ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, March 13, 2014

ಮಹಾಬಲ - ಅತಿಬಲ - ರಾಜೇಶ್ ಶ್ರೀವತ್ಸ

Add caption
’ರಾಮ-ಲಕ್ಷ್ಮಣರಿಗೆ , ವಿಶ್ವಾಮಿತ್ರ ಅತಿಬಲ-ಮಹಾಬಲ ಮಂತ್ರಗಳನ್ನು ಉಪದೇಶಮಾಡುವಾಗ ಎರಡು ಗಿಡಗಳು ಕೇಳಿಸಿಕೊಂಡು ಶಕ್ತಿಯನ್ನು ಮೈದುಂಬಿಸಿಕೊಂಡವಂತೆ. ಅದನ್ನು ಕಂಡ ವಿಶ್ವಾಮಿತ್ರ ಅವುಗಳಿಗೆ ಅತಿಬಲ-ಮಹಾಬಲ ಎಂದೇ ಹೆಸರಿಸಿ... "ಹೋಗಿ ಎಲ್ಲೆಡೆ ಬೆಳೆದು ಶಕ್ತಿ ಹಂಚಿ ಜನೋಪಕಾರಿಯಾಗಿ" ಎಂದು ಅಶೀರ್ವಾದ ಮಾಡಿದನಂತೆ. ಎಲ್ಲೆಡೆ ಬೆಳೆಯುವ ಈ ಸಸ್ಯಗಳನ್ನು ಮುಲಾಜಿಲ್ಲದೆ ಕಿತ್ತು ನಾಶ ಮಾಡುವವರೇ ಹೆಚ್ಚು. ಅದಕ್ಕೇ ಒಳ್ಳೆಯವರು ಈ ಪ್ರಪಂಚದಲ್ಲಿ ಇರಬಾರದು...’ ಇದು ನಮ್ಮ ಅಜ್ಜ ಈ ಗಿಡಗಳನ್ನು ಕಂಡಾಗಲೆಲ್ಲ ಹೇಳುತಿದ್ದ ಕಥೆ.
ಅತಿಬಲ
Add caption
ಸುಂದರವಾದ ಹಳದಿ ಅಥವ ಮಿಶ್ರ ವರ್ಣದ ಹೂವುಗಳನ್ನು ಮಧ್ಯಾಹ್ನ ಅರಳಿಸುವ ಈ ಸಸ್ಯ ’ಅತಿಬಲ’.ಹೂವುಗಳು ಅರಳಿದ ಕೆಲವೇ ಘಂಟೆಗಳಲ್ಲಿ ಮುದುಡಿಹೊಗುತ್ತದೆ. ಹೃದಯಾಕಾರದ ಎಲೆಗಳು ಅಂಟು ಅಂಟಾದ ಸಣ್ಣ ಸಣ್ಣ ರೋಮಗಳನ್ನು ಹೊಂದಿರುತ್ತದೆ. ನಮ್ಮ ನಾಡಿನ ಎಲ್ಲೆಡೆ ಧಾರಾಳವಾಗಿ ಪಾಳು ಜಾಗಗಳಲ್ಲಿ ಬೆಳೆಯುತ್ತದೆ. ಮಲೆನಾಡಿನಲ್ಲಿ ಸ್ವಲ್ಪ ಅಪರೂಪವಾಗಿ ಕಾಣಸಿಗುತ್ತದೆ. ಕೈ-ಕಾಲು ಸೆಳೆತ ಇರುವವರು ಇದರ ಸೊಪ್ಪನ್ನು ಅರೆದು ಲೇಪ ಹಚ್ಚುವರು. ತುದಿಯಿಂದ ಬೇರಿನವರೆಗೆ ಪ್ರತಿಯೊಂದು ಅಂಗವೂ ಔಷಧಿಯಾಗಿ ಬಳಕೆಯಾಗುತ್ತದೆ. ಇದರಿಂದ ಮಾಡಿದ ಎಣ್ಣೆ ಮೈಕೈ ನೋವಿನ ಶಮನಕ್ಕಾಗಿ ಉಪಯೋಗಿಸುವರು. ಸಮೂಲಾಗ್ರ ಕಷಾಯವನ್ನು ಹೆಣ್ಣು ಮಕ್ಕಳ ದೇಹಪುಷ್ಟಿಗಾಗಿ ನೀಡುವರು.
'ಉಯ್ಯಾಲೆ ಗೌರಿ' ವ್ರತ ಮಾಡುವವರು ಏ ಹೂವುಗಳನ್ನು ಒಣಗಿಸಿ ಕಾಪಿಟ್ಟು ಪೂಜೆಯಲ್ಲಿ ಉಪಯೋಗಿಸುವರು. ಗೌರಿಗೆ ತುಂಬಾ ಪ್ರಿಯವಂತೆ ಈ ಹೂವು. ಶ್ರೀಮುಡಿ ,ತುರುಬೆ ಹೂ ಇತರೆ ಹೆಸರುಗಳು.
ಮಹಾಬಲ
ಎಲ್ಲೆಡೆ ಕಾಣಿಸಿಕೊಳ್ಳುವ ಮತ್ತೊಂದು ಔಷಧಿಯ ಸಸ್ಯ.. ಮಲೆನಾಡಿಗರಿಗೆ ಚಿರಪರಿಚಿತ ಕಡ್ಲೆಗಿಡ. ಬತ್ತ, ಕಾಫಿ ಕಣಗಳಲ್ಲಿ ಫಸಲನ್ನು ಒಟ್ಟು ಮಾಡುವ ಪರಕೆಯಾಗಿ ಈ ಗಿಡದ ಕಡ್ದಿಗಳನ್ನು ಬಳಸುತ್ತಾರೆ. ಬೆಣ್ಣೆಗರಗ, ಗೂಬೆ ಕಡಲೆ, ಕಳ್ಳ ಕಡಲೆ ಇತರೆ ಹೆಸರುಗಳು.
೭ ತಿಂಗಳಿಗೆ ಹುಟ್ಟಿದ ಮಕ್ಕಳಿಗೆ ಇಡೀ ಗಿಡವನ್ನು ಜಜ್ಜಿ ಬೇಯಿಸಿ ಬರುವ ಗಂಜಿಯಂತಹ ದ್ರವವನ್ನು ಕುಡಿಸುತ್ತಿದ್ದರು. ಇತರೆ ಉಪಯೊಗಗಳು ನನಗೆ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸಿ.


ರಾಜೇಶ್ ಶ್ರೀವತ್ಸ
No comments:

Post a Comment