Posts

Showing posts from April, 2014

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

Krupe :   http://azsmarane.blogspot.in/2012/01/blog-post_21.html   ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾಗು ಪುಸ್ತಕಗಳು! ಓದಿ ಆನಂದಿಸಿ! ತ್ರಿವೇಣಿಯವರ ಕಾದಂಬರಿಗಳು --------------------------- ಬೆಳ್ಳಿ ಮೋಡ - ತ್ರಿವೇಣಿ    ಬಾನು ಬೆಳಗಿತು ಹೃದಯ ಗೀತ  ಮೊದಲ ಹೆಜ್ಜೆ  ಸೋತು ಗೆದ್ದವಳು  ವಸಂತ ಗಾನ     ಉಷಾ ನವರತ್ನರಾಮ್ ಕಾದಂಬರಿಗಳು ಅಭಿನಯ ಆಶ್ವಾಸನೆ  ಬೆಳ್ಳಿ ತೆರೆ  ಹರಿದ ಹೊನಲು  ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ  ಹೃದಯ ಮಿಲನ  ಮನವೆಂಬ ಮರ್ಕಟ  ವಧು ಬೇಕಾಗಿದೆ  MK ಇಂದಿರಾ ಕಾದಂಬರಿಗಳು ಬಿದಿಗೆ ಚಂದ್ರಮ ಡೊಂಕು - MK ಇಂದಿರಾ    ತೆಗ್ಗಿನಮನೆ ಸೀತೆ - MK ಇಂದಿರಾ ಟು ಲೆಟ್ - MK ಇಂದಿರಾ  ಪುಟ್ಟಣ್ಣ ಕಣಗಾಲ್ - MK ಇಂದಿರಾ  ಮುಕ್ತ ಅವರ ಕಾದಂಬರಿಗಳು   ಮನಸು ಮಂದಾರ - CN ಮುಕ್ತ  ಮನೋಲಹರಿ - CN ಮುಕ್ತ  ಸಾಯಿಸುತೆಯವರ ಕಾದಂಬರಿಗಳು ------------------------------ ----------------- ಅಭಿನಂದನೆ  ಬಣ್ಣದ ಚುಂಬಕ ದೀಪಾಂಕುರ ಹಂಸ ಪಲ್ಲಕ್ಕಿ ಜನನಿ ಜನ್ಮಭೂಮಿ ಕಡಲ ಮುತ್ತು ಕಲ್ಯಾಣ ಮಸ್ತು ಮತ್ತೊಂದು ಬಾಡದ ಹೂವು ನವ ಚೈತ್ರ ಪಾಂಚಜನ್ಯ ಪ್ರಿಯ ಸಖಿ ಪುಷ್ಕರಣಿ...

ತಪ್ಪದೇ ಮತ ಚಲಾಯಿಸಿ.. ಭಾರತದ ಪ್ರಜಾಸಾರ್ವಭೌಮತ್ವವನ್ನು ಕಾಪಾಡಿ.

Image
ಈ ಹಿಂದೆ ಕರ್ನಾಟಕದಲ್ಲಿ ಜೆಡಿಸ್, ಬಿಜೆಪಿಗೂ ಯಡಿಯೂರಪ್ಪನವರಿಗೆ ಮೋಸ ಮಾಡಿತೆಂದು ಗೋಳಿಟ್ಟು ಮಾಡಿಕೊಂಡ 'ವ್ಯಕ್ತಿ ಗತ' ಪ್ರಚಾರಕ್ಕೆ ಮರುಳಾಗಿ ಮತ ಚಲಾಯಿಸಿದ ಜನತೆ ಮುಂದಿನ ೫ ವರುಷಗಳ ಕಾಲ ಎಲ್ಲ ವಿಧದ ಆಟೋಪಗಳನ್ನೂ, ಗಣಿ- ಭೂಮಿ- ಧರ್ಮ ಹೆಸರಿನಲ್ಲಿ ಹಾಡುಹಗಲೇ ಕೊಳ್ಳೆ ಹೊಡೆಯುವುದನ್ನು ಕಣ್ಣಾರೆ ಕಂಡು ಮತವಿಟ್ಟ ಬೆರಳು ಕಚ್ಚಿಕೊಂಡರು... ಇದೀಗ ಕೇಂದ್ರದಲ್ಲೂ ಅದೇ ''ವ್ಯಕ್ತಿಗತ'' ಧೋರಣೆಯ ಜಾಹೀರಾತುಗಳು! * ನಮ್ಮ ಮತ ಯಾವಾಗಲೂ ನಮ್ಮ 'ಕ್ಷೇತ್ರಗತ' ವಾಗಿರಬೇಕು. * ನಮ್ಮ ಕ್ಷೇತ್ರವನ್ನು ಪ್ರತಿನಿಧಿಸಲು ಯಾರು ಸಮರ್ಥರೋ ಅವರನ್ನು ನಾವು ಗೆಲ್ಲಿಸಬೇಕು . * ನಮ್ಮ ಕ್ಷೇತ್ರದ ಬೇಕಾದ ಸಂಪನ್ಮೂಲಗಳನ್ನು ತರುವ, ಕುಂದು ಕೊರತೆಗಳನ್ನು ಆಲಿಸುವ, ಪರಿಹರಿಸುವ, ಬೇಕಿದ್ದನ್ನು ಮುಂದಾಲೋಚಿಸುವ ಪ್ರತಿನಿಧಿ ಬೇಕಿರುವುದು. * ಜನತಂತ್ರ ವ್ಯವಸ್ತೆ ಇರುವುದು ಹಲವರಲ್ಲಿ, ಒಬ್ಬನಲ್ಲಿರುವುದು ಸರ್ವಾಧಿಕಾರ. ವರ್ತಮಾನದಲ್ಲಿ ಲಿಬಿಯಾ, ಇರಾಕ್, ಸಿರಿಯಾ, ಉಕ್ರೇನ್ ಇತ್ಯಾದಿ ದೇಶಗಳ ಅರಾಜಕತೆಯನ್ನು ಒಮ್ಮೆ ನೆನೆಯಲೇಬೇಕು ನಾವು ( ಖಂಡಿತ ತುರ್ತ ಪರಿಸ್ತಿತಿಯ ಭಾರತವನ್ನು ಕೂಡ ) * ಕಾಂಗ್ರೆಸ್ಸು, ಬಿಜೆಪಿ, ಜೆಡಿಸ್, ಆಪ್ ಕಡೆಗೆ ಪಕ್ಷೇತರ ಯಾರಾದರು ಸರಿ ನಮ್ಮ ಕ್ಷೇತ್ರಕ್ಕೆ ದುಡಿಯುವವನ್ನು ಆಯ್ಕೆ ಮಾಡಿ ... ಖಂಡಿತ ಆಯ್ಕೆಗೊಂಡ ಆ ಅರ್ಹ ಪ್ರತಿನಿಧಿ ಅವರುಗಳ ಯೋಗ್ಯ ನಾಯಕನನ್ನು ಆರಿಸುತ್ತಾನೆ..ಇದುವೇ ...

ಪ್ರಾರ್ಥನೆ ಎಂದರೆ ಆತ್ಮದ ನಿವೇದನೆ - ಶ್ರೀವತ್ಸ ಜೋಶಿ

Image
"ಪ್ರಾರ್ಥನೆ ಎಂದರೆ ಬೇಡಿಕೆ ಅಲ್ಲ. ಪ್ರಾರ್ಥನೆ ಎಂದರೆ ಆತ್ಮದ ನಿವೇದನೆ. ನಮ್ಮಲ್ಲಿನ ದೈನ್ಯಭಾವವನ್ನು ದಿನದಿನವೂ ಒಪ್ಪಿಕೊಳ್ಳುವ ರೀತಿ. ಪ್ರಾರ್ಥನೆಯಲ್ಲಿ ಪದಗಳಿಲ್ಲದಿದ್ದರೂ ಸರಿಯೇ, ಹೃದಯ ಇರಬೇಕು. ಹೃದಯವೇ ಇಲ್ಲದೆ ಬರಿ ಪದಗಳ ಅಬ್ಬರವು ಪ್ರಾರ್ಥನೆ ಎನಿಸದು" ಎಂದಿದ್ದ ಮಹಾತ್ಮ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಪ್ರಾರ್ಥನೆಗೆ ಅತ್ಯಂತ ಹೆಚ್ಚು ಮಹತ್ವ ಕೊಟ್ಟವರು. ಪ್ರಾರ್ಥನೆಯ ಅತಿದೊಡ್ಡ ಪ್ರಯೋಜನವೆಂದರೆ ಮನಸ್ಸಿನ ಏಕಾಗ್ರತೆಗೆ ಅನುಕೂಲ ಆಗುವುದು. ಶಾಲೆಗಳಲ್ಲಿ ಬೆಳಗಿನ ಹೊತ್ತು ಪ್ರಾರ್ಥನೆಯ ನಂತರವೇ ಪಾಠಪ್ರವಚನ ಆರಂಭ ಎಂಬ ಕ್ರಮ ಆದಿಕಾಲದಿಂದಲೂ ಬಂದಿರುವುದು ಅದೇ ಕಾರಣಕ್ಕೆ. ವಿಪರ್ಯಾಸವೆಂದರೆ ಈಗ ಢೋಂಗಿ ಜಾತ್ಯತೀತರು ಪ್ರಾರ್ಥನೆಯ ನಿಜವಾದ ಮಹತ್ವವನ್ನರಿಯದೆ, ಅದಕ್ಕೆ ಧರ್ಮ-ಜಾತಿ-ಮತಗಳ ಲೇಪ ಹಚ್ಚಿರುವುದರಿಂದ ಎಷ್ಟೋಕಡೆ ಶಾಲೆಗಳಲ್ಲಿ ಪ್ರಾರ್ಥನೆಯೇ ಇಲ್ಲವಾಗಿದೆ ನಾನು ಕಲಿತ ಪ್ರಾಥಮಿಕ ಶಾಲೆಯಲ್ಲಿ ವಾರದ ಆರು ದಿನಗಳಲ್ಲಿ ಒಂದೊಂದು ದಿನ ಒಂದೊಂದು ಪ್ರಾರ್ಥನೆ ಹಾಡುವ ಕ್ರಮವಿತ್ತು. ಸೋಮವಾರದ ಪ್ರಾರ್ಥನೆ "ಸ್ವಾಮಿದೇವನೆ ಲೋಕಪಾಲನೆ..." ನಾವು ಹಾಡುತ್ತಿದ್ದದ್ದು (ಬಹುಶಃ ಹೆಚ್ಚಿನೆಲ್ಲ ಶಾಲೆಗಳಲ್ಲೂ ಇದ್ದದ್ದು) ಸ್ಕೂಲ್ ಮಾಸ್ಟರ್ ಚಲನಚಿತ್ರದಲ್ಲಿ ಅಳವಡಿಸಿಕೊಳ್ಳಲಾದ ಎರಡು ಚರಣಗಳಷ್ಟೇ ಇರುವ ಹಾಡು. ಆದರೆ ಮೂಲದಲ್ಲಿ ಇದು ಸೋಸಲೆ ಅಯ್ಯ ಶಾಸ್ತ್ರಿಗಳು (1854-1934) ಎಂಬ ವಿದ್ವಾಂಸರು ರಚಿಸಿದ ಎಂ...

ಇವತ್ತು ದೇವರ ದಾಸಿಮಯ್ಯನ ಹುಟ್ಟುದಿನ.- ರಾಜೇಂದ್ರ ಪ್ರಸಾದ್

Image
ಇವತ್ತು ದೇವರ ದಾಸಿಮಯ್ಯನ ಹುಟ್ಟುದಿನ... ಆದ್ಯ ವಚನಕಾರ ದೇವರ ದಾಸಿಮಯ್ಯ, 12ನೇ ಶತಮಾನದ ವಚನ ಚಳುವಳಿಯ ಮುನ್ನಾ ನೂರು ವರ್ಷಗಳ ಹಿಂದೆಯೇ ವಚನಗಳನ್ನು ಕಟ್ಟಿದವರು.. ಪತ್ನಿ ದುಗ್ಗಳೆಯೊಂದಿಗೆ ಅನ್ಯೋನ್ಯ ದಾಂಪತ್ಯದೊಂದಿಗೆಸೀರೆ ನೇಯುವ ನೇಕಾರಿಕೆಯ ಮಾಡುತ್ತಾ ಮುಂದೆ ಬಸವಾದಿ ಶರಣರಿಂದ 'ನೆರೆ ನಂಬೋ ನೆರೆ ನಂಬೋ ದಾಸ-ದುಗ್ಗಳೆಯಂತೆ' ಎಂದು ಹಾಡಿಸಿಕೊಂಡ ಮಹಾನುಭಾವಿ.. ತಾನೇ ನೇಯ್ದು, ಉಟ್ಟ ಉಡುಗೆಯನ್ನು ಶಿವನಿಗೆ ದಾನಕೊಟ್ಟು 'ತವನಿಧಿಯನ್ನು' ಪಡೆದರೆಂಬುದು ದಂತಕಥೆ. ದೇವರ ದಾಸಿಮಯ್ಯನನ್ನು ಕುರಿತು ಬ್ರಹ್ಮಶಿವ, ಹರಿಹರ,ರಾಘವಾಂಕ, ಭೀಮಕವಿ, ವಿರೂಪಾಕ್ಷ ಪಂಡಿತ, ಸಿದ್ದ ನಂಜೇಶ ಮುಂತಾದ ಕನ್ನಡ ಕವಿಕೃತಿಗಳಲ್ಲಿ ಅಲ್ಲದೇ ಕ್ರಿ.ಶ.1148 ರ ಗೊಬ್ಬೂರಿನ ಶಾಸನ, ಕ್ರಿ.ಶ.1167ರ ಚಿಕ್ಕಮುದನೂರಿನ ಶಾಸನ, ಕ್ರಿ.ಶ.1200 ರ ಅರಸೀಕೆರೆ ಶಾಸನ, ಕ್ರಿ.ಶ.1259 ರ ಹಿರಿಯೂರಿನ ಶಾಸನಗಳಲ್ಲಿ ಉಲ್ಲೇಖಗಳಿವೆ ನನ್ನಿಷ್ಟದ ಕೆಲವು ವಚನಗಳು ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ! ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ. *** ಉಂಕೆಯ ನಿಗುಚಿ ಸರಿಗೆಯ ಸಮಗೊಳಿಸಿ ಸಮಗಾಲನಿಕ್ಕಿ ಅಣಿಯೇಳ ಮುಟ್ಟದೆ ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು. ಈ ಸೀರೆಯ ನೆಯ್ದವ ನಾನೊ ನೀನೋ?ರಾಮನಾಥ. *** ಬಯಲ ಬಣ್ಣವ ಮಾಡಿ; ಸ್ವಯವ ನಿಲವ ಮಾಡಿ ಸುಳಿವಾತನ ಬೆಡಗ ಬ...

ಭಾಷೆ

Image
- ಶಿವಪ್ರಸಾದ ಪಟ್ಟಣಗೆರೆ ವರ್ಷಕ್ಕೊಮ್ಮೆಯ ಹಬ್ಬದಂತೆ ಕನ್ನಡವನ್ನ ಪೂಜಿಸಿ ಹಣ್ಣು ಕಾಯಿ ಮಾಡಿಸುತ್ತಾರೆ - ಭಾಷೆಗೂ ಸಂಸ್ಕೃತಿಗೂ ಇರುವ ಸಂಬಂಧವೇನು ? ಭಾಷೆ ನಮಗರಿವಿಲ್ಲದೆ ರೂಪುಗೊಂಡದ್ದು. ಇನ್ನು ಸಂಸ್ಕೃತಿಯು ಉಳಿಕೆ,ದಾಖಲೆಯ ಅವಶೇಷ, ಬೌತಿಕ ಉಳಿಕೆ ಎಂದು ಹೇಳುವುದುಂಟು. ಭಾಷೆಯು ಆ ಜನಾಂಗವನ್ನೋ ಆ ಜನಾಂಗದ ರಚನೆ, ಸ್ವರೂಪವನ್ನೂ ಬಿಂಬಿಸುತ್ತದೆ. ಭಾಷೆ ಹೇಗೆ ಭೌತಿಕವೋ ಅಷ್ಟೇ ಮಾನಸಿಕವೂ ಕೂಡ ಹೌದು. ಒಂದು ಭಾಷೆ ಆ ಸಂಸೃತಿಯಲ್ಲಿ ಆಗುತ್ತಿರುವ ಚಲನಶೀಲತೆ ಹಾಗೂ ಪರಿಸರದ ಬದಲಾವಣೆಗಳು ಆಧುನಿಕತೆಗಳ ಚಿತ್ರಣವನ್ನು ಸಂಪೂರ್ಣವಾಗಿ ಬಿಚ್ಚಿಡುತ್ತವೆ. ಪ್ರತೀ ಸಮುದಾಯದಲ್ಲೂ ಭಾಷೆ – ಭಾಷೆಗಳ ನಡುವಣ ತಿಕ್ಕಾಟ, ಘರ್ಷಣೆಗಳು ನಡೆಯುತ್ತಾ ಬಂದಿವೆ. ಯಾವುದೋ ಶಕ್ತಿ ರಾಜಕಾರಣಗಳು ಪ್ರಭಲತೆಗಳು ಮತ್ತೊಂದು ಭಾಷೆಯನ್ನ ಅಧೀನಗೊಳಿಸಿಕೊಳ್ಳುತ್ತಾ ಬಂದಿವೆ. ಇವುಗಳ ನಡುವೆ ತಮ್ಮ ಸ್ಥಾನದ ಉಳಿಕೆ, ವಿಸೃತತೆ ಇವುಗಳ ಬಗಗೆಗಿನ ಸಂಘರ್ಷಗಳು ಇಂದಿಗೂ ಆಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಒಂದು ಭಾಷೆ ಕೀಳಿರಿಮೆಗೆ ಈಡಾಗಿ ಪ್ರಧಾನ ಭಾಷೆಯನ್ನು ಅನುಸರಿಸುವ ದಿಕ್ಕಿನತ್ತ ಸಾಗುತ್ತಿದೆ. ಸಮಾಜಶಾಸ್ತ್ರದ ಹಿನ್ನೆಲೆಯಲ್ಲಿ ಹೇಳುವುದಾದರೆ ಸಾಂಸೃತಿಕ ಹಿಂಬೀಳುವಿಕೆಯು ನಮಗೆ ಅರಿವಿಲ್ಲದಂತೆ ಜರುಗಿದೆ. ಇವುಗಳನ್ನೇ ಶುದ್ಧ ಅಥವಾ ಶಿಷ್ಟ ಎಂಬ ಭಾಷೆಯ ಮುಖಗಳನ್ನ ರೂಪಿಸಿ ಭಾಷೆಯನ್ನ ಸರಿಗಟ್ಟುವಂತಹ ವ್ಯತಿರಿಕ್ತ ಪರಿಣಾಮಗಳೂ ಸಾಗುತ್ತಿವೆ....