ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Saturday, January 28, 2017
Wednesday, January 25, 2017
ಭಗವದ್ಗೀತೆಯ ಕಿರು ಪರಿಚಯ - ಪ್ರಶ್ನೋತ್ತರಮಾಲಿಕೆ.. Badari Prasad Margasahayam
* ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು..?
ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ.
* ಯಾವಾಗ ಬೋಧಿಸಿದ..?
ಉತ್ತರ : ಇಂದಿನಿಂದ ಸುಮಾರು ೭ ಸಾವಿರ ವರ್ಷಗಳ ಹಿಂದೆ.
* ಯಾವ ದಿನ ಬೋಧಿಸಿದ..?
ಉತ್ತರ : ರವಿವಾರ.
* ಯಾವ ತಿಥಿಯಲ್ಲಿ..?
ಉತ್ತರ : ಏಕಾದಶಿಯಂದು.
* ಎಲ್ಲಿ ಬೋಧಿಸಿದ..?
ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ.
* ಎಷ್ಟು ಸಮಯ ಬೋಧಿಸಿದ..?
ಉತ್ತರ : ೪೫ ನಿಮಿಷ.
* ಅರ್ಜುನನಿಗೇಕೆ ಗೀತೆಯನ್ನು ಬೋಧಿಸಿದ..?
ಉತ್ತರ : ಕ್ಷತ್ರಿಯನಿಗೆ ಕರ್ತವ್ಯವಾದದ್ದು ಯುದ್ಧ..ತನ್ನ ಕರ್ತವ್ಯದಿಂದ ಅರ್ಜುನ
ವಿಮುಖನಾಗಲು ಬಯಸುತ್ತಾನೆ. ಯುದ್ಧಮಾಡದಿರಲು ನಿಶ್ಚಯಿಸುತ್ತಾನೆ. ಆತನಿಗೆ ತನ್ನ ಕರ್ತವ್ಯಗಳನ್ನು ಮನದಟ್ಟು
ಮಾಡಲು ಹಾಗೂ ಭವಿಷ್ಯದ ಮಾನವಸಂತತಿಗೆ ಧರ್ಮಜ್ಞಾನವನ್ನು ನೀಡಲು ಕೃಷ್ಣ ಗೀತೆಯನ್ನು ಬೋಧಿಸಿದ.
* ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ..?
ಉತ್ತರ : ಹದಿನೆಂಟು.
* ಎಷ್ಟು ಶ್ಲೋಕಗಳಿವೆ..?
ಉತ್ತರ : ೭೦೦ ಶ್ಲೋಕಗಳು.
* ಗೀತೆಯಲ್ಲಿರುವ ವಿಷಯಗಳಾವವು..?
ಉತ್ತರ : ಜ್ಞಾನ - ಭಕ್ತಿ - ಕರ್ಮ - ಯೋಗ ಮಾರ್ಗಗಳ ವಿಸ್ತೃತವಾದ ವ್ಯಾಖ್ಯಾನ..ಈ ಮಾರ್ಗಗಳಲ್ಲಿ
ನಡೆಯುವವರು ಖಂಡಿತವಾಗಲೂ ಪರಮಸ್ಥಾನವನ್ನು ಪಡೆಯುತ್ತಾರೆಂದು ಹೇಳಲಾಗಿದೆ..
* ಅರ್ಜುನನನ್ನು ಬಿಟ್ಟರೆ ಗೀತೆಯನ್ನು ಮತ್ತ್ಯಾರು ಕೇಳಿದ್ದಾರೆ..?
ಉತ್ತರ : ಧೃತರಾಷ್ಟ್ರ ಹಾಗೂ ಸಂಜಯ.
* ಅರ್ಜುನನಿಗಿಂತಲೂ ಮೊದಲು ಗೀತೆಯ ಪವಿತ್ರ ಜ್ಞಾನ ಯಾರಿಗೆ ತಿಳಿದಿತ್ತು...?
ಉತ್ತರ : ಭಗವಾನ್ ಸೂರ್ಯದೇವನಿಗೆ.
* ಭಗವದ್ಗೀತೆಯನ್ನು ಯಾವ ಧರ್ಮಗ್ರಂಥದಲ್ಲಿ ಸೇರಿಸಲಾಗಿದೆ..?
ಉತ್ತರ : ಉಪನಿಷತ್ತಿನಲ್ಲಿ.
* ಗೀತೆ ಯಾವ ಗ್ರಂಥದ ಭಾಗವಾಗಿದೆ..?
ಉತ್ತರ : ಮಹಾಭಾರತದ ಭೀಷ್ಮಪರ್ವದ ಒಂದು ಭಾಗವಾಗಿದೆ.
* ಭಗವದ್ಗೀತೆಯ ಇನ್ನೊಂದು ಹೆಸರು..?
ಉತ್ತರ : ಗೀತೋಪನಿಷತ್.
* ಗೀತೆಯ ಸಾರವೇನು..?
ಉತ್ತರ : ಕರ್ಮಫಲಗಳನ್ನು ಬಿಟ್ಟು , ಭಗವಂತನಲ್ಲಿ
ಶರಣಾಗತಿಯನ್ನು ಹೊಂದುವುದು..
* ಭಗವದ್ಗೀತೆಯಲ್ಲಿ
ಯಾರು ಎಷ್ಟು ಶ್ಲೋಕಗಳನ್ನು ಹೇಳಿದ್ದಾರೆ..?
ಉತ್ತರ : ಶ್ರೀಕೃಷ್ಣ - ೫೭೪. ಅರ್ಜುನ - ೮೫ ಧೃತರಾಷ್ಟ್ರ - ೦೧ ಸಂಜಯ - ೪೦
ಶ್ರೀಕೃಷ್ಣಾರ್ಪಣಮಸ್ತು
ಶ್ರೀವಿಷ್ಣು ಸಹಸ್ರನಾಮದ ಮಹತ್ವ:
ಮನುಷ್ಯನ ಆಯಸ್ಸು ನೂರು ವರ್ಷ... ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.
ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ..- ಶ್ರೀ ವಿಷ್ಣು ಸಹಸ್ರ ನಾಮ ..
ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.
ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು(ಸಾಕ್ಷಾತ್ ಶ್ರೀಹರಿ) ನಮಗೆ ಕರುಣಿಸಿದ್ದಾರೆ..
|| ಶ್ರೀಕೃಷ್ಣಾರ್ಪಣಮಸ್ತು ||
|| ನಾಹಂ ಕರ್ತಾ ಹರಿಃ ಕರ್ತಾ |
Monday, January 9, 2017
ಹೊಣೆಯರಿತ ನಾಗರಿಕರಿಂದ - ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.
ಹೊಣೆಯರಿತ ನಾಗರಿಕರಿಂದ:
ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.
ಮಾಧ್ಯಮಗಳ ವರದಿಯ ಪ್ರಕಾರ, ಘನವೆತ್ತ ಕರ್ನಾಟಕ ಸರಕಾರ ಪ್ರಾಥಮಿಕ, ಮಾಧ್ಯಮಿಕ ಹಾಗು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹೊಸ ಪಠ್ಯಪುಸ್ತಕಗಳನ್ನು ೨೦೧೭ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ನಿರ್ಧರಿಸಿದೆ. ಈ ಹೊಸ ಪಠ್ಯಕ್ರಮ ಬಹಳಷ್ಟು ವಿಕೃತ ಮತ್ತು ತಪ್ಪುಮಾಹಿತಿಗಳನ್ನು ಒಳಗೊಂಡಿದೆ ಎಂಬ ವದಂತಿ ಹರಿದಾಡುತ್ತಿದೆ.
ಘನವೆತ್ತ ರಾಜ್ಯಸರ್ಕಾರ ಹಾಗು ಪ್ರಾಥಮಿಕ ಶಿಕ್ಷಣ ವಿಭಾಗ ಪುಸ್ತಕಗಳ ಪರಿಷ್ಕರಣೆ ಮತ್ತು ಬದಲಾವಣೆಯ ಬಗ್ಗೆ ಯಾವುದೇ ರೀತಿಯ ಪಾರದರ್ಶಕ ವಿಚಾರ ವಿನಿಮಯ ನಡೆಸಿಲ್ಲ. ಹೊಸ ಪುಸ್ತಕ ರಚನೆಗೆ,ಬೇರೆ ಬೇರೆ ವಿಷಯದಲ್ಲಿ ರಚನೆಯಾದ ಸಮಿತಿಗಳಿಗೆ ತಮ್ಮ ಅಂತಿಮ ಕರಡನ್ನು ಸಲ್ಲಿಸಲು ೧೫ ಜನವರಿ ೨೦೧೭ ಕೊನೆಯದಿನವಾದರೂ, ಬೇರೆ ಯಾವುದೇ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳದೆ ಸರಕಾರ ಈ ಪಠ್ಯಗಳನ್ನು ನಿಗೂಢರೀತಿಯಲ್ಲಿ ಮುಂದಿನ ಆರು ತಿಂಗಳಲ್ಲಿ ಪ್ರಕಟಿಸಲು ಹೊರಟಿದೆ.
ಈ ಪಠ್ಯಪುಸ್ತಕ ಬದಲಾವಣೆಯ ವಿಚಾರದಲ್ಲಿ ಸರಕಾರದ ಮತ್ತು ಪಠ್ಯಪುಸ್ತಕ ಸಮಿತಿಯ ನಡವಳಿಕೆ ಮತ್ತು ನಿಗೂಢತೆ, ಮುಂದಿನ ಪೀಳಿಗೆಗಳ ಮಧ್ಯೆ ವೈಷಮ್ಯ ಮತ್ತು ಅಸಮಾನತೆಯ ಬೀಜ ಬಿತ್ತುವ ಪ್ರಯತ್ನವಾಗಿದೆ ಎಂಬ ಸಂಶಯ ಮೂಡುತ್ತದೆ.
ನಮ್ಮ ಮಕ್ಕಳ ಹಾಗು ಅವರ ಪೀಳಿಗೆಯ/ಗಳ ಭವಿಷ್ಯದ ಕಾಳಜಿಯಿಂದ, ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು, ಕರ್ನಾಟಕದ ಘನವೆತ್ತ ಮುಖ್ಯಮಂತ್ರಿಗಳಾದ ಶ್ರೀ. ಸಿದ್ಧರಾಮಯ್ಯ ಅವರಿಂದ ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಆಗ್ರಹಪೂರ್ವಕವಾಗಿ ಕೇಳುತ್ತಿದ್ದೇವೆ.
೧. ೨೦೧೭ರಲ್ಲಿ ಕೇಂದ್ರ ಸರಕಾರ ಹೊಸ ರಾಷ್ಟ್ರೀಯ ಶೈಕ್ಷಣಿಕ ಕಾರ್ಯನೀತಿಯನ್ನು ಜಾರಿಗೆ ಸೂಚನೆ ಇದ್ದರೂ, ಯಾಕೆ ರಾಜ್ಯ ಸರಕಾರ ಈ ಹೊಸ ಪಠ್ಯಪುಸ್ತಕವನ್ನು ಪ್ರಕಟಿಸಲು ಅವಸರಿಸುತ್ತಿದೆ? ಒಮ್ಮೆ ಪಠ್ಯಪುಸ್ತಕವನ್ನು ಬದಲಾಯಿಸಿ ಪ್ರಕಟಿಸಿದರೆ, ಮುಂದಿನ ಕೆಲವು ವರ್ಷಗಳ ಕಾಲ ಹೊಸ ಪಠ್ಯಪುಸ್ತಕ ತರುವುದುದು ಬೇರೆ ಬೇರೆ ಕಾರಣಗಳಿಗಾಗಿ ಕಷ್ಟ ಎಂಬ ಅರಿವು ಸರಕಾರಕ್ಕೆ ಇಲ್ಲವೇ ಅಥವಾ ಅರಿವಿದ್ದು ಪ್ರಕಟಿಸುವ ಧ್ರಾಷ್ಟವೇ?
೨. ೨೦೧೭ರಲ್ಲಿ, ರಾಷ್ಟ್ರೀಯ ಪಾಠಕ್ರಮ ಚೌಕಟ್ಟು ೨೦೦೫ರ (NCF ೨೦೦೫)ರ ಪ್ರಕಾರ ಪಠ್ಯಕ್ರಮವನ್ನು ತಯಾರಿಸಿರುವುದು ಪಠ್ಯಕ್ರಮದ ಗುಣಮಟ್ಟದ ಬಗ್ಗೆ ಸಂಶಯ ಮೂಡುವುದಿಲ್ಲವೇ?
೩. ಪಠ್ಯ ಪುಸ್ತಕಗಳ ವಿಷಯ ತಜ್ಞರು ವಿಷಯ ಸಂಭಂದಿತ ವರದಿಯನ್ನು ಮತ್ತು ಅದರ ವಿಮರ್ಶೆಯ ವರದಿಯನ್ನು ನೀಡದಿದ್ದರೂ, ಹೊಸ ಪಠ್ಯ ಪುಸ್ತಕಗಳನ್ನು ೨೦೧೭ರ ಶೈಕ್ಷಣಿಕ ವರ್ಷಕ್ಕೆ ಪ್ರಕಟಿಸುವ ತುರ್ತು ಯಾಕೆ.
೪. ಪಠ್ಯಕ್ರಮ ಬದಲಾವಣೆಯ ವಿಚಾರದಲ್ಲಿ ಸಂಭಂದಪಟ್ಟ ಎಲ್ಲಾ ವರ್ಗಗಳನ್ನು ಅಂದರೆ ಶೈಕ್ಷಣಿಕ ತಜ್ಞರನ್ನು, DSERT, DIETs, CTE, ಸಂಪನ್ಮೂಲ ವ್ಯಕ್ತಿಗಳನ್ನು, ರಾಜಕೀಯ ಪಕ್ಷಗಳು ಹಾಗೂ ಇನ್ನಿತರ ವರ್ಗಗಳನ್ನು ಯಾಕೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ? ಈಗ ಪುಸ್ತಕವನ್ನು ಪ್ರಕಟ ಮಾಡಲು ಹೊರಟಿರುವ ತರಾತುರಿಯಲ್ಲಿ ಮೇಲ್ಕಂಡ ವರ್ಗಗಳ ಮರುಮಾಹಿತಿಯನ್ನು ಪಡೆಯಲು ಸಮಯ ಎಲ್ಲಿದೆ?
೫. ಹೊಸ ಪಠ್ಯ ಪುಸ್ತಕ ರಚನೆ ಮಾಡುವ ಬಗ್ಗೆ ರಾಜ್ಯ ಸರಕಾರ ಯಾಕೆ ನಿಗೂಢತೆಯನ್ನು ಕಾಪಾಡಿಕೊಂಡು ಬರುತ್ತಿದೆ? ಪಠ್ಯ ಪುಸ್ತಕದ ಯಾವ ಯಾವ ಭಾಗಗಳನ್ನು ಪುನರ್ವಿಮರ್ಶೆ, ಬದಲಾವಣೆ ಮಾಡಲಾಗಿದೆ ಹಾಗು ಯಾವ ಯಾವ ಭಾಗಗಳನ್ನು ತೆಗೆದು ಹಾಕಲಾಗಿದೆ? ಈ ವಿಚಾರಗಳ ಬಗ್ಗೆ ಯಾಕೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ?
೬. ಪಠ್ಯಪುಸ್ತಕದ ಶೇಕಡಾ ೨೦ರಷ್ಟು ಭಾಗಕ್ಕೆ ಕತ್ತರಿ ಹಾಕಿರುವುದು ನಿಜವೇ? ಈ ೨೦ ಶೇಕಡಾ ಕಡಿತ ಪಠ್ಯಪುಸ್ತಕಗಳ ಗುಣಮಟ್ಟವನ್ನು ಕಡಿಮೆ ಮಾಡಿಲ್ಲವೇ? ಇದು ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯಕ್ಕೆ, ಉನ್ನತ ಶಿಕ್ಷಣದಲ್ಲಿ ಹಾಗೂ ಉದ್ಯೋಗವಾಕಾಶಗಳನ್ನು ಕುಂಠಿತಗೊಳಿಸುವುದಿಲ್ಲವೇ?
೭. ಹೊಸ ಶೈಕ್ಷಣಿಕ ವರ್ಷಕ್ಕೆ ೬ ತಿಂಗಳು ಉಳಿದಿರುವಂತೆ (ಅದರಲ್ಲಿ ಮೂರು ತಿಂಗಳು ಪರೀಕ್ಷಾ ತಯಾರಿ ಮತ್ತು ಫಲಿತಾಂಶ ಘೋಷಣೆಯಲ್ಲಿ ಕಳೆದು ಹೋಗುತ್ತದೆ) ಘನ ಸರಕಾರ ಶಿಕ್ಷಕರಿಗೆ ಹೇಗೆ ಹೊಸ ಪಠ್ಯಕ್ರಮದ ತರಭೇತಿಯನ್ನು ನೀಡುತ್ತದೆ ಎಂಬುದು ಯಕ್ಷ ಪ್ರಶ್ನೆಯಲ್ಲವೇ?
೮. ಮಾನ್ಯ ಮುಖ್ಯಮಂತ್ರಿಗಳು ಯಾಕೆ ಪ್ರಾಥಮಿಕ ಶಿಕ್ಷಣ ಸಚಿವ ಶ್ರೀ. ತನ್ವಿರ್ ಸೇಠ್ ಹಾಗು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಲಹೆಯನ್ನು ತಿರಸ್ಕರಿಸುತ್ತಿದ್ದಾರೆ ? ಅವರು ಪಠ್ಯಪುಸ್ತಕದಲ್ಲಿ ಯಾರ ಅಜೆಂಡಾವನ್ನು ಜಾರಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ?
೯. ಬರಗೂರು ರಾಮಚಂದ್ರಪ್ಪ ಅವರಂತಹ, ಎಡಪಂತೀಯ ಲೇಖಕರಿಗೆ ಶಿಕ್ಷಣ ನೀತಿ ಮತ್ತು ಪಠ್ಯ ಪುಸ್ತಕ ಬದಲಾವಣೆಯನ್ನು ಜಾರಿಗೆ ತರುವ ಅಧಿಕಾರ ನೀಡಲಾಗಿದೆ. ಅವರನ್ನು ಪಠ್ಯ ಪುಸ್ತಕ ಬದಲಾವಣೆಯ ಸಮಿತಿಗೆ ಆಯ್ಕೆ ಮಾಡಲು ಅವ್ರ ಅರ್ಹತೆ ಏನು? ಇದರ ಹಿಂದಿರುವ ಕುತ್ಸಿತ ಚಿಂತನೆ ಏನು?
೧೦. ಇತಿಹಾಸ, ಗಣಿತ, ವಿಜ್ಞಾನ, ಸಮಾಜ ಶಾಸ್ತ ಹಾಗೂ ಭಾಷಾ ಪಠ್ಯಪುಸ್ತಕಗಳ ಬದಲಾವಣೆ ನಡೆಯುತ್ತಿರುವುದು, ಬರಗೂರು ರಾಮಚಂದ್ರಪ್ಪ ಈ ಬದಲಾವಣೆಗಳ ಹಿಂದಿರುವ ವ್ಯಕ್ತಿ ಎಂದಾದರೆ, ಯೋಜಿಸಲಾದ ಪಾಠಕ್ರಮ ಬದಲಾವಣೆ ಎಡಪಂತೀಯ ಚಿಂತನೆಗಳನ್ನು ಹಬ್ಬಿಸಿ, ನಮ್ಮ ಮಕ್ಕಳಲ್ಲಿ ನಮ್ಮ ಸಂಸ್ಕ್ರತಿ, ಇತಿಹಾಸ ಮತ್ತು ಪರಂಪರೆಯ ಕುರಿತಾದ ಜ್ಞಾನವನ್ನು ಮತ್ತು ಪ್ರೀತಿಯನ್ನು ಕಮ್ಮಿ ಮಾಡುವ ಪ್ರಯತ್ನವೇ?
೧೧. ರಾಷ್ಟ್ರೀಯ ಮಟ್ಟದ ಪರೀಕ್ಷಗೆಳಲ್ಲಿ ಕನ್ನಡದ ಮಕ್ಕಳೇಕೆ ಹಿಂದೆ ಉಳಿಯುತ್ತಾರೆ ಎಂದು ಅಧ್ಯಯನ ನಡೆಸಿದ್ದ ಖ್ಯಾತ ವಿಜ್ಞಾನಿ ಡಾ.ಕಸ್ತೂರಿ ರಂಗನ್ ಅವರ ನೇತೃತ್ವದ "ಕರ್ನಾಟಕ ಜ್ಞಾನ ಆಯೋಗ" ರಾಜ್ಯ ಸರ್ಕಾರಕ್ಕೆ 09,10,11,12 ತರಗತಿಯಲ್ಲಿ CBSEಯ ಪಠ್ಯ ಪುಸ್ತಕಗಳನ್ನೇ ಕನ್ನಡಕ್ಕೆ ಅನುವಾದಿಸಿಕೊಳ್ಳುವಂತೆ ಶಿಫಾರಸ್ಸು ಮಾಡಿತ್ತು ಮತ್ತು ಆ ಶಿಫಾರಸ್ಸಿನಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಈಗ ಇನ್ನೊಂದು ಪಠ್ಯಕ್ರಮ ತಂದು ರಾಜ್ಯದ ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮತ್ತೆ ಹಿಂದುಳಿಯುವಂತೆ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಪೊಲಿಟಿಕಲ್ ಐಡಿಯಾಲಜಿಗಾಗಿ ವಿದ್ಯಾರ್ಥಿಗಳ ಭವಿಷ್ಯ ಬಲಿಯಾಗುವುದಿಲ್ಲವೇ ?
೧೨. ಶಾಲೆಗಳು CBSE ಅಥವಾ ICSE ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಅವಕಾಶ ಇದ್ದರೂ, ೭೫,೦೦೦ ಶಾಲೆಗಳು ಕರ್ನಾಟಕ ರಾಜ್ಯ ಪಠ್ಯಕ್ರಮವನ್ನು ಅಳವಡಿಕೊಂಡಿವೆ. ಆದರೆ ಹಳೆಯ/ಔಟ್ ಡೇಟೆಡ್ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವ ಇಂತಹ ಹೀನ ಕ್ರಮದಿಂದ, ರಾಜ್ಯಸರಕಾರ CBSE ಅಥವಾ ICSE ವಿದ್ಯಾರ್ಥಿಗಳ ಮಧ್ಯೆ ಶೈಕ್ಷಣಿಕ ಅಸಮಾನತೆಯನ್ನು ತರಲು ಹೊರಟಿದೆಯೇ? ಈ ಮುಖೇನ ರಾಜ್ಯ ಪಠ್ಯಕ್ರಮದಲ್ಲಿ ಓದುವ ವಿಧ್ಯ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ನಾಶಮಾಡಲು ಹೊರಟಿದೆಯೆ ನಮ್ಮ ರಾಜ್ಯ ಸರಕಾರ?
೧೩. ಇದು ಹೊಸ ಪೀಳಿಗೆಯನ್ನು ಗುರಿಯಾಗಿಸಿ, ಹೊಸ ಸುಳ್ಳು ಹೋರಾಟಗಾರರನ್ನು ಸೃಷ್ಟಿ ಮಾಡುವ ಕುತಂತ್ರವೇ?
೧೪. ಶಿಕ್ಷಣದ ಗುಣಮಟ್ಟವನ್ನು ಕುಂಠಿತಗೊಳಿಸಿ, ಸರಕಾರೀ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳನ್ನು ಅವಕಾಶ ವಂಚಿತರನ್ನಾಗಿ ಮಾಡಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆಯೇ ಈ ಸರಕಾರ?
ಶ್ರೀ. ಸಿದ್ದರಾಮಯ್ಯನವರ ಸರಕಾರದ ಕಳೆದ ನಾಲ್ಕು ವರ್ಷಗಳ "ಕಾರ್ಯಭಾರ"ವನ್ನು ನೋಡುವಾಗ, ಮಾನ್ಯ ಮುಖ್ಯಮಂತ್ರಿಗಳು ತಮ್ಮ ಚುನಾಯಿತ ಕ್ಯಾಬಿನೆಟ್ ಗಿಂತ ತಮ್ಮ ಎಡಪಂತೀಯ ಲೇಖಕರ ಕಿಚನ್ ಕ್ಯಾಬಿನೆಟ್ ಜೊತೆ ಕೆಲಸ ಮಾಡಿದ್ದೆ ಹೆಚ್ಚು. ಈ ಎಡಪಂತೀಯ ಕಿಚನ್ ಕ್ಯಾಬಿನೆಟ್ ಪ್ರಜಾಪ್ರಭುತ್ವವನ್ನು ನಾಶ ಮಾಡುವ, ಸಮಾಜವನ್ನು ವಿಘಟಿಸುವ, ಸುಳ್ಳು ಹೋರಾಟಗಾರರನ್ನು ಸೃಷ್ಟಿಸುವ, ಯುವಕರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿ ಅವರುಗಳನ್ನು ಶೈಕ್ಷಣಿಕ ಮತ್ತು ಬೌದ್ಧಿಕ ವಲಯಗಳಲ್ಲಿ ಬ್ರೈನ್ ವಾಷ್ ಮಾಡಿ ಉಪಯೋಗಿಸುವ ಕೆಲಸವನ್ನು ಮಾಡಿ ದೇಶದ ಭವಿಷ್ಯವನ್ನು ದುರಂತದ ಎಡೆಗೆ ತಳ್ಳುವ ಕೆಲಸ ಮಾಡುತ್ತದೆ.
https://www.change.org/p/the-chief-minister-of-karnataka-stop-karnataka-congress-government-from-ruining-students-future
Thursday, December 22, 2016
ಒಂದು ಸಣ್ಣ ಕಥೆ : ( ಓದಿ ಚೆನ್ನಾಗಿದೆ )
ಒಂದು ಸಣ್ಣ ಕಥೆ : ( ಓದಿ ಚೆನ್ನಾಗಿದೆ )
ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು..
ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು..
ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು.
ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..
ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ...
ಮಂತ್ರಿ ಹೇಳಿದ *'ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬರುತ್ತದೆ . ಆ ಸ್ಫೂರ್ತಿ ನಮ್ಮ ಮೇಲೆ ನಮ್ಮವರು ಇಟ್ಟಿರುವ ಭರವಸೆ, ಪ್ರೀತಿಗಳಿಂದ ಸಿಗುತ್ತದೆ ..... '*
*ಒಂದು ಸಣ್ಣ ಒಳ್ಳೆಯ ಮಾತು,ಸ್ಪರ್ಶ, ನಗು ಬದುಕಿನ ಹಾದಿಯ ಬದಲಿಸಬಲ್ಲುದು...*
*ಪ್ರೀತಿ ಅಷ್ಟೇ ಸಾಕು....... ಬದುಕಲು, ಬದುಕಿಸಲು, ಬದುಕನ್ನ ಬದುಕಿಸಲು.*😊
ಕೃಪೆ ವಾಟ್ಸಪ್

ನೂರು ದೇವರನೆಲ್ಲ ನೂಕಾಚೆ ದೂರ - ಕುವೆಂಪು
ನೂರು ದೇವರನೆಲ್ಲ ನೂಕಾಚೆ ದೂರ ।। ೩।।
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।
ಶತಮಾನಗಳು ಬರಿಯ ಜಡಶಿಲೆಯ ಪೂಜಿಸಿ ಆಯ್ತು
ಹಾವ್ಗಳಿಗೆ ಹಾಲೆರದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿ ಆಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಗಂಟೆ ಜಾಗಟೆಗಳಿಂಬಡಿದು ಕುತ್ತಿಗೆ ಹಿಡಿದು ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯಾನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಓಯ್ದು
ಚಳಿಯು ಮಳೆಯಲಿ ನಮೆವ ತಾಯ್ಗೆ ಹಾಕು

ನೂಕಾಚೆ ದೂರ

Friday, December 9, 2016
ಒಂದು ಸಣ್ಣ ಕಥೆ - ಕೃಪೆ ವಾಟ್ಸಪ್
ಒಂದು ಸಣ್ಣ ಕಥೆ : ( ಓದಿ ಚೆನ್ನಾಗಿದೆ )
ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು..
ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು..
ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು.
ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..
ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ...
ಮಂತ್ರಿ ಹೇಳಿದ *'ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬರುತ್ತದೆ . ಆ ಸ್ಫೂರ್ತಿ ನಮ್ಮ ಮೇಲೆ ನಮ್ಮವರು ಇಟ್ಟಿರುವ ಭರವಸೆ, ಪ್ರೀತಿಗಳಿಂದ ಸಿಗುತ್ತದೆ ..... '*
*ಒಂದು ಸಣ್ಣ ಒಳ್ಳೆಯ ಮಾತು,ಸ್ಪರ್ಶ, ನಗು ಬದುಕಿನ ಹಾದಿಯ ಬದಲಿಸಬಲ್ಲುದು...*
*ಪ್ರೀತಿ ಅಷ್ಟೇ ಸಾಕು....... ಬದುಕಲು, ಬದುಕಿಸಲು, ಬದುಕನ್ನ ಬದುಕಿಸಲು.*
ಕೃಪೆ ವಾಟ್ಸಪ್
Tuesday, December 6, 2016
ಸಮ್ಮೇಳನವಲ್ಲ, ಸರಕಾರಿ ಸಾಹಿತಿಗಳ ಒಡ್ಡೋಲಗ - ರೋಹಿತ್ ಚಕ್ರತೀರ್ಥ
ಎರಡು ವಾರದ ಹಿಂದೆ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದೆ. ಬರಗೂರು ರಾಮಚಂದ್ರಪ್ಪ ಬರೆದ ಒಂದು ಪುಸ್ತಕದ ಹೆಸರನ್ನು ಗೂಗಲ್ ನೋಡದೆ ಹೇಳಿ, ಎಂದು. ಸುಮಾರು 200ಕ್ಕೂ ಮಿಕ್ಕಿ ಕಾಮೆಂಟ್‌ಗಳು ಬಂದವು. ಆದರೆ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಬರಗೂರರ ಒಂದೇ ಒಂದು ಪುಸ್ತಕದ ಹೆಸರನ್ನೂ ಸರಿಯಾಗಿ ಹೇಳಲಿಲ್ಲ (ಆ ಪೋಸ್ಟ್ ಮತ್ತು ಕಾಮೆಂಟ್‌ಗಳು ಹಾಗೇ ಇವೆ, ಅಳಿಸಿಲ್ಲ). ಇನ್ನೇನು ಹತ್ತು ದಿನಗಳಲ್ಲಿ ರಾಯಚೂರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಉತ್ಸವ ಮೂರ್ತಿಯ ಒಂದಾದರೂ ಕೃತಿಯನ್ನು ಕನ್ನಡಿಗರು ನೆನಪಿಸಿಕೊಂಡಿಲ್ಲ ಎಂದರೆ ಅದಕ್ಕಿಂತ ದುಃಖ, ಖೇದ, ವಿಷಾದ ಬೇರೆ ಇದೆಯೆ? ಈ ವೈಫಲ್ಯದ ಹೊಣೆಯನ್ನು ಯಾರು ಹೊರಬೇಕು?
ಕ್ವಾಲಿಟಿ! ಅದೊಂದು ಗುಣ ಸಾಹಿತ್ಯರಂಗದಲ್ಲಿ ನಾಸ್ತಿಯಾಗಿ ಬಹಳ ಕಾಲವೇ ಆಗಿಹೋಯಿತು. ಹಾಗಂತ ಒಳ್ಳೆಯ ಕೃತಿಗಳು ಬರುತ್ತಿಲ್ಲವೇ? ಖಂಡಿತಾ ಬರುತ್ತಿವೆ. ಆದರೆ ಹಾಗೆ ಒಳ್ಳೊಳ್ಳೆಯ ಕೃತಿಗಳನ್ನು ಬರೆಯುವವರನ್ನು ಪ್ರಕಾಶಕರು ಮಾತಾಡಿಸುವುದಿಲ್ಲ. ಸರಕಾರದ ಪ್ರಶಸ್ತಿ ಕಮಿಟಿಗಳು ಕಣ್ಣೆತ್ತಿಯೂ ನೋಡುವುದಿಲ್ಲ. ಓದುಗರ ಸಹೃದಯತೆಯಿಂದ, ಬಾಯಿಂದ ಬಾಯಿಗೆ ಹರಡುವ ಪ್ರಚಾರದಿಂದ, ಸಹೃದಯ ವಿಮರ್ಶಕರ ವಿಮರ್ಶೆಯ ಬಲದಿಂದ ಒಳ್ಳೆಯ ಲೇಖಕ ಹೆಚ್ಚು ಜನರನ್ನು ತಲುಪುವುದು ಸಾಧ್ಯವಾಗುತ್ತದೆ. ಆದರೆ ಸರಕಾರ ನಡೆಸುವ ಕಾರ್ಯಕ್ರಮಗಳಲ್ಲಿ ಈ ಲೇಖಕರು ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ, ಯಾವ ಅಕಾಡೆಮಿಗಳಲ್ಲೂ ಅಧ್ಯಕ್ಷ-ಸದಸ್ಯ ಆಗುವುದಿಲ್ಲ.
