ಮಹಿಳಾ ಸಮಾನತೆ ಎಂಬ ಉತ್ತಮ ಚಚಾ೯ ವಿಷಯ.
ಮಾರ್ಚ 8 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ನಮ್ಮ ದೇಶದಲ್ಲಿಯೂ ಆಚರಿಸಲಾಗುವುದು. ಈ ದಿನದಂದು ಮಹಿಳೆಯರ ಬಗ್ಗೆ ಅವರ ಸಾಧನೆ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುವುದು. ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಸನ್ಮಾನವನ್ನು ಮಾಡಲಾಗುವುದು. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮ ಹೆಚ್ಚಾಗುತ್ತಾ ಇರುವುದು.. ಸ್ವತಂತ್ರ ಭಾರತದ ನಂತರದ ಏಳ್ಗೆಯಲ್ಲಿ ಮಹಿಳೆಯರ ಕೊಡುಗೆ ಬಹು ಅತ್ಯಮೂಲ್ಯವಾದದ್ದು ಆಗಿರುವುದು.
ಆಳುವ ಸಕರ್ಾರಗಳು ಕಾಲ ಕಾಲಕ್ಕೆ ಹಲವಾರು ಯೋಜನೆಯನ್ನು ಜಾರಿಗೊಳಿಸಿ ಮಹಿಳೆಯರ ಸಬಲೀಕರಣಕ್ಕೆ ಪ್ರಯತ್ನವನ್ನು ಮಾಡಿರುವುದು. ಅದರ ಪರಿಣಾಮವೇ ಇಂದು ವಿವಿಧ ಕ್ಷೇತ್ರದಲ್ಲಿ ಎಲ್ಲಾ ಹಂತದಲ್ಲಿ ಮಹಿಳಾ ಉದ್ಯೋಗಿಗಳು ಸಿಗುವರು. ಇವೆಲ್ಲವು ಸಹಾ ಮಹಿಳಾ ಸಬಲೀಕರಣದ ಪ್ರಮುಖ ಮೈಲಿಗಲ್ಲೆಂದು ಗುರುತಿಸಬಹುದಾಗಿದೆ.
ಇಂದಿಗೂ ಮನೆಯಲ್ಲಿ ಅಡುಗೆ ಕಾರ್ಯ ಮಹಿಳೆಯರ ತಲೆ ಮೇಲೆ ಇರುವುದು. ಗಂಡ, ಅತ್ತೆ, ಮಾವ, ಮಕ್ಕಳು ಈ ಭಾವನಾತ್ಮಕ ಸಂಬಂಧದ ಸುಳಿಯಲ್ಲಿ ಸಿಕ್ಕಿ ಅದರಿಂದ ಹೊರಗು ಬರಲಾಗದೇ ತಮ್ಮಜೀವನದ ಅತಿ ಹೆಚ್ಚು ಸಮಯವನ್ನು ಅಡುಗೆ ಮನೆಯಲ್ಲಿ, ಮನೆಗೆಲಸದಲ್ಲಿ ಕಳೆಯುವವರ ಸಂಖ್ಯೆ ಕಡಿಮೆಯಾಗಿಲ್ಲ.
ಅಡುಗೆಯ ಜೊತೆಗೆ ಮನೆಯ ಎಲ್ಲರ ಬಟ್ಟೆಯನ್ನು ಸ್ವಚ್ಛಗೊಳಿಸುವುದು, ಮನೆಯನ್ನು ಸ್ವಚ್ಛಮಾಡುವುದು, ಈ ಎಲ್ಲಾ ಕಾರ್ಯಗಳು ಮಹಿಳೆಯರದ್ದೇ ಆಗಿದೆ. ಇವೆಲ್ಲ ಅವರ ಮೂಲಭೂತ ಕಾರ್ಯಗಳು ಎಂಬಂತೆ ಗಂಡಸರು ವತರ್ಿಸುವುದು ಇರುವುದು. ಬಹುತೇಕ ಎಲ್ಲಾ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮೊದಲು ಗಂಡಸರ ಊಟ ನಂತರದಲ್ಲಿ ಹೆಂಗಸರು ಊಟ ಮಾಡುವುದು ಸಾಮಾನ್ಯವಾಗಿದೆ. ಗಂಡಿನಷ್ಠೆ ಸಂಪಾದನೆ ಮಾಡುವ ಹೆಂಗಸರು ಸಹಾ ಮನೆಗೆ ಬಂದು ತನ್ನ ಮಹಿಳಾ ಕಾರ್ಯವನ್ನು ಮಾಡಲೆಬೇಕಾದ ಅನಿವಾರ್ಯತೆ ಇರುವುದು.
ಮಹಿಳೆಯ ಮೇಲೆ ಈ ರೀತಿಯ ದೌರ್ಜನ ನಡೆಸುವವರಲ್ಲಿ ಅಕ್ಷರಸ್ಥ ಪುರುಷರು, ಅದರಲ್ಲಿಯೂ ಸಮಾಜವನ್ನು ಬದಲಿಸುವ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಸಮಾಜ ಸೇವಿಗಳು, ರಾಜಕಾರಣಗಳು ಎಲ್ಲರೂ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ ಆದರೇ ಅವರವರ ಮನೆಯಲ್ಲಿ ನಡೆದುಕೊಂಡು ಬಂದ ಯಾವದೇ ಸಂಪ್ರದಾಯವನ್ನು ಬದಲಿಸಲು ಧೈರ್ಯ ತೋರಿಸುವುದಿಲ್ಲ. ಒಟ್ಟಾರೆ ಉತ್ತಮ ಭಾಷಣಕಾರರಾಗಿ, ವಿಚಾರವಾದಿಗಳಾಗಿ ವೇದಿಕೆಯಲ್ಲಿ ಮಾತನಾಡುವರು.
ನನ್ನ ಮನೆ ಮತ್ತು ಸುತ್ತಮುತ್ತಲಿನ ಸಮಾಜವನ್ನು ಗಮನಿಸಿದರೆ ಇಂದಿಗೂ ಮಹಿಳೆಗೆ ಸಮಾನ ಅವಕಾಶಗಳು ಸಿಗುತ್ತಾ ಇಲ್ಲ. ಕೆಲವೊಂದು ಕಾರ್ಯಕ್ಕೆ ಮಾತ್ರ ಮಹಿಳೆ ಸೀಮಿತವಾಗಿರುವಳು. ಬದಲಾವಣೆ ಬಯಸುವ ವ್ಯಕ್ತಿಗಳು, ಅದಕ್ಕೆ ಬದಲಾಗಲು ತಯಾರಾಗುವ ಮಹಿಳೆಯರು ತಾವಾಗಿಯೇ ತಮ್ಮ ತಮ್ಮ ಸ್ವತಂತ್ಯ, ಸಮಾನತೆ ಬಗ್ಗೆ ಧ್ವನಿ ಎತ್ತ ಬೇಕಾಗಿದೆ. ಇಲ್ಲವಾದರೇ ನಾವೆಲ್ಲ ಯೋಚಿಸುವ ಮಹಿಳಾ ಸಬಲೀಕರಣ ಕೇವಲ ಕನಸು ಮಾತ್ರ ಆಗಿರುವುದು.
ಪುರಾಣದ ಕಾಲದಿಂದ ಇಂದಿನ ಕಾಲಘಟ್ಟದ ವರೆಗೆ ಮಹಿಳೆ ನಡೆದ ದಾರಿಯನ್ನು ಅವಲೋಕಿಸುತ್ತಾ, ಇಂದಿಗೂ ಕೆಟ್ಟ ಸಂಪ್ರದಾಯವನ್ನು ಪಾಲಿಸುವ ಪ್ರಮುಖ ಸಂಘಟನೆಗಳ, ರಾಜಕೀಯ ವಿಚಾರಧಾರೆಗಳ ಬಗ್ಗೆ ಎಚ್ಚರಿಕೆಯಿಂದ ಇದ್ದು, ಅವಶ್ಯ ಇರುವಡೆ ಪ್ರತಿರೋಧವನ್ನು ಮಾಡುತ್ತಾ ಮಹಿಳೆಯರು ಮುಂದೆ ಬರಬೇಕಾಗಿದೆ. ಅದಕ್ಕೆ ತಕ್ಕದಾದ ವಾತಾವರಣವನ್ನು ಸೃಷ್ಠಿಸುವ ಜವಬ್ದಾರಿ ಪ್ರತಿಯೊಬ್ಬರದ್ದು ಆಗಿರುವುದು.
ವಿವೇಕ ಬೆಟ್ಕುಳಿ
vivekpy@gmail.com
8722954123
Comments
Post a Comment