Thursday, August 14, 2014

ದಾಸ್ಯದಿಂದ ಮುಕ್ತಿ ಹೊಂದದ ನಮ್ಮ ಶೈಕ್ಷಣಿಕ ವ್ಯವಸ್ಥೆ - ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಇನ್ನೂ ಸಿಕ್ಕಿಲ್ಲ ಸ್ವಾತಂತ್ಯ


                         ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದು ನಾವು ಸ್ವಾತಂತ್ರ್ಯರಾದೆವು  ಈ ಸಂಭ್ರಮಕ್ಕಾಗಿ ಪ್ರತಿವರ್ಷ  ಅಗಷ್ಟ-15 ನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿರುವೆವು. ಸ್ವಾತಂತ್ರ್ಯ ಪಡೆದು ಇಂದಿಗೆ ನಾವು 67 ವಸಂತಗಳನ್ನು ಕಳೆದಿರುವೆವು. ಈ ಸಂದರ್ಭದಲ್ಲಿ ನಾವು ದೇಶವಾಗಿ ಜಗತ್ತಿನಲ್ಲಿಯೇ ವಿಶಿಷ್ಟವಾದ ಸ್ಥಾನವನ್ನು ಪಡೆದಿರುವೆವು. ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆದಿರುವೆವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರವೆವು.  ಸ್ವತಂತ್ರ್ಯ ಭಾರತದಲ್ಲಿ ನಿಜವಾಗಿ ಎಲ್ಲರಿಗೂ ಸ್ವಂತಂತ್ಯ ಸಿಕ್ಕಿರುವುದೇ? ಈ ಬಗ್ಗೆ ನಮಗೆ ನಾವೇ ಪ್ರಶ್ನೆ ಮಾಡಿಕೊಂಡು ಅವಲೋಕಿಸುವುದು ಈ ಸಮಯದಲ್ಲಿ ಉಚಿತವಾಗಿದೆ. ದಾಸ್ಯದಿಂದ ಮುಕ್ತಿ ಹೊಂದಿದ ನಾವು ಪ್ರಜಾಪ್ರಭುತ್ವ  ಸಕಾರ ಇದ್ದರು ಇನ್ನೂ ಯಾಕೆ ಸಮಾನತೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ? ಇನ್ನೂ ನಮ್ಮ ದೇಶದಲ್ಲಿ ದಲಿತರ ಸಮಸ್ಯೆ ಇದೆ? ಅಧಿಕಾರ ಎಂಬುದು ಇನ್ನೂ ಯಾಕಾಗಿ ಕೆಲವೆ ಜನರಲ್ಲಿ ಕೇಂದ್ರಿಕೃತವಾಗಿದೆ.? ನಮ್ಮ ದೇಶದಲ್ಲಿ ಮಹಿಳೆಗೆ ಸ್ವಾತಂತ್ಯ ಸಿಕ್ಕಿದೆಯಾ? ಮಕ್ಕಳಿಗೆ ಸ್ವಾತಂತ್ಯ ಇದೆಯಾ?  ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಬಹುಶ: ಸಿಗುವುದು ಇಲ್ಲ. ನಮ್ಮ ಸಮಾಧಾನಕ್ಕಾಗಿ ಒಂದೆರಡು ಉದಾಹರಣೆಗಳನ್ನು ಹೇಳಿಕೊಂಡು ನಾವು ಸಂತೋಷಪಡಬಹುದು ಆದರೇ ಯಾವ ಪ್ರಮಾಣದಲ್ಲಿ ನಾವು ಮುಂದೆ ಹೋಗಬೇಕಾಗಿತ್ತು ಇನ್ನೂ ಅಲ್ಲಿ ತಲುಪಿಲ್ಲ.  ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವುದು ನಮ್ಮ ಶೈಕ್ಷಣಿಕ ವ್ಯವಸ್ಥೆಯೆ ಆಗಿರುವುದು. ಇನ್ನೂ ನಾವು ಬ್ರಿಟಿಷರ ಹಾಕಿ ಕೊಟ್ಟ ಶೈಕ್ಷಣಿಕ ಪದ್ದತಿಯಲ್ಲಿಯೇ ಇರುವೆವು. ಸ್ವಾತಂತ್ಯಾ ನಂತರ ಶಿಕ್ಷಣ ಸುಧಾರಣೆ ಹೆಸರಲ್ಲಿ  ಸಾಕಷ್ಟು ಬದಲಾವಣೆಗಳನ್ನು ಮಾಡಿದರು ಸಹಾ ನಾವಿನ್ನು ಬ್ರಿಟಿಷರು ಹಾಕಿ ಕೊಟ್ಟ ಶೈಕ್ಷಣಿಕ ಅಡಿಪಾಯದಿಂದ ಹೊರಬಂದಿಲ್ಲ.  67 ವರ್ಷದ ನಂತರವು ನಮ್ಮ ಶೈಕ್ಷಣಿಕ ವ್ಯವಸ್ಥೆ ದಾಸ್ಯದಲ್ಲಿಯೇ ಇರುವುದು. ಅದರ ಪರಿಣಾಮವೇ ಇಂದಿನ ಸಮಾಜವಾಗಿದೆ.
ನಮ್ಮನ್ನು ಆಳಿದ ಬ್ರಿಟಿಷರಿಗೆ ನಮ್ಮಿಂದಲ್ಲೇ ಲಾಭ ಪಡೆದುಕೊಳ್ಳಲು ಯಾವ ರೀತಿ ಶೈಕ್ಷಣಿಕ ಪದ್ದತಿ ಬೇಕೋ ಅದನ್ನು ಜಾರಿಗೊಳಿಸಿದರು ಅದರಲ್ಲಿ ಅವರು ಯಶಸ್ವಿ ಆದರು. ಅದರಲ್ಲಿಯೂ ಸಾಕಷ್ಟು ಒಳ್ಳೆಯ ಅಂಶಗಳು ಇರುವವು. ಆದರೇ ಮುಖ್ಯವಾಗಿ ಇಲ್ಲಿನ ನೈಸಗರ್ಿಕ ಸಂಪನ್ಮೂಲವನ್ನು ಲೂಟಿ ಮಾಡಿ ಕೊಂಡೊಯ್ಯಲು ಬೇಕಾದ ಎಲ್ಲಾ ರೀತಿಯ ಶಿಕ್ಷಣವನ್ನು ಅವರು ನೀಡಿದರು. ಅದು ಆ ದೇಶದ ಲಾಭಕ್ಕಾಗಿ ಅಗತ್ಯವಾಗಿತ್ತು.ಆದರೇ ಸ್ವಾತಂತ್ಯ ದೊರೆತ ಅರ್ಧ ಶತಕಗಳು ಕಳೆದರು ನಾವು ನಮ್ಮ ಶೈಕ್ಷಣಿಕ ವ್ಯವಸ್ಥೆಯ ಅಡಿಪಾಯವನ್ನು ಸರಿಪಡಿಸಲು ಪ್ರಯತ್ನಿಸುತ್ತಿಲ್ಲ. ಬದಲಾಗಿ ಬೇರೆ ಬೇರೆ ಯೋಜನೆ ಕಾನೂನುಗಳ ಹೆಸರಿನಿಂದ ಅದೇ ಅಡಿಪಾಯದ ಮೇಲೆ ಬೇರೆ ಬೇರೆ ಆಕಾರದ ಕಟ್ಟಡವನ್ನು ಕಟ್ಟುತ್ತಿರುವೆವು.  ಈ ಕಾರಣದಿಂದಾಗಿಯೇ ನಮ್ಮ  ಶೈಕ್ಷಣಿಕ ವ್ಯವಸ್ಥೆಯಲ್ಲಿ ಈ ಕೆಳಕಂಡ ಅಂಶಗಳು ಕಂಡುಬರುವವು.
o ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕೃಷಿ ಪ್ರಮುಖ ಭಾಗವಾಗಿಲ್ಲ.
o ಶೈಕ್ಷಣಿಕ ವ್ಯವಸ್ಥೆ ಕೇಂದ್ರಿಕೃತವಾಗಿರುವುದು ಕೇಂದ್ರ/ರಾಜ್ಯ ಹಂತದಲ್ಲಿಯೇ ಆಗಿರುವುದು.
o ಬೃಹದ್ದಾಕಾರದ ಶೈಕ್ಷಣಿಕ ವ್ಯವಸ್ಥೆ ಇದ್ದರು ಪಾರದರ್ಶಕತೆಯ ಕೊರತೆ.
o ಸಮುದಾಯದ ತೊಡಗಿಸುವಿಕೆ ಇಲ್ಲದಿರುವುದು.
o ಶಿಕ್ಷಣವನ್ನು ಆಥರ್ಿಕತೆಯ ಹಿನ್ನಲೆಯಲ್ಲಿ ನೋಡುತ್ತಿರುವುದು.
o ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕಂಪನಿಗಳು, ಆಣೆಕಟ್ಟುಗಳು, ಅಪರಾಧಗಳು
o ನೈಸಗಿ೯ಕ ಸಂಪತ್ತಿನ ಲೂಟಿ, ಅಗತ್ಯಕ್ಕಿಂತ ಹೆಚ್ಚಿನ ಆಸೆ
  ಈ ಎಲ್ಲಾ ಅಂಶಗಳು ನಮ್ಮ ಶೈಕ್ಷಣಿಕ ವ್ಯವಸ್ಥೆ ದಾರಿ ತಪ್ಪಿರುವುದಕ್ಕೆ ಸ್ಪಷ್ಟ ಸೂಚಕಗಳಾಗಿದೆ. ದೇಶದ ಭವಿಷ್ಯ ಎಂಬುದು ಮಕ್ಕಳ ಕೈಯಲ್ಲಿ  ಇದೆ ಎಂಬುದನ್ನು ನಾವೆಲ್ಲರೂ  ಒಪ್ಪ್ಪಿಕೊಳ್ಳುವೆವು.  ಆದರೇ ನಾವು ನಮ್ಮ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣದಿಂದ ಮಗುವನ್ನು ಸ್ವಾಥರ್ಿಯನ್ನಾಗಿ ಮಾಡುತ್ತಿರುವೆವು. ಚೆನ್ನಾಗಿ ಓದು ಅವನಿಗಿಂತ/ಅವಳಿಗಿಂತ ಹೆಚ್ಚಿನ ಅಂಕ ತೆಗೆ, ಹೆಚ್ಚಿನ ಸಂಬಂಳದ ಕೆಲಸಕ್ಕೆ ಸೇರು. ಇದೇ ನಾವು ಮಕ್ಕಳಿಗೆ ಕಲಿಸುತ್ತಿರುವೆವು. ಅಗಷ್ಟ-15 ರ ಆಚರಣೆಯಲ್ಲಿಯೂ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಬಹುಮಾನ ನೀಡುತ್ತಿರುವೆವು. ಒಬ್ಬರಿಗೆ ಬಹುಮಾನ ನೀಡಿ ಉಳಿದವರ ಮನಸ್ಸಿನಲ್ಲಿ ದ್ವೇಷವನ್ನು ಹೆಚ್ಚಿಸುತ್ತಿರುವೆವು. ಸಕಾ೯ರದ ಯೋಜನೆ  ಸಹಾ ಹೆಚ್ಚಿನ ಅಂಕ ಪಡೆದವರಿಗಾಗಿ ಇರುವುದು.  ಒಟ್ಟಾರೆ ನಮ್ಮ ಶೈಕ್ಷಣಿಕ ರೀತಿ ನೀತಿಗಳು ದ್ವಂದದಲ್ಲಿರುವುದು. ಹೇಳುವುದು ಒಂದು ಮಾಡುವುದು ಒಂದು ಎಂಬತಾಗಿದೆ.
ನಮ್ಮ ಶೈಕ್ಷಣಿಕ ವ್ಯವಸ್ಥೆಯ ಅಡಿಪಾಯವನ್ನೇ ನಾವು ಬದಲಾಯಿಸದಿದ್ದರೇ ಮುಂದಿನ ಕೆಲವು ವರ್ಷಗಳಲ್ಲಿ ಪರಿಸ್ಥಿತಿ ಗಂಭೀರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಆದರೇ ನಾವಿಂದು ದುರಾಸೆಯ ಕಾರಣದಿಂದ ಬೇರೆಯವರ ಬದುಕಿನ ಹಕ್ಕನ್ನು ಕಸಿಯುತ್ತಿರುವೆವು. ಇದೇ ಸ್ಥಿತಿ ಮುಂದುವರೆದರೆ  ಪುನ: ನಾವು ದಾಸ್ಯದಲ್ಲಿಯೇ  ಬದುಕಬೇಕಾಗುವುದು. ಅದಕ್ಕೂ ಮುಂಚೆ ಸಾಮರಸ್ಯದಿಂದ ಬದುಕುವ ಸಮಾಜ ಸೃಷ್ಠಿ ಮಾಡುವ ಅಗತ್ಯವಿದೆ. ಅದಕ್ಕಾಗಿ ನಾವು ನಮ್ಮ ಶೈಕ್ಷಣಿಕ ಅಡಿಪಾಯವನ್ನು ಹೊಸದಾಗಿ ನಿಮಿ೯ಸುವ ಅಗತ್ಯವಿದೆ.  ಇದರ ಬಗ್ಗೆ ಚಚೆ೯ಯನ್ನು ಸ್ವಾತಂತ್ಯೋತ್ಸವ ಸಂದರ್ಭದಲ್ಲಿ ಹುಟ್ಟುಹಾಕುವ ಅಗತ್ಯವಿದೆ...
                                                                                                                       



ವಿವೇಕ ಬೆಟ್ಕುಳಿ





Wednesday, August 13, 2014

ಆಲ್ಬರ್ಟ್ ಐನ್ಸ್ಟನ್ - ಸುಭಾಷಿತ

ಧರ್ಮದ ಸ್ಪರ್ಶವಿಲ್ಲದ ವಿಜ್ಞಾನ ಕುಂಟು; ವಿಜ್ಞಾನದ ಸ್ಪರ್ಶವಿಲ್ಲದ ಧರ್ಮ ಕುರುಡು -  
                     

                                                                                                - ಆಲ್ಬರ್ಟ್ ಐನ್ಸ್ಟನ್

Monday, August 11, 2014

ಅ.ನ.ಕೃ - ಸುಭಾಷಿತ,

ಜೀವನವನ್ನು ಹಿಂದೆ ನೋಡಿ ತಿಳಿದುಕೊಳ್ಳಬೇಕು ಮುಂದೆ ನೋಡಿ ಬದುಕ ಬೇಕು -


                                                                                          ಅ. ನ. ಕೃ. 

Friday, August 8, 2014

ಹರಕು - ಮುರುಕು - ಶರತ್ ಚಕ್ರವರ್ತಿ


ಇತ್ತಿಚೆಗೆ ವಾಟ್ಸ್ ಆಪ್ ಅಲ್ಲಿ ಒಂದ್ ವಿಡಿಯೋ ಬಂತು. ಅದ್ರಲ್ಲಿ ಬ್ರಿಗೆಡ್ ಕಾಲೇಜ್ ವಿದ್ಯಾರ್ಥಿಗಳು 'ಬಕ್ರಾ' ಮಾಡುವಂತಹ ಹಾಸ್ಯ ದೃಶ್ಯ ಇತ್ತು. ರಸ್ತೆ ಬದಿ ಬಸ್ ಕಾಯ್ತಾ ನಿಂತಿದ್ದ ನಡು ವಯಸ್ಸಿನ ವ್ಯಕ್ತಿ ಹತ್ರ ಹೋಗಿ ಇಂಗ್ಲೀಷಿನಲ್ಲಿ ಬ್ರಿಗೇಡ್ ಕಾಲೇಜು ಮತ್ತು ಅಲ್ಲಿನ ವಿದ್ಯಾರ್ಥಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಅಂತ ಮೈಕ್ ಚಾಚ್ತಾನೆ. ಆ ವ್ಯಕ್ತಿ ತನಗೆ ಗೊತ್ತಿರೋ ಅರೆ ಬರೆ ಇಂಗ್ಲೀಷ್ನಲ್ಲಿ 'ಯಾ ಯಾ ಕಾಲೇಜ್ ಈಸ್ ಗುಡ್, ಸ್ಟೂಡೆಂಡ್ ಈಸ್ ಗುಡ್, ಬ್ರಿಲಿಯಂಟ್....' ಹೀಗೆ ಏನೋ ಒಂದು ಹೇಳಿ ಸುಮ್ಮನಾಗ್ತಾನೆ. ಅಷ್ಟಕ್ಕೆ ಬಿಡದ ಆ ವಿದ್ಯಾರ್ಥಿಗಳು ಅವನನ್ನ ಇನ್ನಷ್ಟು ಹುಚ್ಚು ಪ್ರಶ್ನೆಗಳನ್ನ ಅವರ ಸ್ಟಾಂಡರ್ಡ್ ಇಂಗ್ಲೀಷ್ನಲ್ಲಿ ಕೇಳಿ ತಬ್ಬಿಬ್ಬು ಮಾಡುತ್ತಾನೆ. ಅತ್ತ ಕೇಳಿದ ಪ್ರಶ್ನೆನು ಅರ್ಥವಾಗ್ದೆ, ಇತ್ತ ಇಂಗ್ಲೀಷ್ ಬರಲ್ಲ ಹೇಳೋಕು ಆಗ್ದೆ ಆ ವ್ಯಕ್ತಿ ಪೇಚಾಡ್ತ ಹೇಗಾದ್ರ ಮಾಡಿ ತಪ್ಪಿಸ್ಕೊಂಡ್ರೆ ಸಾಕು ಅನ್ನೋ ಹಾಗೆ ದಿಸ್ ದಟ್ ಗೋಯಿಂಗ್ ನೈಸ್ ಅಂದ್ಕೊಂಡು ಅಲ್ಲಿ ಕಾಲ್ಕೀಳೋಕೆ ನೋಡ್ತಾನೆ. ಅವನ ಇಂಗ್ಲೀಷನ್ನ ಎಂಜಾಯ್ ಮಾಡೋಕೆ ಶುರು ಮಾಡ್ಕೊಂಡ ಆ ವಿದ್ಯಾರ್ಥಿಗಳು ಅವನ ಬೆನ್ನತ್ತಿ ಸಾಕಾಷ್ಟು ರೋಸಿಕೊಳ್ಳುತ್ತಾರೆ. ನೋಡಲು ತುಂಬಾ ಫನ್ನಿ ಆಗಿರೋ ಈ ವಿಡಿಯೋ ನಗಿಸುತ್ತದೆ ನಿಜ.
ಆದರೆ...
ಇಂಗ್ಲೀಷ್ ಬಾರದೇ ಇರೋದು ನಮ್ಮನ್ನು ಈ ಮಟ್ಟಿಗಿನ ಅಪಹಾಸ್ಯಕ್ಕೆ ಗುರಿ ಮಾಡುತ್ತದೆಯೇ ಎಂಬುದು ಯೋಚಿಸಬೇಕಾದ ವಿಚಾರ. ಇಂಗ್ಲೀಷ್ ಬರದವನನ್ನು ಪೆಂಗ-ಮಂಗನ ರೀತಿಯಲ್ಲಿ ನೋಡಿದ ಆ ವಿದ್ಯಾರ್ಥಿಗಳ ತಪ್ಪೋ.. ಅಥವಾ ನನಗೆ ಇಂಗ್ಲೀಷ್ ಗೊತ್ತಿಲ್ಲ. ಕೇಳೋದೇನಿದ್ರು ಕನ್ನಡದಲ್ಲಿ ಕೇಳಿ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳದೆ ಕೊನೆವರಗೂ ಬಟ್ಲರ್ ಇಂಗ್ಲೀಷ್ನಲ್ಲೆ ಮಾನ ಮುಚ್ಚಿಕೊಳ್ಳಲು ಯತ್ನಿಸಿದ ಆ ವ್ಯಕ್ತಿಯ ತಪ್ಪ..? (ಇಂತಹ ವ್ಯಕ್ತಿ ನಾವು ಕೂಡ ಆಗಿರಬಹುದು, ಅವನು ನಮ್ಮ ಪ್ರತಿನಿಧಿ ಅಷ್ಟೆ)
ಇಂತಹ ಪರಿಸ್ಥಿತಿ ಇಂದ ನಮ್ಮ ನಾಡಿನಲ್ಲೇ ನಾವು ಎರಡನೇ ದರ್ಜೆಯ ಪ್ರಜೆಗಳಾಗುತ್ತಿದ್ದೇವೆ. ಒಪ್ಪಿಕೊಳ್ತಿನಿ ಇಂಗ್ಲೀಷ್ ಅವಶ್ಯಕ. ಆದ್ರೆ ಅನಿವಾರ್ಯ ಅಲ್ಲ.

--------------

ಮತ್ತೊಂದು ಮುಖ್ಯವಾದ್ದು...

ಹಳ್ಳಿ ಇಂದ ಬಂದ ನಾನು ಮಾತನಾಡುವಾಗ 'ಹಾ'ಕಾರ ಮತ್ತು 'ಆ'ಕಾರಗಳ ಕಡೆ ಅಷ್ಟೊಂದು ಗಮನ ಹರಿಸುವುದಿಲ್ಲ. ಹಾಸನ ಎಂಬುದರ ಬದಲು ಆಸನ ಎಂದೇ ಹೇಳಿರುತ್ತೇನೆ. ಇದನ್ನು ಒಂದು ಮಹಾಪರಾಧ ಅಥವಾ ದೊಡ್ಡ ಕಾಮಿಡಿ ಎಂಬಂತೆ ಹಲವರು ಎಂಜಾಯ್ ಮಾಡುವುದ್ದನ್ನು ನೋಡಿ 'ಅಲೆಲೆ ಮೂರ್ಖ ಬಡ್ಡಿಮಕ್ಳ' ಅಂದ್ಕೊಂಡಿದಿನಿ. ಇನ್ನು ಕರವೇ ನಾರಾಯಣಗೌಡರ ವಿಚಾರದಲ್ಲೂ ಹಲವರು ಇದೇ ವಿಚಾರಕ್ಕೆ ಆಡಿಕೊಳ್ಳುವುದ ನೊಡಿದ್ದೇನೆ.
ನನ್ನೂರಲ್ಲಿ ಮಾತಾಡೋ, ಅಲ್ಲಿನ ಮಣ್ಣಿನ ಭಾಷೆಯನ್ನ ಯಥಾವತ್ತಾಗಿ ಮೈಗೂಡಿಸಿಕೊಂಡಿರೋ ನಾನು ಅಲ್ಲಿ ಚಾಲ್ತಿಯಲ್ಲಿರೋ ಲಯ, ಸ್ವರಗಳನ್ನೇ ತುಂಬಿಕೊಂಡು ಭಾಷೆ ಕಲಿತ್ತಿದ್ದೇನೆ. ಒಂದು ಉದಾಹರಣೆ ಅಂದ್ರೆ ನಮ್ಮೂರಲ್ಲಿ (ಹಾಸನದ ಹಳ್ಳಿಗಳಲ್ಲಿ) ಹೋಗು ಅಥವಾ ಹೋಗಲೋ ಅನ್ನೋಕೆ 'ವೋಗ್ಲಾ' ಅಂತಾನೇ ಅನ್ನೋದು. ಅಲ್ಲಿನ ಬಹುಪಾಲು ಜನ ಹೀಗೆನೇ ಮಾತಾಡ್ತರೆ. ಅಲ್ಲಿ ಹುಟ್ಟಿ ಮಗುವಾದ ನಾನು ಅದನ್ನೆ ಬಳಸುತ್ತಿದ್ದೇನೆ. ಭಾಷೆ ವಾತಾವರಣದ ಸೊಗಡಿ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ ಅನ್ನೋದು ನಿಜ ಆಗಿದ್ರೆ, ಪ್ರತಿ 30 ಕಿಮಿಗೂ ಭಾಷೆ ಲಯ ಮತ್ತು ಸ್ವರೂಪ ಬದಲಾಗುತ್ತೆ ಅನ್ನೋದು ನಿಜ ಆದ್ರೆ ನನ್ನ ಮಾತಲ್ಲಿ ಬರೋ 'ಹಾ'ಕಾರ 'ಆ'ಕಾರ ತಪ್ಪಲ್ಲವೇ ಅಲ್ಲ. ಅದು ಭಾಷಾ ಸೊಗಡು.
*ಇನ್ನು ಲಿಪಿ ಎಲ್ಲ ಕಡೆ ಒಂದೇ ಆಗಿರುವುದರಿಂದ ಬರವಣಿಗೆಯಲ್ಲಿ ಅಂತಹ ವ್ಯತ್ಯಾಸಗಳೇನು ಆಗುವುದಿಲ್ಲ.
ಒಂದಷ್ಟು ಉದಾಹರಣೆಗಳು
ಮಂಗಳೂರು ಅಥವಾ ಕರಾವಳಿ ಕಡೆ ಹೋದರೆ 'ಯಂತ ಮರಾಯ, ಯಂತ ಮಾಡುದೀಗಾ' ಅಂದ್ರೆ ಯಂತ ಅಲ್ಲ ಕಣೋ ಏನು ಮಾಡೋದು ಅಂತ ಕೇಳು ಭಾಷೆ ಬರದವ್ನೆ ಅಂತ ಬೈಯ್ಯೋಕಾಗುತ್ತಾ..?
ಕುಂದಪ್ರಾ ಭಾಷೆ ಬೆಂಗಳೂರಿನ ಭಾಷೆಗೆ ಸಂಪೂರ್ಣ ಭಿನ್ನವಾದ ಸೊಗಡಿಂದ ಕೂಡಿದೆ. 'ಸಂತಿಗ್ ಹ್ವಾಯ್ಕ್' ಅನ್ನೋದ್ನ ಸಂತೆಗೆ ಹೋಗ್ತಿನಿ ಅಂತ ತಿದ್ದಿ ಹೇಳಿದ್ರೆ ಅಂದ್ರೆ ಭಾಷಾ ವಿದ್ವಾಂಸ್ರಾಗ್ತಿವ.
ಕೋಲಾರದವ್ರು 'ಮಾಡಿದಿವಿ' ಅನ್ನೋದ್ರು ಬದ್ಲು 'ಮಾಡಿದಿರಿ' ಅಂತಾನೇ ಹೇಳ್ತಾರೆ. ಊಟ ಮಾಡಿದ್ರಾ ಅನ್ನೋಕೆ ಊಟ್ಗಳು ಅಂತಾರೆ. ವ್ಯಾಕರಣ ಓದ್ಕೊಂಡ್ ಬಂದು ಇದುನ್ನ ತಪ್ಪು ಅಂತಿರಾ.

ಇಂತಹ ಅದೆಷ್ಟೋ ಉದಾಹರಣೆಗಳು ಸಿಕ್ತವೆ. ಭಾಷೆಯ ಮೂಲ ಶಬ್ದ ಆಗಿರುತ್ತೋ ಹೊರತು ವ್ಯಾಕರಣ ಅಥವಾ ಸ್ವರ ವ್ಯಂಜನಗಳಾಗಿರೋದಿಲ್ಲ. ಅಲ್ಲವಾ..?

 ಶರತ್ ಚಕ್ರವರ್ತಿ





Thursday, August 7, 2014

"..... ನಾನು ಸಾಮಾನ್ಯನಲ್ಲಿ, ಸಾಮಾನ್ಯವ್ಯಕ್ತಿಯಾಗಿ ಬದುಕಬೇಕು...." - ನಾಗೇಶ ಸೂರ್ಯ

ನೀವು “ಲೂಸಿಯ” ಸಿನಿಮಾ ನೋಡಿದ್ದೀರಾ??? ಚಿತ್ರದ ಕೊನೆಯಲ್ಲಿ ಒಂದು ದೃಶ್ಯವಿದೆ. ನಾಯಕ ಒಬ್ಬ ಸ್ಟಾರ್ ನಟ, ಚಾನಲ್ ಒಂದಕ್ಕೆ ಸಂದರ್ಶನ ನೀಡುತ್ತಿದ್ದಾನೆ. ಸಂದರ್ಶಕ ಕೇಳುತ್ತಾನೆ ನಿಮ್ಮ ಕನಸುಗಳೇನು ಅಂತ??? ಆ ನಟ.... ನಾನು ಸಾಮಾನ್ಯನಲ್ಲಿ, ಸಾಮಾನ್ಯವ್ಯಕ್ತಿಯಾಗಿ ಬದುಕಬೇಕು. ನನಗೆ ಜನರುಗಳ ಮಧ್ಯೆ ಕಳೆದುಹೋಗಬೇಕೆನ್ನೋ ಆಸೆ, ರೋಡ್ನಲ್ಲಿ ಪಾನಿಪುರಿ ತಿನ್ನೋ ಆಸೆ, ಬಸ್ ಸ್ಟಾಂಡ್ ನಲ್ಲಿ ಬಸ್ ಗಾಗಿ ಕಾಯೋ ಆಸೆ ಅನ್ನುತ್ತಾನೆ. ಒಳ ಮನಸ್ಸಿನಿಂದ ಆಲಿಸಿದಾಗ ನಿಜಕ್ಕೂ ಅವನ ಮಾತುಗಳು ನಮಗೆ ಆಶ್ಚರ್ಯವೆನಿಸುತ್ತದೆ. ಸಾಮಾನ್ಯ ವ್ಯಕ್ತಿಯಾಗಿದಾಗ ದೊಡ್ಡ, ದೊಡ್ಡ ಕನಸ್ಸುಗಳನ್ನ, ಆಸೆಗಳನ್ನ ಕಾಣುವ ಇವರು ದೊಡ್ಡ ವ್ಯಕ್ತಿಗಳಾದ ಮೇಲೆ ಯಾಕೋ ಚಿಕ್ಕ, ಚಿಕ್ಕ ಕನಸು ಕಾಣುತ್ತಾರೆ!!! ಮತ್ತು ಅದರಲ್ಲೇ ಸುಖವನ್ನ ಹುಡುಕಲು ಬಯಸುತ್ತಾರೆ. ಅದಕ್ಕೆ ಏನೋ ಅಡಿಗರು ಹೇಳಿರೋದು “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” ಅಂತ. ಇದು ಇವರೊಬ್ಬರ ಕಥೆಯಲ್ಲ. ನಮ್ಮ ಸಿನಿಮಾದಲ್ಲಿದ್ದು ದೊಡ್ಡ ವ್ಯಕ್ತಿಗಳಾಗಿರೋ ಇನ್ನೂ ಅನೇಕರು ಈ ರೀತಿಯ ಚಿಕ್ಕ, ಚಿಕ್ಕ ಆಸೆಗಳನ್ನ ಕಂಡು ಆ ಆಸೆಗಳನ್ನ ನೆರವೇರಿಸಿಕೊಳ್ಳಲು ಕಷ್ಟ ಪಟ್ಟಿದ್ದಾರೆ ಮತ್ತು ಪಡುತ್ತಲೇ ಇದ್ದಾರೆ.
ಜೀವನದಲ್ಲಿ ಕಷ್ಟಪಟ್ಟು ಒಂದೊಂದೇ ಮೆಟ್ಟಿಲು ಮೇಲೇರಿ ಯಶಸ್ಸು, ಹಣ, ಕೀರ್ತಿ ಎಲ್ಲವನ್ನೂ ಪಡೆದ ನನ್ನ ಗುರು ನಾಗತಿಹಳ್ಳಿ ಚಂದ್ರಶೇಖರ ರವರು ನಾನು ಒಮ್ಮೆ ಅವರ ಊರಿಗೆ ಹೋಗಿ ವಾಪಸ್ಸು ಬರುವಾಗ ರೋಡ್ ಒಂದರಲ್ಲಿ ಗಂಡ ಹೆಂಡತಿ ಶೆಟಲ್ ಕಾಕ್ ಆಡುತ್ತಿರುವುದನ್ನ ನೋಡಿ, ನಾನು ಆ ರೀತಿ ಹೆಂಡತಿ ಜೊತೆ ಆರಮಾಗಿ ಶೆಟ್ಟಲ್ ಕಾಕ್ ಆಡುವ ಆಸೆ ಕಣಯ್ಯ. ಆದರೆ ಏನು ಮಾಡೋದು ಸಾಧ್ಯವಾಗುವುದಿಲ್ಲವೇ??? ಅಂತ ಹೇಳಿ ನೊಂದುಕೊಂಡರು. ದೇಶ ಸುತ್ತಿ ಕೋಶ ಓದಿರೋ ನನ್ನ ಗುರುಗಳಿಗೆ ಇಷ್ಟು ಚಿಕ್ಕ ಆಸೆ ನೆರವೇರಿಸಿಕೊಳ್ಳಲು ಕಷ್ಟನಾ??? ಮನಸ್ಸಿನಲ್ಲೇ ಪ್ರಶ್ನೆ ಕಾಡಲಾರಂಭಿಸಿತು. ವಿಚಿತ್ರ ಅಂದ್ರೆ ಅವರ ಆಸೆ ಈವರೆಗೆ ನೆರವೇರಲು ಸಾಧ್ಯವಾಗಿಲ್ಲ.
ತನ್ನ ಜೀವನದಲ್ಲಿ ಅಂದುಕೊಂಡಿದ್ದಕ್ಕಿಂತ ಸಾವಿರ ಪಟ್ಟು ಹೆಚ್ಚು ಪಡೆದ ಸೂಪರ್ ಸ್ಟಾರ್ ರಜನಿಕಾಂತ್ ರವರಿಗೆ ಮಟ ಮಟ ಮಧ್ಯಾಹ್ನ ಆರಮಾಗಿ ಪಾರ್ಕ್ ನಲ್ಲಿ ಮಲಗಬೇಕೆನ್ನೋ ವಿಚಿತ್ರ ಆಸೆಯಿತ್ತು. ಅದನ್ನ ಅವರೊಮ್ಮೆ ಎಫ್.ಎಮ್ ನಲ್ಲಿ ಹೇಳಿಕೊಂಡಿದ್ದರು. ಒಂದೆರಡು ಸಿನಿಮಾಗಳು ಹಿಟ್ಟಾದ ನಟನೇ ರೋಡ್ ನಲ್ಲಿ ನೆಡೆದಾಡಿದರೆ ಮುತ್ತಿಕೊಳ್ಳುವ ಈ ಕಾಲದಲ್ಲಿ ಅಷ್ಟು ದೊಡ್ಡ ನಟ ಬಂದರೆ ಸುಮ್ಮನಿರುತ್ತಾರಾ??? ಏನು ಮಾಡಬೇಕೆಂದು ತಿಳಿಯದೆ ಎಷ್ಟೋ ವರ್ಷಗಳ ಕಾಲ ಅವರ ಆಸೆ ಹಾಗೆ ಉಳಿದಿತ್ತು. ಕೊನೆಗೆ ಮಾರು ವೇಷದಲ್ಲಿ ಬಂದು ಪಾರ್ಕ್ ನಲ್ಲಿ ಮಲಗಿ ಅವರ ಆಸೆ ನೆರವೇರಿಸಿಕೊಂಡರು.
ಇನ್ನೂ ತನ್ನ ಜೀವಿತಾವಧಿಯಲ್ಲಿ ಎಂದು ತೆರೆಯ ಮೇಲೆ ಸಿಗರೇಟು ಸೇದಿ ಅಭಿನಯಿಸದ ಮೇರು ನಟರೊಬ್ಬರಿಗೆ ನಿಜ ಜೀವನದಲ್ಲಿ ಸಿಗರೇಟು ಸೆದೋ ಅಭ್ಯಾಸವಿತ್ತು (ಯಾವಾಗಲು ಅಲ್ಲ ಆಗೊಮ್ಮೆ, ಈಗೊಮ್ಮೆ). ತನ್ನ ಮನೆಗೆ ಸ್ಕ್ರಿಪ್ಟ್ ಕೆಲಸಕ್ಕೆ ಬರುವ ಬರಹಗಾರರು ಬಿಡುವಿನ ವೇಳೆಯಲ್ಲಿ ಸಿಗರೇಟು ಸೇದುತ್ತಿದ್ದರೆ ನನಗೂ ಒಂದ್ ಕೊಡಿ ಜಮಾಯಿಸ್ಬಿಡ್ತೀನಿ ಅಂತ ಪ್ರೀತಿಯಿಂದ ಕೇಳಿ ಪಡೆದು ಎಲ್ಲೋ ಮೂಲೆಯಲ್ಲಿ ನಿಂತು ಯಾರಿಗೂ ಕಾಣದಾಗೆ ಸೇದುತ್ತಿದ್ದರು. ಆಮೇಲೆ ಬಂದು ನೋಡ್ರಿ ದೇವರು ನನಗೆ ಯಶಸ್ಸು, ಕೀರ್ತಿ, ಹಣ ಎಲ್ಲ ಕೊಟ್ಟಿದ್ರು ಈ ಒಂದ್ ಚಿಕ್ಕ ಆಸೆಯನ್ನ ನೆರವೇರಿಸಿಕೊಳ್ಳೋಕ್ಕೆ ಎಷ್ಟು ಕಷ್ಟ ಪಡ್ತೀನಿ ಅಂತ ಮಗುವಿನಂತೆ ಕೇಳುತ್ತಿದ್ದರು. ಅವರಿಗಿದ್ದ ಜನಮನ್ನಣೆ, ಸ್ಟಾರ್ ವ್ಯಾಲ್ಯು ಕದ್ದು ಸೇದುವಂತೆ ಮಾಡುತ್ತಿತ್ತು.
80ರ ದಶಕದಲ್ಲಿ ನಾಯಕನ ಸರಿಸಮನಾಗಿ ಸ್ಟಾರ್ ವ್ಯಾಲ್ಯು ಹೊಂದಿದ್ದ ಕೆ. ಬಾಲ ಚಂದರ್ ರವರಿಗೆ ರೋಡ್ನಲ್ಲಿ ಕೊನ್ ಐಸ್ಕ್ರೀಮ್ ತಿನ್ನಬೇಕೆನ್ನೋ ಆಸೆ ತುಂಬ ಇತ್ತು. ದಕ್ಷಿಣ ಭಾರತದಲ್ಲೇ ಹೆಸರುಮಾಡಿದ್ದ ಅವರಿಗೆ ಎಲ್ಲಿ ಹೋದರೂ ಅಭಿಮಾನಿಗಳು, ಅದರಲ್ಲೂ ಬೆಂಬಿಡದೆ ಅವಕಾಶ ಕೇಳೋ ಕಲಾವಿದರ ಕಾಟದಿಂದ ಎಲ್ಲಿಯೂ ಈ ಆಸೆ ನೆರವೇರಿಸಿಕೊಳ್ಳಲಾಗಿರಲಿಲ್ಲ. ಕೊನೆಗೆ ಕಮಲಾಸನ್ ಮತ್ತು ರಜನಿಕಾಂತ್ ಅಭಿನಯದ “ನಿನೈತಾಲೇ ಇನಿಕ್ಯುಂ” ಚಿತ್ರದ ಶೂಟಿಂಗ್ಗೆಂದು ಸಿಂಗಾಪುರ್ ಗೆ ಬಂದಾಗ ಖುಷಿಯಿಂದ ಕೊನ್ ಐಸ್ಕ್ರೀಮ್ ತಂದು ರೋಡ್ ನಲ್ಲಿ ಇನ್ನೇನು ತಿನ್ನಬೇಕೆನ್ನುವಷ್ಟರಲ್ಲಿ ಹಿಂದೆಯಿಂದ ಬಂದ ವ್ಯಕ್ತಿಯೊಬ್ಬ ಸಾರ್ ನಾನು ನಿಮ್ಮ ಅಭಿಮಾನಿ ಒಂದೇ ಒಂದು ನಿಮ್ ಸಿನಿಮಾದಲ್ಲಿ ಛಾನ್ಸ್ ಕೊಡಿ ಸಾರ್ ಅಂತ ಕೇಳಿ ಕಾಟ ಕೊಟ್ಟಿದ್ನಂತೆ. ಕೋಪ ಬಂದು ಐಸ್ಕ್ರೀಮ್ ಅಲ್ಲೇ ಬಿಸಾಕಿ ಹೊರಟುಹೋದರಂತೆ ಬಾಲ ಚಂದರ್ ರವರು.
ನೋಡಿ ಭಾರತದಂತಹ ವೈವಿಧ್ಯಮಯ ರಾಷ್ಟ್ರದಲ್ಲಿರೋ ನಾವು ಸೆಲೆಬ್ರಿಟೀಗಳಿಗೆ ಕೊಡುವಷ್ಟು Importance ಇನ್ನಾರಿಗೂ ಕೊಡುವುದಿಲ್ಲ. ಅದು ಸಿನಿಮವೇ ಆಗಿರಬಹುದು, ಕ್ರೀಡೆಯೇ ಆಗಿರಬಹುದು ಅಥವಾ ರಾಜಕಾರಣವೇ ಆಗಿರಬಹುದು. ಈ ಯಾವುದೇ ಕ್ಷೇತ್ರದಲ್ಲಿ ಒಮ್ಮೆ ಹೆಸರು ಮಾಡಿದರೆ ಸಾಕು ಅವರನ್ನ ನಾವು ನೋಡುವ ದೃಷ್ಟಿಕೋನವೇ ಬದಲಾಗಿರುತ್ತದೆ. ಅವರು ನಮ್ಮಂತಯೇ ಸಾಮಾನ್ಯ ವ್ಯಕ್ತಿಗಳು ಅಂದುಕೊಳ್ಳುವುದೇ ಇಲ್ಲ ನಾವು. ಇನ್ನೂ ಇದಕ್ಕೆ ಮೀರಿ ಕೆಲವು ಸೆಲೆಬ್ರಿಟೀಗಳು ನಮ್ಮಂತೆಯೇ ಸಾಮಾನ್ಯವಾಗಿ ಓಡಾಡಿಕೊಂಡಿದ್ದರೆ ಅವರನ್ನ ಮುತ್ತಿಕೊಂಡು, ಚಿತ್ರವಿಚಿತ್ರ ಪ್ರಶ್ನೆಕೇಳಿ, ಅವರ ಸ್ವತಂತ್ರ ಹರಣ ಮಾಡಿ ಮತ್ತೆ ಇನ್ನೆಂದೂ ಓಡಾಡದಂತೆ ಮಾಡಿಬಿಡುತ್ತೇವೆ.

ಈಗ ಹೇಳಿ ಹೆಂಡತಿ ಜೊತೆ ಶೆಟಲ್ ಕಾಕ್ ಆಡೋದು, ಪರ್ಕ್ನಲ್ಲಿ ನೆಮ್ಮದಿಯಾಗಿ ಮಲಗೋದು, ಸಿಗರೇಟು ಸೆದೋದು, ರೋಡ್ ನಲ್ಲಿ ಕೊನ್ ಐಸ್ಕ್ರೀಮ್ ತಿನ್ನೋದು ನಿಮಗೆ ದೊಡ್ಡ ಆಸೆಗಳು ಅನಿಸುತ್ತಾ!!! ದೊಡ್ಡ, ದೊಡ್ಡ ಕನಸುಗಳ ಬೆನ್ನತ್ತುವ ಬರಾಟೆಯಲ್ಲಿ ನಾವು ಚಿಕ್ಕ, ಚಿಕ್ಕ ಸಂತೋಷಗಳನ್ನ ಕಳೆದುಕೊಳ್ಳಬೇಕಾಗುತ್ತೆ. ಇದೇ ಜಗದ ನಿಯಮ. ಇವರನೆಲ್ಲಾ ನೋಡಿದರೆ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನನ್ನ ಗೆಳೆಯ ಹೇಳಿದ ಮಾತು ನೆನಪಾಗುತ್ತಿದೆ  “Never hurry to get famous because once you are famous you will definitely regret it” ಅಂತ. ಎಂಥ ವಿಚಿತ್ರ ಅಲ್ವಾ!!!


Tuesday, July 22, 2014

ಸಂದರ್ಶನ - ತಾರಾ ಶೈಲೇಂದ್ರ

ತಾರಾ ಶೈಲೇಂದ್ರ ಅವರು ನಡೆಸಿದ ಜಯಂತ ಕಾಯ್ಕಿಣಿ ಅವರ ಸಂದರ್ಶನದ ಒಂದು ಆಯ್ದ ಭಾಗ. ಪೂರ್ತಿ ಓದಿಗೆ ಈ ಲಿಂಕ್ ಕ್ಲಿಕ್ಕಿಸಿ...
http://taraantaranga.blogspot.in/2014/06/blog-post.html

ಪ್ರಶ್ನೆ : ತಾವು ಮೂಲತಃ Biochemist ಆಗಿದ್ದು , ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದು ಹೇಗೆ ?
ಉತ್ತರ : ವಿಜ್ಞಾನ ಹಾಗೂ ಸಾಹಿತ್ಯ ಬೇರೆ ಎಂಬ ಕಲ್ಪನೆ ತಪ್ಪು .
ಕುವೆಂಪು ಅವರು QUANTUM PHYSICS ಓದಿದವರು .
ಬೇಂದ್ರೆಯವರ ಗ್ರಂಥಾಲಯದ ೧೩,೦೦೦ ಪುಸ್ತಕಗಳಲ್ಲಿ ೧೦,೦೦೦ ವಿಜ್ಞಾನಕ್ಕೆ ಸಂಬಂಧಿಸಿದವು .
ಯಶವಂತ್ ಚಿತ್ತಾಲರು ಒಬ್ಬ Polymer Chemist.
ಪೂರ್ಣಚಂದ್ರ ತೇಜಸ್ವಿಯವರು ಒಬ್ಬ ಸಸ್ಯಶಾಸ್ತ್ರಜ್ಞರು
ಕಾರಂತರು ನಡೆದಾಡುವ ವಿಜ್ಞಾನ ವಿಶ್ವಕೋಶ ಎನಿಸಿಕೊಂಡವರು
ನಿಸಾರ್ ಅಹ್ಮದ್ ಅವರು Geologist ಆಗಿದ್ದವರು .
ನಾವು ಮಕ್ಕಳಲ್ಲಿ ವಿಜ್ಞಾನ ಓದಿದವ ಬುದ್ಧಿವಂತ , ಕಲೆ ಓದಿದವ ದಡ್ಡ ಎಂಬ ತಪ್ಪು ಅಭಿಪ್ರಾಯ ಬೆಳೆಸಿ, ದಾರಿ ತಪ್ಪಿಸಿದ್ದೇವೆ. ವಿಜ್ಞಾನ ಮತ್ತು ಕಲೆ ಎರಡೂ ಒಂದಕ್ಕೊಂದು ಪೂರಕವಾಗಿರಬೇಕು.

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......