Posts

ಅಮ್ಮ_ಹೆಂಡತಿ_ಮಕ್ಕಳು

"ನಿವೃತ್ತಿಯಾದ ಮೊದಲ ದಿನ ನಾನು ಮೊದಲು ಮಾಡುವ ಕೆಲಸವೆಂದರೆ ನನ್ನ ಅಮ್ಮನನ್ನು ವೃಧ್ಧಾಶ್ರಮಕ್ಕೆ ಸೇರಿಸುವುದು..." ನನ್ನ ಮನೆಯಲ್ಲಿ  ನಾನು ಈ ಮಾತುಗಳನ್ನು ಹೇಳುತ್ತ ಹೇಳುತ್ತ ಒಂದು ವರುಷವಾಯಿತು..... ಇನ್ನು ಈ ಕೆಲಸವನ್ನು ಮುಂದು ಹಾಕುವಂತಿಲ್ಲ... ಯಾಕೆಂದರೆ ನಿನ್ನೆ ನನಗೆ ನಿವೃತ್ತಿ ಯಾಯಿತು... ನನ್ನ ಹೆಂಡತಿ ಮಕ್ಕಳೆಲ್ಲ ಈ ದಿನಕ್ಕಾಗಿಯೇ ಕಾದು ಕುಳಿತವರಂತೆ ಇದ್ದಾರೆ.. ನನ್ನ ಅಮ್ಮ ಆರೊಗ್ಯವಾಗಿಯೇ ಇದ್ದವಳು,ಸುಮಾರು ಎರಡೂವರೆ ವರುಷಗಳಿಂದ ಅನಾರೋಗ್ಯಕ್ಕೆ ಬಿದ್ದಳು... ಇತ್ತೀಚೆಗೆ ಒಂದು ವರುಷದಿಂದ  ಮಲ ಮೂತ್ರ ವಿಸರ್ಜನೆಯ ಮೇಲೆ ಕೂಡಾ ಅವಳಿಗೆ ನಿಯಂತ್ರಣವಿಲ್ಲ... ಬೆಳಗ್ಗೆ ರಾತ್ರಿ ಅವಳನ್ನು ನಾನು ನೋಡಿ ಕೊಳ್ಳಬಲ್ಲೆ... ಆದರೆ ನಾನು ಕೆಲಸಕ್ಕೆ ಹೋದಾಗ ಅವಳನ್ನು ನೋಡಿ ಕೊಳ್ಳಬೇಕಾದವಳು ಇವಳೇ ... ಅಂದರೆ ನನ್ನ ಹೆಂಡತಿಯೇ... ನನಗಾದರೂ ಅವಳು ತಾಯಿ..ನನ್ನವಳಿಗೆ ಅವಳು ತಾಯಿಯಾ..? ನನ್ನ  ಸಿಡುಕಿನ ನೋಟಕ್ಕೆ ಬೆದರಿ ಇವಳು ಅತ್ತೆಯ ಚಾಕರಿ ಮಾಡುತ್ತಿದ್ದಾಳೆ. ಆದರೆ  ಇವಳ ಮುಖದಲ್ಲೊಂದು ತಿರಸ್ಕಾರದ ನೋಟ ಚಿರ ಸ್ಥಾಯಿಯಾಗಿ ನಿಂತ ಹಾಗೆ ನನಗೆ ಕಾಣಿಸುತ್ತಿದೆ.. ಇವಳಿಗಾದರೂ ಈ ಭಾವ ಸಹಜವೇ...ಹೊರಗಿನಿಂದ ಬಂದವಳು.... ಆದರೆ ನನ್ನ  ಮಕ್ಕಳಿಗೂ ಅನಾರೋಗ್ಯದ ಅಜ್ಜಿ ಬೇಡವೆನ್ನಿಸುವುದು ನನಗೆ ದಿಗಿಲು ಹುಟ್ಟಿಸುವುದು..... ಅಭಿಲಾಷ್ ಆದರೂ ಹುಡುಗ...ಮುಲಾಜಿಲ್ಲದೆ ಹೇಳಿದ್ದ"ಅಮ್ಮಾ ನನ್ನ ಫ್ರೆಂಡ್ಸ್ ಇರುವಾಗ ಅಜ್ಜಿಯನ

ಸಂತೃಪ್ತಿ

 ಸಂತೃಪ್ತಿ ಕಿಕ್ಕಿರಿದ ಬಸ್ಸಿನಲ್ಲಿ ಕುಳಿತುಕೊಳ್ಳಲು ಆಸನವೇ ಇರಲಿಲ್ಲ; ಅಷ್ಟರಲ್ಲೇ ಕುಳಿತಿದ್ದ ಯಾರೋ ಒಬ್ಬ ಎದ್ದು ನಿಂತು ತನ್ನ  ಆಸನವನ್ನು ಬಿಟ್ಟು ಕೊಟ್ಟ. ಅವನು ಸ್ವಲ್ಪ ಮುಂದೆ  ತೆರಳಿ ನಿಂತನು.  ನನಗೂ ಸಾಕಾಗಿತ್ತು, ಮರು ಮಾತನಾಡದೆ  ಕುಳಿತುಕೊಂಡೆ.  ಅಷ್ಟರಲ್ಲಿ  ಮುಂದೆ  ಬಂದ ಸ್ಟಾಪ್ ನಲ್ಲಿ ಒಬ್ಬರು ಪ್ರಯಾಣಿಕರು ಇಳಿದರು.  ಖಾಲಿಯಾದ ಆ ಸೀಟ್ನಲ್ಲಿ ನನಗೆ ಸೀಟ್ ಬಿಟ್ಟು ಕೊಟ್ಟಿದ್ದ ಆ ಪ್ರಯಾಣಿಕ ಮತ್ತೆ ಕುಳಿತನು.ಅಷ್ಟರಲ್ಲಿ ಮತ್ತೊಬ್ಬ ಪ್ರಯಾಣಿಕ ಬಸ್ ಹತ್ತಿದ. ಮತ್ತೆ ಅವನು ಎದ್ದುನಿಂತು ಆ ಹೊಸಬನಿಗೆ  ಮತ್ತೆ ತನ್ನ ಆಸನವನ್ನು ಬಿಟ್ಟು ಕೊಟ್ಟನು. ಹೀಗೆಯೇ ಮುಂದಿನ ನಾಲ್ಕೈದು ನಿಲ್ದಾಣಗಳಲ್ಲಿ ಅವನು ಕುಳಿತಿರುವ ಆಸನವನ್ನು ಎಲ್ಲರಿಗೂ ನೀಡುವುದನ್ನು ಅವನು ಮುಂದುವರಿಸಿದ. ನಾನು ಎಲ್ಲವನ್ನೂ ಗಮನಿಸುತ್ತಿದ್ದೆ, ನಾನು ನನ್ನ ಕೊನೆಯ ನಿಲ್ದಾಣದಲ್ಲಿ ಬಸ್ ಇಳಿಯುವ ಮೊದಲು ಅವನೊಂದಿಗೆ ಮಾತನಾಡಿದೆ: "ನೀನು ಕುಳಿತುಕೊಳ್ಳುವ ಬದಲು ನಿನ್ನ ಸ್ಥಾನವನ್ನು ಬೇರೆಯವರಿಗೆ ಏಕೆ ನೀಡುತ್ತಿರುವೆ?  " ನಾನು  ಕೇಳಿದೆ.  ಅವನ ಉತ್ತರ ನನಗೆ ಆಶ್ಚರ್ಯ ತಂದಿತು.  "ನಾನು ವಿದ್ಯಾವಂತನಲ್ಲ, ಶ್ರೀಮಂತನೂ ಅಲ್ಲ. ಕೂಲಿ ಕೆಲಸ ಮಾಡುವವನು. ಯಾರಿಗೂ ಯಾವುದೇ ರೀತಿಯಲ್ಲಿ ಸಹಾಯಯಾಗಲಿ,    ಹಣ ಸಹಾಯ ವಾಗಲಿ ಮಾಡಲು ನನಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ನಾನು ಇದನ್ನು ಪ್ರತಿದಿನ ಮಾಡುತ್ತಿದ್ದೇನೆ. ಈ ಕೆಲಸ ತುಂಬಾ ಸುಲಭ" ಎ

ಹಬ್ಬಗಳು ಹೆಚ್ಚಾಗಿ ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ. ಎರಡು ರೀತಿಯ ಜೀವನ ಶೈಲಿಯ ಒಂದು ತುಲನಾತ್ಮಕ ನೋಟ........ 1990 ಕ್ಕಿಂತ ಮೊದ - ಕೃಪೆ ವಾಟ್ಸಪ್,

ಹಬ್ಬಗಳು ಹೆಚ್ಚಾಗಿ ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ . ಎರಡು ರೀತಿಯ ಜೀವನ ಶೈಲಿಯ ಒಂದು ತುಲನಾತ್ಮಕ ನೋಟ ........  1990 ಕ್ಕಿಂತ ಮೊದಲಿನ ಸಾಮಾನ್ಯ ವರ್ಗದ ಜನರ ಜೀವನ ಬಹಳ ಕುತೂಹಲಕಾರಿ . ಇಂದಿನ ಜನರಿಗೆ ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಬಹುದು .....  ಆಗ ದೇಶದ ಸುಮಾರು ಶೇಕಡಾ 75% ರಷ್ಟು ಜನ ಬಡತನದಲ್ಲಿಯೇ ಇದ್ದರು . ಎರಡು ಹೊತ್ತಿನ ಹೊಟ್ಟೆ ತುಂಬಾ ಊಟ ಸಹ ಕಷ್ಟವಾಗಿತ್ತು . ಬೆಳಗ್ಗೆ ಮತ್ತು ರಾತ್ರಿ ಮಾತ್ರ ಊಟ ಮಾಡುತ್ತಿದ್ದರು . ಕೆಲವರಿಗೆ ಅದೂ ಸಿಗುತ್ತಿರಲಿಲ್ಲ .   ಬಡವರು ಅಂದಿನ ಕೂಲಿ ಹಣದಲ್ಲಿ ಅಂದೇ ರಾಗಿ ಜೋಳ ಗೋದಿ ತಂದು ಅದನ್ನು ಪುಡಿ ಮಾಡಿಸಿ ಊಟ ಮಾಡಬೇಕಿತ್ತು ......   ಗಮನಿಸಿ , ಅಂದಿನ ಕಾಲದಲ್ಲಿ ಒಂದು ಮಾತು ಚಾಲ್ತಿಯಲ್ಲಿತ್ತು . " ಹಬ್ಬದಲ್ಲಿ ಅನ್ನ ಊಟ ಮಾಡಿದಂತೆ "    ಅಂದರೆ ಹಬ್ಬಗಳಲ್ಲಿ ಮಾತ್ರ ಅನ್ನ ತಿನ್ನುತ್ತಿದ್ದರು . ಉಳಿದಂತೆ ಮುದ್ದೆ ರೊಟ್ಟಿ ಮತ್ತು ಗೊಜ್ಜು . ತರಕಾರಿಗಳು , ಬೇಳೆಗಳು , ಹಣ್ಣುಗಳು ಕೇವಲ ಕೆಲವೇ ಶ್ರೀಮಂತರು ಮಾತ್ರ ಉಪಯೋಗಿಸುತ್ತಿದ್ದರು . ಒಣ ದ್ರಾಕ್ಷಿ , ಗೋಡಂಬಿ , ಬಾದಾಮಿ , ಕರ್ಜೂರ ಬಹಳ ಜನ ನೋಡೇ ಇರಲಿಲ್ಲ . ಬನ್ನು , ಬ್ರೆಡ್ಡು ಕೇವಲ ಜ್ವರ ಬಂದಾಗ ಮಾತ್ರ ಕೊಡುತ್ತಿದ್ದರು . ಬನ್ನು ತಿನ್ನುವ ಸಲುವಾಗಿ ಜ್ವರ ಬರ

ನುಡಿಮುತ್ತು.

 "'ಸಾಧ್ಯವಾದಷ್ಟೂ ಒಳ್ಳೆಯದನ್ನು ಮಾಡಿ. ಮಾಡಲಾಗದಿರುವ ಸ್ಥಿತಿಯಲ್ಲಿ ನೀವು ಇರುವುದೇ  ಆದರೆ ಒಳ್ಳೆಯ ಯೋಚನೆಯನ್ನಾದರೂ ಮಾಡಿ.''  - ಬೆಳಗೆರೆ ಕೃಷ್ಣಶಾಸ್ತ್ರಿ

ಆನೆಗಳ ಸಭೆಯ ತೀರ್ಮಾನದಂತೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರ. - ಗುರುಮೂರ್ತಿ ಜೋಗಿಬೈಲು.

ಗೆ , ಮಾನ್ಯ   ಮುಖ್ಯಮಂತ್ರಿಗಳು ಕರ್ನಾಟಕ    ಸರ್ಕಾರ .   ಮಾನ್ಯ    ಅರಣ್ಯ   ಸಚಿವರು ಕರ್ನಾಟಕ   ಸರ್ಕಾರ . ಮತ್ತು ಹಿರಿಯ ಅರಣ್ಯ    ಅಧಿಕಾರಿಗಳು . ಕರ್ನಾಟಕ    ಸರ್ಕಾರ .   ಯಿಂದಾ , ಕಾಡಿನ    ಆನೆಗಳು .   ಮಾನ್ಯರೆ , ಇತ್ತೀಚೆಗೆ    ನಮ್ಮ    ಗುಂಪಿನ   ಆನೆಯೊಂದನ್ನು    ಸೆರೆ   ಹಿಡಿಯುವ    ಕಾರ್ಯಾಚರಣೆಯಲ್ಲಿ   ಆ ಆನೆ   ಮರಣಿಸಿರುವುದು    ತಮ್ಮ   ಗಮನಕ್ಕೆ   ಬಂದಿದೆ    ಎಂದು   ಭಾವಿಸುತ್ತೇವೆ .    ಅಂತಹುದೇ    ಕಾರ್ಯಾಚರಣೆಯಲ್ಲಿ   ಮನುಷ್ಯರು    ಸೆರೆ   ಹಿಡಿದು    ಹಿಂಸಿಸಿ    ಸಾಕಿಕೊಂಡು   " ಅರ್ಜುನ "    ಎಂದು ಹೆಸರಿಟ್ಟುಕೊಂಡಿದ್ದ   ಆನೆಯೂ   ಮರಣಿಸಿದೆಯಷ್ಟೆ . ಅದಕ್ಕಾಗಿ    ತಾವು ಸಂತಾಪ   ವ್ಯಕ್ತಪಡಿಸಿರುವ    ಸಂಗತಿ ತಿಳಿಯಿತು .   ತಮ್ಮ   ಸೂಕ್ಷ್ಮತೆಗೆ   ಅಭಾರಿಗಳಾಗಿದ್ದೇವೆ .   ಮನುಷ್ಯ   ಲೋಕದ ತಾರತಮ್ಯದ ರೂಡಿಯಂತೆ   ಎರಡೂ   ಆನೆಗಳ    ಸಾವಿನ   ಬಗ್ಗೆಯೂ   ತಾರತಮ್ಯ ದಿಂದ   ಪ್ರತಿಕ್ರಿಯಿಸಿರುವುದು    ವಿಷಾದನೀಯ .   ಕಾಡಿನ   ಆನೆಗಳಾದ    ನಮ್ಮ   ಬದುಕು    ಇಂದು    ಅತ್ಯಂತ   ಸಂಕಷ್ಟದಲ್ಲಿದೆ .   ನಾವು   ಒಡಾಡಿಕೊಂಡಿದ್ದ   ಬಹಳಷ್ಟು    ಪ್ರದೇಶಗಳು    ಕೃಷಿಗಾಗಿ ,   ರಸ್ತೆಗಳ    ನಿರ್ಮಾಣಕ್ಕಾಗಿ ,   ವಿವಿಧ    ಅಭಿವೃದ್ಧಿ   ಹೆಸರಿನ   ಯೋಜನೆಗಳಿಗಾಗಿ   ಬಳಸಲ್ಪಟ್ಟಿವೆ .   ನಾವು   ಓಡಾಡುತ್ತಿದ

ರಾಜನ ಮೂರು ಪ್ರಶ್ನೆಗಳು... ⁉ ( ಸಂಗ್ರಹ)

