Posts

Showing posts from March, 2013

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ - ಕುವೆಂಪು

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರಾ.. ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರಾ.. ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗೀ.. ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ ಭವ ಭವದಿ ಭವಿಸಿಹೇ ಭವ ವಿದೂರಾ ನಿತ್ಯವೂ ಅವತರಿಪ ಸತ್ಯಾವತಾರಾ ನಿತ್ಯವೂ ಅವತರಿಪ ಸತ್ಯಾವತಾರಾ || ಬಾ ಇಲ್ಲಿ || ಮಣ್ ತನಕೆ ಮರತನಕೆ ಮಿಗತನಕೆ ಖಗತನಕೆ ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ ಮುನ್ನಡೆಗೆ ಕಣ್ಣಾದ ಗುರುವೆ ಬಾರಾ ಮೂಡಿ ಬಂದೆನ್ನಾ ನರ ರೂಪ ಚೇತನದೀ… ಮೂಡಿ ಬಂದೆನ್ನಾ ನರ ರೂಪ ಚೇತನದಿ ನಾರಾಯಣತ್ವಕ್ಕೆ ದಾರಿ ತೋರ ನಿತ್ಯವೂ ಅವತರಿಪ ಸತ್ಯಾವತಾರ || ಬಾ ಇಲ್ಲಿ || ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ, ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ, ದೇಶದೇಶದಿ ವೇಷವೇಷಾಂತರವನಾಂತು ವಿಶ್ವಸಾರಥಿಯಾಗಿ ಲೀಲಾರಥವನೆಂತು ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ , ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲಾ, ಅವತರಿಸು ಬಾ… ಅವತರಿಸು ಬಾ… ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ ಹೇ ದಿವ್ಯ ಸಚ್ಚಿದಾನಂದ ಶೀಲ ಹೇ ದಿವ್ಯ ಸಚ್ಚಿದಾನಂದ ಶೀಲ ಹೇ ದಿವ್ಯ ಸಚ್ಚಿದಾನಂದ ಶೀಲ ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ || ಬಾ ಇಲ್ಲ...

ಮುಚ್ಚು ಮರೆ ಇಲ್ಲದೆಯೇ - ಕುವೆಂಪು

ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ || ಮುಚ್ಚು ಮರೆ ಇಲ್ಲದೆಯೇ || ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು, ಪಾಪ ತಾನುಳಿಯುವುದೇ ಪಾಪವಾಗಿ ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೇ, ನರಕ ತಾನುಳಿಯುವುದೇ ನರಕವಾಗಿ || ಮುಚ್ಚು ಮರೆ ಇಲ್ಲದೆಯೇ || ಸಾಂತ ರೀತಿಯನೆಮ್ಮೀ ಕದಡಿರುವುದೆನ್ನಾತ್ಮ, ನಾಂತರೀತಿಯು ಅದೆಂತೋ ಓ ಅನಂತ ನನ್ನ ನೀತಿಯ ಕುರುಡಿನಿಂದೆನ್ನ ರಕ್ಶಿಸಯ್, ನಿನ್ನ ಪ್ರೀತಿಯ ಬೆಳಕಿನ ಆನಂದಕೆ || ಮುಚ್ಚು ಮರೆ ಇಲ್ಲದೆಯೇ ||

ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ - ಕುವೆಂಪು

ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ ಜೊನ್ನ ಜೇನಿಗೆ ಬಾಯಾರಿದೆ ಚಕೋರ ಚುಂಬನ ಚಂದ್ರಿಕಾಮಧುಪಾನಮತ್ತ ಪೀನಕುಂಭಪಯೋಧವಿತ್ತ ವಕ್ಷಪರಿಲಂಭನ ನಿಮಿತ್ತ ನಿರಾವಲಂಬನ ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ ಚರಣನೂಪುರಕಿಂಕಿಣಿಕೊಳ ಮದನಸಿಂಜಿನಿ ಜನಿತ ನಿಹ್ವಳ ಚಿತ್ತ ರಂಜನಿ ತಳುವದೀಕ್ಷಣ ಚಂದ್ರ ಮಂಚಕೆ ಬಾ ಚಕೋರಿ ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ ಕ್ಷೀರಸಾಗರದಲ್ಲಿ ತೇಲುವ ಬಾಗುಚಂದ್ರನ ತೂಗುಮಂಚಕೆ ಬಾ ಚಕೋರಿ ಬಾ ಚಕೋರಿ ಎದೆ ಹಾರಿದೆ ಬಾಯಾರಿದೆ ಚಕೋರ ಚುಂಬನ ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ ನಿಕುಂಜ ರತಿವನ ಮದನ ಯಾಗಕೆ ಅನಂಗರಕ್ತಿಯ ಬಿಂಬ ಭೋಗಕೆ ಕಾಂಕ್ಷಿಯಾಗಿದೆ ನಗ್ನ ಯೋಗಕೆ ಇಕ್ಷು ಮಂಚದ ಸಾಗ್ನಿ ಪಕ್ಷಿಯ ಅಚಂಚು ಚುಂಬನ ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ಇಳಿದು ಬಾ ತಾಯೆ ಇಳಿದು ಬಾ - ಕುವೆಂಪು

ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ || ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ ಎನಿತು ಕರೆದರೂ ಓಕೊಳ್ಳದಿರುವಚಿನ್ನಿದ್ರೆಯಾದೆ ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ ಇಳಿದು ಬಾ ತಾಯೆ ಇಳಿದು ಬಾ || ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ ಇಳಿದು ಬಾ ತಾಯಿ ಇಳಿದು ಬಾ ||'

ನೀನಿಲ್ಲದೇ ನನಗೇನಿದೇ - ಎಂ ಎನ್ ವ್ಯಾಸರಾವ್

ನೀನಿಲ್ಲದೇ ನನಗೇನಿದೇ ಮನಸ್ಸೆಲ್ಲಾ ನಿನ್ನಲ್ಲಿ ನೆಲೆಯಾಗಿದೆ ಕನಸ್ಸೆಲ್ಲಾ ಕಣ್ಣಲ್ಲೇ ಸೆರೆಯಾಗಿದೇ ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು ಕಹಿಯಾದ ವಿರಹದ ನೋವೂ ಹಗಲಿರುಳು ತಂದೇ ನೀನು ಎದೆಯಾಸೆ ಏನೋ ಎಂದೂ ನೀ ಕಾಣದಾದೇ ನಿಶೆಯೊಂದೆ ನನ್ನಲ್ಲೀ ನೀ ತುಂಬಿದೇ ಬೆಳಕೊಂದೆ ನಿನ್ನಿಂದಾ ನಾ ಬಯಸಿದೇ ನೀನಿಲ್ಲದೇ ನನಗೇನಿದೇ… ಒಲವೆಂಬ ಕಿರಣಾ ಬೀರೀ ಒಳಗಿರುವ ಕಣ್ಣಾ ತೆರೆಸೀ ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು ಹೊಸ ಜೀವ ನಿನ್ನಿಂದಾ ನಾ ತಾಳುವೇ ಹೊಸ ಲೋಕ ನಿನ್ನಿಂದಾ ನಾ ಕಾಣುವೇ ನೀನಿಲ್ಲದೇ ನನಗೇನಿದೇ …

ಹಾವು ಅಂದ್ರೆ ಮರಿ ಗುಬ್ಬಿಗೆ ಭಾರಿ ದಿಗಿಲೇನೆ - ಡಾ.ಹೆಚ್. ಎಸ್. ವೆಂಕಟೇಶಮೂರ್ತಿ,

ಹಾವು ಅಂದ್ರೆ ಮರಿ ಗುಬ್ಬಿಗೆ ಭಾರಿ ದಿಗಿಲೇನೆ ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ ಅಮ್ಮ ಅಮ್ಮ ಬುಸ್ಸ್ ಬುಸ್ಸ್ ಹಾವು ಹ್ಯಾಗಿರತ್ತೆ || ಒಕ್ಕಲಿ ಬೆನ್ನು ತಿಕ್ಕಿ ಕೊಳ್ತಾ ಅಮ್ಮ ಅನ್ನುತ್ತೆ ಒಳ್ಳೆ ಪ್ರಶ್ನೆ ಹಾವು-ಹ್ಯಾಗಿರತ್ತೆ ಹಾವು ಹ್ಯಾಗಿರತ್ತೆ ಹಾವಿರತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ ಸಪೂರ ಥಳ ಥಳ ಕೆಂಡದ ಕಣ್ಣು ಕಡ್ಡಿ ದಪ್ಪಗೆ || ಸೂರಿಗೆ ಸುತ್ತಿ ಜೋತಾಡತ್ತೆ ಗೋಧಿ ಬೆನ್ನು ದೀಪದ ಹಾಗೆ ಉರಿತಿರತ್ತೆ ಹಾವಿನ ಕಣ್ಣು ಬುಸ್ಸ್ ಎನ್ನುತ್ತೆ ದರಿದ್ರ ಹಾವಿಗೆ ತುಂಬದ ಹೊಟ್ಟೆ ಇಡಿ ಇಡಿಯಾಗಿ ನುಂಗ್ ಬಿಡುತ್ತೆ ಹಕ್ಕಿ ಮೊಟ್ಟೆ ಹಕ್ಕಿಯ ಮೊಟ್ಟೆ ನುಂಗಿದ್ ಮೇಲೆ ಇಡಿ ಇಡೀಲಿ ಹಕ್ಕಿ ಮರಿ ಬೆಳ್ಕೊಳುತ್ತೆ ಹಾವಿನ ಹೊಟ್ಟೆಲಿ ಹಕ್ಕಿ ಮರಿ ಹುಟ್ಕೋಳ್ಳತ್ತೆ ಹಾವಿನ ಹೊಟ್ಟೆಲಿ ಅಂತ ಪುಟಾಣಿ ಕುಣಿದಾಡ್ತಿತ್ತು ಅಮ್ಮನ ತೋಳಲ್ಲಿ ನಿಟ್ಟುಸಿರಿತ್ತು ಅಮ್ಮ ಗುಬ್ಬಿ ಇಲ್ಲ ಬಂಗಾರ ಇನ್ನೂ ನಿನಗೆ ತಿಳೀದಮ್ಮ ಹಾವಿನ ಹುನ್ನಾರ ಹಾವಿನ ಹೊಟ್ಟೆ ಸೇರಿದ್ ಮೇಲೆ ಹೇಳೋದ್ ಇನ್ನೇನು ಹಾವಿನ ಮೊಟ್ಟೆ ಆಗ್ಬಿಡತ್ತೆ ಹಕ್ಕಿ ಮೊಟ್ಟೇನು

ಜೀವನ

ಜೀವನ ಹುಮ್ಮಸು .......ಹುಮ್ಮಸು ಜೀವನವಲ್ಲ ನಗುವ ಜೀವನವಿರಲ್ಲಿ .......ಜೀವನ ನಗುವಗದಿರಲ್ಲಿ

ಎಂಥಾ ದಿನಗಳವು ಮರೆಯಾಗಿ ಹೋದವು - ಸುಬ್ರಾಯ ಚೊಕ್ಕಾಡಿ

ಎಂಥಾ ದಿನಗಳವು ಮರೆಯಾಗಿ ಹೋದವು ಮಿಂಚಂಥ ಕ್ಷಣಗಳವು ಇನ್ನೆಂದೂ ಬಾರವು || ಸುರಿವ ಮಳೆಗೆ ದೋಣಿಯನ್ನು ತೇಲಿ ಬಿಟ್ಟೆವು, ಚಿಟ್ಟೆ ಹೂವ ಗೊಂದಲದಲಿ ನಕ್ಕು ನಲಿದೆವು ಮುಗಿಲ ಬಣ್ಣ ಚಂದ್ರ ತಾರೆ ಹಾಡ ಹಿಡಿದೆವು ಮುಂದೆ ನುಗ್ಗಲೇನೋ ಬಡಿದು ಕೆಳಗೆ ಕುಸಿದೆವು || ಎಂಥಾ || ಹಕ್ಕಿ ಬೆನ್ನನೇರಿ ಗಗನ ಮೀರಿ ನೆಗೆದೆವು ಇಂದ್ರ ಚಾಪದಲ್ಲಿ ಕೈ ಕೈ ಬೆಸೆದು ನಡೆದೆವು ಈಗ ಹಕ್ಕಿ ರೆಕ್ಕೆ ಮುರಿದು ಧರೆಗೆ ಉರುಳಿದೆ ಕಿಸೆಯಲಿಟ್ಟ ಬಿಲ್ಲ ತುಣುಕು ಕಳೆದು ಹೋಗಿದೆ || ಎಂಥಾ || ಸಾಹಿತ್ಯ – ಸುಬ್ರಾಯ ಚೊಕ್ಕಾಡಿ ಸಂಗೀತ – ಸಿ ಅಶ್ವಥ್ ಗಾಯನ – ಸಂಗೀತ ಕಟ್ಟಿ ಕುಲಕರ್ಣಿ / ಅಜಯ್ ವಾರಿಯರ್

ಬಾ ಸವಿತಾ ಬಾ ಸವಿತಾ ಬಾ ಸವಿತಾ - ಮಾಸ್ತಿ ವೆಂಕಟೇಶ ಅಯ್ಯಂಗಾರ್

ಬಾ ಸವಿತಾ ಬಾ ಸವಿತಾ ಬಾ ಸವಿತಾ.. ಒಳಗಿನ ಕಣ್ಣನು ಮುಚ್ಚಿಸಿವೊಮ್ಮೆ ತಿಳಿವಿಗೆ ಬಣ್ಣವ ಹಚ್ಚಿಸಿವೊಮ್ಮೆ ಒಳಿತಲ್ಲದುದೆ ಒಳಿತೆಂಬುದರ ಚಳಕವೆಲ್ಲಕೆ ವಿನಾಶವತಾ || ಬಾ || ನೆಲೆಯಿಂದ ಹೊರಟು ಅಲೆ ಅಲೆ ಅಲೆ ಅಲೆ ಛಲ ತೊಟ್ಟ ಮಲ್ಲ, ವಾಹಿನಿ ಬಾ ನಿಲವಿಲ್ಲಾ ಜಗದಿ ಕತ್ತಲೆಗೆಂದು ಗೆಲವನು ಸಾರುವ ಭಾಸವ ತಾ || ಬಾ || ಓಂ ತತ್ಸವಿತುರ್ವರೇಣ್ಯವೆಂಬೆವು ಅಂತಲ್ಲದೆ ಬೇರೆಯದನು ನಂಬೆವು ಪಂಥವ ಬೆಳೆಗಿಸಿ ನಿರೂಪಿಸಿ ಕೋಂಬೆವು ಶಾಂತಸುಂದರ ಶಿವದಾ ಸವಿತಾ || ಬಾ || ಸಾಹಿತ್ಯ – ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಂಗೀತ – ಮೈಸೂರು ಅನಂತಸ್ವಾಮಿ

ಅಕೋ ಶ್ಯಾಮ ಅವಳೇ ರಾಧೆ - ಪು.ತಿ.ನ

ಅಕೋ ಶ್ಯಾಮ ಅವಳೇ ರಾಧೆ ನಲಿಯುತಿಹರು ಕಾಣಿರೇ | ನಾವೆ ರಾಧೆ ಅವನೇ ಶ್ಶಾಮ ಬೇರೆ ಬಗೆಯ ಮಾಣಿರೇ || ಕಲರವದೊಳು ಯಮುನೆ ಹರಿಯೆ ಸೋಬಾನೆಯ ತರುಗಳುಲಿಯೆ ತೆನೆತೆನೆಯೊಳು ಹರಸಿದಂತೆ ಬಾನಿಂ ಜೊನ್ನ ಭೂಮಿಗಿಳಿಯೆ || ಕಂಪ ಬಿಡುವ ದಳಗಳಂತೆ ಸುತ್ತಲರಳಿ ಕೊಳ್ಳಿರೇ| ಒಲುಮೆಗಿಡುವ ಪ್ರಭಾವಳಿಯ ತೆರದಿ ಬಳಸಿ ನಿಲ್ಲಿರೇ || ಕಡಗ ಕಂಕಣ ಕಿನಿಕಿನಿಯೆನೆ ಅಡಿಗೆಯಿರುಲೆ ಝಣರೆನೆ | ಎದೆ ನುಡಿತಕೆ ಚುಕ್ಕಿ ಮಿಡಿಯೆ ಕೊಳಲನೂದಿ ಕುಣಿವನೆ || ನಮ್ಮ ಮನವ ಕೋದು ಮಾಲೆ ಗೈದು ಮುಡಿಯುತಿಹನೆನೆ | ಮಾಧವನೂದುವ ಮಧುರ ಗಾನ ಎದೆಯ ಹಾಯ್ವುದಾಯೆನೆ || ನೋಡಿ ತಣಿಯೆ ಹಾಡಿ ತಣೆಯೆ ಲೇಸನಾಡಿ ತಣಿಯೆನೆ | ಕುಣಿದು ತಣಿಯೆ ದಣಿದು ತಣಿಯೆ ದಣಿವಿಲ್ಲದೆ ನಲಿವೆನೆ || ಸಾಹಿತ್ಯ – ಪು.ತಿ.ನ ಸಂಗೀತ – ಸಿ ಅಶ್ವಥ್ ಗಾಯನ – MS ಶೀಲ / KS ಸುರೇಖ

