿನ ಮಿತಿಗಳೇ ನಮ್ಮ ಜೀವನದ ಧೋರಣೆಗಳನ್ನು, ಸಾಧನೆಯ ಮಿತಿಗಳನ್ನು ನಿರ್ಧರಿಸುತ್ತವೆ. ನಾವೇ ಹಾಕಿಕೊಂಡ ಈ ಮಿತಿಗಳನ್ನು ಮೀರಲು ಪ್ರಯತ್ನಿಸೋಣ.
Krupe - Prajavani ; 08 July 2011

Friday, July 22, 2011
ನಂಬಿಕೆಯೇ ದೇವರು
ರಾಜೀವನ ಆರೋಗ್ಯ ಚೆನ್ನಾಗಿಯೇ ಇತ್ತು. ಅವನಿಗೆ ವಯಸ್ಸು ನಲವತ್ತಾಗಿದ್ದರೂ ಇಪ್ಪತ್ತೈದರ ಹುಡುಗನ ಹಾಗೆ ಸಂತೋಷವಾಗಿ ಚಟುವಟಿಕೆಯಿಂದ ಕೆಲಸಮಾಡಿಕೊಂಡಿದ್ದ. ಒಂದು ದಿನ ತುಂಬ ತಲೆನೋವು ಕಾಣಿಸಿಕೊಂಡಿತು.
ಯಾವುದೋ ಮಾತ್ರೆ ತೆಗೆದುಕೊಂಡ. ತಾತ್ಪೂರ್ತಿಕವಾಗಿ ನೋವು ಕಡಿಮೆಯಾದಂತೆ ಅನಿಸಿದರೂ ಮತ್ತೆ ಮರುಕಳಿಸಿತು. ಮರುದಿನ ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಎಡಕಣ್ಣಲ್ಲಿ ಒಂದು ಕೆಂಪು ಚುಕ್ಕಿ ಕಂಡಂತಾಯಿತು. ಸಂಜೆಯ ಹೊತ್ತಿಗೆ ಅದು ಕಣ್ಣು ತುಂಬೆಲ್ಲ ಹರಡಿಕೊಂಡು ಕಣ್ಣೇ ಕಾಣದಂತಾಯಿತು. ಮರುದಿನವೇ ವೈದ್ಯರ ಕಡೆಗೆ ಹೋದ.
ಹತ್ತಾರು ಪರೀಕ್ಷೆಗಳನ್ನು ನಡೆಸಿ ರಾಜೀವನ ಎಡಕಣ್ಣಿಗೆ ರಕ್ತ ಸರಬರಾಜು ಮಾಡುವ ರಕ್ತನಾಳದಲ್ಲಿ ತಡೆಯುಂಟಾಗಿದ್ದು ಆ ಕಣ್ಣು ಪೂರ್ತಿ ದೃಷ್ಟಿ ಕಳೆದುಕೊಂಡಿದೆ ಎಂತಲೂ ಅದನ್ನು ಸರಿಮಾಡುವುದು ಸಾಧ್ಯವಿಲ್ಲವೆಂದೂ ವೈದ್ಯರು ತಿಳಿಸಿದರು. ಇದು ಏಕೆ ಆಯಿತು ಎಂಬುದು ತಿಳಿಯದಾಗಿದೆ ಎಂದರು. ಈ ಆಘಾತವೇ ಸಾಕಾಗಿತ್ತು.
ಮಾರನೆಯ ದಿನ ಬೆಳಿಗ್ಗೆ ಎದ್ದು ಮನೆಯಿಂದ ಹೊರಗೆ ಕಾಲಿಡುತ್ತಿದ್ದಂತೆ ತಲೆಗೆ ಸುತ್ತುಬಂದಂತಾಗಿ ರಾಜೀವ ಕುಸಿದುಬಿದ್ದ. ಮತ್ತೆ ಅವನನ್ನು ಆಸ್ಪತ್ರೆಗೆ ಸೇರಿಸಿದರು.
ಈ ಬಾರಿ ಹೃದಯತಜ್ಞರು ಪರೀಕ್ಷೆಗಳನ್ನು ನಡೆಸಿದರು. ಅವರ ತೀರ್ಮಾನ ಇನ್ನೂ ಭಯಂಕರವಾಗಿತ್ತು. ಇದೊಂದು ಅತ್ಯಂತ ಅಪರೂಪದ ರೋಗ ತಾಕಾಯಾಸಸ್ ಆರ್ಟಿರಿಟಿಸ್ ರೋಗವಂತೆ. ಇದರಿಂದ ರಕ್ತನಾಳಗಳಲ್ಲಿ ಉರಿ, ಊತ, ಉಂಟಾಗುತ್ತ ಅವು ಸಣ್ಣದಾಗುತ್ತ ಹೋಗುತ್ತವಂತೆ. ತಕ್ಷಣವೇ ಆಪರೇಷನ್ ಮಾಡದೇ ಹೋದರೆ ಬದುಕುವುದು ದುಸ್ತರ.
