Monday, November 25, 2013

ಜವ್ ಪ್ರತಿಷ್ಠಾನ





ಪರಿವರ್ತನೆ ನಮ್ಮ ಮಾತು, ಬದಲಾವಣೆಯೆಡೆಗೆ ನಮ್ಮ ನಡಿಗ
ತಮ್ಮ ಸಾಮರ್ಥ್ಯಗಳನ್ನು ಸರಿಯಾಗಿ ಬಳಸಿಕೊಳ್ಳಲು ಮಾರ್ಗದರ್ಶನ ವಿರದ ಈ ದೇಶದ ನವ ಪೀಳಿಗೆಯ ಗತಿಯೇನು? ಎಂಬುದು ತಮ್ಮ ತಮ್ಮ ಹವಾನಿಯಂತ್ರಿತ ಛೆಂಬರ್ಗಳಲ್ಲಿ ಹಾಯಾಗಿ ದುಡಿಯುತ್ತಾ ಇರಬಹುದಾಗಿದ್ದ ಕೆಲವು ದಕ್ಷಿಣ ಭಾರತೀಯ ಉದ್ಯೋಗಿಗಳ ಆಲೋಚನೆಯಾಗಿತ್ತು. ಇಂಥಾ ಅಲೋಚನೆಯ ಫಲವಾಗಿ ಜವ್ ಪ್ರತಿಷ್ಠಾನ, ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡುಗಳ ಅಸಂಖ್ಯಾತ ಯುವ ಜನರ ಪಾಲಿನ ದಾರಿದೀಪವಾಗುವ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ಪ್ರಗತಿಯ ಮಟ್ಟಕ್ಕೆ ಭಾರತವನ್ನು ಬೆಳೆಸುವ ಸದುದ್ದೇಶ ವನ್ನು ಹೊಂದಿರುವ ನಮ್ಮ ಸಂಸ್ಥೆಯು, YOUTH ನಲ್ಲಿರುವ YOU, ವನ್ನು ಪೋಷಿಸಿ, ಬೆಳೆಸುವ, ಎಂದರೆ, ಭಾರತೀಯ ಯುವಕ ಯುವತಿ ಯರಲ್ಲಿ ಸ್ವಂತಿಕೆ ಯನ್ನು ಪ್ರೋತ್ಸಾಹಿಸಿ ಅವರು ತಮ್ಮ ಶಕ್ತಿಗಳನ್ನು ಸಾಕ್ಷಾತ್ಕರಿಸಿ, ಅಬ್ದುಲ್ ಕಲಾಮ್]] ರ 2020ರ ಮುನ್ನೋಟ (Vision 2020) ವನ್ನು ನೆರವೇರಿಸುವಲ್ಲಿ ನೆರವಾಗುವ ಧ್ಯೇಯವನ್ನು ಹೊಂದಿದೆ.