ಸರಕಾರದ ಕಾರ್ಯಕ್ರಮಗಳನ್ನು ಸರಕಾರಿ ಸಾಹಿತಿಗಳಷ್ಟೇ ಆಳುತ್ತಾರೆ. ಪ್ರಶಸ್ತಿ-ಪುರಸ್ಕಾರಗಳನ್ನು ತಮ್ಮತಮ್ಮೊಳಗೇ ವಿಲೇವಾರಿ ಮಾಡಿಕೊಳ್ಳುವ ಗುಪ್ತ ಒಪ್ಪಂದವೊಂದು ಅವರ ನಡುವೆ ಜಾರಿಯಲ್ಲಿರುತ್ತದೆ. ಬರಗೂರು ರಾಮಚಂದ್ರಪ್ಪರಂಥ ಲೇಖಕರು ಸದಾ ಸರಕಾರಿ ಮೊಗಸಾಲೆಗಳಲ್ಲಿ ಕಾಣಿಸಿಕೊಂಡು, ಪತ್ರಿಕೆಗಳ ದಿನನಿತ್ಯದ ವರದಿಗಳಲ್ಲಿ ಸುದ್ದಿಯಾಗುತ್ತ, ಟೌನ್‌ಹಾಲ್ ಎದುರು ಆಗೀಗ ನಡೆಯುವ ಬುದ್ಧಿಜೀವಿಗಳ ಪ್ರತಿಭಟನಾ ಸಭೆಗಳಲ್ಲಿ ಘೋಷಣೆ ಕೂಗುತ್ತ ತಮ್ಮ ಹೆಸರನ್ನು ಚಾಲೂ ಇಟ್ಟಿರುತ್ತಾರೆ. ತಾವು ಬರೆದದ್ದು ಸುದ್ದಿಯಾಗದಾಗ ಹೀಗೆ ಬೇರೆ ವಿಧಾನಗಳ ಮೂಲಕ ಸುದ್ದಿಯಲ್ಲಿರುವುದು ಸರಕಾರಿ ಸಾಹಿತಿಗಳಿಗೆ ಅನಿವಾರ್ಯವಾಗುತ್ತದೆ. ಬರಗೂರು ರಾಮಚಂದ್ರಪ್ಪ ಏನು ಬರೆದಿದ್ದಾರೆಂಬ ಸಂಶೋಧನೆ ಮಾಡುವವರಿಗೆ ದಟ್ಟವಾದ ನಿರಾಸೆ ಕವಿಯುತ್ತದೆ.
ಯಾಕೆಂದರೆ, ಧರ್ಮ ಮತ್ತು ರಿಲಿಜನ್ ಒಂದೇ. ಪುರೋಹಿತಶಾಹಿಗಳು ಭಾರತದ ಮೂಲನಿವಾಸಿಗಳನ್ನು ಶತಮಾನಗಳಿಂದ ಶೋಷಣೆಗೊಳಪಡಿಸಿದ್ದಾರೆ. ಹಿಂದುಳಿದವರು ಮತ್ತು ಅಶಿಕ್ಷಿತರನ್ನು ತುಳಿಯುವುದೇ ಬ್ರಾಹ್ಮಣರ ಕೆಲಸ. ಮಹಾಭಾರತ, ರಾಮಾಯಣಗಳನ್ನು ಬರೆದ ವ್ಯಾಸ, ವಾಲ್ಮೀಕಿಗಳು ಅವೈದಿಕರಾದ್ದರಿಂದ ಅವರನ್ನು ದ್ವೇಷಿಸಬಾರದು, ಆದರೆ ಆ ಕಾವ್ಯಗಳನ್ನು ಬಳಸಿಕೊಳ್ಳುವ ವೈದಿಕ ಶಕ್ತಿಗಳನ್ನು ದ್ವೇಷಿಸಬೇಕು. ಹಿಂದೂ ಮೂಲಭೂತವಾದ ಬೃಹದಾಕಾರವಾಗಿ ಬೆಳೆದಿದೆ. ಭಯೋತ್ಪಾದನೆಗೆ ಧರ್ಮವೇ ಮೂಲ, ಆದರೆ ಇಸ್ಲಾಂ ಅನ್ನು ಹಾಗೆಂದು ಭಾವಿಸಬಾರದು…. ಹೀಗೆ ತಲೆಬುಡವಿಲ್ಲದ ಏಳೆಂಟು ಸಾಲುಗಳನ್ನು ಸಾಲುಸಾಲಾಗಿ ಜೋಡಿಸಿಟ್ಟರೆ ಬರಗೂರರ ಚಿಂತನೆಯ ಧಾಟಿ ಕಾಣಸಿಗುತ್ತದೆ. ಆಂತರ್ಯದಲ್ಲಿ ಮಹಾ ಕಮ್ಯುನಿಸ್ಟರಾದ ಬರಗೂರರು ಲೆನಿನ್ ಅನ್ನು ದೇವತೆಯ ಮಟ್ಟಕ್ಕೇ ಏರಿಸುತ್ತಾರೆ.
ವೇದಗಳನ್ನು ಅಧ್ಯಯನ ನಡೆಸಿ ಸಂಹಿತೆಗಳಾಗಿ ವಿಭಾಗಿಸಿದ ವ್ಯಾಸಮಹರ್ಷಿಗಳನ್ನೇ ಅವೈದಿಕರೆಂದು ಕರೆಯುತ್ತಾರೆ! ಭಾರತದಲ್ಲಿದ್ದ ಶಾಸ್ತ್ರ-ಪುರಾಣಗಳನ್ನು ಪಾಶ್ಚಾತ್ಯ ರಿಲಿಜನ್‌ಗಳ ಡಾಕ್ಟ್ರಿನ್‌ಗಳಿಗೆ ಸಮೀಕರಿಸುತ್ತಾರೆ. ಪಾಶ್ಚಾತ್ಯ ಜಗತ್ತಲ್ಲಿ ಹುಟ್ಟಿ ಹಬ್ಬಿದ ರಿಲಿಜನ್‌ಗಳಿಗೂ ಭಾರತೀಯ ಧಾರ್ಮಿಕ ಪರಂಪರೆಗೂ ಅಭೇದ ಕಲ್ಪಿಸುತ್ತಾರೆ. ರಾಮಚಂದ್ರಪ್ಪನವರು ಸಿದ್ದರಾಮಯ್ಯನವರ ಕಾರಿನ ಮೇಲೆ ಕಾಗೆ ಕೂತ ಸಂದರ್ಭದಲ್ಲಿ ಒಂದು ಲೇಖನ ಬರೆದರು. ಅದರಲ್ಲಿ, ‘ಕಾಗೆಯ ವಿಷಯದಲ್ಲಿ ಕಂಠವನ್ನು ಮೀರಿದ ಸಾಮಾಜಿಕ ಮೌಢ್ಯವೂ ಮುನ್ನೆಲೆಯಲ್ಲಿರುವುದು ಆಘಾತಕಾರಿ. ಕಾಗೆಯನ್ನು ಅಪಶಕುನದ ಮುಖ್ಯ ಸಂಕೇತವಾಗಿ ಪ್ರಚುರಪಡಿಸಿ ಕೀಳು ಎಂಬ ಪಟ್ಟಿಗೆ ಸೇರಿಸಲಾಗಿದೆ. ಆದರೆ ಕೋಗಿಲೆಯ ಮೊಟ್ಟೆಗಳ ಮೇಲೆ ಕಾವಿಗೆ ಕೂತು ಮರಿ ಮಾಡುವುದು ಕಾಗೆಯೇ ಹೊರತು ಕೋಗಿಲೆಯಲ್ಲ.
ಕೋಗಿಲೆ ಮತ್ತು ಕಾಗೆಯ ಈ ಮಧುರ ಸಂಬಂಧವು ಕೋಮುವಾದಿ ಗಳಿಗೊಂದು ಪಾಠವಾಗಬೇಕಿದೆ.. ಎಂಬ ಸಾಲುಗಳು ಬರುತ್ತವೆ. ಕೋಮುವಾದಿ, ಪುರೋಹಿತಶಾಹಿ, ಮನುಸ್ಮತಿ, ಶೋಷಕ-ಶೋಷಿತ ಮತ್ತು ಮುಖಾಮುಖಿ – ಇವಿಷ್ಟು ಶಬ್ದಗಳಿಲ್ಲದೆ ಲೇಖನ ಬರೆಯಿರಿ ಎಂದರೆ ಈ ವ್ಯಕ್ತಿ ಅಕ್ಷರಸನ್ಯಾಸ ಸ್ವೀಕರಿಸಿಬಿಡಬಹುದೇನೋ! ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಅಕ್ಷರಕಸ ಎಂಬುದೇನಾದರೂ ಇದ್ದರೆ ಅದಕ್ಕೆ ರಾಮಚಂದ್ರಪ್ಪನವರ ಬರಹಕ್ಕಿಂತ ಮಿಗಿಲಾದ ಉದಾಹರಣೆ ಸಿಗುವುದು ಕಷ್ಟ.
ಇದು ಅವರೊಬ್ಬರ ಸಮಸ್ಯೆ ಅಲ್ಲ. ಪಾಶ್ಚಾತ್ಯರು ಕಟ್ಟಿಬೆಳೆಸಿದ ಮಿಥ್ಯಾವಾದಗಳನ್ನು ಮೆದುಳಿಗಿಳಿಸಿಕೊಂಡು ಕಳೆದ ಮೂರ್ನಾಲ್ಕು ದಶಕಗಳಲ್ಲಿ ಕಾಲೇಜು-ಯೂನಿವರ್ಸಿಟಿಗಳಲ್ಲಿ ಕುರ್ಚಿ ಬಿಸಿ ಮಾಡುತ್ತ, ಅಲ್ಲಿನ ವಿದ್ಯಾರ್ಥಿಗಳನ್ನು ಸಾಧ್ಯವಾದಷ್ಟು ದಾರಿ ತಪ್ಪಿಸಿದ ಒಂದು ವರ್ಗದ ಸಾಹಿತಿಗಳೆಲ್ಲ ಬರೆಯುವುದು ಹೀಗೆಯೇ. ವೀರಪ್ಪ ಮೊಯಿಲಿಯವರ ಕಾವ್ಯವನ್ನಾದರೂ ಅರ್ಥ ಮಾಡಿಕೊಳ್ಳಬಹುದೇನೋ, ಆದರೆ ಬರಗೂರು ಮತ್ತು ಅವರಂಥ ಲೇಖಕರ ಗದ್ಯವನ್ನು ಜಪ್ಪಯ್ಯ ಎಂದರೂ ಅರಗಿಸಿಕೊಳ್ಳಲಾರೆವು. ಹೇಳಬೇಕಾದ ಸುಳ್ಳುಗಳ ಪ್ರಮಾಣ ಹೆಚ್ಚಿದಾಗ ಭಾಷೆ ಸಂಕೀರ್ಣವಾಗಬೇಕಾದ್ದು ಅನಿವಾರ್ಯ ತಾನೆ! ಹಿಂದೊಮ್ಮೆ ಬರಗೂರರು ವಿವೇಕಾನಂದರನ್ನು ಕೋಟ್ ಮಾಡುತ್ತ ಒಂದು ವಾಕ್ಯ ಬರೆದಿದ್ದರು.
ನಿಜವಾಗಿಯೂ ವಿವೇಕಾನಂದರು ಹಾಗೆ ಹೇಳಿದ್ದಾರೆಯೇ ಎಂದು ಅಚ್ಚರಿಪಡುತ್ತ ವಿವೇಕಾನಂದರ ಸಮಗ್ರ ಕೃತಿಶ್ರೇಣಿಯಲ್ಲಿ ಹುಡುಕಿದಾಗ, ಬರಗೂರರು ಪ್ರಸ್ತಾಪಿಸಿದ ಮಾತಿಗೆ ತದ್ವಿರುದ್ಧಾರ್ಥವಿರುವ ವಾಕ್ಯಗಳು ಅಲ್ಲಿದ್ದವು. ತನಗೆ ಬೇಕಾದ ಅರ್ಥ ತೆಗೆಯಲು ಬರಗೂರರು, ವಿವೇಕಾನಂದರ ಹೇಳಿಕೆಯ ಹಿಂದು-ಮುಂದಿನ ಪದಗಳನ್ನು ಹಕ್ಕಿಯ ಪುಕ್ಕ ಕತ್ತರಿಸಿದಂತೆ ಕತ್ತರಿಸಿ ಎಸೆದಿದ್ದರು! ಹಾಗಾದರೆ ಇವರು ಬರೆದಿರುವ ನಾಲ್ಕು ಮತ್ತೊಂದು ಪುಸ್ತಕದಲ್ಲಿ ಅದೆಷ್ಟು ತಿರುಚಿದ ಸತ್ಯಗಳು, ವಿಜೃಂಭಿಸಲ್ಪಟ್ಟ ಸುಳ್ಳುಗಳು ತುಂಬಿಕೊಂಡಿರಬಹುದು ಎಂಬ ಚಿಂತೆ ಹುಟ್ಟಿತು ನನಗೆ. ಬರಗೂರು ರಾಮಚಂದ್ರಪ್ಪ ಸಾಹಿತ್ಯಿಕವಾಗಿ ಏನನ್ನಾದರೂ ಬರೆದಿದ್ದಾರೆಯೇ? ಅವರ ಕತೆ-ಕಾದಂಬರಿ-ಕಾವ್ಯ ಎಲ್ಲಾದರೂ ಚರ್ಚೆಗೊಳಪಟ್ಟಿದ್ದಾವೆಯೇ? ಶ್ರಮಿಕ ಸಂಸ್ಕೃತಿ ಒಳ್ಳೆಯದು ಎಂಬ ಮೂರು ಪದಗಳ ಸಂದೇಶವನ್ನು ಹೇಳಲು ಹಲವು ಸಾವಿರ ಪುಟಗಳ ಸಾಹಿತ್ಯ ಬರೆದ ಕಂಬಾರರಂತೆ ಬರಗೂರರ ಸಾಹಿತ್ಯದಿಂದ ನಮಗೆ ಸಿಗುವ, ಅದೆಷ್ಟು ಪುಟ್ಟದೇ ಆಗಿರಲಿ, ಸಂದೇಶ ಯಾವುದು? ರಾಜ್‌ಕುಮಾರ್ ಕುಟುಂಬವನ್ನು ಹಾಡಿಹೊಗಳುವುದನ್ನು ಹೊರತುಪಡಿಸಿ ಬರಗೂರರು ಸಾಹಿತ್ಯವಲಯಕ್ಕೆ ಕೊಟ್ಟ ಕೊಡುಗೆ ಏನು?
ನನಗೆ ವೈಯಕ್ತಿಕವಾಗಿ ಬರಗೂರು ರಾಮಚಂದ್ರಪ್ಪನವರ ಮೇಲೆ ಯಾವ ದ್ವೇಷವೂ ಇಲ್ಲ. ಅವರ ಸಾಹಿತ್ಯವಿಮರ್ಶೆಯನ್ನು ಮಾಡುವ ಅಗತ್ಯವೂ ಇರಲಿಲ್ಲವೇನೋ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರದಿದ್ದರೆ. ಆದರೆ ಒಬ್ಬ ಸಾಹಿತಿ ಸರಕಾರಿ ಖರ್ಚಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಗೊಂಡಾಗ ಸಹಜವಾಗಿಯೇ ನಾಡಿನ ಜನರಿಗೆ ಆತನ ಬಗ್ಗೆ ಕುತೂಹಲಗಳಿರುತ್ತವೆ. ನಮ್ಮ ಪ್ರೀತಿಯ ಸಾಹಿತಿಗೆ ಈಗಲಾದರೂ ಈ ಗೌರವ ಸಿಕ್ಕಿತಲ್ಲ! ಎಂಬ ಸಂತೃಪ್ತಿಯೂ ಇರಬಹುದು. ಆದರೆ ಬರಗೂರರ ವಿಷಯದಲ್ಲಿ ಜನರಿಗಿರುವುದು ಸಂತೃಪ್ತಿಯಲ್ಲ, ಆಶ್ಚರ್ಯ. ಜನ ನೆನಪಿಸಿಕೊಳ್ಳಬಹುದಾದ ಒಂದಾದರೂ ಕೃತಿ ರಚಿಸದ ಬರಗೂರರು ಯಾವ ಆಧಾರದ ಮೇಲೆ ಸರಕಾರಿ ಕಾರ್ಯಕ್ರಮಗಳಿಗೆ ಆಯ್ಕೆಯಾಗುತ್ತಾರೆ? ಸರಿ, ಆಯ್ಕೆಯಾದರೆಂದೇ ಇಟ್ಟುಕೊಳ್ಳೋಣ, ಇವರಿಂದ ಭರವಸೆಯ ನಾಲ್ಕು ಹೊಸ ಮಾತು, ಹೊಸ ಚಿಂತನೆಯನ್ನು ನಾವು ನಿರೀಕ್ಷಿಸಬಹುದೆ? ಲಂಕೇಶರಿಂದಲೇ ಡಂಬಾಯ ಸಾಹಿತಿಯೆಂದು ಹೊಗಳಿಸಿಕೊಂಡಿದ್ದ ಬರಗೂರು ಈಗಲಾದರೂ ಡಂಬ್ ಅಲ್ಲದ ಮಾತುಗಳನ್ನು ಆಡುತ್ತಾರೆಂಬ ನಿರೀಕ್ಷೆ ಇಡಬಹುದೆ?
ಸಮ್ಮೇಳನದ ಗೋಷ್ಠಿಗಳ ವಿಷಯಪಟ್ಟಿಯನ್ನು ಕಂಡಾಗ ಅಂಥ ಆಸೆಯನ್ನೇನೂ ಇಟ್ಟುಕೊಳ್ಳುವಂತಿಲ್ಲ. ಮಹಿಳೆ-ಆಧುನಿಕತೆ ಮುಖಾಮುಖಿ, ಪುಸ್ತಕ ಮತ್ತು ಸಂಸ್ಕೃತಿ – ಸವಾಲುಗಳು, ಕನ್ನಡ ಸಾಹಿತ್ಯ – ಬಹುಮುಖಿ ನೆಲೆಗಳು, ಪ್ರಜಾಪ್ರಭುತ್ವದಲ್ಲಿನ ವಿಮರ್ಶೆಯ ಸಾಧ್ಯತೆಗಳು, ದಲಿತ ಬಂಡಾಯ ಸಾಹಿತ್ಯ ಮತ್ತು ಚಳವಳಿ, ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಾದೇಶಿಕ ಅಸಮಾನತೆ – ಅಭಿವೃದ್ಧಿಯ ಸವಾಲುಗಳು… ಹೀಗೆ ನಡೆಯಲಿರುವ ಸಾಲುಸಾಲು ಗೋಷ್ಠಿಗಳಲ್ಲಿ ಹೊಸತೆಲ್ಲಿದೆ! ಇವೇ ಇವೇ ವಿಷಯಗಳನ್ನು ಕಳೆದ ಅರ್ಧ ಶತಮಾನದಿಂದ ಸಾಹಿತ್ಯ ಸಮ್ಮೇಳನಗಳಲ್ಲಿ ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಗಾಂಧಿ ಜಯಂತಿಯ ಪುಷ್ಪಾರ್ಪಣೆಯ ಹಾಗೆ ಈ ಗೋಷ್ಠಿಗಳು ಕೂಡ ಪ್ರತಿವರ್ಷ ಕಾಟಾಚಾರಕ್ಕೆಂಬಂತೆ ನಡೆದುಹೋಗುತ್ತವೆ.
ಏನು ಉದ್ಧಾರವಾಗಿದೆ ಇವುಗಳಿಂದ? ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ವಿಷಯವನ್ನು ನಾವು ಸಾಹಿತ್ಯ ಸಮ್ಮೇಳನದಿಂದ ಕೈ ಬಿಡುವುದು ಇನ್ನು ಯಾವ ಶತಮಾನದಲ್ಲಿ? ಮಹಿಳೆ ಮತ್ತು ಆಧುನಿಕತೆಯ ಚರ್ಚೆಗೆ ಮುಕ್ತಿ ಯಾವಾಗ? ಸಂಸ್ಕೃತಿ ಮತ್ತು ರಾಜಕಾರಣವನ್ನು ಬಿಟ್ಟರೆ ಬೇರಾವ ವಿಷಯವೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಿಸಲು ನಮಗೆ ಸಿಗುವುದಿಲ್ಲವೆ? ಇನ್ನು, ಈ ಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರ ಮಂಡಿಸುವವರಾದರೂ ಯಾರು? ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಸಮ್ಮೇಳನದಿಂದ ಸಮ್ಮೇಳನಕ್ಕೆ ಹಾರುತ್ತ, ಅಂದಕಾಲತ್ತಿಲೆ ಹೇಳಲು ಶುರುಮಾಡಿದ ವಿಚಾರಗಳನ್ನೇ ಟೇಪ್ ರೆಕಾರ್ಡರಿನಂತೆ ಉರುಹೊಡೆಯುತ್ತಾ ಬಂದಿರುವ ಸರಕಾರಿ ಸಾಹಿತಿಗಳು. ಬಹುಶಃ ಅದಕ್ಕೇ ಏನೋ, ಸಾಹಿತ್ಯ ಸಮ್ಮೇಳನದ ವರದಿಗೆ ಮೀಸಲಿಡುವ ದಿನಪತ್ರಿಕೆಯ ಒಂದಿಡೀ ಪುಟದಲ್ಲಿ ಊಟದ ವಿವರಗಳೇ ತುಂಬಿಕೊಂಡಿರುತ್ತವೆ. ಹೆಚ್ಚಿನ ಗೋಷ್ಠಿಗಳಲ್ಲಿ ಜನ ಊಟತಿಂಡಿಗಳಾದ ಮೇಲೆ ಕುರ್ಚಿ ಸಿಕ್ಕಿತೆಂದು ಕೂತು ಸುಧಾರಿಸಿಕೊಂಡು ಹೋಗುತ್ತಾರೆಯೇ ವಿನಾ ವೇದಿಕೆಯ ಮೇಲಿಂದ ಏನೇನು ಮಾತುಗಳು ತೇಲಿ ಬರುತ್ತಿವೆಯೆಂದು ತಲೆ ಕೆಡಿಸಿಕೊಳ್ಳುವುದಿಲ್ಲ.