ಶಿವಮಂದಿರಸಮ ವನಸುಂದರ - ಕುವೆಂಪು

ಶಿವಮಂದಿರಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕೆ ಬಾ! ಬಾ ಫಾಲ್ಗುಣ ರವಿ ದರ್ಶನಕೆ! ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು ಕೋಟಿವಿಹಂಗಮ ಮಂಗಲರವ ರಸನೈವೇದ್ಯಕೆ ಮುದ ತಾಳುವನು ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು || ಬಾ || ತೆರೆತೆರೆಯಾಗಿಹ ನೊರೆನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳೀಸಮಹಿಮ ಬಾನ್‌ಕರೆಗೆ ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ ಮರಗಿಡದಲಿ ಜಡದೊಡಲಲಿ ಇದೆಕೋ ಸ್ಪಂದಿಸುತಿದೆ ಭಾವಜ್ವಾಲೆ || ಬಾ || ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯ ಸೇರಿ ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ ಸರ್ವೇಂದ್ರಿಯ ಸುಖನಿಧಿ ಅಲ್ಲಿ; ಸರ್ವಾತ್ಮನ ಸನ್ನಿಧಿ ಅಲ್ಲಿ ಸಕಲಾರಾಧನ ಸಾಧನಬೋಧನ ಅನುಭವರಸ ತಾನಹುದಲ್ಲಿ || ಬಾ || ಸಾಹಿತ್ಯ – ಕುವೆಂಪು ಗಾಯನ - ನರಸಿಂಹ ನಾಯಕ್

ಬದುಕು ಮಾಯೆಯ ಮಾಟ - ದ ರಾ ಬೇಂದ್ರೆ

ಬದುಕು ಮಾಯೆಯ ಮಾಟ  - ಮಾತು ನೊರೆ-ತೆರೆಯಾಟ ಜೀವ ಮೌನದ ತುಂಬ ಗುಂಭ ಮುನ್ನೀರು ಕರುಣೋದಯದ ಕೂಡ ಅರುಣೋದಯವು ಇರಲು ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು! ನಿಜದಲ್ಲೆ ಒಲವಿರಲಿ ಚೆಲುವಿನಲೆ ನಲಿವಿರಲಿ ಒಳಿತಿನಲೆ ಬಲವಿರಲಿ ಜೀವಕೆಳೆಯಾ! ದೇವ ಜೀವನ ಕೇಂದ್ರ ಒಬ್ಬೊಬ್ಬನು ಇಂದ್ರ ಏನಿದ್ದರು ಎಲ್ಲ ಎಲ್ಲೆ ತಿಳಿಯಾ. ಆತನಾಕೆಯೆ ನಮ್ಮ ಜೀವನೌಕೆಯ ತಮ್ಮ ಧ್ರುವ ಮರೆಯದಂತೆ ನಡೆಸುತ್ತಲಿರಲಿ ಈ ನಾನು ಆ ನೀನು ಒಂದೆ ತಾನಿನ ತಾನು ತಾಳಲಯ ರಾಗಗಳು ಸಹಜ ಬರಲಿ ಸಾಹಿತ್ಯ – ದ ರಾ ಬೇಂದ್ರೆ ಸಂಗೀತ / ಗಾಯನ – ಸಿ ಅಶ್ವಥ್

ಸುಭಾಷರ ಜನ್ಮದಿನವೂ ಕಾಡುವ ಸಾವಿನ ಸಂಕಟ - ಪ್ರತಾಪ ಸಿಂಹ

Image
ಕೃಪೆ  :  http://pratapsimha.com/2013/01/30/bos/ Mr. Subhas Chandra Bose is dead! ಇಂಥದ್ದೊಂದು ಆಘಾತಕಾರೀ ಸುದ್ದಿ ಮೊದಲು ಹೊರಬಿದ್ದದ್ದು 1945ರ ಆಗಸ್ಟ್ 23ನೇ ತಾರೀಕು. ಸುದ್ದಿ ಬಿತ್ತರಿಸಿದ್ದು ಜಪಾನಿನ ‘ರೇಡಿಯೋ ಟೋಕಿಯೋ’. ಇಡೀ ಜಗತ್ತು ಇವತ್ತಿಗೂ ಅನುಮಾನದಿಂದಲೇ ನೋಡುವ ಅತ್ಯಂತ ದೊಡ್ಡ ಐತಿಹಾಸಿಕ ಸುಳ್ಳೊಂದು ಸದ್ದಿಲ್ಲದೆ ಹೀಗೆ ಹುಟ್ಟಿಕೊಂಡಿತು. ರೇಡಿಯೋ ಟೋಕಿಯೋದ ನ್ಯೂಸ್ ರೀಡರ್ ಹೇಳಿದ್ದಿಷ್ಟು “ವಿಮಾನ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡ ಮಿಸ್ಟರ್ ಸುಭಾಶ್ಚಂದ್ರ ಬೋಸ್ ಜಪಾನಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಭಾರತದ ‘ಆಜಾದ್ ಹಿಂದ್‌’ ಪ್ರಾಂತೀಯ ಸರ್ಕಾರದ ಮುಖ್ಯಸ್ಥರಾಗಿದ್ದ ಮಿ. ಬೋಸ್ ಆಗಸ್ಟ್ ಹದಿನಾರನೇ ತಾರೀಕಿನಂದು ವಿಮಾನದ ಮೂಲಕ ಸಿಂಗಾಪುರದಿಂದ ಜಪಾನಿಗೆ ಪ್ರಯಾಣಿಸುತ್ತಿದ್ದರು. ಜಪಾನಿನ ರಾಜಧಾನಿ ಟೋಕಿಯೋದಲ್ಲಿ ಅಲ್ಲಿನ ಜಪಾನೀ ಸರಕಾರದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿಕ್ಕಾಗಿ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಯಿತು. ಆಗಸ್ಟ್ ಹದಿನೆಂಟರ ಹದಿನಾಲ್ಕು ಗಂಟೆಗೆ (ಪೂರ್ವಾಹ್ನ ಎರಡು ಗಂಟೆಗೆ) ತೈಹೋಕು ವಿಮಾನ ನಿಲ್ದಾಣದ ಸಮೀಪ ಈ ಅಪಘಾತ ಸಂಭವಿಸಿತು. ತೀವ್ರವಾಗಿ ಗಾಯಗೊಂಡ ಬೋಸ್‌ರನ್ನು ಜಪಾನಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಆತ ಮಧ್ಯರಾತ್ರಿ ಸಾವನ್ನಪ್ಪಿದರು. ಬೋಸ್ ಅವರ ಜೊತೆಗೆ ಪ್ರಯಾಣಿಸುತ್ತಿದ್ದ ...

