Tuesday, June 7, 2011

ದಿವಸದಿಂ ದಿವಸಕ್ಕೆ

ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ ।
ಭವಿಷಿಯವ ಚಿಂತಿಸದೆ ಬದುಕ ನೂಕುತಿರು ।।
ವಿವರಗಳ ಜೋಡಿಸುವ ಯಜಮಾನ ಬೇರಿಹನು ।
ಸವೆಸು ನೀಂ ಜನುಮವನು ಮಂಕುತಿಮ್ಮ ।।

Sunday, June 5, 2011

ಸುರಪಸಭೆಯಲಿ ಗಾಧಿಸುತ

ಸುರಪಸಭೆಯಲಿ ಗಾಧಿಸುತ ವಸಿಷ್ಠ ಸ್ಪರ್ಧೆ ।

ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ ।।

ಬರುವುದಿಂತೆತ್ತಣಿನೊ ಬೇಡದ ಪ್ರಾರಬ್ಧ ।

ಕರುಮಗತಿ ಕೃತ್ರಿಮವೊ ಮಂಕುತಿಮ್ಮ ।।

Saturday, June 4, 2011

ಮಂಕುತಿಮ್ಮನ ಕಗ್ಗ

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು ।
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ ।।
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ ।
ಹೊರಡು ಕರೆ ಬರಲಳದೆ ಮಂಕುತಿಮ್ಮ ।।

Friday, June 3, 2011

ಅಜ್ಞಾತವಾದುದನಭಾವವೆನೆ

ಅಜ್ಞಾತವಾದುದನಭಾವವೆನೆ ನಾಸ್ತಿಕನು ।
ಅಜ್ಞೇಯವೆಂದದಕೆ ಕೈಮುಗಿಯೆ ಭಕ್ತ ।।
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ ।
ಸ್ವಜ್ಞಪ್ತಿಶೋಧಿ ಮುನಿ ಮಂಕುತಿಮ್ಮ ।।

Thursday, June 2, 2011

ಇಷ್ಟು ಕಾಲ....

ಇಷ್ಟು ಕಾಲ ಒಟ್ಟಿಗಿದ್ದು..ಎಷ್ಟು ಬೆರೆತರೂ.....
ಅರಿತೆವೇನು ನಾವು ನಮ್ಮ ಅಂತರಾಳವ....?

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ.....
ಮಣ್ಣ ಮುದ್ದು ದೊರಕಿತೇನು.. ನೀಲಿ ಬಾನಿಗೆ...?

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ.....
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ....?

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ....
ಒಂದಾದರು ಉಳಿಯಿತೇ..ಕನ್ನಡಿಯ ಪಾಲಿಗೆ....???

ಹರಡುವುದು ಸಾಜ ವಾಯುಗೆ


ಹರಡುವುದು ಸಾಜ ವಾಯುಗೆ ಸೈಸದದು ತಡೆಯನ್ ।
ಉರುಳಿಪುದದೆಲ್ಲವನು ತಡೆಗಳಿಲ್ಲದಿರೆ ।।
ನರನ ಸ್ವತಂತ್ರಗತಿಯಂತು ಹಿತಮಿತವಿರಲು ।
ಅರಸೊ ಮಿತಿಯಾಯತಿಯ ಮಂಕುತಿಮ್ಮ ।।

Wednesday, June 1, 2011

ಶ್ರೀ ವಿಷ್ಣು ವಿಶ್ವಾದಿಮೂಲ

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ
ದೇವಸರ್ವೇಶ ಪರಬೊಮ್ಮ ನೆಮ್ದುಜನಂ
ಆವುದನು ಕಾನದೋದ ಮಲ್ತಿಯಿಂ ನಂಬಿಹುದೋ
ಆ ವಿಚಿತ್ರಕೆ ನಮಿಸೋ - ಮಂಕುತಿಮ್ಮ

(ಕಾಣದೊಡಂ+ಅಳ್ತಿಯಂ) (ಪರಬ್ಬೊಮ್ಮಂ+ಎಂದು)

ಶ್ರೀ ವಿಷ್ಣು, ಪ್ರಪಂಚಕ್ಕೆ ಮೊದಲು ಮತ್ತು ಮೂಲನಾಗಿರುವವನು,ಮಾಯಲೋಲನಾಗಿರುವವನು,
ದೇವರು, ಸರ್ವರಿಗು ಈಶನಾಗಿರುವವನು ಮತ್ತು ಪರಬ್ರಹ್ಮ(ಪರಬೊಮ್ಮ) ನೆಂದು ವಿವಿಧವಾದ
ನಾಮಾವಳಿಗಳಿಂದ ಜನಗಳು ಯಾವುದನ್ನು ಕಾಣದಿದ್ದರು ಪ್ರೀತಿಯಿಂದ(ಅಳ್ತಿಯಿಂ) ನಂಬಿರುವರೋ,
ಆ ವಿಚಿತ್ರಕ್ಕೆ ನಮಿಸು.

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......