ಸಾಹಿತ್ಯ ಸಮ್ಮೇಳನಗಳು ಬದಲಾಗಬೇಕು. ಮುಖ್ಯವಾಗಿ ಇವು ಬೇಕೇ ಬೇಡವೇ ಎಂಬುದನ್ನಾದರೂ ಸರಕಾರ ಗಂಭೀರವಾಗಿ ಯೋಚಿಸಬೇಕು. ವರ್ಷಕ್ಕೊಂದಾವರ್ತಿ ರಾಜ್ಯದ ಒಂದೊಂದು ಜಾಗದಲ್ಲಿ ಗುಂಡಿ ತೋಡಿ ದುಡ್ಡು ಸುರಿಯುವುದಕ್ಕಿಂತ ಪ್ರತಿವರ್ಷ ಒಂದು ತಾಲೂಕು ಗುರುತಿಸಿ ಶಾಶ್ವತವಾದ ಪುಸ್ತಕದಂಗಡಿಗಳನ್ನೋ, ಲೈಬ್ರರಿಗಳನ್ನೋ ಯಾಕೆ ತೆರೆಯಬಾರದು? ಅಥವಾ ಸಮ್ಮೇಳನ ನಡೆಸಿದ ಜಿಲ್ಲೆಯಲ್ಲಿ ಯಾಕೆ ಯಾವುದಾದರೂ ಸಾಹಿತಿಯ ಮನೆಯನ್ನು ಸ್ಮತಿಭವನವನ್ನಾಗಿ ಪರಿವರ್ತಿಸುವ ಕೆಲಸ ಮಾಡಬಾರದು? ಸಮ್ಮೇಳನ ನಡೆಸುವುದೇ ಆದರೆ ಯಾಕೆ ಜೀವಂತಿಕೆಯಿರುವ ಗೋಷ್ಠಿಗಳನ್ನು ಆಯೋಜಿಸಬಾರದು? ಸಾಹಿತ್ಯ ಸಮ್ಮೇಳನಗಳಿಗೆ ಕತೆ-ಕಾದಂಬರಿ ಬರೆದವರನ್ನು ಹೊರತುಪಡಿಸಿ ಬೇರೆ ಯಾವ ಸಾಹಿತಿಗಳನ್ನೂ ಅಧ್ಯಕ್ಷರಾಗಿ ಆರಿಸಬಾರದೆಂಬ ನಿಯಮವೇನಾದರೂ ಇದೆಯೇ? ವಿಜ್ಞಾನ ಸಾಹಿತಿಗಳು, ಮಾಹಿತಿ ಸಾಹಿತ್ಯ ಕೊಟ್ಟವರು, ವಿಮರ್ಶಕರು, ಬೀದಿ ನಾಟಕಗಳನ್ನು ಬರೆದು ಆಡಿಸಿದವರು, ಮಕ್ಕಳ ಕತೆಗಳನ್ನು ವ್ರತದಂತೆ ವರ್ಷಾನುಗಟ್ಟಲೆ ಬರೆದುಕೊಂಡು ಬಂದವರು, ಕೃಷಿ ಸಂಬಂಧಿತ ಲೇಖನಗಳನ್ನೂ ಪುಸ್ತಕಗಳನ್ನೂ ಬರೆದವರು, ವಿತ್ತಸಾಹಿತ್ಯ ರಚಿಸಿದವರು, ನಗೆಸಾಹಿತಿಗಳು, ಚುಟುಕ ಬರೆದವರು ಇವರ್ಯಾಾರೂ ಸಾಹಿತಿಗಳಲ್ಲವೇ? ಯಾರೂ ಓದದ ಸಾಹಿತಿಗಳನ್ನು ಮುಖ್ಯವೇದಿಕೆಯಲ್ಲಿ ಉತ್ಸವಮೂರ್ತಿಗಳನ್ನಾಾಗಿ ಮಾಡಿ, ಯಾರೂ ಕೇಳದ ಗೋಷ್ಠಿಗಳನ್ನು ಆಯೋಜಿಸಿ, ಕನ್ನಡ ಬೆಳೆಯಬೇಕೆಂದು ಬಯಸುವುದು ಹಾಸ್ಯಾಸ್ಪದವಾಗುವುದಿಲ್ಲವೆ?
ಕಳೆದ ಸಲ ಶ್ರವಣಬೆಳಗೊಳದಲ್ಲಿ ನಡೆದ ಸಮ್ಮೇಳನದ ಮೊದಲ ದಿನದ ಸಂಜೆ ಒಂದಷ್ಟು ಸಾಹಿತಿಗಳು ಕಲೆತು ಈ ಸಲ ಭೈರಪ್ಪನವರನ್ನು ಬಯ್ಯುವ ಕಾರ್ಯಕ್ರಮ ಇಟ್ಟುಕೊಳ್ಳೋಣ ಎಂದು ಯೋಜಿಸಿದರಂತೆ. ಅದರಂತೆ ಮರುದಿನದ ಕಾರ್ಯಕ್ರಮಗಳ ರೂಪುರೇಷೆಗಳು ತಟ್ಟನೆ ಬದಲಾಗಿಬಿಟ್ಟವು. ಗೋಷ್ಠಿಯ ವಿಷಯ ಯಾವುದೇ ಇರಲಿ, ಅದೆಲ್ಲವನ್ನೂ ಪಕ್ಕಕ್ಕಿಟ್ಟು ಭೈರಪ್ಪರನ್ನು ಬಯ್ಯುವ ಒಂದಂಶದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಮ್ಮೇಳನಕ್ಕೆ ಮತ್ತು ಸ್ವಂತಕ್ಕೆ ಅತಿಮುಖ್ಯವಾಗಿ ಬೇಕಿದ್ದ ಟಿಆರ್‌ಪಿಯನ್ನು ಅಂತೂ ಆ ಮೂಲಕ ಹೊಂದಿಸಿದ್ದಾಯಿತು! ಈ ಬಾರಿಯ ಸಮ್ಮೇಳನ ಅದಕ್ಕಿಂತ ಭಿನ್ನವಾಗಿರುತ್ತದೆ ಎಂದೇನೂ ಭಾವಿಸುವಂತಿಲ್ಲ.
ಸಮ್ಮೇಳನ ಎಂದರೆ ರಾಜಕಾರಣಿಗಳ ಒಡ್ಡೋಲಗ, ಒಂದಷ್ಟು ಬಲಪಂಥೀಯ ಸಾಹಿತಿಗಳ ಹೀಯಾಳಿಕೆ ಮತ್ತು ಪ್ರಸ್ತುತ ಕಾಲಘಟ್ಟಕ್ಕೆ ಸಂಬಂಧವೇ ಇಲ್ಲದ ಯಾವ್ಯಾವುದೋ ಸಮಸ್ಯೆಗಳ ಅಡಗೂಲಜ್ಜಿ ಕತೆಗಳ ವಿಸ್ತಾರವಾದ ರೋದನೆ – ಇದಿಷ್ಟೇ ಎಂಬಂತಾಗಿದೆ. ಸಮ್ಮೇಳನದ ಮುಕ್ತಾಯದ ಹೊತ್ತಿಗೆ, ಇದುವರೆಗೆ ಒಮ್ಮೆಯೂ ಈಡೇರದ ನಿರ್ಣಯಗಳನ್ನು ಮತ್ತೊಮ್ಮೆ ಬರೆದು ಓದಿ, ಈ ವರ್ಷದ ಸಮ್ಮೇಳನ ಮುಗಿಯಿತು ಎಂದು ಪಿಂಡಪ್ರದಾನ ಮಾಡುತ್ತಾರೆ. ಸಾಹಿತ್ಯ ಸಮ್ಮೇಳನಗಳಿಂದ ಕ್ಯಾಟರಿಂಗ್ ಮತ್ತು ಚಪ್ಪರ ಹಾಕುವ ಮಂದಿಗಲ್ಲದೆ ಬೇರೆ ಯಾರಿಗೆ ಯಾವ ಬಗೆಯ ಅನುಕೂಲವಾಗುತ್ತಿದೆ, ಕನ್ನಡವೆಷ್ಟು ಉದ್ಧಾರವಾಗುತ್ತಿದೆ ಎಂಬುದೆಲ್ಲ ಬರಗೂರರ ಸಾಹಿತ್ಯದಂತೆ – ಯಾರಿಗೂ ಅರ್ಥವಾಗದ ವಿಚಾರ!
ರೋಹಿತ್ ಚಕ್ರತೀರ್ಥ

Subscribe to:
Posts (Atom)
ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.
"ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......

-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರ, ಕೋರಿಕೆಗೆ ಕೋರಿಕೆ! ಅಂದರೆ, ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" ಪ್ರಕ...
-
ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು ಪಂಜೆ ಮಂಗೇಶ ರಾಯರು ಮೂಡಣ ರಂಗಸ್ಥಳದಲಿ ನೆತ್ತರ ಮಾಡುವನು ಕುಣಿದಾಡುವನು ಬೆಳಕಿನ ಕಣ್ಣುಗಳಿ೦ದಾ ಸೂರ್ಯನು ನೋಡ...