Thursday, June 2, 2011

ಇಷ್ಟು ಕಾಲ....

ಇಷ್ಟು ಕಾಲ ಒಟ್ಟಿಗಿದ್ದು..ಎಷ್ಟು ಬೆರೆತರೂ.....
ಅರಿತೆವೇನು ನಾವು ನಮ್ಮ ಅಂತರಾಳವ....?

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ.....
ಮಣ್ಣ ಮುದ್ದು ದೊರಕಿತೇನು.. ನೀಲಿ ಬಾನಿಗೆ...?

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ.....
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ....?

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ....
ಒಂದಾದರು ಉಳಿಯಿತೇ..ಕನ್ನಡಿಯ ಪಾಲಿಗೆ....???

1 comment:

ಪರೀಕ್ಷೆಯಲ್ಲಿ ಅಂಕ ಕಡಿಮೆ ಯಾದರೇನು?......... ಜೀವನದಲ್ಲಿ ಹೆಚ್ಚು ಅಂಕ ಗಳಿಸಬಹುದಲ್ಲವೇ? - ಡಾ.ಶಶಿಕಿರಣ್ ಶೆಟ್ಟಿ, ಉಡುಪಿ

 PUC ರಿಸಲ್ಟ್ ಬಂದಿದೆ ಸಂತೋಷ 580,600 ಪ್ಲಸ್ ಅಂಕ ತೆಗೆದವರಿಗೆ ಅಭಿನಂದನೆಗಳು ಅದೂ ಸಂತೋಷ  ಪತ್ರಿಕೆ, ಟಿವಿ, ಯಲ್ಲೇ ಇರಲಿ, ವಾಟ್ಸಪ್ ಗ್ರೂಪ್ನಲ್ಲಿ, ಸೋಷಿಯಲ್ ಮಿಡಿಯಾ...