Posts

Showing posts from 2020

ಪರ್ವತ - ಜಯಂತ ಕಾಯ್ಕಿಣಿ

 ॥ *ಪರ್ವತ* ॥ ಒಂದು ಪರ್ವತ ನನಗೆ ಏನು ಹೇಳುತ್ತದೆ ಊದಿಕೊಂಡ ಗುಟ್ಟಿನಂತೆ ಒಡೆಯದೆ ನಕ್ಕರೆ ಫಕ್ಕನೆ ತೆರೆಯದೆ ಗಾಳಿಗೆ ಹಾಳೆಯಂತೆ ಹಾರದೆ  ಒಳ ಸ್ನಾಯುಗಳ ತೋರದೆ ಏನು ಹೇಳುತ್ತದೆ  ನಡು ರಾತ್ರಿಗಳ ಅವಿತಿಟ್ಟು ಇಕೋ ಬೇಕಾದರೆ ಬಿಟ್ಟೇನು ಎಂಬಂತೆ ಅಪಾರ ಕಥೆಗಳನ್ನು ಅಜ್ಜಿಗಳೊಂದಿಗೇ ಬೆನ್ನ ಹಿಂದೆ ಕಾದಿರಿಸಿದಂತೆ ಯಾವ ಯಶದ ನೋವಿಗೆ ಇಳಿದ ಪರದೆ  ಸನಿಹ ನಕ್ಷತ್ರ ಸುಳಿದರೂ ಕಣ್ಣು ಮಿಟುಕಿಸದ ಅದು  ಮತೀಯ ರಸ್ತೆಯಲ್ಲಿ ಬಿದ್ದ ಕತ್ತರಿಸಿದ ರುಂಡ  ಯುದ್ಧಸನ್ನದ್ಧನಾಗಿಯೇ ನಿದ್ದೆ ಹೋದ ಯೋಧ  ಅಡ್ಡ ಬಂದ ಅದರ ಬೆನ್ನಿಂದ ಪ್ರತಿ ಸೂರ್ಯೋದಯಕ್ಕೆ  ಯಾವ ಹೊಸ ಸಂದೇಶ ಬಂದಂತಿಲ್ಲ ಬದಲಿಗೆ  ಪ್ರತಿ ರಾತ್ರಿಗೊಂದು ನವೀನ ಒಡಪು ಬಾಡುವ ಬೆಳಕಿನಲ್ಲಿ ಸಂಜೆ ಆಡುತ್ತ ವೇಳೆ ಮರೆತ  ಮಕ್ಕಳಿಗೆ ಹಠಾತ್ತನೆ ಭೀತಿ ಗೋವರ್ಧನ ಕುಸಿದಂತೆ  ತಾಯಿ ಮಡಿಲಿಗೆ ಓಡುತ್ತವೆ ಅವು ಹಜಾರದಲ್ಲಿ ಕೂತ ಅತಿಥಿಗಳ ನಡುವಿಂದ ರಸ್ತೆ ಬದಿ ಕಣ್ಮುಚ್ಚಿ ನಿಂತ ಟ್ರಕ್ಕುಗಳ ನಡುವೆ  ರಂಗವಲ್ಲಿ ಇಕ್ಕುವಳು ವೃದ್ದ ಮಹಿಳೆ ಕೊನೆಯ ಲೋಕಲ್‌ಗಳು ಶೆಡ್ ಸೇರಿದನಂತರ  ಶಸ್ತ್ರಕ್ರಿಯೆ ಮುಗಿಸಿ ಕೈ ತೊಳೆಯುತ್ತಿರುವ ಮಂದಿ  ಕಿಟಕಿಯಿಂದ ನೋಡುತ್ತಾರೆ  ಹೊಸ ರಾಗವನ್ನು ನೀವಿ ಎಚ್ಚರಿಸುತಿಹ ಪರ್ವತ  ಸಾಯುವ ಶಿಶುಗಳ ಎದುರು ತನ್ನ ಮರಗಳನ್ನು ಅಡವಿಟ್ಟಿದೆ ✍ *ಜಯಂತ ಕಾಯ್ಕಿಣಿ* {'ಶ್ರಾವಣ ಮಧ್ಯಾಹ್ನ' ಕವನ...

ಪ್ರೌಢಶಾಲಾ ಶಿಕ್ಷಕರ ಗೋಳು ಕೇಳುವವರಾರು?

                                                              ಪ್ರೌಢಶಾಲಾ ಶಿಕ್ಷಕರ ಗೋಳು ಕೇಳುವವರಾರು ? ಇಂದು ಹತ್ತನೇ ತರಗತಿಯ ಫಲಿತಾಂಶ ಎನ್ನುವುದು ಒಂದು ಯುದ್ದ ಎನ್ನುವಂತೆ ಆಗಿದೆ . 8 ತರಗತಿಯಿಂದ ಪ್ರೌಢ ಶಾಲೆಗೆ ಮಗು ಬಂದ ದಿನದಿಂದ ಅವರನ್ನು 10 ನೇ ತರಗತಿ ಫಲಿತಾಂಶಕ್ಕಾಗಿ ತಯಾರು ಮಾಡಲಾಗುತ್ತಿದೆ . ಸಂಪೂರ್ಣ ಪ್ರೌಢ ಶಿಕ್ಷಣ ವ್ಯವಸ್ಥೆ ಹತ್ತನೇ ತರಗತಿಯ   ಪರಿಕ್ಷೆ   ನಡೆದು ಅದರಲ್ಲಿ ಮಕ್ಕಳು ಏನು ಬರೆಯುತ್ತಾರೆ ಎಂಬುದನ್ನು ಅಂಕದಿಂದ ನೋಡಿ ತಿಳಿದುಕೊಳ್ಳುವ ಉದ್ದೇಶಕ್ಕಾಗಿಯೇ ಬದುಕುತ್ತಾ ಇರುವಂತೆ ಕಾಣುವುದು . ನಮ್ಮ ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಾ ಇರುವ ಈ ಅಂಕದ ಹುಚ್ಚು ಸಾಮಾನ್ಯ ಜನರಿಂದ ಹಿಡಿದು ಜನಪ್ರತಿನಿಧಿಗಳ ವರೆಗೆ ,   ಶೈಕ್ಷಣಿಕ ವ್ಯವಸ್ಥೆಯ ಎಲ್ಲಾ ಸ್ತರದ ಆಡಳಿತಗಾರರಿಗೆ ಅತಿಯಾಗಿಯೇ ಹಿಡಿದಿರುವುದು . ಯಾವಾಗ 10 ನೇ ತರಗತಿ...

ವಿದ್ಯಾಗಮ ಯೋಜನೆಯ ಮೂಲಕ ಕೊರೋನಾ ರಾಯಭಾರಿಗಳಾಗುತ್ತಿರುವ ಶಿಕ್ಷಕರು

 ವಿದ್ಯಾಗಮ ಯೋಜನೆಯ ಮೂಲಕ ಕೊರೋನಾ ರಾಯಭಾರಿಗಳಾಗುತ್ತಿರುವ ಶಿಕ್ಷಕರು ನಮ್ಮ ಶಿಕ್ಷಣ ಇಲಾಖೆಗೆ ಏನಾಗಿದಿಯೋ ತಿಳಿಯದು. ಕಲಿಕೆಯ ಹೆಸರಿನಲ್ಲಿ ಹಳ್ಳಿಗೆ ಶಿಕ್ಷಕರು ಬೀದಿ ಬೀದಿಯಲ್ಲಿ ಪಾಠ ಮಾಡಲು ಪ್ರಾರಂಭಿಸಿರುವರು. ಶಾಲಾ ಪ್ರಾರಂಭ ಮಾಡಮಾಡಬಾರದು ಅದರಿಂದ ಮಕ್ಕಳಲ್ಲಿ ಕೋವಿಡ ಹರಡುವ ಸಾಧ್ಯತೆ ಹೆಚ್ಚು ಎಂದು ಒಂದು ಕಡೆ ಹೇಳುತ್ತಾ ಈಗ ಶಿಕ್ಷಕರೆ ಕೋವಿಡನ್ನು ಮಕ್ಕಳು ಇದ್ದಲಿಗೆ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತಿರುವರು. ರಾಜ್ಯದಲ್ಲಿ ಪ್ರತಿ ಹಳ್ಳಿಗೂ ಸಂಪರ್ಕದಲ್ಲಿರುವ ಇರುವ ಶಿಕ್ಷಕರು ವಿದ್ಯಾಗಮ ಯೋಜನೆಯ ಮೂಲಕ ಸಮುದಾಯದಲ್ಲಿ ಕೋವಿಡ ಪ್ರಸರಿಸಲು ಕಾರಣರಾಗುತ್ತಿರುವರು. ಈಗಾಗಲೇ ಜಿಲ್ಲೆಯಲ್ಲಿ ಒಂದೆರಡು ಸುದ್ದಿಗಳ ಹರಿದಾಡುತ್ತಿರುವುದು. ಶಿಕ್ಷಕರಿಗೆ ಸಂಬಂಳ ಕೊಡುತ್ತೇವೆ ಎಂಬ ಒಂದೇ ಒಂದು ಕಾರಣಕ್ಕಾಗಿ ಅವರಿಗೆ ಕೆಲಸ ನೀಡಬೇಕು ಎಂಬ ಮನಸ್ಥಿತಿಯಲ್ಲಿ ನಮ್ಮ ಶಿಕ್ಷಣ ಇಲಾಖೆ ಜಿದ್ದಿಗೆ ಬಿದ್ದರುವಂತೆ ಕಾಣುತ್ತಿರುವುದು. ಆ ಮುಖಾಂತರ ಮುಂದೆ ಸಮುದಾಯಕ್ಕೆ ಕಾಯಿಲೆ ಹರಡಲು ಕಾರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.  ಇನ್ನೂ ಒಂದು-ಎರಡು ತಿಂಗಳು ಮಕ್ಕಳು ಅವರದೇ ಆದ ರೀತಿಯಲ್ಲಿ ಕಲಿತರೇ ಏನಾದರೂ ತೊಂದರೇ ಇದೆಯೇ? ಕಲಿಕೆ ಎಂಬುದು ನಿರಂತರವಾಗಿ ಆಗುತ್ತಾ ಇರುವುದು. ಅದಕ್ಕೆ ಶಿಕ್ಷಕರ ಅಗತ್ಯವಿದೆ, ಹಾಗೆಂದು ಶಿಕ್ಷಕರು ಇಲ್ಲದೇ ಇದ್ದರೂ ಮಕ್ಕಳು ಕಲಿತೆ ಕಲಿಯುವರು ಅದಕ್ಕೆ ಅಗತ್ಯ ಬೆಂಬಲ ಬೇಕು.  ಹೀಗೆ ಇರುವಾಗ ಇಂತಹ ಸಂ...

ಹಿರಿಯರು ಹೇಳಿಕೊಟ್ಟ ಊಟದ ಕಲೆ

ನಿಯಮಗಳು : 1.    ಕಾರೆ ಸೊಪ್ಪನ್ನು ತಿಂದರೂ ಕಾಯಕದಿಂದಲೇ ಗಳಿಸಿರಬೇಕು. .... 2.    ಊಟಕ್ಕೆ ಕುಳಿತುಕೊಳ್ಳುವ ಮೊದಲು ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು….. 3.    ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈತೊಳೆದುಕೊಳ್ಳಬೇಕು.... 4.    ಗುರುನಾಮ ಸ್ಮರಣೆ ಮಾಡಿ ನೆಲದ ಮೇಲೆಯೇ ಚಕ್ಕಂಬಕ್ಕಾಲು ಹಾಕಿ ಕುಳಿತುಕೊಳ್ಳಬೇಕು..... 5.    ಊಟಕ್ಕೆ ಕುಳಿತಾಗ ನೆತ್ತಿಯ ಮೇಲೆ ಪೇಟ - ಪಟಗಾ ಸುತ್ತಿರುವುದಾಗಲೀ…. ಟೋಪಿಯಾಗಲೀ  ಇರಬಾರದು…. 6.    ಕರವಸ್ತ್ರವಾಗಲೀ ಒಲ್ಲಿ ಟವಲ್ ಆಗಲೀ ನಿಮ್ಮ ಜೊತೆಗಿರಬೇಕು…… 7.    ಊಟದೆಲೆ ಅಥವಾ ತಟ್ಟೆ ಈಗಾಗಲೇ ಶುಚಿಯಾಗಿಟ್ಟಿದ್ದರೂ ಮತ್ತೊಮ್ಮೆ ಕೊಂಚ ನೀರಿನಲ್ಲಿ ತೊಳೆಯಬೇಕು. … 8.    ಊಟಕ್ಕೆ ಕುಳಿತಾಗ ಪಾದರಕ್ಷೆಗಳನ್ನು ಧರಿಸಿರಬಾರದು….. 9.    ಊಟ ಮಾಡುವ ವೇಳೆಯಲ್ಲಿ ಕಸ ಗುಡಿಸಬಾರದು…… ಒಂದೇ ಸಮನೆ ದಿಟ್ಟಿಸಬಾರದು…. 10.    ಯಾರೊಬ್ಬರೂ ಅತ್ತಿಂದಿತ್ತ ಓಡಾಡಬಾರದು….. 11.    ಕುಡಿಯುವ ನೀರು ತುಂಬಿದ ಚೆಂಬು -ಲೋಟ ಪಕ್ಕದಲ್ಲಿರಬೇಕು,…. 12.    ಗಂಟಲು ಮೇಲೆತ್ತಿ ಲೋಟದಲ್ಲಿಯೇ ನೀರು ಕುಡಿಯಬೇಕು,…. ಕಚ್ಚಿ ಕುಡಿಯಬಾರದು…… 13.    ನಾಯಿಮರಿ ಅಥವಾ ನಮ್ಮ ಜ...

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು : ನಾಟಕಕಾರ, ಕತೆಗಾರ, ನಟ, ಚಿಂತಕ ಎಸ್. ಎನ್. ಸೇತುರಾಮ್ ಅವರ ಮುನ್ನುಡಿ

Image
 ಪೌರತ್ವ ತಿದ್ದುಪಡಿ ಕಾಯಿದೆಯ ವಿರೋಧದ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಸಲ್ಮಾನ ಧುರೀಣರೊಬ್ಬರು ಭಾಷಣದಲ್ಲಿ ಘೋಷಿಸಿದ್ದು . .”ಜಗತ್ತಿನ ಎಲ್ಲ ಮುಸಲ್ಮಾನರೂ ನನ್ನ ಅಣ್ಣ ತಮ್ಮಂದಿರು”.  ಸತ್ಯವೇ !  ಬರೀ ಮುಸಲ್ಮಾನರೇಕೆ ? ಜಗತ್ತಿನ ಎಲ್ಲ ಮನುಷ್ಯರೂ ನನ್ನ ಅಣ್ಣ ತಮ್ಮಂದಿರೇ. ವಸುಧೈವ ಕುಟುಂಬಕಂ ಎಂದು ನಂಬಿದವನು ನಾನು.  ಸರಹದ್ದುಗಳ ಅವಶ್ಯಕತೆ ಇರಲಿಲ್ಲ. ಗಡಿ ಕಾಯುವ ಸೈನಿಕ ಬೇಕಿರಲಿಲ್ಲ. ಪೌರತ್ವದ ಪ್ರಶ್ನೆಯೇ ಇರಲಿಲ್ಲ. ನನಗಂತೂ ಏನೂ ಬೇಕೇ ಇರಲಿಲ್ಲ. ತಪ್ಪೋ ಸರಿಯೋ !  ಮುಂಚೂಣಿಯಲ್ಲಿದ್ದ ವಿದ್ಯಾವಂತ ಧುರೀಣರು ದೇಶದ ಸ್ವಾತಂತ್ರ್ಯದ ಸಮಯದಲ್ಲಿ, ಅವರ ವಿವೇಕದಲ್ಲಿ, ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಿದರು. ಧುರೀಣರಲ್ಲಿ ಮುಕ್ಕಾಲು ಮೂರು ವಾಸಿ ವಕೀಲರು... ಭಾವಕ್ಕಿಂತ ತರ್ಕವೇ ಮುಖ್ಯವಾಯಿತೇನೋ !  ಮೇಜಿನ ಮೇಲಿನ ಭೂಪಟದಲ್ಲಿ ಗೆರೆಗಳನ್ನು ಎಳೆದು ಸರಹದ್ದುಗಳನ್ನು ಗುರುತಿಸಿದಾಗ, ಅದೂ ಧರ್ಮದ ಆಧಾರದ ಮೇಲೆ ಗುರುತಿಸಿದಾಗ, ಇಲ್ಲಿರುವ ಆ ಧರ್ಮದವ ಮತ್ತು ಅಲ್ಲಿರುವ ಈ ಧರ್ಮದವನ ಮನಃಸ್ಥಿತಿಯ ಅರಿವೇ ಇರಲಿಲ್ಲ. ಮನುಷ್ಯ ಯಂತ್ರವಲ್ಲ. ನೆನಪುಗಳ, ಭಾವಗಳ ಮುದ್ದೆ. ಇದು ನನ್ನ ನೆಲ. ನಾನು ನಡೆದಾಡಿದ ಹಾದಿ. ನನ್ನ ಶಾಲೆ. ನಾನು ಈಜಿದ ನದಿ, ಕೆರೆ. ನನ್ನ ಅಪ್ಪ, ಅಮ್ಮ, ಅಜ್ಜಂದಿರ ಜಾಗ. ನನ್ನ ಪೂಜಾ ಸ್ಥಳ. ಇದೆಲ್ಲದರ ಗುರುತು ಮತ್ತು ಹತ್ತು ತಲೆಮಾರುಗಳ ಪ್ರಜ್ಞೆಯಲ್ಲಿ ಅವನ ...

