ಯಾರದ್ದೋ ಕಸ... ಅಣ್ಣಮ್ಮನ ಜಾತ್ರೆ?!
ನಾಡಿನ -ನುಡಿಯ ಇಲ್ಲಿನ ನೆಲ-ಜಲದ ಕುರಿತು ಪುಟಗಟ್ಟಲೆ ಪತ್ರಿಕೆಗಳಲ್ಲಿ ಹಾರಾಡುವ "ಉಟ್ಟು ಖನ್ನಡ ಓರಾಟಗಾರರು" ಅದೆಲ್ಲಿ ಹಪ್ತಾ ಕಮಾಯಿಸುತ್ತಾ ಅಂಡಲೆಯುತ್ತಿದ್ದಾರೆ? ಈ ವಸೂಲಿ ವೀರರಿಂದ ಮೊದಲು ಕನ್ನಡ ಹಾಗೂ ಕರುನಾಡನ್ನ ಕಾಪಾಡಬೇಕಿದೆ. ಥರೇವಾರಿ ಕಾಯಿಲೆಗಳು ಕಸದ ಹೆದ್ದಾರಿಯೇರಿ ನಗರ ಪ್ರವೇಶಿಸುವ ಮೊದಲು ಇದಕ್ಕಾಗಿ ಹೋರಾಡಲಿಕ್ಕೇನಾಗಿದೆ ರೋಗ ಈ ಅರ್ಜೆಂಟ್ ಕನ್ನಡಮ್ಮನ ಅರ್ಜೆಂಟ್ ಕುವರರ ಅರ್ಭಟಕ್ಕೆ? ನಮ್ಮೂರಿನ ಪೇಪರ್'ಗಳಲ್ಲಿ ಕೈ ಸೋಲುವಷ್ಟು ಬರೆದು ಬರೆದು ಕೈ ಬಿದ್ದು ಹೋಗಿದ್ದರೂ "ಕ್ಯಾರೇ!" ಅನ್ನದ ಎಲ್ಲರೂ ಇದೀಗ ಅಮೇರಿಕಾದ "ನ್ಯೂಯಾರ್ಕ್ ಟೈಮ್ಸ್"ನ ಕಮಂಡಲದಿಂದ ತೀರ್ಥ ಸುರಿದಿದ್ದೇ ತಡ "ಸತ್ತಂತಿಹರನು ಬಡಿದೆಚ್ಚರಿಸಿ"ದಂತೆ ಗಡಿಬಿಡಿ ಮಾಡ್ತಿದಾರೆ. ಇನ್ನು ಇಷ್ಟು ದಿನ "ನಿತ್ಯ" "ಋಷಿ" ಮೂಲದ ತಲಾಷಿನಲ್ಲಿ ನೌಟಂಕಿಯಾಡುತ್ತಿದ್ದ "ಉತ್ತಮ ಸಮ್ 'ಮಜ'"ಕ್ಕಾಗಿ "ನೇರ (ವಾಗಿ)- (ಮೂರೂ) ಬಿಟ್ಟ- ನಿರಂತರ (ಹಡಬೆ)"ಗಳು ಈಗ "ಕಸದಿಂದ ಟಿಆರ್'ಪಿ ರಸ"ವನ್ನ ತೆಗೆಯಲು ಹೊರಟಿದ್ದಾರೆ! ಅಂತೂ ಕೂಗು ಮಾರಿಗಳಿಗೆಲ್ಲ ಅಮೇರಿಕಾದ ಮೋಹನ ಮುರುಳಿಯ ರಾಗಕ್ಕೆ ಅರ್ಜೆಂಟ್ ಎಚ್ಛರವಾಗಿದೆ. ಅಂತೂ ನಮ್ಮೂರಿನವರು ಬರೆದರೆ ರದ್ದಿ, ಅಮೇರಿಕೆಯಲ್ಲಿ ಪ್ರಕಟವಾದರಷ್ಟೆ ಸುದ್ದಿ ಅನ್ನುವುದು ಮತ್ತೆ ಸರಾಸಗಟಾಗಿ ಸಾಬೀತ...