ದ್ವಾದಶ ರಾಶಿಗಳ ವಾರ ಭವಿಷ್ಯ
ಮೇಷ : ಶ್ರಾವಣ ಮುಗಿಯುತ್ತಿದ್ದಂತೆ ನಿಮ್ಮ ಸಂತಸದ ದಿನಗಳೂ ಮುಗಿದವು. ವಧಾ ಸ್ಥಾನದಲ್ಲಿ ಇರುವ ಕುಜನ ಕೆಂಗಣ್ಣು ನಿಮ್ಮ ಮೇಲಿದೆ. ಬಿರಿಯಾನಿ ಆಗುವುದನ್ನು ತಪ್ಪಿಸಿಕೊಳ್ಳಲು ನಿತ್ಯವೂ ಕಟುಕ ಹೃದಯ ಪರಿವರ್ತನಾ ಸ್ತೋತ್ರ ಪಠಿಸಿದಲ್ಲಿ ಸಹಾಯವಾಗಬಹುದು. ಉಳಿದಂತೆ ದೇವರೇ ದಿಕ್ಕು. ವೃಷಭ: ಕೆಟ್ಟಕಾಲ ಬರುತ್ತಾ ಇದೆ. ಮುಂದೆ ಹೋದರೆ ಹಾಯಬೇಡಿ , ಹಿಂದೆ ಬಂದರೆ ಒದೆಯ ಬೇಡಿ. ಚಂಚಲ ಚಂದ್ರ ಘಾತಕ ಸ್ಥಾನದಲ್ಲಿರುವುದರಿಂದ ಮನಸಿನ ಮೇಲೆ ಹಿಡಿತ ಕಳೆದುಕೊಂಡು ಕಂಡವರ ಬೇಲಿ ಹಾರಿ ಮೇಯಲು ಹೋಗದಿರಿ. ನಿಮ್ಮ ಹೆಡೆಮುರಿ ಕಟ್ತಿ ದೊಡ್ಡಿಗೆ ದೂಡುವ ಸಂಭವವಿದೆ. ಒಳಿತ್ತಿಗಾಗಿ ರಾಮಚಂದ್ರಾಪುರದ ಮಠಕ್ಕೆ ಮುಡಿಪಿಟ್ಟು ಪ್ರಾರ್ಥಿಸಿ. ಮಿಥುನ: ಶುಕ್ರ ಉಚ್ಚನಾಗಿ ೫ನೇ ಮನೆಯಲ್ಲಿರುವುದು ನಿಮ್ಮ ಅದೃಷ್ಟ. ಶ್ರಾವಣ ಮಾಸ ಮುಗಿದರೂ ನಿಮ್ಮ ಒಳ್ಳೆಯದಿನಗಳು ಮುಗಿದಿಲ್ಲ. ಮಲೆನಾಡಿನ ಕಡೆ ಮಳೆ ಇನ್ನೂ ನಿಂತಿಲ್ಲ. ಬೆಚ್ಚಗಿನ ಪ್ರವಾಸಕ್ಕೆ ಸಕಾಲ. ಆದರೂ ಶನಿ ೭ನೆ ಮನೆಯಲ್ಲಿ ಹೊಂಚು ಹಾಕಿ ಕುಳಿತಿರುವುದರಿಂದ ಪಬ್/ಬಾರ್/ಪಾರ್ಕ್ ಗಳಿಗೆ ಹೋಗುವಾಗ ಎಚ್ಚರ. moral ಪೊಲೀಸರ ಕೈಗೆ ಸಿಕ್ಕುಬಿದ್ದಲ್ಲಿ ನಿಮ್ಮ ಮಾನ ಮೂರು ಕಾಸಾಗುವ ಸಾಧ್ಯತೆಗಳಿವೆ.ನಿಮ್ಮಿಬ್ಬರಲ್ಲಿ ಹೆಣ್ಣು ಕತ್ತಿನಲ್ಲಿ ಸದಾ ತಾಳಿ ಧರಿಸುವುದು,ಬುರ್ಕಾ ಧರಿಸುವುದು ಮಾಡಿದಲ್ಲಿ ಶನಿಯ ಕೆಟ್ಟ ದೃಷ್ಟಿ ಕರಗುವ ಭರವಸೆ ಇದೆ. ಗಂಡಿಗೆ ಒದೆ ತಿನ್ನುವುದೇ ಭಾಗ್ಯ. ಕಟಕ: ಎಲ್ಲೆಂದರಲ್ಲಿ ಚೀನಾ,ಹಾಂಕಾಂಗ್, ಸಿಂ...