ಅಪೇಕ್ಷೆಯ ಒತ್ತಡದಲ್ಲಿ ಪ್ರೀತಿ

ಅಪೇಕ್ಷೆಯ ಒತ್ತಡದಲ್ಲಿ ಪ್ರೀತಿ..     ಮನುಷ್ಯ ಜೀವಿಗಳಿಗೆ ಪ್ರೀತಿ ಎಂಬುದು ಬೇಕೆ ಬೇಕು. ಪ್ರೀತಿ ಎಂಬುದು ಸ್ವಾಭಾವಿಕವಾಗಿ ಅಪೇಕ್ಷೆಯ ಒತ್ತಡದಲ್ಲಿ ಪ್ರೀತಿ..  ಇರಬೇಕು ವಿನಃ ಅದು ಒಬ್ಬರ ಅಪೇಕ್ಷೆ ಆಗಬಾರದು. ಅತಿಯಾದ ಅಪೇಕ್ಷೆಯಿಂದ ಪ್ರೀತಿಯೂ ಇತ್ತೀಚಿನ ದಿನಗಳಲ್ಲಿ ಅರ್ಥ ಕಳೆದು ಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಪ್ರತಿಯೊಂದು ಮಾನವ ಜೀವಿಗಳ ಸಂಬಂಧಗಳಲ್ಲಿ ಪರಸ್ಪರ ಪ್ರೀತಿ ಇದ್ದೇ ಇರುವುದು. ಪ್ರೀತಿ ಮತ್ತು ಅಪೇಕ್ಷೆ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿರುವುದು. ಆದರೇ ಬದಲಾಗುತ್ತಿರುವ ಸಮಾಜದಲ್ಲಿ ಅದಕ್ಕೆ ತಕ್ಕಂತೆ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಪ್ರೀತಿ ಮತ್ತು ಅಪೇಕ್ಷೆಗಳ ನಡುವಿನ ಸಂಬಂಧ ಬಿಗಡಾಯಿಸುತ್ತಿದೆ. ಇದರ ಪರಿಣಾಮವಾಗಿ ಇಂದು ವೃದ್ಧಾಶ್ರಮಗಳು, ಚಿಕ್ಕ ಕುಟುಂಬಗಳು, ವಿವಾಹ ವಿಚ್ಛೇದನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಣ್ಣ-ತಮ್ಮ ಅಕ್ಕ-ತಂಗಿಯ ಸಂಬಂಧಗಳು ದ್ವೇಷದ ಸಂಬಂಧಗಳಾಗಿ ಬದಲಾಗುತ್ತಿರುವುದು. ಅತಿಯಾದ ಅಪೇಕ್ಷೆ ಎಂಬುದು ಪ್ರೀತಿಯನ್ನು ಒತ್ತಡದಲ್ಲಿ ಸಿಲುಕಿಸುತ್ತಿರುವದನ್ನು  ಕಾಣಬಹುದಾಗಿದೆ. ಅಪ್ಪ ಅಮ್ಮನ ಅಪೇಕ್ಷೆಯಂತೆ ಮಗ-ಮಗಳು ಇಲ್ಲ ಅಥವಾ ನಡೆದುಕೊಳ್ಳಲಿಲ್ಲ ಎಂದಾಗ ಅಪ್ಪ-ಅಮ್ಮ ಹಾಗೂ ಮಕ್ಕಳು ಎಲ್ಲರೂ ದುಖ: ಪಡುವರು. ತನ್ನ ಮಗ-ಮಗಳು ತಾನು ಹೇಳಿದ ಹಾಗೇ ಕೇಳಬೇಕು, ಅವರು ಮಾಡುವ ಕೆಲಸ ಅವರ ಜೀವನ ಎಲ್ಲವು ತಾನು ಹೇಳಿದಂತೆ ಇರ...