ಋಗ್ವೇದ ಮಂಡಲ -೧, ಸೂಕ್ತ - ೧೬೧ರಲ್ಲಿ ಉಚಥ್ಯ ಋಷಿವರೇಣ್ಯರು ತಮ್ಮ ಸಂಶೋಧನಾ ಅನುಭವವನ್ನು ಗಣಕೀಕರಿಸಿ ಇಂತೆಂದಿದ್ದಾರೆ:
"ಆಹುಸ್ತೇ ತ್ರೀಣಿ ಬಂಧನಾನಿ ತ್ರೀಣಿತ ಆಹುರ್ದಿವಿ ಬಂಧನಾನಿ ತ್ರೀಣ್ಯಪ್ಸು ತ್ರೀಣ್ಯಂತಃ ಸಮುದ್ರೇ "|| ಎಂಬುದು ಉಚಥ್ಯರ ಅಭಿಮತ. ಅದರ ಸೂತ್ರದ ಒಟ್ಟು ಸರಳ ಅರ್ಥ ಹೀಗಿದೆ- ಪ್ರಪಂಚದ ಎಲ್ಲಾ ಆಗುಹೋಗುಗಳಿಗೂ ಮುಖ್ಯವಾಗಿ ೩ ಕಾರಣವಿರುತ್ತದೆ. ಆ ಕಾರಣವೆಂಬುದೇ ಈ ಜೀವನಬಂಧನ. ಅಂದರೆ ಕರ್ಮ + ಋಣ + ಯೋಗ ಎಂಬ ಮೂರರಿಂದಾಗಿ ಜೀವ ಜಗತ್ತು ನಿರಂತರವಾಗಿರುತ್ತದೆ. ಆ ಬಂಧನ ಬಿಡಿಸಿಕೊಳ್ಳುವ ಜಾಣ್ಮೆಯನ್ನು ಜೀವಿಗಳು ತಪ್ಪಿಯೂ ಮಾಡಲಾರವು. ಹಾಗಾಗಿಯೇ ಜೀವ = ನೀರು, ಕಾಲ = ಮಧ್ಯ, ಆದಿ, ಅಂತ್ಯ. ಮಾರ್ಗ ಸಮಯೋಜಿತವಾದ ಜೀವನ ಸಾಗರ ಅಥವಾ ಸಮುದ್ರ. ಅದರ ಸಂಖ್ಯಾ ಮೊತ್ತವೇ ಕರ್ಮ. ಅದರ ಶೇಷವೇ ಯೋಗ. ಗುಣಿತವೇ ಋಣಗಳಾಗಿ ವ್ಯವಹರಿಸುತ್ತದೆ. ಗುಣಿತ ಮೂಲವ್ಯಾವುದು? ಮೊತ್ತವ್ಯಾವುದು? ಅರಿವಿಲ್ಲ ಜೀವಿಗಳಿಗೆ! ಹಾಗಾಗಿ ಅಸಂಖ್ಯಾತವೆಂದಿದೆ. ಅದಕ್ಕೊಂದು ಸೂತ್ರ ಅಳವಡಿಸಲ್ಪಟ್ಟಿದೆ. ಆ ಸಮೀಕರಣ ಅರ್ಥ ಮಾಡಿಕೊಂಡಲ್ಲಿ ಮಾನವ ಜೀವನ ಸಾರ್ಥಕ. ಆತನು ದೇವತ್ವಕ್ಕೇರುವುದ ಖಂಡಿತ. ಆದರೆ ಅರ್ಥ ಮಾಡಿಕೊಳ್ಳಲು, ಅಧ್ಯಯನ ಮಾಡಲು ನಿಮಗೆ ಪುರುಸೊತ್ತು ಇದೆಯೇ? ಇಲ್ಲ. ಕಾರಣ ನಮ್ಮ ಈಗಿನ ಸ್ಥಿತಿ. ನಾವೇ ವಿಧಿಸಿಕೊಂಡ ಜೀವನ ವಿಧಾನ. ನಮ್ಮ ಶಿಕ್ಷಣ ಪದ್ಧತಿ, ನಮ್ಮ ಧನದಾಹ, ನಮ್ಮ ಅತೀ ದುರಾಸೆ, ನಮ್ಮ ಮೂರ್ಖತನ, ನಮ್ಮ ಹುಚ್ಚು ಕಲ್ಪನೆ. ಇದಕ್ಕೆಲ್ಲಾ ಕಾರಣ ಬ್ರಿಟಿಷರು ನಮಗೆ ಮ...