ವಿದ್ಯಾಗಮ ಯೋಜನೆಯ ಮೂಲಕ ಕೊರೋನಾ ರಾಯಭಾರಿಗಳಾಗುತ್ತಿರುವ ಶಿಕ್ಷಕರು

 ವಿದ್ಯಾಗಮ ಯೋಜನೆಯ ಮೂಲಕ ಕೊರೋನಾ ರಾಯಭಾರಿಗಳಾಗುತ್ತಿರುವ ಶಿಕ್ಷಕರು

ನಮ್ಮ ಶಿಕ್ಷಣ ಇಲಾಖೆಗೆ ಏನಾಗಿದಿಯೋ ತಿಳಿಯದು. ಕಲಿಕೆಯ ಹೆಸರಿನಲ್ಲಿ ಹಳ್ಳಿಗೆ ಶಿಕ್ಷಕರು ಬೀದಿ ಬೀದಿಯಲ್ಲಿ ಪಾಠ ಮಾಡಲು ಪ್ರಾರಂಭಿಸಿರುವರು. ಶಾಲಾ ಪ್ರಾರಂಭ ಮಾಡಮಾಡಬಾರದು ಅದರಿಂದ ಮಕ್ಕಳಲ್ಲಿ ಕೋವಿಡ ಹರಡುವ ಸಾಧ್ಯತೆ ಹೆಚ್ಚು ಎಂದು ಒಂದು ಕಡೆ ಹೇಳುತ್ತಾ ಈಗ ಶಿಕ್ಷಕರೆ ಕೋವಿಡನ್ನು ಮಕ್ಕಳು ಇದ್ದಲಿಗೆ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತಿರುವರು. ರಾಜ್ಯದಲ್ಲಿ ಪ್ರತಿ ಹಳ್ಳಿಗೂ ಸಂಪರ್ಕದಲ್ಲಿರುವ ಇರುವ ಶಿಕ್ಷಕರು ವಿದ್ಯಾಗಮ ಯೋಜನೆಯ ಮೂಲಕ ಸಮುದಾಯದಲ್ಲಿ ಕೋವಿಡ ಪ್ರಸರಿಸಲು ಕಾರಣರಾಗುತ್ತಿರುವರು. ಈಗಾಗಲೇ ಜಿಲ್ಲೆಯಲ್ಲಿ ಒಂದೆರಡು ಸುದ್ದಿಗಳ ಹರಿದಾಡುತ್ತಿರುವುದು. ಶಿಕ್ಷಕರಿಗೆ ಸಂಬಂಳ ಕೊಡುತ್ತೇವೆ ಎಂಬ ಒಂದೇ ಒಂದು ಕಾರಣಕ್ಕಾಗಿ ಅವರಿಗೆ ಕೆಲಸ ನೀಡಬೇಕು ಎಂಬ ಮನಸ್ಥಿತಿಯಲ್ಲಿ ನಮ್ಮ ಶಿಕ್ಷಣ ಇಲಾಖೆ ಜಿದ್ದಿಗೆ ಬಿದ್ದರುವಂತೆ ಕಾಣುತ್ತಿರುವುದು. ಆ ಮುಖಾಂತರ ಮುಂದೆ ಸಮುದಾಯಕ್ಕೆ ಕಾಯಿಲೆ ಹರಡಲು ಕಾರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಇನ್ನೂ ಒಂದು-ಎರಡು ತಿಂಗಳು ಮಕ್ಕಳು ಅವರದೇ ಆದ ರೀತಿಯಲ್ಲಿ ಕಲಿತರೇ ಏನಾದರೂ ತೊಂದರೇ ಇದೆಯೇ? ಕಲಿಕೆ ಎಂಬುದು ನಿರಂತರವಾಗಿ ಆಗುತ್ತಾ ಇರುವುದು. ಅದಕ್ಕೆ ಶಿಕ್ಷಕರ ಅಗತ್ಯವಿದೆ, ಹಾಗೆಂದು ಶಿಕ್ಷಕರು ಇಲ್ಲದೇ ಇದ್ದರೂ ಮಕ್ಕಳು ಕಲಿತೆ ಕಲಿಯುವರು ಅದಕ್ಕೆ ಅಗತ್ಯ ಬೆಂಬಲ ಬೇಕು.  ಹೀಗೆ ಇರುವಾಗ ಇಂತಹ ಸಂದಿಗ್ದ ಸ್ಥಿತಿಯಲ್ಲಿ ನಮ್ಮ ಶಿಕ್ಷಣ ಇಲಾಖೆ ಯಾಕೆ ಇಂತಹ ತೀಮರ್ಾನವನ್ನು ಮಾಡಿರುವದೋ ತಿಳಿಯದು.  

ಶಿಕ್ಷಕರನ್ನು ಶೈಕ್ಷಣಕ ಚಟುವಟಿಕೆಗಳಲ್ಲಿ ತೊಡಗಿಸಬೇಕೆಂಬ ಉದ್ದೇಶ ಇಲಾಖೆಗೆ ಇರುವುದು ಒಳ್ಳೆಯದು. ಆದರೇ ಆ ಮೂಲಕ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುವುದು ಎಷ್ಟು ಸರಿ?

ಆಥರ್ಿಕ ವರ್ಷದ ಕೊನೆಯಲ್ಲಿ ಬಂದ ಬಜೆಟನ್ನು ಖಚು೯ ಮಾಡಲು ತರಬೇತಿಯನ್ನಯ ಸಿಕ್ಕ ಸಿಕ್ಕಿದವರಿಗೆಲ್ಲಾ ನೀಡಿ ಮುಗಿಸುವುವದು ಪ್ರತಿ ವರ್ಷ ನಡೆಯುತ್ತಾ ಇರುವುದು. ಈಗ ಯಾಕೆ ಅಂತಹ ತರಬೇತಿಗಳನ್ನು ವ್ಯವಸ್ಥಿತಿವಾಗಿ ಮಾಡುತ್ತಿಲ್ಲ. ಅಗತ್ಯವಾದ ಸರಣಿ ತರಬೇತಿಗಳ ಮೂಲಕ ಶಿಕ್ಷಕರನ್ನು ಶೈಕ್ಷಣಿಕ ಚಟುವಟಿಕೆಯಲ್ಲಿ ಇರುವಂತೆ ಮಾಡಬಹುದಲ್ಲವೇ? 

ವಿವಿಧ ವಿಷಯ ಸಂಬಂಧಿತ ತರಬೇತಿಗಳು, ಹೊಸ ಶಿಕ್ಷಣ ನೀತಿಯ ಬಗ್ಗೆ, ಕಲಿಕಾ ಉಪಕರಣ ತಯಾರಿ, ಸಮುದಾಯದ ತೊಡಗಿಸುವಿಕೆ, ಮಗುವಿನ ಮನಸ್ಥಿತಿ ಅರಿಯುವುದು, ಮೌಲ್ಯಾಂಕನ ಪದ್ದತಿ, ಇಂತಹ ಹಲವು ವಿಚಾರಗಳ ಜೊತೆಗೆ ಬೇರೆ ಬೇರೆ ರಾಜ್ಯ ದೇಶಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಆಗಿರುವ ಕೆಲಸ ಅದರ ಪರಿಣಾಮ ಇಂತಹ ನೂರಾರು ವಿಚಾರಗಳ ಬಗ್ಗೆ ಶಿಕ್ಷಕರಿಗೆ ತಿಳಿಸುವ ಅಗತ್ಯವಿದೆ. ಆ ಮೂಲಕ ಎಲ್ಲಾ ಶಿಕ್ಷಕರನ್ನು ತೊಡಗಿಸಿಕೊಳ್ಳುವ ಸಾಧ್ಯತೆ ಇರುವುದು. ಅದಕ್ಕೆ ತಕ್ಕಂತೆ  ಸಿಆರ್ ಸಿ ಡಯೆಟ್, ಬ್ಲಾಕ ಮತ್ತು ಜಿಲ್ಲಾ ಹಂತದಲ್ಲಿ ಅಧಿಕಾರಿವರ್ಗವೂ ಇರುವುದು. ಸಂಪನ್ಮೂಲ ವ್ಯಕ್ತಿಗಳು ಇರುವರು. 

ಇದೆಲ್ಲವನ್ನು ಬಿಟ್ಟು, ಶಿಕ್ಷಕರನ್ನು ಊರಿನಲ್ಲಿ ಬೀದಿಗೆ ಬಿಟ್ಟು ಮಕ್ಕಳಿಗೆ ಪಾಠ ಮಾಡಲು ಹೇಳುವುದು ಎಷ್ಟುರ ಮಟ್ಟಿಗೆ ಸರಿ? 

ಈ ಬಗ್ಗೆ ಧ್ವನಿ ಎತ್ತಬೇಕಾದ ಶಿಕ್ಷಕರ ಸಂಘಟನೆಗಳು ಏನಾದವು? ಜನಪ್ರತಿಗಳು ಏನು ಮಾಡುತ್ತಿರುವರು? ಅಥವಾ ಯಾರಿಗೂ ಈ ಬಗ್ಗೆ ಆಸಕ್ತಿ ಇಲ್ಲವೇ? ವಿರೋಧಿಸುವವರ ಧ್ವನಿಯನ್ನು ತಡೆಯತ್ತಿರುವವರಾದರೂ ಯಾರು? 

ಬೇರೆ ಬೇರೆ ಊರುಗಳಿಂದ ಮುಖ್ಯವಾಗಿ ಪಟ್ಟಣಗಳಿಂದ ಹಳ್ಳಿಗೆ ಹೋಗಿ ಪಾಠ ಮಾಡುವ ಶಿಕ್ಷಕರು ಈ ಸಂದರ್ಭದಲ್ಲಿ ಸಮುದಾಯಕ್ಕೆ ಕೋವಿಡ ತೆಗೆದುಕೊಂಡು ಹೋಗುವ ರಾಯಭಾರಿಗಳಂತೆ ಕಾಣುತ್ತಿರುವರು. ಸಕರ್ಾರ ಹಾಗೂ ಅಧಿಕಾರಗಳು ಆದೇಶ ಪಾಲನೆ ಮಾತ್ರ ತಮ್ಮ ಕಾರ್ಯ ಎಂಬಂತೆ ಎಲ್ಲಾ ಜವಬ್ದಾರಿ ಸ್ಥಾನದಲ್ಲಿ ಇರುವವರು ತಮ್ಮ ಜವಬ್ದಾರಿಯಿಂದ ನುಣುಚಿಕೊಳ್ಳುತ್ತಿರುವರು.

ಉತ್ತರಕನ್ನಡ ಜಿಲ್ಲೆಯ ಒಂದೆರಡು ಕಡೆ ಮಕ್ಕಳಿಂದ ಶಿಕ್ಷಕರಿಗೆ, ಅಥವಾ ಶಿಕ್ಷಕರಿಂದ ಮಕ್ಕಳಿಗೆ ಹೇಗೋ ಸೋಂಕು ಕಾಣಿಸಿ ಕೊಂಡಿರುವ ಸುದ್ದಿ ಇದೆ. ಇದೇ ರೀತಿಯಾಗಿ ಎಲ್ಲಾ ಹಳ್ಳಿಗಳಲ್ಲಿ ಸೋಂಕು ವ್ಯಾಪಿಸುವ ಸಾಧ್ಯತೆ  ಇರುವುದು.

ಆತುರದ ನಿಧಾ೯ರ ಮಾಡುವ ಶಿಕ್ಷಣ ಇಲಾಖೆ, ಆದೇಶ ಪಾಲನೆಗೆ ಅಷ್ಟೇ ಸೀಮಿತವಾಗಿರುವ ಅಧಿಕಾರಿ ವರ್ಗ, ಪ್ರಚಾರದ ಗುಂಗಿನಲ್ಲಿ ಸಿಲುಕಿರುವ ಜನಪ್ರತಿಗಳು ಇವರನ್ನು ನಂಬಿದರೆ ಅನಾಹುತವೆ ಹೆಚ್ಚು.  ಯಾರಿಗೆ ಮಕ್ಕಳ ಬಗ್ಗೆ ಕಾಳಜಿ ಇದೆಯೋ ಶಿಕ್ಷಣಕ್ಕಿಂತ ಮಕ್ಕಳ ಆರೋಗ್ಯ ಮುಖ್ಯ ಎಂದು ಅನಿಸುತ್ತಾ ಇದೆಯೋ ಅಂತಹ ಪಾಲಕರು  ಸ್ವಂತ ನಿಧಾ೯ರ ತೆಗೆದುಕೊಂಡು  ತಮ್ಮ ಮಕ್ಕಳ ಬಗ್ಗೆ ತಾವೇ ಕಾಳಜಿ ವಹಿಸಬೇಕಾಗಿದೆ. 

ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಆದರೂ ಶಿಕ್ಷಕರ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಅವರ ಆರೋಗ್ಯ ಮತ್ತು ಗೌರವವನ್ನು ಕಾಪಾಡುವದು, ಜೊತೆಗೆ ಮಕ್ಕಳ ಆರೋಗ್ಯವನ್ನು ಕಾಪಾಡಬೇಕಾಗಿದೆೆ. ಸಂಬಂಧಿಸಿದವರು ಗಮನ ಹರಿಸಿದರೆ ಒಳ್ಳೆಯದು. 

                                                                                                          ವಿವೇಕ ಬೆಟ್ಕುಳಿ

                                                                                                           8722954123


 

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು