ಸಂಗ್ರಹಾನುವಾದ: ಕೆ.ಪಿ.ನಾಭ ಐಲ್

*_ಇಂದು ಮಳೆ ನುಡಿಯಿತು.._*
*_‌ಅಂದು ನಾನು ಹಲವು ಬಾರಿ ಹೇಳಿದ್ದೆ, ಬೇಡ-ಬೇಡ ಅಂತ... ನೀವು ನನ್ನ ದಾರಿ ಅಡ್ಡಗಟ್ಟಿ ದಿರಿ.._*

*ಹೊಳೆಯೂ ಹೇಳಿತು.*
_‌ಅಂದು ನಾನು ತುಂಬಾ ಉಕ್ಕಿ ಹರಿದಿದ್ದೆ..._ _ಆದರೆ ನೀವು ನನ್ನ ಹೃದಯ ಹಿಸುಕಿ, ನನ್ನ ದಡವನ್ನು ಆಕ್ರಮಿಸಿದಿರಿ._

*‌ಭೂಮಿಯೂ ಹೇಳಿತು.*
_‌ಅಂದು ನಾನು ಸಾಕಷ್ಟು ಜಲ ಹೀರಿದ್ದೆ.. ಇಂದು ನೀವು ನನ್ನ ಬಾಯಿಗೆ ಕಾಂಕ್ರೀಟ್ ತುಂಬಿದಿರಿ..._
_‌ನಾನು ನೀರು ಸಂಗ್ರಹಿಸುತ್ತಿದ್ದ ಹೊಲ-ಜಲಾಶಯಕ್ಕೆ ನೀವು ಮಣ್ಣು ತುಂಬಿದಿರಿ...._

*‌ಬೆಟ್ಟಗಳೂ ನುಡಿಯಿತು...*
_‌ಅಂದು ನಾನು ಭೀಕರ ಗಾಳಿ-ಮಳೆಗೆ ಅಲುಗಾಡದೆ ಗಟ್ಟಿ ನಿಂತಿದ್ದೆ.. ಆದರೆ ನೀವು ನನ್ನ ಕಾಲು ತುಂಡರಿಸಿದಿರಿ..._
_‌ನನಗೆ ಕಾಲು ಗಟ್ಟಿ ಊರಲಾಗದೆ ಭೂಕುಸಿದು ಬೀಳುತ್ತಿದೆ._

*‌ಈಗ ಮಳೆ ಕೇಳುತ್ತಿದೆ..*
_‌ನೀವು ಮಣ್ಣು ತುಂಬಿದ ನದಿ-ತೋಡುಗಳನ್ನು ನನಗೆ ತೆರೆದು ಬಿಡುತ್ತೀರಾ? ನಾನು ನನ್ನ ಪಾಡಿಗೆ ಹೋಗುವೆ...._

*ಹೊಳೆ ಕೇಳುತ್ತಿದೆ...*
_‌ನನ್ನಿಂದ ನೀವು ಆಕ್ರಮಿಸಿದ ದಡವನ್ನು ವಾಪಸ್ಸು ಕೊಡುವಿರಾ?ನಾನು ನನ್ನ ದಾರಿಯಲ್ಲೇ ಹೋಗುವೆ..._

*ಭೂಮಿ ಕೇಳುತ್ತಿದೆ*
_‌ನಾನು ನೀರು ಸಂಗ್ರಹಿಸುತ್ತಿದ್ದ ಹೊಲ-ಜಲಾಶಯ ವಾಪಸ್ಸು ಕೊಡುವಿರಾ? ನಾನು ಅಲ್ಲೇ ಹಾಯಾಗಿರುವೆ...._

*‌ಬೆಟ್ಟಗಳು ಕೇಳುತ್ತಿವೆ*
_‌ಇನ್ನಾದರೂ ನನ್ನ ಕಾಲು-ಕಡಿಯುವುದನ್ನು ನಿಲ್ಲಿಸುವಿರಾ? ನಾನು ಒಂಟಿ ಕಾಲಲ್ಲಾದರೂ ಗಟ್ಟಿ ಕಾಲೂರಲು ಪ್ರಯತ್ನಿಸುವೆ...._

*‌ನೆನಪಿರಲಿ*
_‌ನಾವು ಮನುಷ್ಯರು ಪ್ರಕೃತಿಯ ಕಾವಲುಗಾರರು ಮಾತ್ರ ಒಡೆಯರಲ್ಲ...._

*‌ಮರೆತರೆ*
_‌ಪ್ರಕೃತಿಯೇ... ಅದು ಏನೆಂಬುದನ್ನು ನಮಗೆ ಕಲಿಸಿಕೊಡುತ್ತದೆ...._

_*‌ಈ ಮಳೆಗಾಲ ಅದಕ್ಕೊಂದು ಉದಾಹರಣೆ ಮಾತ್ರ.*_      (ಸಂಗ್ರಹಾನುವಾದ: ಕೆ.ಪಿ.ನಾಭ ಐಲ್)

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು