🥸 ರಿಟೈರ್ಡ್ ಆದ ವ್ಯಕ್ತಿಯನ್ನು ಸಹಜವಾಗಿ ಬಹಳ ಜನ ಕೇಳುತ್ತಾರೆ 👉 ರಿಟೈರ್ ಆದ ಮೇಲೆ ಹೇಗೆ ಟೈಮ್ ಪಾಸ್ ಮಾಡುತ್ತಿದ್ದೀರಿ......?",
🤠ಅದಕ್ಕೆ ನಾನು ಕೊಟ್ಟ ಉತ್ತರ "ಟೈಮ್ ಪಾಸಾ"...? ಓಹ್, ನಿನ್ನೆಯದೆ ಒಂದು ಉದಾಹರಣೆ ಹೇಳುತ್ತೇನೆ ಕೇಳಿಸಿಕೊಳ್ಳಿರಿ ~~
ನಿನ್ನೆ ಜ್ಯುವೆಲ್ಲರೀ ಅಂಗಡಿಯೊಂದರಲ್ಲಿ ಕೇವಲ 10 ನಿಮಿಷ ಕಳೆದ ನಾನು ಮತ್ತು ನನ್ನ ಹೆಂಡತಿ ಹೊರಗಡೆ ಬಂದೆವು..!
ಕೈಯಲ್ಲಿ ದಂಡ ಕಟ್ಟುವ ಚಲನ್ ಬುಕ್ ನೊಂದಿಗೆ ಕಾರಿನ ಹತ್ತಿರ ಪೊಲೀಸ್ ಒಬ್ಬರು ನಮ್ಮನ್ನು ಕುರಿತು, ಬರ್ರಿ,..ಬರ್ರಿ...ನಿಮ್ಮಂಥವರಿಗೆ ಬುದ್ಧಿ ಹೇಳಿ ಹೇಳಿ ಸಾಕಾಗೇತಿ.....1000 ರೂಪಾಯಿ ದಂಡ ಕಟ್ರಿ ಅವಾಗ ಗೊತ್ತಾಕೇತಿ....
ಆವಾಗ ನಾನಂದೆ "ಈಗಷ್ಟೇ ಜಸ್ಟ್ ಹತ್ತೇ ನಿಮಿಷ ಒಳಗೆ ಹೋಗಿ ಹೊರಗ್ ಬಂದೇವಿ ಅಷ್ಟರಲ್ಲಿ ಸಾವಿರ ರೂಪಾಯಿ ಅಂದ್ರೆ ಹೆಂಗ,.... ಇದೊಂದ್ ಸಲ ದಯಮಾಡಿ ಬಿಟ್ಟುಬಿಡ್ರಿ"
ಆಗ ಪೊಲೀಸ್ ಎಲ್ಲರೂ ಹೇಳುದೂ ಹಿಂಗ ssss ಯಾವಾಗ ಸಾವಿರ ರುಪಾಯ್ ದಂಡ ಕಟ್ಟತೀರಿ ಅವಾಗ ಗೊತ್ತಾಕೇತಿ
ಆಗ "ನಾನು ರಿಟೈರ್ಡ್ ಅದೇನಿ, ನನ್ನ ಬಿಳೇ ಕೂದಲಕ್ಕರ ಕಿಮ್ಮತ್ ಕೊಟ್ಟು ಬಿಟ್ ಬಿಡ್ರಿ ಅಂದೆ
ಪೊಲೀಸ್ ಮೊದಲು ಒಪ್ಪದಿದ್ರೂ ಮತ್ತೆ ನನಗೆ ಹೇಳಿದ.... ಲಕ್ಷಗಟ್ಟಲೆ ರೊಕ್ಕ ಕೊಟ್ಟು ಕಾರ್ ತಗೋತೀರಿ, ಜ್ಯುವೆಲ್ಲರೀ ಖರೀದಿ ಮಾಡ್ತೀರಿ.. 1000 ರುಪಾಯ್ ಕಟ್ಟಾಕ ರಿಪಿ- ರಿಪೀ ಮಾಡ್ತೀರಿ.... ನಿಮ್ಮ ವಯಸ್ಸಿಗೆ ಮರ್ಯಾದೆ ಕೊಡ್ತೀನಿ, 200 ರೂಪಾಯಿ ಕೊಟ್ಟು ಹೋಗ್ರಿ" ಅಂದ.
ನಾನು 200 ರುಪಾಯ್ ಕೊಟ್ರ ಅದಕ್ಕ ಪಾವತಿ ಕೊಡ್ತೀರಿಲ್ಲೋ ಅಂದೆ.
ಅದನ್ನು ತಿರಸ್ಕರಿಸಿದ ಅವನು ಪಾವತಿ ಬೇಕು ಅಂದರ ಕಾಯದೇಸಿರ್ 1000 ರೂಪಾಯಿ ಕೊಡರಿ ಅಂದ.
ನಾನು 200 ರುಪಾಯ್ ನೇ ಕೊಡೋದು ಅದಕ್ಕ ನೀವು ಕಾಯದೇಸೀರ್ ಪಾವತಿ ಕೊಡ್ಬೇಕು ಅಂತ ದೃಢವಾಗಿ ಹೇಳಿದೆ.
ಪೊಲೀಸಪ್ಪನಿಗೆ ಸಿಟ್ಟು ಬಂದು ನನಗೇ ಕಾಯ್ದೆ ಬಗ್ಗೆ ಹೇಳುತ್ತೀರಾ....ಕಾರಿನ ಒಂದು ಮಿರರ್ ಗ್ಲಾಸ್ ಒಡೆದಿದೆ,...... ಹಳೇ ನಂಬರ್ ಪ್ಲೇಟ್ ತೆಗೆದು ಹೊಸಾ HSRP ಗೆ ಕನ್ವರ್ಟ್ ಆಗಿದ್ದನ್ನುಹಾಕಿಸಿಲ್ಲ ,....ಇಂಧನದ ಪೋಲ್ಯೂಷನ್ ಟೆಸ್ಟ್ 4 ತಿಂಗಳ ಹಿಂದೇ ಎಕ್ಸ್ ಪೈರ ಆಗಿದೆ. ಅದಕ್ಕೆ ಎಲ್ಲಾ ಸೇರಿ ಒಟ್ಟು ದಂಡ 8000/- ರೂಪಾಯಿ ಆಗುತ್ತೆ ಕಟ್ಟಿರಿ ಅಂದ.
*ಆಗ ನಾನು ನನ್ನ ಹೆಂಡತಿಗೆ ಹೇಳಿದೆ ಇನ್ನು ಪೊಲೀಸನನ್ನು ನೀನೇ ಸಂಭಾಳಿಸು ಅಂತ
ಪಕ್ಕಕ್ಕೆ ಸರಿದು ನಿಂತೆ.
ಅವಳು ತನ್ನದೇ ಆದ
ಶೈಲಿಯಲ್ಲಿ ಪೊಲೀಸ್ ನೊಂದಿಗೆ ಚೌಕಾಸಿ ಮಾಡಲಿಕ್ಕೆ ಹತ್ತಿ ನಿಮಗೇನು ಅಕ್ಕ-ತಂಗೇರ್ ಇಲ್ಲೇನ್.. ದಯಾ - ದಾಕ್ಷಿಣ್ಯ ಇಲ್ಲೇನ್...ನನ್ನ ಜಗಾದಾಗ್ ನಿಮ್ಮ ಚಿಗವ್ವ ಇದ್ದರ ಹಿಂಗss ಮಾಡತಿ ದ್ದರೆನ್ ಅಂತ ಮತ್ತ 15-20 ನಿಮಿಷ ಜಗ್ಗಿದಳು.*
ಅಷ್ಟೊತ್ತಿಗೆ ಸಿಟಿ ಬಸ್ ಬಂದು ನಿಲ್ಲಲು ತಡಮಾಡದೆ ಅದನ್ನು ಹತ್ತಿಬಿಟ್ಟೆವು ಯಾಕೆಂದರೆ ಆ ಕಾರ್ ನಮ್ಮದು ಆಗಿರಲಿಲ್ಲ.!!!!!
ಪಾಪ ಪೊಲೀಸಪ್ಪ ತೆರದ ಬಾಯಿಂದ ನಮ್ಮ ಕಡೆ ನೋಡುತ್ತಾ ತಲೆ ಚಚ್ಚಿಕೊಂಡ.
ನಾನು ನನ್ನ ಸ್ನೇಹಿತನಿಗೆ ಹೇಳಿದೆ, ಇದು ಟೈಮ್ ಪಾಸಿನ ಕೇವಲ ಒಂದು ಉದಾಹರಣೆ,ಇಂಥಾ ನೂರಾರು ನಮ್ಮ ಸ್ಟಾಕ್ ನಲ್ಲಿವೆ.
ಕೃಪೆ: ಅನಾಮಿಕ / Whatsapp
No comments:
Post a Comment