ಮುಂಚಿನಿಂದಲೂ, ಜವ್ ಪ್ರತಿಷ್ಠಾನದ ತತ್ವವನ್ನು ವಿದ್ಯಾರ್ಥಿಗಳು, ಶಿಕ್ಷಕರು, ಕಾರ್ಪೊರೇಟ್ ಉದ್ಯಮಿಗಳು ಮೆಚ್ಚಿಕೊಳ್ಳುತ್ತಲೇ ಬಂದಿದ್ದಾರೆ. ಮೊಟ್ಟ ಮೊದಲನೆಯದಾಗಿ, ಹಿಮಾಚಲ ಪ್ರದೇಶದ ಹಮೀರ್ ಪುರದಲ್ಲಿರುವ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ಼್ ಟೆಕ್ನಾಲಜಿಯಲ್ಲಿ ತನ್ನ ಉದ್ದೇಶಗಳನ್ನು ಹಂಚಿಕೊಂಡಂದಿನಿಂದ ಜವ್ ಹಿಂತಿರುಗಿ ನೋಡಿಲ್ಲ. "ಮರಳಿ ಹಳ್ಳಿಗಳೆಡೆಗೆ- ಹಳ್ಳಿಗಳಲ್ಲಿ ಭಾರತ" ಎಂಬ ತತ್ವದಡಿಯಲ್ಲಿ, ಝವ್ ವ್ಯಕ್ತಿತ್ವ ವಿಕಸನ, ವೃತ್ತಿ ಮಾಗದರ್ಶನ, ಅಣಕು ಸಂದರ್ಶನ ಕಾರ್ಯಾಗಾರಗಳು ಮತ್ತು ಸಂವಾದಗಳನ್ನು ಕರೀರ್ಜ್, ನೀವ್, ಟಸಲ್ 2012, ಪುಸ್ತಕ ದಾನ ಮತ್ತು ಸ್ವೀಕಾರ, ಯುವಾ ನಾಯಕತ್ವ ಕಾರ್ಯಕ್ರಮಗಳ ಮೂಲಕ ನಡೆಸಿಕೊಡುತ್ತದೆ. ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸರ್ಜಾಪುರ, ದಹನು ಮುಂತಾದ ಊರುಗಳ ಶಾಲಾ ಕಾಲೇಜುಗಳಲ್ಲಿ ಈಗಾಗಲೇ ಇಂಥಾ ಕಾರ್ಯಕ್ರಮಗಳು ನಡೆದಿವೆ. ಈಮೂಲಕ ಜವ್ ನಾಳಿನ ಸಂಘರ್ಷಗಳಿಗೆ ಇಂದಿನ ಎಳೆಯರನ್ನು ಸಜ್ಜುಗೊಳಿಸುವ ಕೆಲಸವನ್ನು ಮಡುತ್ತದೆ. ಹಳ್ಳಿ ಜನರು ದಿನನಿತ್ಯ ಎದುರಿಸುವ ಸವಾಲುಗಳು ಮತ್ತು ಗ್ರಾಮ್ಯ ಬದುಕಿನ ತಲ್ಲಣಗಳನ್ನು ನಗರದ ಯುವಕರು ಸ್ವತಹ ಅನುಭವಿಸಿ ತಿಳಿದುಕೊಳ್ಳಲು ಅವರಿಗಾಗಿ ಇಂಟರ್ನ್ ಷಿಪ್ ಕಾರ್ಯಕ್ರಮಗಳನ್ನು ಸಹ ಪ್ರೋತ್ಸಾಹಿಸುತ್ತದೆ. ತನ್ಮೂಲಕ ಕ್ರಾಂತಿಯೊಂದಕ್ಕೆ ನಾಂದಿ ಹಾಡುವುದು ಜವ್ ನ ಗುರಿಯಾಗಿದೆ. ಮಾರ್ಪಾಡು, ಬದಲಾವಣೆ ಮತ್ತು ಪರಿವರ್ತನೆಯಲ್ಲಿ ನಮ್ಮ ನಂಬಿಕೆ.

by Karthik Rao




ಜವ್ ಪ್ರತಿಷ್ಠಾನ, 

Sunday, November 24, 2013

ನೀ ಪಟ್ಟು ಬಿಡದೆ ಕೂತು ?!!

ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ !!!
ಅಷ್ಟು ದೂರ ಕ್ರಮಿಸಿ
ಮರೆಯಾಗುವ ತಿರುವಿನಲ್ಲಿ
ಸಣ್ಣದೊಂದು ಖುಷಿಯ ಕೊಟ್ಟೆ
ಚೂರು ನಿದಾನಿಸಿ
ಹಿಂದಿರುಗಿ ನೋಡದರೆ
ಹೊಣೆಯಾಗುವೆ ಆಘಾತಕೆ
ಗದ್ದಲ ಎಬ್ಬಿಸಿ ಎದೆಯಲಿ
ಮೌನವ ನಿವಾರಿಸಿ

ಹತ್ತಿರದಲಿ ಅಷ್ಟು ದೂರ
ದೂರದಲ್ಲಿ ಹತ್ತಿರದ
ಭಾವ ಸ್ಪರ್ಶದೊಳಗೆ ಎನಿತು
ವಿಶೇಷವಿದು ಕಾಣೆ ?!!
ಮನದ ಪುಟ್ಟ ಅರಮನೆಯಲಿ
ದೀಪ ಹೊತ್ತು ಬಂದವಳೇ
ಈವರಿಗಿನ ಅಚ್ಚರಿಯ
ಪ್ರವೇಶ ನಿನ್ನದೇನೆ !!

ಸೋಲುವ ಪದಗಳ ಹಿಂಡು
ಸಾಗಿವೆ ಸೊರಗುತ ನೊಂದು
ಸಾಟಿಯಿಲ್ಲದಂಥ ನಗೆಯ
ಎದುರು ಸೆಣಸಿ ಸೋತು !
ಕಾವಲ ಕಣ್ಣನು ದಾಟಿ
ಹೃದಯದ ಬಾಗಿಲ ತಟ್ಟಿ
ಗದ್ದಿಗೆ ಹಿಡಿಯುವುದೇ


ನಂತರ ಆನಂತರ
ಈ ಹೊತ್ತಿನ ಈ ವಿವರ
ಸಲ್ಲಿಸುವ ಸರದಿಗೆ
ಸಾಲದಾಯ್ತು ಸೊಲ್ಲು
ಕೊಂಚ ಸುಧಾರಿಸಿ
ಮೊದಲಾಗುವೆ ಮಾತಿಗೆ
ವದಂತಿಗಳನು ಬದಿಗಿಟ್ಟು
ವಿನಂತಿಯನ್ನು ಕೇಳು

ಹುರುಳಿಲ್ಲದ ನನ್ನ
ಕವಲೊಡೆದ ದಾರಿ
ಪಯಣ ಎಲ್ಲಿಗೋ ಏನೋ
ಗೊತ್ತು ಗುರಿಯಿಲ್ಲ !
ಕ್ಷಿತಿಜದಲಿ ನಾನು
ಕೈ ಹಿಡಿವೆ ನಿನ್ನ
ನಾ ಭೂಮಿ, ನೀ ಬಾನು
ಕ್ಷುಲ್ಲಕ ಮಿಕ್ಕೆಲ್ಲ !!

               -- ರತ್ನಸುತ 

Friday, November 22, 2013

ಪಾರಿಜಾತದ ಹುಡುಕಾಟಕ್ಕೆ - ಚೇತನ್ ಸೊಲಗಿ

ಪಾರಿಜಾತದ ಹುಡುಕಾಟಕ್ಕೆ

ಹುಚ್ಚಿನ ಕುರುಹು ಹೆಚ್ಚಾಗಿದೆ
ಹೆಚ್ಚೇನು ಹೇಳಲಾರೆ
ಪಾರಿಜಾತದ ಹುಡುಕಾಟಕ್ಕೆ
ಪರದಾಟ ನಡೆಸುತಿದ್ದವನಿಗೆ
ಪೂರ್ಣಿಮೆಯಂತವಳ ಕರುಣಿಸಿದ
ಆತ......!
ಮತ್ತೆ ಪರದಾಟಕ್ಕೆ ಹಚ್ಚಿದ್ದಾನೆ
ಇರುಹು ಕುರುಹುಗಳ
ಆಟದಲ್ಲಿ, ಅವಳ ಸೂಕ್ಷ್ಮ ಸಂವೇದನೆಗಾಗಿ ....

ಹೆಗಲ ಮೇಲಿನ ಕೂಸೂ ನಾಚುವುದೇನೊ
ಆ ನಿನ್ನ ಮುಗ್ದ ನಗುವಿಗೆ
ಹೇಳಲಾಗದ ಕಠೋರ ಸತ್ಯವೊಂದನ್ನ
ಒಳಗೇ ಅದುಮಿಟ್ಟುಕೊಂಡಿದ್ದೇನೆ
ಆ ನಗು ನನ್ನೊಂದಿಗೆ ಸದಾ
ಇರಲೆಂದು...!

ಸುಂದರ ಸಾಮ್ರಾಜ್ಯದ ರಾಜನಾಗಬೇಕೆಂಬ
ಹಂಬಲತೆಯ ಹುಡುಗ ನಾನು
ರಾಣಿಗೋಸ್ಕರ
ರಾಣಿಯ ಸಾರಥಿಯಾಗಲೂ
ಸನ್ನದ್ಧನಾಗಿರುವೆ ನಾ
ನೀನೊಮ್ಮೆ ನನ್ಮನದ ಅರಸಿಯಾಗಬಲ್ಲೆಯಾದರೆ

ಹುಚ್ಚನಂತಾಗಿದ್ದೇನೆ
ಹೆಚ್ಚೇನು ಹೇಳಲಿ ಹೇಳು
ಹಂಬಲವಂತು ಮಿತಿ ಮೀರಿದೆ
ಕಂಗಳಂತು ನಿನ ಬಿಂಬಕೆ
ಶರಣಾಗಿ ನಿಂತಿವೆ
ಕಣ್ತೆರೆದರೂ ನಿದಿರೆಗೆ ಜಾರಿದರೂ
ನನ್ಮನವದಂತೂ ಸುಂದರದೊಂದು
ಸಾಮ್ರಾಜ್ಯ ನಿರ್ಮಿಸಿ
ನಿನ್ನನೇ ರಾಣಿಯಾಗಿ ಕೂರಿಸಿಬಿಡುತ್ತದೆ.