 - ರಾಜನ ಮೂರು ಪ್ರಶ್ನೆಗಳು... ⁉ ಪ್ರತಿದಿನವೂ ಶ್ರದ್ಧೆಯಿಂದ ಭಗವಂತನನ್ನು ಪೂಜಿಸುವವರೂ ಕೂಡಾ ಭಗವಂತ ನೆಂದರೆ ಏನು? ಯಾರು? ಎನ್ನುವ ಪ್ರಶ್ನೆಗೆ ಉತ್ತರಿಸಲಾರರು(ಬಹುಶಃ ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು) ಈ ಕಥೆಯನ್ನು ಕೇಳಿ -- ಒಬ್ಬ ರಾಜನಿಗೆ ಮೂರು ಅರ್ಥವಾಗದ ಪ್ರಶ್ನೆಗಳು ಬಹುವಾಗಿ ಕಾಡುತ್ತಿದ್ದವು -- ೧  - ದೇವರು ಯಾವ ಕಡೆ ನೋಡುತ್ತಾನೆ? ೨  - ದೇವರು ಎಲ್ಲಿರುತ್ತಾನೆ? ೩  - ದೇವರು ಏನು ಮಾಡುತ್ತಾನೆ? ಈ ಮೂರು ಪ್ರಶ್ನೆಗಳಿಗೆ ಎಷ್ಟು ಯೋಚಿಸಿದರು ಸರಿಯಾದ ಉತ್ತರ ದೊರಕಲಿಲ್ಲ ದರ್ಬಾರಿನಲ್ಲಿ ರಾಜನು ಎಲ್ಲರೊಡನೆ  ಸಮಾವೇಶಗೊಂಡು ಅಲ್ಲಿ ಹಾಜರಿದ್ದ ಎಲ್ಲ ಪಂಡಿತರು ಮೇಧಾವಿಗಳನ್ನುದ್ದೇಷಿಸಿ ಈ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟವರಿಗೆ ಸೂಕ್ತವಾದ ಬಹುಮತಿಯನ್ನು ಕೊಡುವುದಾಗಿಯೂ ತಪ್ಪಿದರೆ/ ತಪ್ಪಿದ್ದಲ್ಲಿ ಉಗ್ರವಾದ ಶಿಕ್ಷೆಯನ್ನು ನೀಡುವುದಾಗಿಯೂ ತಿಳಿಸುತ್ತಾನೆ.ರಾಜನ ಶಿಕ್ಷೆಯ  ಭಯದಿಂದ ಉತ್ತರ ಕೊಡಲು ಯಾರು ಮುಂದೆ ಬರಲಿಲ್ಲ.ಇದೇ ವಿಷಯವಾಗಿ ರಾಜ್ಯದಲ್ಲೆಲ್ಲಾ ಡಂಗುರ ಸಾರಿಸಲಾಯಿತು.ಇದನ್ನು ಕೇಳಿಸಿಕೊಂಡ ದನಗಾಹಿ ಒಬ್ಬನು ಉತ್ತರ ಕೊಡುವುದಾಗಿ ಒಪ್ಪಿ ಮುಂದೆ ಬಂದನು ಅವನನ್ನು ರಾಜನ ಆಸ್ಥಾನಕ್ಕೆ ಕರೆಸಲಾಯಿತು ಅವನು ಉತ್ತರಿಸುವ ಮೊದಲು ರಾಜನಿಗೆ ಒಂದು ವಿಷಯವನ್ನು ಹೇಳುತ್ತಾನೆ--  "ಹೇಳುವವನು ಗುರು ಅವನು ಮೇಲಿರಬೇಕು ಅದರಂತೆ ಕೇಳುವವನು ಶಿಷ್ಯ ಅವನು ಕೆಳಗಿರಬೇಕು" -- ಅದಕ್ಕೆ ರಾಜನು ಸಮ್ಮತಿಸಿ

ಉದಾರ ಚರಿತರು- ಉದಾತ್ತ ಪ್ರಸಂಗಗಳು - ಟಿ. ವಿ. ವೆಂಕಟಾಚಲ ಶಾಸ್ತ್ರಿ Akashavani FMRainbow Episode 112

Image