Posts

Showing posts from 2018

ಸಂಗ್ರಹ

ಯಾರೋ ಪುಣ್ಯಾತ್ಮರು ಬಹಳ ಸುಂದರವಾಗಿ ಬರೆದಿದ್ದಾರೆ ತಪ್ಪದೇ ಓದಿ ನಾನು ಜೀವನದಲ್ಲಿ ಗೆದ್ದೇ ಗೆಲ್ಲುವೇ ಎನ್ನುವವರು ದಯವಿಟ್ಟು ಓದಿ. ಸಾಧಿಸುವ ಛಲ ಇದ್ದರೆ ಜಗತ್ತನ್ನೇ ಗೆಲ್ಲಬಹುದು. ಒಂದು ಯುದ್ಧದಿಂದಾಗಿ  ತಿಮ್ಮಪ್ಪ ನಾಯಕ ಕನಕದಾಸ ನಾಗಿ ಬದಲಾದ. ನಾರದ ನ  ಭೇಟಿಯಿಂದ ಕ್ರೂರನಾಗಿದ್ದ ವ್ಯಕ್ತಿ   ವಾಲ್ಮೀಕಿ ಯಾದ. ಎಂಟನೆಯ ವಯಸ್ಸಿಗೆ ಉಪನಯನವನ್ನು ತಿರಸ್ಕರಿಸಿ  ಬಸವಣ್ಣ ಜಗಜ್ಯೋತಿ ಯಾದ. ಸತತ ಪ್ರಯತ್ನ ಪ್ರಾಮಾಣಿಕ ಪರಿಶ್ರಮದಿಂದ ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಯಾದ. ತನ್ನ ಅದ್ಬುತ ವಿಚಾರಧಾರೆಗಳಿಂದ ಜಗತ್ತನ್ನು ಗೆದ್ದ ನರೇಂದ್ರ ವಿವೇಕಾನಂದ ನಾದ. ತನ್ನ ಮಗನಿಗೆ ಊಟ ಹಾಕಲಾಗದೆ ತನ್ನ ಮಗನನ್ನೇ ವಿಷ ಹಾಕಿ ಕೊಲ್ಲಲು ತಾಯಿ ನಿರ್ಧರಿಸಿದ್ದಳು. ಅಂದು ಅಚಾನಕ್ ಬದುಕುಳಿದ ವ್ಯಕ್ತಿ ಇಂದು ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ನಾದ. ತನ್ನ ಬಡತನ ಹಸಿವುಗಳನ್ನು ಮೆಟ್ಟಿ ನಿಂತು ಸತತ ಅಬ್ಯಾಸದಿಂದ ರವಿ ಡಿ ಚನ್ನಣ್ಣನವರ್ ಇಂದು ಐಪಿಎಸ್ ಅಧಿಕಾರಿಯಾದ. ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗದೆ ಎಸ್.ಆರ್.ಕಂಠಿ ಯವರು ಮುಖ್ಯಮಂತ್ರಿಯ ಸ್ಥಾನ ಬಿಟ್ಟು ಕೊಟ್ಟು ರಾಜಕೀಯದ "ಭರತ" ನಾದ. ಇಳಿವಯಸ್ಸಿನಲ್ಲಿಯೂ ಸರ್ಕಾರದ ತಪ್ಪು ನಿರ್ಧಾರ,  ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸಿ ಸತ್ಯಾಗ್ರಹ ನಡೆಸಿದ ಅಣ್ಣಾ ಹಜಾರೆ ಆಧುನಿಕ ಗಾಂಧಿ ಯಾದರು. ಬೀದಿ ದೀಪದಲ್ಲಿ ಓದಿದ ವಿಶ್ವೇಶ್ವರಯ್ಯ ಭಾರತ...

ಸಂಗ್ರಹಾನುವಾದ: ಕೆ.ಪಿ.ನಾಭ ಐಲ್

*_ಇಂದು ಮಳೆ ನುಡಿಯಿತು.._* *_‌ಅಂದು ನಾನು ಹಲವು ಬಾರಿ ಹೇಳಿದ್ದೆ, ಬೇಡ-ಬೇಡ ಅಂತ... ನೀವು ನನ್ನ ದಾರಿ ಅಡ್ಡಗಟ್ಟಿ ದಿರಿ.._* ‌ *ಹೊಳೆಯೂ ಹೇಳಿತು.* _‌ಅಂದು ನಾನು ತುಂಬಾ ಉಕ್ಕಿ ಹರಿದಿದ್ದೆ..._ _ಆದರೆ ನೀವು ನನ್ನ ಹೃದಯ ಹಿಸುಕಿ, ನನ್ನ ದಡವನ್ನು ಆಕ್ರಮಿಸಿದಿರಿ._ ‌ *‌ಭೂಮಿಯೂ ಹೇಳಿತು.* _‌ಅಂದು ನಾನು ಸಾಕಷ್ಟು ಜಲ ಹೀರಿದ್ದೆ.. ಇಂದು ನೀವು ನನ್ನ ಬಾಯಿಗೆ ಕಾಂಕ್ರೀಟ್ ತುಂಬಿದಿರಿ..._ _‌ನಾನು ನೀರು ಸಂಗ್ರಹಿಸುತ್ತಿದ್ದ ಹೊಲ-ಜಲಾಶಯಕ್ಕೆ ನೀವು ಮಣ್ಣು ತುಂಬಿದಿರಿ...._ ‌ *‌ಬೆಟ್ಟಗಳೂ ನುಡಿಯಿತು...* _‌ಅಂದು ನಾನು ಭೀಕರ ಗಾಳಿ-ಮಳೆಗೆ ಅಲುಗಾಡದೆ ಗಟ್ಟಿ ನಿಂತಿದ್ದೆ.. ಆದರೆ ನೀವು ನನ್ನ ಕಾಲು ತುಂಡರಿಸಿದಿರಿ..._ _‌ನನಗೆ ಕಾಲು ಗಟ್ಟಿ ಊರಲಾಗದೆ ಭೂಕುಸಿದು ಬೀಳುತ್ತಿದೆ._ ‌ *‌ಈಗ ಮಳೆ ಕೇಳುತ್ತಿದೆ..* _‌ನೀವು ಮಣ್ಣು ತುಂಬಿದ ನದಿ-ತೋಡುಗಳನ್ನು ನನಗೆ ತೆರೆದು ಬಿಡುತ್ತೀರಾ? ನಾನು ನನ್ನ ಪಾಡಿಗೆ ಹೋಗುವೆ...._ ‌ *ಹೊಳೆ ಕೇಳುತ್ತಿದೆ...* _‌ನನ್ನಿಂದ ನೀವು ಆಕ್ರಮಿಸಿದ ದಡವನ್ನು ವಾಪಸ್ಸು ಕೊಡುವಿರಾ?ನಾನು ನನ್ನ ದಾರಿಯಲ್ಲೇ ಹೋಗುವೆ..._ ‌ *ಭೂಮಿ ಕೇಳುತ್ತಿದೆ* _‌ನಾನು ನೀರು ಸಂಗ್ರಹಿಸುತ್ತಿದ್ದ ಹೊಲ-ಜಲಾಶಯ ವಾಪಸ್ಸು ಕೊಡುವಿರಾ? ನಾನು ಅಲ್ಲೇ ಹಾಯಾಗಿರುವೆ...._ ‌ *‌ಬೆಟ್ಟಗಳು ಕೇಳುತ್ತಿವೆ* _‌ಇನ್ನಾದರೂ ನನ್ನ ಕಾಲು-ಕಡಿಯುವುದನ್ನು ನಿಲ್ಲಿಸುವಿರಾ? ನಾನು ಒಂಟಿ ಕಾಲಲ್ಲಾದರೂ ಗಟ್ಟಿ ...

ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಗೆ ಪುಸ್ತಕ ಆಹ್ವಾನ

ಕುಂದಾಪುರ: ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಯಾದ ಡಾ.ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ದತ್ತಿನಿಧಿ ಸ್ಥಾಪಿಸಿ 2010 ರಿಂದ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ವರ್ಷ ಕಾದಂಬರಿಯನ್ನು ಮಾತ್ರ ಪರಿಗಣಿಸಲಿದ್ದು, ಜನವರಿ 2016 ರಿಂದ ಡಿಸೆಂಬರ್ 2017ರ ನಡುವೆ (ಎರಡು ವರ್ಷಗಳ ಅವಧಿಯಲ್ಲಿ) ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಾದಂಬರಿಗಳ ನಾಲ್ಕು ಪ್ರತಿಗಳನ್ನು 30 ಎಪ್ರಿಲ್ 2018 ರೊಳಗೆ ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು ಆವರಣ, ಕುಂದಾಪುರ 576201 ಈ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08254 – 230369 ಇದನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ತಿಂಗಳಿನಲ್ಲಿ ನಡೆಯಲ್ಲಿದ್ದು, ಹದಿನೈದು ಸಾವಿರ ರೂಪಾಯಿಯೊಂದಿಗೆ ಬೆಳ್ಳಿ ಫಲಕ ನೀಡಲಾಗುವುದು ಎಂದು ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. -ಪ್ರಕಟಣೆಯ ಕೃಪೆಗಾಗಿ- ಈ ಪತ್ರಿಕಾ ಪ್ರಕಟಣೆಯನ್ನು ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ಪ್ರಕಟಿಸಬೇಕಾಗಿ ವಿನಂತಿ. ಅಲ್ಲದೇ ತಮ್ಮ ಪ್ರತಿಷ್ಠಿತ ಪತ್ರಿಕೆಯಿಂದ ರಾಜ್ಯಾದ್ಯಂತ ಮಾಹಿತಿ ದೊರೆತಂತಾಗುತ್ತದೆ ಎಂಬುದು ಕಳಕಳಿಯ ವಿನಂತಿ.

ಮಹಿಳಾ ಸಮಾನತೆ ಎಂಬ ಉತ್ತಮ ಚಚಾ೯ ವಿಷಯ.

  ಮಾರ್ಚ 8 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ನಮ್ಮ ದೇಶದಲ್ಲಿಯೂ ಆಚರಿಸಲಾಗುವುದು. ಈ ದಿನದಂದು ಮಹಿಳೆಯರ ಬಗ್ಗೆ ಅವರ ಸಾಧನೆ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುವುದು. ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಸನ್ಮಾನವನ್ನು ಮಾಡಲಾಗುವುದು. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮ ಹೆಚ್ಚಾಗುತ್ತಾ ಇರುವುದು.. ಸ್ವತಂತ್ರ ಭಾರತದ ನಂತರದ ಏಳ್ಗೆಯಲ್ಲಿ ಮಹಿಳೆಯರ ಕೊಡುಗೆ ಬಹು ಅತ್ಯಮೂಲ್ಯವಾದದ್ದು ಆಗಿರುವುದು. ಆಳುವ ಸಕರ್ಾರಗಳು ಕಾಲ ಕಾಲಕ್ಕೆ ಹಲವಾರು ಯೋಜನೆಯನ್ನು ಜಾರಿಗೊಳಿಸಿ ಮಹಿಳೆಯರ ಸಬಲೀಕರಣಕ್ಕೆ ಪ್ರಯತ್ನವನ್ನು ಮಾಡಿರುವುದು. ಅದರ ಪರಿಣಾಮವೇ ಇಂದು ವಿವಿಧ ಕ್ಷೇತ್ರದಲ್ಲಿ ಎಲ್ಲಾ ಹಂತದಲ್ಲಿ ಮಹಿಳಾ ಉದ್ಯೋಗಿಗಳು ಸಿಗುವರು. ಇವೆಲ್ಲವು ಸಹಾ ಮಹಿಳಾ ಸಬಲೀಕರಣದ ಪ್ರಮುಖ ಮೈಲಿಗಲ್ಲೆಂದು ಗುರುತಿಸಬಹುದಾಗಿದೆ. ಇಂದಿಗೂ  ಮನೆಯಲ್ಲಿ  ಅಡುಗೆ ಕಾರ್ಯ ಮಹಿಳೆಯರ ತಲೆ ಮೇಲೆ ಇರುವುದು. ಗಂಡ, ಅತ್ತೆ, ಮಾವ, ಮಕ್ಕಳು ಈ ಭಾವನಾತ್ಮಕ ಸಂಬಂಧದ ಸುಳಿಯಲ್ಲಿ ಸಿಕ್ಕಿ ಅದರಿಂದ ಹೊರಗು ಬರಲಾಗದೇ ತಮ್ಮಜೀವನದ ಅತಿ ಹೆಚ್ಚು ಸಮಯವನ್ನು ಅಡುಗೆ ಮನೆಯಲ್ಲಿ, ಮನೆಗೆಲಸದಲ್ಲಿ ಕಳೆಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಅಡುಗೆಯ ಜೊತೆಗೆ ಮನೆಯ ಎಲ್ಲರ ಬಟ್ಟೆಯನ್ನು ಸ್ವಚ್ಛಗೊಳಿಸುವುದು, ಮನೆಯನ್ನು ಸ್ವಚ್ಛಮಾಡುವುದು,  ಈ ಎಲ್ಲಾ ಕಾರ್ಯಗಳು ಮಹಿಳೆಯರದ್ದೇ ಆಗಿದೆ. ಇವೆಲ್ಲ ಅವರ ಮೂಲಭೂತ ಕಾರ್ಯಗಳು ಎಂಬಂತೆ ಗಂಡಸರು ವತರ್ಿಸುವುದು...