ಏ ಚೆಲುವಿ
ಬೆಳದಿಂಗಳ ಚಂದಿರನ
ನಾ ನೋಡುದ ಮರತೀನ
ನಿನ್ ಕಂಡಾಗಿಂದ

ತೋಟದಾಗಿನ ಗುಲಾಬಿ
ಹೂನತ್ತ ನಾನೀಗ
ಚೇತನ್ ಸೊಲಗಿ
ನೋಡಂಗೆ ಇಲ್ಲ
ಕೆಂಗುಲಾಬಿ ಹಂಗ ನೀನಿರಬೇಕಾದ್ರ

ಅದೆಂತಾ ನಗುನ ನಿಂದ
ಹಾ... ಹಾ... ನನ್ನನ್ನ ನೀನಾಗಿಸಬಿಟ್ಟತಲ್ಲ
ಮುಗುಳ್ನಗು ನಗುದುನ್ನ
ನಿನ್ನ ನೋಡೆ ಕಲಿಬೇಕು
ಚಂದ್ರನ ತಂಗಿ ನೀನ ಇರಬೋದೆನೋ....

ಮಬ್ಬಹಿಡಿದ ಹೊತ್ತಿನಂಗಾಗಿನಿ
ಮಾಸೇ ಹೋಗಿನೇನೋ
ತಾಳೆನೇ ಬೆಡಗಿ
ನನ್ ಮನದಾಗ ರುಜು ಮಾಡಿದ ನೀನು
ರಜಾ ಹಾಕಿ ದೂರ ನಿಂತ್ರ!

-ಚೇತನ್ ಸೊಲಗಿ, ಮುಂಡರಗಿ

ಕಾವ್ಯ-ಚಂದ್ರ…. - ಚೇತನ್ ಸೊಲಗಿ ,

ನಾ ನಿನ್ನ ಕಣ್ಣುಗಳ ಬಿಂಬವಾದೆ
ನೀ ಕಂಡ ಗಳಿಗೆಯಿಂದ
ಮನದ ರೂಪಸಿಯೇ ಚೆಲುವ ಧಾತ್ರಿಯೇ
ಬಾರೆ ನನ್ನ ಚೆಲುವೆ
ನಿನ್ ಕಣ್ಣ ನೋಟಲಿ ಪೂರ್ಣ ಚಂದಿರನೆ
ಕಸದ ಕಣಿವೆಯಾದ
ಚಿವುಟದಿರು ನೀನು ಮನದ ಪ್ರೀತಿ
ನೀ ಬಾರೆ ಮನದ ಒಡತಿ
 ಚೇತನ್ ಸೊಲಗಿ
ಶೃಂಗಾರ ಕಾವ್ಯವದು ನನ್ನಲಿಹುದು
ಸಿರಿವಂತ ನಾನು ಅಲ್ಲ
ಸಿರಿತನಕ್ಕಿಲ್ಲ – ಬಡತನಕ್ಕಿಲ್ಲ
ಪ್ರೇಮ – ಕಾವ್ಯ ಚಂದ್ರ
ನಗುಮೊಗದ ಚೆಲುವೆ ನೀ ಬಾರೆ ನೀರೆ
ಮನದೇಕ ಒಡತಿಯಾಗಿ
ತೋರುವೆನು ಅದನೆ ನೀಡುವೆನು ಅದನೆ
ಪ್ರೇಮ ಚರಿತೆ ಕಾವ್ಯ.
ಸ್ವಪ್ನಕ್ಕೆಲ್ಲಿಹುದು ಸೃಜನಸಾರ
ನಿನ್ನೊಲವೆ ಮಿಗಿಲು ಎನಗೆ
ನನ್ನೆದೆಯ ಧಿಮಿತಿಗಳ
ಕೂಡಿ ಹಾಡಿ ಕಟ್ಟೋಣ ಪ್ರೇಮದೂರು
ಪ್ರೇಮಕ್ಕೆಲ್ಲಿಹುದು ಮೇಲುಕೀಳು
ಜಗದೇಕ ರೂಪವದುವೇ
ಜಗದ ಬಾಗಿಲಾ ಜಗಲಿಯಲ್ಲಿಯೂ
ನಾ ನೆನೆವೆ ನಿನ್ನ ಮನವ.

-  ಚೇತನ್ ಸೊಲಗಿ ,

Thursday, November 21, 2013

ಸತ್ಯವಂತರ ಸಂಗವಿರಲು ತೀರ್ಥವೇತಕೆ

ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ||ಪ||

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ಜ್ಞಾನವಿಲ್ಲದೇ ನೂರು ಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ||೧||

ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ||೨||

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿ ಕೇಶವನಲ್ಲದ ದೈವವೇತಕೆ ||೩||


Krupe : http://bhakthigeetha.blogspot.in/


ದಾಸದಾಸರ ಮನೆಯ ದಾಸಾನುದಾಸ ನಾನು

ದಾಸದಾಸರ ಮನೆಯ ದಾಸಾನುದಾಸ ನಾನು
ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ ||ಪ||

ಕಾಳುದಾಸರ ಮನೆಯ ಆಳು ದಾಸ ನಾನಯ್ಯ
ಕೀಳುದಾಸನು ನಾನು ಕಿರಿಯ ದಾಸ
ಭಾಳಾಕ್ಷ ಮುಂತಾಗಿ ಭಜಿಪ ದೇವರ ಮನೆಯ
ಆಳಿನ ಆಳಿನ ಆಳಿನಡಿದಾಸ ನಾನು||೧||

ಪಂಕಜನಾಭನ ಮನೆಯ ಮುಂಕುದಾಸನಯ್ಯ
ಕೊಂಕುದಾಸನು ನಾನು ಕುರುಡು ದಾಸ
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ
ಬಂಕದ ಬಾಗಿಲ ಕಾಯ್ವ ಬಡದಾಸ ನಾನು ||೨||

ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ
ಕುಲವಿಲ್ಲದ ದಾಸ ಕುನ್ನಿದಾಸ
ಮಲಹರ ರಂಗ ನಿನ್ನ ಮನೆಯ ಮಾದಿಗ ದಾಸ
ಸಲೆಮುಕ್ತಿ ಪಾಲಿಸೊ ಆದಿಕೇಶವರಾಯ| |೩||


Krupe : http://bhakthigeetha.blogspot.in/

ಕೇಶವನೊಲುಮೆಯು ಆಗುವ ತನಕ

ಕೇಶವನೊಲುಮೆಯು ಆಗುವ ತನಕ
ಹರಿ ದಾಸರೊಳಿರುತಿರು ಹೇ ಮನುಜ||ಪ||

ಕ್ಲೇಶಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪೋಗಳುತ ಮನದೊಳು||ಅ.ಪ.||

ಮೋಸದಿ ಜೀವರ ಘಾಸಿ ಮಾಡಿದ ಪಾಪ ಕಾಶಿಗೆ ಹೋದರೆ ಹೋದೀತೇ
ಶ್ರೀಶನ ಭಕುತರ ದೂಷಿಸಿದ ಫಲ ಕಾಸು ಕೊಟ್ಟರೆ ಬಿಟ್ಟೀತೆ
ಭಾಷೆಯ ಕೊಟ್ಟು ನಿರಾಶೆಯ ಮಾಡಿದ ಫಲ ಕ್ಲೇಶವ ಗೊಳಿಸದೆ ಇಟ್ಟೀತೆ
ಭೂಸುರ ಸ್ವವ ಕ್ರಾಸ ಮಾಡಿದ ಫಲ ಏಸೇಸು ಜನುಮಕು ಬಿಟ್ಟೀತೆ||1||

ಜೀನನ ವಶದೊಳು ನಾನಾ ದ್ರವ್ಯವಿರೆ ದಾನ ಧರ್ಮಕೆ ಮನಸಾದೀತೇ
ಹೀನ ಮನುಜನಿಗೆ ಜ್ಞಾನವ ಭೋಧಿಸೆ ಹೀನ ವಿಷಯವಳಿ ಹೋದೀತೇ
ಮಾನಿನಿ ಮನಸು ನಿಧಾನವಿರದಿರೆ ಮಾನಾಭಿ ಮಾನಗಳು ಉಳಿದೀತೇ
ಭಾನುಪ್ರಕಾಶನ ಭಜನೆಯ ಮಾಡದ ಹೀನಗೆ ಮುಕುತಿಯು ದೊರಕೀತೆ||2||

ಕರುಣಾಮ್ರುತದಾಭರಣವ ಧರಿಸಿದ ಪರಮಗೆ ಸಿರಿಯು ತಪ್ಪೀತೆ
ಕರುಣಾ ಪಾಶದ ಉರವಣೆ ತೊರೆದಾತಗೆ ಶರಣರ ಕರುಣವು ತಪ್ಪೀತೆ
ಅರಿತು ಶಾಸ್ತ್ರವನು ಆಚರಿಪ ಯೋಗ್ಯಗೆ ಗುರು ಉಪದೇಶವು ತಪ್ಪೀತೆ
ವರವೇಲಾಪುರ ದಾದಿಕೇಶವನ ಸ್ಮರಿಸುವವನಿಗೆ ಮೋಕ್ಷ ತಪ್ಪೀತೆ||3||

Krupe : http://bhakthigeetha.blogspot.in/

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......