Posts

Showing posts from April, 2013

Karnataka State Assembly Election 2013

Image

‘ಮಲೆಗಳಲ್ಲಿ ಮದುಮಗಳು’ ನೋಡುವ ಮುನ್ನ ಈ ಟಿಪ್ಪಣಿ ಮಾಡಿಕೊಳ್ಳಿ « ಅವಧಿ / avadhi

Image
‘ಮಲೆಗಳಲ್ಲಿ ಮದುಮಗಳು’ ನೋಡುವ ಮುನ್ನ ಈ ಟಿಪ್ಪಣಿ ಮಾಡಿಕೊಳ್ಳಿ « ಅವಧಿ / avadhi ಮಲೆಗಳಲ್ಲಿ ಮದುಮಗಳ ಪ್ರಪಂಚ ಬಿ ಆರ್ ಸತ್ಯನಾರಾಯಣ್ ನನ್ದೊಂದ್ಮಾತು   ’ಏನು ಕಾಫಿಗೆ ಬರುವುದಿಲ್ಲವೆ?’ ’ತಾಳು ತಾಳು ಚಿನ್ನಮ್ಮ ತಪ್ಪಿಸಿಕೊಂಡು ಹೋಗಬೇಕು ಹಂಡೆ ಸದ್ದಾಗುತ್ತಿದೆ’ ’ಚಿನ್ನಮ್ಮಗೆ ಏನೂ ತೊಂದರೆಯಿಲ್ಲ. ತಪ್ಪಿಸಿಕೊಂಡು ಹೋಗುವಳು ನೀವು ಬಂದು ಕಾಫಿ ಕುಡಿದು ಹೋಗಿ’ ಅರ್ಧ ಗಂಟೆಯ ನಂತರ ಕಾಪಿ ಕುಡಿಯುತ್ತಾ, ’ಚಿನ್ನಮ್ಮ ತಪ್ಪಿಸಿಕೊಂಡು ಹೋದಳೆ?’ ’ಹ್ಞೂ ಅವಳು ಕ್ಷೇಮವಾಗಿ ಹುಲಿಕಲ್ಲು ನೆತ್ತಿ ಹತ್ತಿದಳು’ ಈ ಸಂಭಾಷಣೆ ಕುವೆಂಪು ದಂಪತಿಗಳದ್ದು. ಮಲೆಗಳಲ್ಲಿ ಮಧುಮಗಳು ಕಾದಂಬರಿ ರಚನೆಯಾಗುತ್ತಿದ್ದ ಕಾಲದ ಒಂದು ದಿನ ಸಂಜೆ ಕಾಫಿಯ ಸಮಯದಲ್ಲಿ ನಡೆದದ್ದು. ಇದನ್ನು ಸೊಗಸಾಗಿ ತಾರಿಣಿಯವರು ’ಮಗಳು ಕಂಡು ಕುವೆಂಪು’ ಕೃತಿಯಲ್ಲಿ ದಾಖಲಿಸಿದ್ದಾರೆ. ಮೊದಲು ಪ್ರಾರಂಭವಾಗಿ, ಒಂದೆರಡು ಅಧ್ಯಾಯಗಳನ್ನು ಬರೆದು ಮುಗಿಸಿದ ಮೇಲೆ, ನಂತರ ಸುಮಾರು ೩೦ ವರ್ಷಗಳಾದ ಮೇಲೆ ಮೂರು ವರ್ಷಗಳ ಕಾಲ ಬರೆಯಿಸಿಕೊಂಡು ಕಾದಂಬರಿ ಇದು! ಅದು ಹೇಗೆ ಸಾಧ್ಯವಾಯಿತು? ಇದಕ್ಕೂ ಉತ್ತರ ತಾರಿಣಿಯವರ ಕೃತಿಯಲ್ಲಿ ಸಿಗುತ್ತದೆ. ಕುವೆಂಪು ನಿವೃತ್ತರಾದ ಮೇಲೆ ಮನೆಯಲ್ಲಿ ಅರಾಮವಾಗಿದ್ದಾಗ ಒಂದು ದಿನ ಪುಸ್ತಕದ ಬೀರುವಿನಲ್ಲಿ ಏನನ್ನೋ ಹುಡುಕುತ್ತಿರುತ್ತಾರೆ. ತಾರಿಣಿ ’ಏನು?’ ಎಂದು ಕೇಳಿದಾಗ, ’ಅಕ್ಕಾ ಎಲ್ಲಾದರೂ ನನ್ನ ಪುಸ್ತಕಗಳ ಬೀರುವಿನಲ್ಲಿ ಆ ಕಾದಂಬರಿಯ ಮ್ಯಾಪ್ ಇದೆಯೇ ನೋಡುವ...

ಕನ್ನಡದಲ್ಲಿ ನುಡಿಮುತ್ತುಗಳು

ಒಂದೇ ಬಗೆಯ ಗರಿಯಳ್ಳ ಪಕ್ಷಿಗಳು ಗುಂಪುಗೂಡುತ್ತವೆ. — ಆಂಗ್ಲ ಗಾದೆ ಆತ್ಮೀಯ ಮಿತ್ರನಿಗಿಂತ ಮಿಗಿಲಾದ ವರವು ಬದುಕಿನಲ್ಲಿ ಬೇರೆ ಯಾವುದಿದೆ? — ಯುರುಪಿಡಿಸ್ ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ — ಶಿಶುನಾಳ ಷರೀಫ್ ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು. — ಮನುಸ್ಮೃತಿ ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು. — ಮ್ಯಾಥ್ಯೂ ಅರ್ನಾಲ್ಡ್ ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು — ಭಾಗವತ "ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ" — ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ — ವಿನೋಬಾ ಭಾವೆ ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ. — ಹಿತೋಪದೇಶ ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ. — ಮಹಾತ್ಮ ಗಾಂಧಿ ಮಕ್ಕಳ ಸ್ಕೂಲ್ ಮನೇಲಲ್ವೇ — ಬೀchi ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು. --ಉಪನಿಷತ್ತುಗಳು ...

ಮಲೆಗಳಲ್ಲಿ ಮಧುಮಗಳು - ಬೆಂಗಳೂರಿನಲ್ಲಿ

Image
ಮೈಸೂರಿನ ರಂಗಾಯಣದಲ್ಲಿ ೨ ವರ್ಷದ ಹಿಂದೆ ಪ್ರದರ್ಶನಗೊಂಡ ನಾಟಕ ಮಲೆಗಳಲ್ಲಿ ಮಧುಮಗಳು ಈಗ ಬೆಂಗಳೂರಿನಲ್ಲು ಪ್ರದರ್ಶನ ಕಾಣುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ಪಕ್ಕ ಇರುವ ಕಲಾಗ್ರಾಮದಲ್ಲಿ ಈ ತಿಂಗಳ ೧೮ ನೇ ತಾರೀಖಿನಿಂದ ಈ ನಾಟಕ ಶುರುವಾಗಲಿದೆ. ನಾಟಕದ ವಿಶೇಷತೆ ಎಂದರೆ ಇದು ರಾತ್ರಿ ಇಡೀ ನಡೆಯುತ್ತೆ ರಾತ್ರಿ ೯.೩೦ ರಿಂದ ಬೆಳಗಿನ ಜಾವ ೫.೩೦ ರವ ವರೆಗೆ ನಡೆಯುತ್ತೆ ೪ ಬೇರೆ ಬೇರೆ ವೇದಿಕೆಗಳು,…. ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ವೇದಿಕೆಗಳ ಚಿತ್ರ ಇವು. Krupe: http://malegalallimadhumagalu.tumblr.com https://www.facebook.com/photo.php?fbid=127734590751122&set=a.127734584084456.1073741827.127730374084877&type=1&theater

ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೋ- ಕುವೆಂಪು

ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೋ ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ ಆನಂದಮಯ ಈ ಜಗಹೃದಯ ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ ಸೂರ್ಯನು ಬರಿ ರವಿಯಲ್ಲವೋ ಆ ಭ್ರಾಂತಿಯ ಮಾಣೋ ಆನಂದಮಯ ಈ ಜಗಹೃದಯ. ರವಿವದನವೇ ಶಿವಸದನವೊ ಬರಿ ಕಣ್ಣದು ಮಣ್ಣೋ ಶಿವನಿಲ್ಲದೆ ಸೌಂದರ್ಯವೇ ಶವ ಮುಖದ ಕಣ್ಣೋ ಆನಂದಮಯ ಈ ಜಗಹೃದಯ. ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ ಶಿವಕಾಣದೆ ಕವಿ ಕುರುಡನೋ ಶಿವ ಕಾವ್ಯದ ಕಣ್ಣೋ ಆನಂದಮಯ ಈ ಜಗಹೃದಯ.

ಕರ್ನಾಟಕದ ನದಿಗಳು

ಅರ್ಕಾವತಿ ನದಿ ಕಬಿನಿ ನದಿ ಕಾಳಿ ನದಿ ಕಾವೇರಿ ನದಿ ಕುಮಾರಧಾರ ನದಿ ಕೇದಕ ನದಿ ಗುರುಪುರ ನದಿ ಘಟಪ್ರಭಾ ಚಕ್ರ ನದಿ ತುಂಗಭದ್ರ ನದಿ ತ ಮುಂದು. ದಂಡಾವತಿ ನದಿ ದಕ್ಷಿಣ ಪಿನಾಕಿನಿ ನದಿ ನೇತ್ರಾವತಿ ನದಿ ಪಾಲಾರ್ ನದಿ ಪೊನ್ನೈಯಾರ್ ನದಿ ಮಲಪ್ರಭಾ ನದಿ ಯಗಚಿ ನದಿ ಲಕ್ಷ್ಮಣ ತೀರ್ಥ ನದಿ ಲೋಕಪಾವನಿ ವರದಾ ನದಿ ವಾರಾಹಿ ನದಿ ವೇದಾವತಿ ನದಿ ಶರಾವತಿ ಶಾಂಭವಿ ನದಿ ಶಾಲ್ಮಲಾ ನದಿ ಶಿಂಶಾ ನದಿ ಸೌಪರ್ಣಿಕ ನದಿ ಹಾರಂಗಿ ಹೇಮಾವತಿ ಹೊನ್ನುಹೊಳೆ ನದಿ Krupe:  http://kn.wikipedia.org/wiki/ ವರ್ಗ/ ಕರ್ನಾಟಕದ_ನದಿಗಳು 

ಸರಳ ಹಾಗೂ ಸುಲಭ ಕಲಿಕಾ ಚಟುವಟಿಕೆಗ - ಸುನಿತಾ ಸ. ಶಿ.

Image
ಸರಳ ಹಾಗೂ ಸುಲಭ ಕಲಿಕಾ ಚಟುವಟಿಕೆಗಳು ಕೊಡುಗೆ:  Azim Premji Foundation  | Mar 29, 2013 Everything is easy when you are busy. But nothing is easy when you are lazy. ಎಂಬಂತೆ ಪ್ರತಿಯೊಬ್ಬ ವ್ಯಕ್ತಿಯು ಪ್ರಾಮಾಣಿಕತೆ, ನಿಷ್ಠೆಯಿಂದ ಕಾರ್ಯವನ್ನು ನಿರ್ವಹಿಸಿದಾಗ ಮಾತ್ರ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೇವೆ. ಸೋಮಾರಿತನದಿಂದ ವರ್ತಿಸಿದರೆ ಯಾವ ಕಾರ್ಯಗಳು ಸಿದ್ಧಿಸುವುದಿಲ್ಲ. ಪರಿಚಿತ ಹಾಗೂ ಸುರಕ್ಷಿತವಾದ ಮನೆಯನ್ನು ಬಿಟ್ಟು ಅಪರಿಚಿತವಿರುವ ಹೊಸ ಸ್ಥಳವಾದ ಶಾಲೆಗೆ ಹೋಗಲು ಜೊತೆಗೆ ಶಾಲೆಯ ಶಿಸ್ತು ನಿಯಮಗಳಿಗೆ ಹೊಂದಿಕೊಳ್ಳಲು ಕಷ್ಟವಾಗಿ ಮಗು ಹೆದರಿ ಶಾಲೆಗೆ ಹೋಗಲು ನಿರಾಕರಿಸುವುದು ಅಸಹಜವಲ್ಲ. ಅಲ್ಲದೇ ಎಲ್ಲರ ಕಣ್ಮಣಿಯಾಗಿ ಆಕರ್ಷಣೆಯ ಕೇಂದ್ರವಾಗಿ ರಾಜನಂತೆ ಮೆರೆಯುವ ಮಗುವಿಗೆ ಶಾಲೆಯಲ್ಲಿ ನೂರರಲ್ಲಿ ಒಬ್ಬನಾಗಲು ಇಷ್ಟವಾಗುವುದಿಲ್ಲ. ಆದರೆ ಸ್ವಲ್ಪ ಸಮಯದಲ್ಲೇ ಹೊಂದಿಕೊಂಡು ಶಾಲೆಗೆ ಹೋಗಲು ಪ್ರಾರಂಭಿಸುತ್ತಾರೆ. ಹೊಸ ಅನುಭವಗಳು ಸ್ನೇಹಿತರು ಆಟಪಾಠಗಳಲ್ಲಿ ತೊಡಗುತ್ತಾರೆ. ಕೆಲವು ಸಲ ಕೆಲ ಮಕ್ಕಳು ಸಾಕಷ್ಟು ಸಮಯದ ನಂತರ ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಾರೆ.ಕಾರಣ ಕೇಳಿದರೆ ನನಗೆ ಗೊತ್ತಿಲ್ಲ. ನನಗೆ ಹೆದರಿಕೆ ಎಂಬ ಉತ್ತರ ಸಿಗುತ್ತದೆ.ಶಾಲೆಗೆ ಹೋಗದೇ ಹಠ ಮಾಡುತ್ತಾರೆ.ಬಲವಂತ ಮಾಡಿದರೆ ಅತ್ತು ರಂಪಾಟ ಮಾಡುತ್ತಾರೆ.ಶಿಕ್ಷೆಗೂ ಹೆದರುವುದಿಲ್ಲ.ಈ ವರ್ತನೆಗಳಿಗೆ ಕಾರಣ ಶಾ...

ಅಪರೂಪದ ಚಿತ್ರಗಳು

Image
 ಕೃಪೆ ಪ್ರಜಾವಾಣಿ

ದ.ರಾ.ಬೇಂದ್ರೆ

Image
ವರಕವಿ ಬೇಂದ್ರೆಯವರು ತಮ್ಮದೇ ಒಂದು ಕವನವನ್ನು ಅಭಿನಯಸಹಿತ ವಾಚಿಸುತ್ತಿರುವ ಅಪೂರ್ವ ದೃಶ್ಯಾವಳಿ!  - Krupe _ Youtube