ನಾಲ್ಕು ದಿನಗಳ ಹಿಂದೆಯೇ ಆರೋಗ್ಯವಾಗಿದ್ದ ರಾಜೀವನಿಗೆ ಸಿಡಿಲು ಬಡಿದಂತಾಯಿತು. ನಾಲ್ಕೇ ದಿನಗಳಲ್ಲಿ ಅದೆಷ್ಟು ಬದಲಾವಣೆ? ರಾಜೀವ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದ. ಮತ್ತೊಬ್ಬರಿಗೆ ಈ ಪರಿಯ ತೊಂದರೆ ಬಂದರೆ ಯಾವ ಚಿಂತೆ ಮಾಡಬೇಡಿ ಎಲ್ಲ ಸರಿಹೋಗುತ್ತದೆ ಎಂದು ಹೇಳುವುದು ಬಹಳ ಸುಲಭ. ಆ ಪರಿಸ್ಥಿತಿ ತಮಗೇ ಬಂದಾಗ ಯಾವ ಹೊರಗಿನ ಸಮಾಧಾನ ಧೈರ್ಯವನ್ನು ಕೊಡುವುದಿಲ್ಲ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಸೇರಿಕೊಂಡ ರಾಜೀವ ದಿನದಿನಕ್ಕೆ ಹತಾಶನಾಗುತ್ತಿದ್ದ. ತನ್ನ ನಂತರ ಹೆಂಡತಿ ಹಾಗೂ ಸಣ್ಣ ವಯಸ್ಸಿನ ಮಗನ ಜೀವನ ನಡೆಯುವ ಬಗೆ ಹೇಗೆ ಎಂದು ಚಿಂತಿಸತೊಡಗಿದ. ಅವನ ಪರಿವಾರದವರೂ ಎದೆ ಒಡೆದುಕೊಂಡಿದ್ದರು.
ಆಸ್ಪತ್ರೆಯಲ್ಲಿ ಅವನನ್ನು ಕಾಣಲು ಸ್ನೇಹಿತರು ಬರುತ್ತಿದ್ದರು. ಕೆಲವರು ಶುಭಸಂದೇಶದ ಪತ್ರಗಳನ್ನು ಕೊಟ್ಟು ಹೋಗುತ್ತಿದ್ದರು. ರಾಜೀವನನ್ನು ತಪಾಸಿಸಲು ಬಂದ ಆಸ್ಪತ್ರೆಯ ವೈದ್ಯರೂ ಒಂದು ಶುಭಸಂದೇಶದ ಕಾರ್ಡನ್ನು ಕೊಟ್ಟು ಹೋದರು. ನಂತರ ರಾಜೀವ ಅದನ್ನು ಗಮನವಿಟ್ಟು ನೋಡಿದ. ಅದರ ಮುಖಪುಟದ ಮೇಲೆ ಸುಂದರವಾದ ಶ್ರೀ ಕೃಷ್ಣನ ಚಿತ್ರವಿದೆ. ಆದರೆ ಶ್ರೀ ಕೃಷ್ಣ ವೈದ್ಯರ ಹಾಗೆ ಗೌನು ಹಾಕಿಕೊಂಡಿದ್ದಾನೆ, ಕೊರಳಲ್ಲಿ ಸ್ಟೆಥಾಸ್ಕೋಪ್ ಇದೆ. ಚಿತ್ರದ ಮೇಲೊಂದು ಸುಂದರ ಬರಹ, `ನಮ್ಮ ಮುಖ್ಯ ಶಸ್ತ್ರಚಿಕಿತ್ಸಕ.` ಅದನ್ನು ನೋಡಿ ರಾಜೀವನಿಗೆ ಏನೋ ಧೈರ್ಯ ಬಂದಂತಾಯಿತು. ತಾನು ಅತ್ಯಂತ ಸಮರ್ಥ ಶಸ್ತ್ರಚಿಕಿತ್ಸಕನ ಕೈಯಲ್ಲಿ ತನ್ನ ದೇಹವನ್ನು ಒಪ್ಪಿಸಿದ್ದೇನೆ ಎನ್ನಿಸಿತು. ಆಪರೇಷನ್ ಮಾಡುವ ವೈದ್ಯರ ಹೃದಯದಲ್ಲಿರುವ ಭಗವಂತ ತನ್ನನ್ನು ರಕ್ಷಿಸುತ್ತಾನೆ ಎಂಬ ಭಾವನೆ ಬಂತು. ಮನಸ್ಸು ನಿರಾಳವಾಯಿತು. ಹೆಂಡತಿ, ಸ್ನೇಹಿತರೊಂದಿಗೆ ನಗುನಗುತ್ತ ಹಿಂದಿನ ದಿನ ಕಳೆದ. ಮರುದಿನವೇ ಆಪರೇಷನ್ ಇದ್ದರೂ ಚೆನ್ನಾಗಿ ನಿದ್ರೆ ಮಾಡಿದ. ಮರುದಿನ ಆಪರೇಷನ್ ಥೇಟರಿಗೆ ಕರೆದುಕೊಂಡು ಹೋಗುವಾಗ ಹೆಂಡತಿಗೆ ಹೇಳಿದ, `ನನಗೇನಾಗುತ್ತದೆ ಎಂಬ ಚಿಂತೆಯಿಲ್ಲ. ಭಗವಂತನ ಕೈಯಲ್ಲಿ ಒಪ್ಪಿಸಿಕೊಂಡು ಬಿಟ್ಟಿದ್ದೇನೆ. ನೀನು ಭಯಪಡಬೇಡ.`
ಎಂಟು ತಾಸುಗಳ ಆಪರೇಷನ್ ನಡೆಯಿತು. ಅವನ ರಕ್ತನಾಳಗಳನ್ನೆಲ್ಲ ಸರಿಪಡಿಸಿದರು ವೈದ್ಯರು. ಮೂರು ದಿನಗಳ ದೀರ್ಘ ಮಂಪರಿನಿಂದ ಹೊರಬಂದ ರಾಜೀವ. ಅವನಿಗೆ ಪುನರ್ಜನ್ಮವಾಗಿತ್ತು. ಈಗಲೂ ಅವನ ಎಡಗಣ್ಣು ಕಾಣುವುದಿಲ್ಲ, ಮೊದಲಿನ ಹಾಗೆ ಹಾರಾಟ ಮಾಡುವಂತಿಲ್ಲ. ಆದರೂ ತನ್ನನ್ನು ನಿಭಾಯಿಸಿಕೊಂಡು ಬದುಕಿದ್ದಾನೆ. ಬದುಕಿನಲ್ಲಿ ಆಶಾವಾದ ಉಳಿಸಿಕೊಂಡಿದ್ದಾನೆ, ಉತ್ಸಾಹ ಬೆಳೆಸಿಕೊಂಡಿದ್ದಾನೆ. ಇದು ಪವಾಡವಲ್ಲ. ವೈದ್ಯರ ಪರಿಶ್ರಮ ಹಾಗೂ ವಿಜ್ಞಾನದ ಪ್ರಗತಿಯ ಸಾಧನೆ. ಇದರೊಂದಿಗೆ ಮನಸ್ಸಿಗೆ ಚೈತನ್ಯ ತಂದ ನಂಬಿಗೆಯ ಫಲ. ಯಾವುದೇ ನಂಬುಗೆ ಪವಾಡಸದೃಶ ಬದಲಾವಣೆಯನ್ನು ತರಬಲ್ಲದು.
ಬಾಳಿನ ಬುನಾದಿ ನಂಬಿಕೆ. ಈ ನಂಬಿಕೆ ವ್ಯಕ್ತಿಗಳ ಮೇಲೆ ಇರಬಹುದು, ಸಂಸ್ಥೆಗಳ ಮೇಲೆ, ದೇಶದ ಮೇಲೆ, ಮಾನವ ಸ್ವಭಾವಗಳ ಮೇಲೆ ಅಥವಾ ಭಗವಂತನ ಮೇಲಿರಬಹುದು. ನಮ್ಮ ನಂಬಿಕೆಯೇ ನಮ್ಮನ್ನು ದೇವರಾಗಿ ಕಾಪಾಡುತ್ತದೆ.
Krup: Prajavani 21 July 211

Thursday, July 21, 2011
ಲೋಕದ ಕಣ್ಣಿಗೆ ರಾಧೆಯು ಕೂಡ
ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು
ನನಗು ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು ...
ತಿಂಗಳ ರಾತ್ರಿ ತೊರೆಯ ಸಮೀಪ
ಉರಿದರೆ ಯಾವುದೋ ದೀಪ
ಯಾರೊ ಮೋಹನ ಯಾವ ರಾಧೆಗೋ
ಪಡುತಿರುವನು ಪರಿತಾಪ ...
ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ
ಭಾವಿಸಿ ಸೇರಲು ಬೃಂದಾವನವ
ರಾಧೆ ತೋರುವಳು ದಾರಿ ....
ಮಹಾಪ್ರವಾಹ... ಮಹಾಪ್ರವಾಹ
ಮಹಾಪ್ರವಾಹ... ಮಹಾಪ್ರವಾಹ
ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ
ತೊರೆದರು ತನ್ನ ತೊರೆಯದು ಪ್ರಿಯನ
ರಾಧೆಯ ಪ್ರೀತಿಯ ನೀತಿ ಇದು
ರಾಧೆಯ ಪ್ರೀತಿಯ ನೀತಿ ....
- ಎಚ್.ಎಸ್.ವೆಂಕಟೇಶಮೂರ್ತಿ
Wednesday, July 20, 2011
ಡಾ . ಗುರುರಾಜ ಕರ್ಜಗಿ - ಕಿರು ಪರಿಚಯ
ಡಾ . ಗುರುರಾಜ ಕರ್ಜಗಿ ಯವರು ಶಿಕ್ಷನ ತಜ್ಞರು. ಇವರು ಮೂರೂ ದಶಕಗಲಿಗಿಂತಲೂ ಹೆಚ್ಚುಕಾಲ ಉನ್ನತ ಮಟ್ಟದ ವಿದ್ಯಾಸಂಸ್ಥೆ ಕಟ್ಟಿ , ಬೆಳೆಸಿ, ಪ್ರಾಧ್ಯಾಪಕರಾಗಿ , ಸಾವಿರಾರು ವಿದ್ಯಾರ್ಥಿಗಳ ಕನುಸುಗಳಿಗೆ ಬೆಳಕಾಗಿ, ಅವರ ಭವಿಷ್ಯವನ್ನು ಉಜ್ಜಲವಾಗಿಸಿದವರು. ವಿಶ್ವದಾದ್ಯಂತ ಶಿಷ್ಯ ಪರಂಪರೆಯನ್ನ್ನು ಹೊಂದಿರುವ ಇವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟನ್ನು ಪಡೆದುಕೊಂಡಿದ್ದಾರೆ. ೨೨ಕ್ಕೂಹೆಚ್ಚು ಸಂಶೋಧನಾ ಲೇಖನಗಳನು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ .
ವಿ.ವಿ. ಎಸ್. ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ೧೬ ವರ್ಷಗಳ ಕಾಲ ಪ್ರಾಂಶುಪಾಲರಾಗಿ , ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯಾ ಸ್ಥಾಪಕ ಪ್ರಾಂಶುಪಾಲರಾಗಿ ಹಾಗು ನಿರ್ದೇಶಕರಾಗಿ , ಅಂತರರಾಷ್ಟ್ರೀಯ ಸೃಜನಶೀಲ ಅಧ್ಯಾಪನ ಕೇಂದ್ರದ (iACT) ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಈಗ ಸೃಜನಶೀಲ ಅಧ್ಯಾಪನ ಕೇಂದ್ರದ (ACT) ಅಧ್ಯಕ್ಷರಾಗಿದ್ದಾರೆ , ಇವರ ಅನುಭವದ ಮೂಸೆಯಿಂದ ಕತೆಗಳೂ , ಲೇಖನಗಳೂ, ಪಠ್ಯ ಪುಸ್ತಕಗಳು ಮುಡಿಬಂದಿವೆ . ಸೃಜನ ಶೀಲತೆ , ಸಂವಹನಕಲೆ , ಮುಂತಾದದುಗಳಲಿ ಆಸಕ್ತಿ ಹೊಂದಿರುವ ಡಾ ಕರಜಗಿಯವರು ತಮ್ಮ ಧನಾತ್ಮಕ ಚಿಂತನೆಗಳು , ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳಿಗಾಗಿ ಚಿರಪರಿಚಿತರು ಇವರ ಉಪನ್ಯಾಸ ಹಾಗು ಕಾರ್ಯಾಗಾರಗಳಿಗೆ , ಭಾರತ ಮತ್ತು ವಿದೇಶಗಳಿಲಿಯೂ ತುಂಬ ಬೇಡಿಕೆ ಇದೆ .

Subscribe to:
Posts (Atom)
ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.
"ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......

-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರ, ಕೋರಿಕೆಗೆ ಕೋರಿಕೆ! ಅಂದರೆ, ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" ಪ್ರಕ...
-
ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು ಪಂಜೆ ಮಂಗೇಶ ರಾಯರು ಮೂಡಣ ರಂಗಸ್ಥಳದಲಿ ನೆತ್ತರ ಮಾಡುವನು ಕುಣಿದಾಡುವನು ಬೆಳಕಿನ ಕಣ್ಣುಗಳಿ೦ದಾ ಸೂರ್ಯನು ನೋಡ...