ಮನೆ ದೇವ್ರು

Image

ಬುದಿವಂತ

Image

ಉಪೇಂದ್ರ

Image

ಮಿಲನ

Image

ಕೆಂಪೇಗೌಡ

Image

ವಿಷ್ಣುವರ್ಧನ

Image

ಎಕೆ ೪೭

Image

ಕನ್ನಡ ಸಿನಿಮಾ - ಮುಂಗಾರು ಮಳೆ

Image
ಮಾಹಿತಿ ಕೃಪೆ - http://kn.wikipedia.org/wiki/ಮುಂಗಾರು_ಮಳೆ ಮುಂಗಾರು ಮಳೆ ಮುಂಗಾರು ಮಳೆ ೨೦೦೬ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಗಣೇಶ್, ಸಂಜನಾ ಗಾಂಧಿ ಮತ್ತು ಅನಂತ್ ನಾಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ೪೦೦ ದಿನಗಳ ನಂತರ ಗಲ್ಲಾಪೆಟ್ಟಿಗೆಯಲ್ಲಿ ೭೫ ಕೋಟಿ ಗಳಿಕೆ ಚಿತ್ರವು ಎಲ್ಲಾ ಅಪೇಕ್ಷೆಗಳನ್ನೂ ಮೀರಿ ಯಶಸ್ಸುಗಳಿಸಿದ್ದಕ್ಕೆ ಸಾಕ್ಷಿ. ಮುಂಗಾರು ಮಳೆ ಚಿತ್ರವು ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ್ದಲ್ಲದೇ ಶತದಿನೋತ್ಸವವನ್ನು ದಾಟಿ ರಜತ ಮಹೋತ್ಸವವನ್ನು ಆಚರಿಸಿಕೊಂಡಿದೆ. ಬೆಂಗಳೂರಿನ ಪಿವಿಆರ್ ಸಿನೆಮಾಸ್ ಚಿತ್ರಮಂದಿರದಲ್ಲಿ ಸತತವಾಗಿ ಒಂದು ವರ್ಷ ಪ್ರದರ್ಶಿಸಲ್ಪಟ್ಟಿದ್ದು ಭಾರತದಲ್ಲಿ ಒಂದು ದಾಖಲೆ[೧]. ಚಿತ್ರವನ್ನು ತೆಲುಗಿನಲ್ಲಿ ವಾನ ಮತ್ತು ಬೆಂಗಾಲಿಯಲ್ಲಿ ಪ್ರೇಮೆರ್ ಕಹಿನಿ ಎಂದು ಮರು-ನಿರ್ಮಾಣ ಮಾಡಲಾಯಿತು. ನಿರ್ದೇಶಕ ಯೋಗರಾಜ್ ಭಟ್ ಅವರು ಮಯೂರ್, ರಾಧಿಕಾ ನಟಿಸಿದ ಮಣಿ ಮತ್ತು ಸುದೀಪ್, ರಮ್ಯಾ ನಟಿಸಿದ ರಂಗ (ಎಸ್.ಎಸ್.ಎಲ್.ಸಿ) ಚಿತ್ರಗಳನ್ನ ನಿರ್ದೇಶಿಸಿದ್ದರು. ಎರಡೂ ಚಿತ್ರಗಳು ಹೆಚ್ಚಿನ ಯಶಸ್ಸು ಕಾಣಲಿಲ್ಲ. ನಂತರ ಯುವ ಲೇಖಕ ಪ್ರೀತಂ ಗುಬ್ಬಿ ಜೊತೆಗೂಡಿ ಮುಂಗಾರು ಮಳೆ ಚಿತ್ರದ ಕಥೆ ನಿರ್ಮಾಣ ಪ್ರಯತ್ನಿಸಿದ್ದರು. ಯೋಗರಾಜ್ ಭಟ್ ಅವರು ಚಿತ್ರದ ಕಥೆಯನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ನಿರೂಪಿಸಿದ್...

ಕೂಲ್ - ಕನ್ನಡ ಸಿನಿಮಾ,

Image

ಹುಚ್ಚು ಹುರುಳು - ಬೀChi

Image
ಇಲ್ಲಿ ಕ್ಲಿಕಿಸಿ- ( ಪುಸ್ತಕ) ಹುಚ್ಚು ಹುರುಳು ಬೀChi

ನೃಪತುಂಗ - ತ. ರಾ. ಸು

Image
ಇಲ್ಲಿ ಕ್ಲಿಕಿಸಿ- ನೃಪತುಂಗ ( ಪುಸ್ತಕ )

ವಿಷ್ಣುವರ್ದ್ಡನ - ತ. ರಾ. ಸು

Image
ಇಲ್ಲಿ ಕ್ಲಿಕಿಸಿ- ವಿಷ್ಣುವರ್ದ್ಡನ - ತ. ರಾ. ಸು  ( ಪುಸ್ತಕ)

ತಮಿಳು ತಲೆಗಳ ನಡುವೆ - ಬಿ ಜಿ ಎಲ್ ಸ್ವಾಮಿ

Image
ಇಲ್ಲಿ ಕ್ಲಿಕಿಸಿ- ತಮಿಳು ತಲೆಗಳ ನಡುವೆ ( ಪುಸ್ತಕ)