ನೆನಪಿಡಿ ಒಂದುವೇಳೆ ಸರಕಾರ ಪತನವಾದರೆ ಬಚಾವಗೋದು ಕರ್ನಾಟಕದ ಜನತೆ!

ಕಡೆಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಮುಖಂಡರ ಮನದ ಬಹುಕಾಲದ ಒಳ ಆಸೆ ಇಂದು ತಾನೆ ತಾನಾಗಿ ಫಲಿಸುವಂತಿದೆ. ಬೂಸಿಯ ಎಂಬ ಮಾಜಿ ಪೀಡೆ ಇಂದು ಪಕ್ಷ ಬಿಟ್ಟು ತೊಲಗುವುದು ಬಹುತೇಕ ನಿರೀಕ್ಷಿತ. ಅಂಡುಸುಟ್ಟ ಬೆಕ್ಕಿನಂತೆ ಭುಸುಗುಟ್ಟುತ್ತಾ ಕಂಡಕಂಡವರ ಮೇಲೆ ಹರಿಹಾಯುವ ಅವರದ್ದು "ಮಗುವಿನ ಮನಸ್ಸು" ಅಂತ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಮಹಿಷಾಸುರನ ಕಜಿನ್ ಬ್ರದರ್ ಮಾಧ್ಯಮಗಳ ಮುಂದೆ ಮುಲುಕಿದ್ದಾರೆ . ಮಗುವಿನ ಮನಸು ಎನ್ನೋದು ಹೀಗಿರೋದೆ ಹೌದಾಗಿದ್ದರೆ ಇಂತಹ "ಕಳ್ಳ ನನ್ನ ಮಕ್ಕಳು" ಹುಟ್ಟದಿದ್ರೇನೆ ಚನ್ನಾಗಿತ್ತು ಅನ್ನಿಸ್ತಿದೆ!


ಹೋಗಲಿ ಅವರ ಜೊತೆ ಇರುವ ಭಕ್ತಾಗ್ರೆಣಿ ಶಾಸಕ ಇಸಮುಗಳನ್ನೆ ಗಮನಿಸಿ ನೋಡಿ. "ಸಿಬಿಐ ಕೇಸ್ ಅನ್ನೋದು ಅಷ್ಟೇನೂ ದೊಡ್ಡ ಪ್ರಶ್ನೆ ಅಲ್ಲ" ಅಂತನ್ನುವ ಸೊರಬದ ರೇಪ್ ಮಾಡಿ ಪರಪ್ಪನ ಛತ್ರಕ್ಕೆ ಹೋಗಿದ್ದವನು, 'ನರ್ಸ'ರಿಯಲ್ಲೇ ಕಿಸ್ ಕೊಟ್ಟ ಹೊನ್ನಾಳಿ ಹೋರಿ, ರೇಪ್ ಮಾಡಲು ಧೈರ್ಯವಿಲ್ಲದೆ ಮೈಸವರಿ 'ನಿರಾಣಿ'ರಾದ ಬಾಗಲಕೋಟೆಯ ಗಡವ, ಪಿಂಪ್ ಖ್ಯಾತಿಯ ವಿಜಯನಗರದ ವೀರಪುತ್ರ ಅಲಿಯಾಸ್ ಮುಜುರಾಯಿ ಸರ್ವರ್, ಮಾಡುವ ಶಕ್ತಿ(?) ಇಲ್ಲದೆ ನೋಡಿ ಸಿಕ್ಕುಬಿದ್ದ ಪಾಟೀಲನ ಒಣಗಿದ ಸವದಿ! ಏಕಕಾಲದಲ್ಲಿಯೇ 'ಕುಮಾರಿ'ಯಾಗಿದ್ದುಕೊಂಡೆ 'ಶ್ರೀಮತಿ'ಯೂ ಆಗಿರುವ ಯಶವಂತಪುರದ ಕನ್ಯಾ ಮೇರಿಯ ಅಪರಾವತಾರ, ಇನ್ನು ಮುಂದೆ ಸಾಗರದಲ್ಲಿ ಹಸ್ತಾಂತರವಾಗಿ ಈಜುವ ಆತುರದಲ್ಲಿ ಕಮಲಳಿಗೆ 'ಕೈ ' ಕೊಡುವ ಕಾತರದಲ್ಲಿರುವ 'ಗೋಲ್'ಮಾಲ್' ಗೋಪಾಲ, ಸರಸ್ವತಿ ಪುತ್ರರ ಇಲಾಖೆಯ ಉಸ್ತುವಾರಿ ಹೊತ್ತ ಪಲ್ವಾನ್ ಹೆಬ್ಬೆಟ್ಟು ಸಚಿವ. ಒಂದಾದರೂ ಅಪ್ಪಂತಾ ಮೂತಿಗಳಿವೆಯ ಅಲ್ಲಿ? ಇವತ್ತು ಬೂಸಿಯರನ್ನ ಅಪ್ಪಾಜಿ ಅನ್ನುವ ಅವರೆಲ್ಲರ ನಾಲಗೆ ನಾಳೆ ಅಧಿಕಾರದ ರಕ್ತದ ರುಚಿ ಸಿಕ್ಕೊದಾದರೆ ನಿಖಿಲ್ ಗೌಡರಿಗೂ(!) ಅರ್ಜೆಂಟಾಗಿ ಅಪ್ಪಾಜಿ ಅನ್ನಲು ತಯಾರು ಇಂತಹ ಹಡಬೆಗಳ ಗುಪಿನ ನಾಯಕನ ತೆವಲಿಗೆ ಸರಕಾರ ಇದ್ದರೆಷ್ಟು? ಬಿದ್ದರೆಷ್ಟು....

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು