ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಪ್ರಭುವಾಗದೆ ಪ್ರತಿನಿಧಿಯಾಗಿ ಸಾಮಾನ್ಯರಿಗೂ ಬೆಲೆ ಕೊಟ್ಟು , ಸ್ವಂತದ್ದಾಗಲಿ, ಸಂಸಾರದ್ದಾಗಲಿ, ಸಮಾಜದ್ದಾಗಲಿ, ಹೆಣ್ಣಾಗಲಿ, ಗಂಡಾಗಲಿ ಲೋಪ ಕಂಡುಬಂದರೆ ನಿರ್ಣಯ ತೆಗೆದುಕೊಳ್ಳುವಲ್ಲಿಸಮರ್ಥನಾಗಿ ನ್ಯಾಯ ಒದಗಿಸಿರುವ ಮೂರ್ತಿಯೇ ಶ್ರೀರಾಮಚಂದ್ರ.
ಸ್ವಂತಕ್ಕಲ್ಲ ; ಸಮಾಜಕ್ಕೆ ಎಲ್ಲ ಎಂಬುದೇ ಅವರ ಧ್ಯೇಯ. ಜನಗಳ ಸಂತೋಷಕ್ಕಾಗಿ ರಾಜ್ಯ ಆಳಬೇಕೇ ವಿನಾ ತನ್ನ ಸ್ವಂತಕ್ಕಾಗಿ ಅಲ್ಲ ಎಂಬುದನ್ನು ತೋರಿಸಿಕೊಟ್ಟ ಆದರ್ಶಮೂರ್ತಿ.
ಕುಟುಂಬ, ಸಮಾಜ, ದೇಶ ಮೂರರಲ್ಲೂ ಹೇಗೆ ವರ್ತಿಸಬೇಕು ಎಂಬುದನ್ನು ತೋರಿಸಿಕೊಟ್ಟ ಮಹಾಮೂರ್ತಿ. ಅವಿಭಕ್ತ ಕುಟುಂಬದ ಸಾಕಾರಮೂರ್ತಿ.
ಹಾಗಾಗಿಯೇ ಕನ್ನಡದಲ್ಲಿರಾಷ್ಟ್ರಕವಿ ಕುವೆಂಪು ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಶ್ರೀರಾಮನ ಆದರ್ಶಗಳನ್ನು 32 ಗುಣಗಳಿಂದ ವಿಮರ್ಶಿಸಿದ್ದಾರೆ. ಸಂಸ್ಕೃತದಲ್ಲಿಚಾಣಕ್ಯ 10 ಗುಣದಲ್ಲಿಬಣ್ಣಿಸಿದರೆ ಕುವೆಂಪು ಅದರ ಮೂರು ಪಟ್ಟುಹೆಚ್ಚು ಬಣ್ಣಿಸಿದ್ದಾರೆ.
ಸತ್ಯಸ್ಯ ಸತ್ಯ ನಿತ್ಯ ಕಥನಂಕಣ ಎಂದಿದ್ದಾರೆ. ಸತ್ಯದ ಪ್ರತಿಪಾದನೆಯಲ್ಲಿನಿತ್ಯ ನಡೆಯುವಂತಹ, ನಿತ್ಯ ನೋಡುವಂತಹ ರೀತಿ ನೀತಿಯೇ ಶ್ರೀರಾಮನ ಆದರ್ಶ. ಅದಕ್ಕಾಗಿಯೇ 'ರಾಮಾಯಣಂ ವಿರಾಮಾಯಣಂ ಕಣಾ' ಎಂದಿದ್ದಾರೆ.
ಶ್ರೀ ರಾಮ ನವಮಿಯ ಶುಭಾಶಯಗಳು. ಶುಭದಿನ !!
Courtesy : Shivakumar - Mysore
No comments:
Post a Comment