ಸಂತೃಪ್ತಿ
ಸಂತೃಪ್ತಿ ಕಿಕ್ಕಿರಿದ ಬಸ್ಸಿನಲ್ಲಿ ಕುಳಿತುಕೊಳ್ಳಲು ಆಸನವೇ ಇರಲಿಲ್ಲ; ಅಷ್ಟರಲ್ಲೇ ಕುಳಿತಿದ್ದ ಯಾರೋ ಒಬ್ಬ ಎದ್ದು ನಿಂತು ತನ್ನ ಆಸನವನ್ನು ಬಿಟ್ಟು ಕೊಟ್ಟ. ಅವನು ಸ್ವಲ್ಪ ಮುಂದೆ ತೆರಳಿ ನಿಂತನು. ನನಗೂ ಸಾಕಾಗಿತ್ತು, ಮರು ಮಾತನಾಡದೆ ಕುಳಿತುಕೊಂಡೆ. ಅಷ್ಟರಲ್ಲಿ ಮುಂದೆ ಬಂದ ಸ್ಟಾಪ್ ನಲ್ಲಿ ಒಬ್ಬರು ಪ್ರಯಾಣಿಕರು ಇಳಿದರು. ಖಾಲಿಯಾದ ಆ ಸೀಟ್ನಲ್ಲಿ ನನಗೆ ಸೀಟ್ ಬಿಟ್ಟು ಕೊಟ್ಟಿದ್ದ ಆ ಪ್ರಯಾಣಿಕ ಮತ್ತೆ ಕುಳಿತನು.ಅಷ್ಟರಲ್ಲಿ ಮತ್ತೊಬ್ಬ ಪ್ರಯಾಣಿಕ ಬಸ್ ಹತ್ತಿದ. ಮತ್ತೆ ಅವನು ಎದ್ದುನಿಂತು ಆ ಹೊಸಬನಿಗೆ ಮತ್ತೆ ತನ್ನ ಆಸನವನ್ನು ಬಿಟ್ಟು ಕೊಟ್ಟನು. ಹೀಗೆಯೇ ಮುಂದಿನ ನಾಲ್ಕೈದು ನಿಲ್ದಾಣಗಳಲ್ಲಿ ಅವನು ಕುಳಿತಿರುವ ಆಸನವನ್ನು ಎಲ್ಲರಿಗೂ ನೀಡುವುದನ್ನು ಅವನು ಮುಂದುವರಿಸಿದ. ನಾನು ಎಲ್ಲವನ್ನೂ ಗಮನಿಸುತ್ತಿದ್ದೆ, ನಾನು ನನ್ನ ಕೊನೆಯ ನಿಲ್ದಾಣದಲ್ಲಿ ಬಸ್ ಇಳಿಯುವ ಮೊದಲು ಅವನೊಂದಿಗೆ ಮಾತನಾಡಿದೆ: "ನೀನು ಕುಳಿತುಕೊಳ್ಳುವ ಬದಲು ನಿನ್ನ ಸ್ಥಾನವನ್ನು ಬೇರೆಯವರಿಗೆ ಏಕೆ ನೀಡುತ್ತಿರುವೆ? " ನಾನು ಕೇಳಿದೆ. ಅವನ ಉತ್ತರ ನನಗೆ ಆಶ್ಚರ್ಯ ತಂದಿತು. "ನಾನು ವಿದ್ಯಾವಂತನಲ್ಲ, ಶ್ರೀಮಂತನೂ ಅಲ್ಲ. ಕೂಲಿ ಕೆಲಸ ಮಾಡುವವನು. ಯಾರಿಗೂ ಯಾವುದೇ ರೀತಿಯಲ್ಲಿ ಸಹಾಯಯಾಗಲಿ, ಹಣ ಸಹಾಯ ವಾಗಲಿ ಮಾಡಲು ನನಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯ...