ಬುರಿಡಾನ್‌ನ ಕತ್ತೆ ತತ್ತ್ವಜ್ಞಾನ. ನೀವು ಕತ್ತೆ ಆಗಿದ್ದೀರಾ? - ಶ್ರೀವತ್ಸ ಜೋಶಿ
ಬುರಿಡಾನ್‌ನ ಕತ್ತೆ ತತ್ತ್ವಜ್ಞಾನ. ನೀವು ಕತ್ತೆ ಆಗಿದ್ದೀರಾ?
==========================
ಬಟ್ಟೆಯಂಗಡಿಯಲ್ಲಿ ಸೀರೆ ತಗೊಳ್ಳುವಾಗ ಹುಡುಕಿ ಹುಡುಕಿ ಎರಡನ್ನು ಶಾರ್ಟ್‌ಲಿಸ್ಟ್ ಮಾಡಿ ಅದರ ಪೈಕಿ ಯಾವುದು ಫೈನಲ್ ಎಂದು ನಿರ್ಧರಿಸಲಾಗದೆ ಎರಡನ್ನೂ ಬಿಟ್ಟು ಬೇರೊಂದು ಅಂಗಡಿಯಲ್ಲಿ ನೋಡುವಾ ಎಂದು ನೀವು ಹೊರಬಂದದ್ದಿದೆಯೇ? ’ಬಟ್ಟೆಯಂಗಡಿಯಲ್ಲಿ ಸೀರೆ ಖರೀದಿ’ ಅಂತನೇ ಆಗ್ಬೇಕಿಲ್ಲ. ಬೇರಾವ ಅಂಗಡಿಯಲ್ಲಿ ಬೇರಾವ ವಸ್ತು ಖರೀದಿಯ ದೃಶ್ಯ ಸಹ ಆಗ್ತದೆ. ರೆಸ್ಟೋರೆಂಟ್‌ನಲ್ಲಿ ಸೌತ್ ಇಂಡಿಯನ್ ಊಟ ತಗೊಳ್ಲಾ ಅಥವಾ ನಾರ್ತ್ ಇಂಡಿಯನ್ ನಾನ್ ಗೋಬಿ ಮಟರ್ ತಗೋಳ್ಲಾ ಅಂತನ್ನೋ ಸನ್ನಿವೇಶನೂ ಆಗ್ತದೆ. ಎರಡು ಕಂಪನಿಗಳಿಂದ ಆಫರ್ ಲೆಟರ್ ಬಂದಾಗ ಯಾವುದಕ್ಕೆ ಸೇರಲಿ ಎಂದು ತಲೆಕೆರೆದುಕೊಳ್ಳೋ ಪರಿಸ್ಥಿತಿಯೂ ಆಗ್ತದೆ. ಒಟ್ಟಿನಲ್ಲಿ, ನಿರ್ಧಾರ ತೆಗೆದುಕೊಳ್ಳಲಾರದೆ ಒಂದರೆಕ್ಷಣವಾದರೂ ನೀವು ತೊಳಲಾಡಿದ್ದಿದೆಯೇ?
ಹೌದು ಅಂತಾದರೆ ಆ ಕ್ಷಣದಲ್ಲೊಮ್ಮೆ ನೀವು ಬುರಿಡಾನ್‌ನ ಕತ್ತೆ ಆಗಿದ್ದೀರಿ ಎಂದೇ ಅರ್ಥ!
ಬುರಿಡಾನ್‌ನ ಕತ್ತೆ (Buridan's Ass) ಎಂದರೆ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿನ ವಿರೋಧಾಬಾಸ (paradox). ಒಂದು ಕತ್ತೆ ಇರುತ್ತದೆ. ಅದಕ್ಕೆ ವಿಪರೀತ ಬಾಯಾರಿಕೆಯೂ ವಿಪರೀತ ಹಸಿವೆಯೂ ಆಗಿರುತ್ತದೆ. ಅದರ ಇಕ್ಕೆಲಗಳಲ್ಲಿ ಒಂದು ಬಕೆಟ್‌ನಲ್ಲಿ ನೀರು ಮತ್ತೊಂದು ಬಕೆಟ್‌ನಲ್ಲಿ ಬೈಹುಲ್ಲು ಇಡಲಾಗುತ್ತದೆ. ಯಾವ ಬಕೆಟ್‌ಗೆ ಮೊದಲು ಬಾಯಿ ಹಾಕಬೇಕು ಎಂದು ನಿರ್ಧರಿಸಲಾರದೆ ಕತ್ತೆ ಸುಮ್ಮನಾಗುತ್ತದೆ. ಅಷ್ಟೇ ಅಲ್ಲ ಹಾಗೇ ಉಪವಾಸವಿದ್ದು ಕೊನೆಗೆ ಸತ್ತೇ ಹೋಗುತ್ತದೆ!
14ನೇ ಶತಮಾನದಲ್ಲಿ ಬಾಳಿದ ಫ್ರೆಂಚ್ ತತ್ತಜ್ಞಾನಿ ಜೀನ್ ಬುರಿಡಾನ್ ಎಂಬಾತ ಈ ವಿರೋಧಾಭಾಸವನ್ನು ಮೊತ್ತಮೊದಲಿಗೆ ಸಾರ್ವಜನಿಕವಾಗಿ ಚರ್ಚಿಸಿದ. ಸಾಕಷ್ಟು ಗೇಲಿಗೂ ಒಳಗಾದ. ಅವನು ಪ್ರಯೋಗ ಮಾಡಿದ್ದು ತನ್ನ ಸಾಕುನಾಯಿಯ ಮೇಲೆ. ರಷ್ಯನ್ ತತ್ತ್ವಜ್ಞಾನಿ ಪಾವ್ಲೊ ಮಾಡಿದ್ನಲ್ಲ ಹಾಗೆಯೇ ಬುರಿಡಾನ್‌ನ ಪ್ರಯೋಗಪಶು ಸಹ ನಾಯಿಯೇ ಆಗಿತ್ತಂತೆ. ಆದರೆ ನಾಯಿಗಾದರೂ ಸ್ವಲ್ಪ ಸ್ಮಾರ್ಟ್‌ನೆಸ್ ಇರ್ತದೆ, ಎದುರಿಗೆ ಆಹಾರವಿದ್ದೂ ನಿರ್ಧರಿಸಲಾರದೆ ಉಪವಾಸದಿಂದ ಸತ್ತುಹೋಗಬೇಕಿದ್ದರೆ ಅದು ಕತ್ತೆಯಂಥ ದಡ್ಡ ಪ್ರಾಣಿಯೇ ಇರಬೇಕು ಎಂದು ತಮಾಷೆ ಮಾಡಿದ ಜನ ಆ ಪ್ರಯೋಗವನ್ನು "ಬುರಿಡಾನ್‌ನ ಕತ್ತೆ" ಎಂದೇ ಗುರುತಿಸಿದರು. ನಿರ್ಧಾರ ಮಾಡಲಾಗದ, ಡಿಸಿಶನ್ ಮೇಕಿಂಗ್ ಕೆಪ್ಯಾಕಿಟಿ ಇಲ್ಲದ ವ್ಯಕ್ತಿಯನ್ನು ’ಬುರಿಡಾನ್‌ನ ಕತ್ತೆ’ ಎಂದು ತಮಾಷೆ ಮಾಡುವುದು ರೂಢಿಯಾಯ್ತು.
ಈಗ 2014ರ ಲೋಕಸಭಾ ಚುನಾವಣೆಯಲ್ಲಿ ನವಯುವಕರು, ದೇಶ ಮುನ್ನಡೆಯಬೇಕೆಂಬ ಉತ್ಸಾಹಿಗಳು ಮೋದಿಯನ್ನೇ ಬೆಂಬಲಿಸುವುದು ಎಂದು ಆಗಲೇ ನಿರ್ಧರಿಸಿರುವಂತಿದೆ. ಮೋದಿಯನ್ನು ಅತಿಭಯಂಕರವಾಗಿ ವಿರೋಧಿಸುವವರದೂ ನಿರ್ಧಾರ ಹೇಗೂ ಆಗಿದೆ. ಉಳಿದವರ ಪರಿಸ್ಥಿತಿ ಏನು? ಅವರು ತಾವೂ ಉಪವಾಸ ಬಿದ್ದು ದೇಶವನ್ನೂ ಉಪವಾಸಕ್ಕೆ ತಳ್ಳುವ ಬುರಿಡಾನ್ ಕತ್ತೆಗಳಾಗದಿದ್ದರೆ ಸಾಕು!

ಶ್ರೀವತ್ಸ ಜೋಶಿ |
Comments
Post a Comment