ಕನ್ನಡದಲ್ಲಿ ನುಡಿಮುತ್ತುಗಳು
ಒಂದೇ ಬಗೆಯ ಗರಿಯಳ್ಳ ಪಕ್ಷಿಗಳು ಗುಂಪುಗೂಡುತ್ತವೆ. — ಆಂಗ್ಲ ಗಾದೆ
ಆತ್ಮೀಯ ಮಿತ್ರನಿಗಿಂತ ಮಿಗಿಲಾದ ವರವು ಬದುಕಿನಲ್ಲಿ ಬೇರೆ ಯಾವುದಿದೆ? — ಯುರುಪಿಡಿಸ್
ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ — ಶಿಶುನಾಳ ಷರೀಫ್
ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು. — ಮನುಸ್ಮೃತಿ
ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು. — ಮ್ಯಾಥ್ಯೂ ಅರ್ನಾಲ್ಡ್
ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು — ಭಾಗವತ
"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ" — ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ
ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ — ವಿನೋಬಾ ಭಾವೆ
ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ. — ಹಿತೋಪದೇಶ
ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ. — ಮಹಾತ್ಮ ಗಾಂಧಿ
ಮಕ್ಕಳ ಸ್ಕೂಲ್ ಮನೇಲಲ್ವೇ — ಬೀchi
ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು. --ಉಪನಿಷತ್ತುಗಳು
Krupe : ಕನ್ನಡದಲ್ಲಿ ನುಡಿಮುತ್ತುಗಳು Satya Charan
Comments
Post a Comment